ಮಂಡ್ಯ: ನಾಡಿನ ಪ್ರಸಿದ್ಧ ದೇವಾಲಯಗಲ್ಲೊಂದಾದ ಮೇಲುಕೋಟೆ ಚೆಲುವನಾರಾಯಣ ದೇವಾಲಯದಲ್ಲಿ ಕೃಷ್ಣರಾಜಮುಡಿ ಉತ್ಸವ ನೆರವೇರಿತು. ಭಾನುವಾರದ ಲಾಕ್’ಡೌನ್ ಪರಿಸ್ಥಿತಿ ನಡುವೆಯೂ ದೇವಾಲಯದಲ್ಲಿ ಭಕ್ತಿ ಕೈಂಕರ್ಯ ಮೇಳೈಸಿತು. ಮೈಸೂರಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಕೃಷ್ಣರಾಜ ಒಡೆಯರ್ ರವರಿಂದ ಪ್ರಾರಂಭವಾದ ಜಾತ್ರೆ ಇದಾಗಿದೆ. ಅಷಾಢ ಮಾಸದಲ್ಲಿ ನಡೆಯುವ ಚಿಕ್ಕಜಾತ್ರೆ ಎಂದೇ ಕೃಷ್ಣ ರಾಜಮುಡಿ ಉತ್ಸವವನ್ನು ಬಣ್ಣಿಸಲಾಗುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮದಿನದಂದು ಶ್ರೀನಾರಾಯಣಸ್ವಾಮಿ ಮತ್ತು ಚಲುವರಾಯಸ್ವಾಮಿ ಅಮ್ಮನವರು ಸೇರಿದಂತೆ ಕ್ಷೇತ್ರದಲ್ಲಿರುವ ಎಲ್ಲಾ ದೇವತಾ ಮೂರ್ತಿಗಳಿಗೂ ಮಹಾಭಿಷೇಕ ನಡೆದು ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದು ವೈರಮುಡಿ ಜಾತ್ರೆಯಂತೆಯೇ ಆಕರ್ಷಣೆಯ ಕೇಂದ್ರಬಿಂದು. ಕೃಷ್ಣರಾಜ ಒಡೆಯರು ಮಾಡಿಸಿ ಸಮರ್ಪಣೆ ಮಾಡಿದ ಕೃಷ್ಣ ರಾಜಮುಡಿಯನ್ನು ದೇವರ ವಿಗ್ರಹಕ್ಕೆ ಧಾರಣೆ ಮಾಡಿ ಈ ಉತ್ಸವ ಆಚರಿಸುವುದು ಈ ಕ್ಷೇತ್ರದ್ದೇ ಆದ ವಿಶೇಷ. ಭಾನುವಾರದ ಈ ಕೃಷ್ಣ ರಾಜಮುಡಿ ಉತ್ಸವವದಲ್ಲಿ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ. ದೇವಾಲಯದ ಸಿಬ್ಬಂದಿ ಹಾಗೂ…
Year: 2020
ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ‘ಭಜರಂಗಿ 2’ ಕುತೂಹಲ
ಸೆಂಚುರಿ ಸ್ಟಾರ್ ಶಿವಣ್ಣ ಹುಟ್ಟುಹಬ್ಬ ದಿನವಾದ ಭಾನುವಾರ ಊರು ತುಂಬೆಲ್ಲಾ ಬಂದ್ ವಾತಾವರಣ. ಆದರೆ ಶಿವಣ್ಣ ಅಭಿಮಾನಿಗಳಿಗೆ ಬೋರ್ ಹೊಡೆದಿಲ್ಲ. ಶಿವರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದೇ ಅವರ ಮುಂದಿನ ಚಿತ್ರ ‘ಭಜರಂಗಿ 2’ ಟೀಸರ್ ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೊ ಅಭಿಮಾನಿಗಳ ಗರಡಿಯಲ್ಲಿ ಇದು ಸಂಭ್ರಮವನ್ನು ಹುಟ್ಟುಹಾಕಿತು. ಎ.ಹರ್ಷ ನಿರ್ದೇಶನದ ಈ ಸಿನಿಮಾ ದಿಗ್ಗಜರ ಕಾಂಬಿನೇಷನ್’ನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ. https://youtu.be/kwpkKA_M3lc
ರಾಜ್ಯದಲ್ಲಿ ಕೊರೋನಾ: ಮತ್ತೆ ಬರೋಬ್ಬರಿ 2627 ಪಾಸಿಟಿವ್ ಪ್ರಕರಣಗಳು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಮತ್ತೆ ಆಘಾತ ತಂದಿದೆ. ರಾಜ್ಯದಲ್ಲಿಂದು ಬರೋಬ್ಬರಿ 2627 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಈ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದ ವಿವಿಧೆಡೆಯ ಬೆಳವಣಿಗೆಗಳತ್ತ ಬೆಳಕು ಚೆಲ್ಲಿದೆ. ಶನಿವಾರ ಸಂಜೆ ನಂತರ ಭಾನುವಾರ ಸಂಜೆಯವರೆಗೆ ವಿವಿಧ ಜಿಲ್ಲೆಗಳಲ್ಲಿ 2627 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 1525 ಹೊಸ ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 196 ಪ್ರಕರಣಗಳು, ಧಾರವಾಡದಲ್ಲಿ 129, ಯಾದಗಿರಿಯಲ್ಲಿ 120 ಕೇಸ್’ಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ 79, ಬಳ್ಳಾರಿಯಲ್ಲಿ 63, ಬೀದರ್’ನಲ್ಲಿ 62ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. Today's Media Bulletin 12/07/2020.Please click on the link below to view bulletin.https://t.co/DQE35tHhrA @BMTC_BENGALURU @NammaBESCOM…
ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಈ ತಿಂಗಳ ೨೦ ರಂದು ಪ್ರಕಟವಾಗುವ ನಿರೀಕ್ಷೆಯಿದೆ. ಈ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, ಜುಲೈ 20 ರ ಸುಮಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಳೆದ ಮಾರ್ಚ್‍ನಲ್ಲಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂಗ್ಲೀಷ್ ವಿಷಯದ ಪರೀಕ್ಷೆಯನ್ನು ಲಾಕ್‍ಡೌನ್ ಸಡಿಲಿಕೆಯಾದ ನಂತರ ಜೂನ್ 18 ರಂದು ನಡೆಸಲಾಗಿತ್ತು. ಈ ಪರೀಕ್ಷೆ ನಂತರ ಹಲವಾರು ವಿದ್ಯಾರ್ಥಿಗಳು ಸಚಿವರಿಗೆ ಕರೆ ಮಾಡಿ ಫಲಿತಾಂಶ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20…
ಕೊರೋನಾ ಸೋಂಕಿತರಿಗೆ ಬಯೋಕಾನ್ ಔಷಧ?
ದೆಹಲಿ: ದೇಶದಲ್ಲೋ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಂತೆಯೇ ಇದೀಗ ಪರ್ಯಾಯ ಔಷಧಿಗಾಗಿ ಹುಡುಕಾಟ ಸಾಗಿದೆ. ಈ ಸಂದರ್ಭದಲ್ಲೇ ಕೋವಿಡ್ 19 ಸೋಂಕಿತರಿಗೆ ಸಂತಸದ ಸುದ್ದಿಯನ್ನು ಬಯೋಕಾನ್ ಸಂಸ್ಥೆ ನೀಡಿದೆ. ಕೊರೋನಾ ಸೋಂಕಿತರಿಗೆ ಬಯೋಕಾನ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಇಟೋಲಿಝುಮಾಬ್’ ಔಷಧ ಬಳಸಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ತುರ್ತು ಸಂದರ್ಭದಲ್ಲಿ ನಿಯಂತ್ರಿತ ಪ್ರಮಾಣದಲ್ಲಿ ಈ ಔಷಧಿ ಬಳಕೆ ಮಾಡಬೇಕೆಂಬ ಷರತ್ತಿನೊಂದಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಈ ಬಗ್ಗೆ ಬಯೋಕಾನ್ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಬಯೋಕಾನ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಇಟೋಲಿಝುಮಾಬ್’ ಔಷಧ ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧಿಯಾಗಿದೆ. ಇದನ್ನು ಉಸಿರಾಟದ ತೊಂದರೆಗೆ ಒಳಗಾಗಿರುವ ರೋಗಿಗಳಿಗೂ ಬಳಸಬಹುದೇ ಎಂಬ ಬಗ್ಗೆ ಪರಿಶೀಲಿಸಿದ ನಂತರ ಡಿಸಿಜಿಐ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. #ProudToShare: #Biocon’s Breakthrough Drug…
ಮತ್ತೆ ಲಾಕ್’ಡೌನ್ ಅನಿವಾರ್ಯ; ಸಿಎಂ ನಿರ್ಧಾರಕ್ಕೆ ಗಣ್ಯರ ಸ್ವಾಗತ
ಬೆಂಗಳೂರು: ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಾಜಧಾನಿಯಲ್ಲಿ ಲಾಕ್’ಡೌನ್ ಘೋಷಿಸಿದೆ. ಜುಲೈ 14 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಗೆ ಬರಲಿದ್ದು ಸರ್ಕಾರದ ಈ ಕ್ರಮ ಔಚಿತ್ಯಪೂರ್ಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾರಣಾಂತಿಕ ಕೊರೋನಾ ಸೋಂಕು ಸಾಮುದಾಯಿಕ ಹಂತದಲ್ಲಿ ಹರಡುವುದನ್ನು ತಡೆಯಲು ಈ ರೀತಿಯ ಕ್ರಮ ಸ್ವಾಗತಾರ್ಹ ಎಂದು ಹಲವಾರು ಗಣ್ಯರು ಪ್ರತಿಪಾದಿಸಿದ್ದಾರೆ. ಇದೆ ವೇಳೆ ಸಾಮುದಾಯಿಕ ಹಂತದಲ್ಲಿ ಸೋಂಕು ಹರಡುವುದನ್ನು ತಡೆಯಲು ಈ ರೀತಿಯ ಲಾಕ್’ಡೌನ್ ಕ್ರಮ ಉತ್ತಮ ಮಾರ್ಗ ಎಂದು ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಈ ವರೆಗೂ ಸರ್ಕಾರ ಹಾಗೂ ಪ್ರತಿನಿಧಿಗಳು ಸೋಂಕು ತಡೆಗಟ್ಟಲೆ ಅನೇಕಾನೇಕ ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿನ ವೇಗ ತಡೆಯಲಾಗಲಿಲ್ಲ. ಹೀಗಿರುವಾಗ ಮುಖ್ಯಮಂತ್ರಿಗಳು ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದಾರೆ…
ಐಶ್ವರ್ಯ ರೈ ಸೇಫ್; ಪತಿ ಅಭಿಷೇಕ್, ಮಾವ ಅಮಿತಾಬ್ ಚೇತರಿಕೆ
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೊರೋನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಚಿತ್ರೋದ್ಯಮದ ಗಣ್ಯರೂ ಆಘಾತಕ್ಕೊಳಗಾಗಿದ್ದಾರೆ. ಅಮಿತಾಬ್ ಬಚ್ಚನ್ ಮಾತ್ರವಲ್ಲ ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡಾ ಸೋಂಕಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿರುವವರು ಹಾಗೂ ಕುಟುಂಬ ಸದಸ್ಯರೆಲ್ಲರನ್ನೂ ಪರೀಕ್ಷೆಗೆ ಗುರಿಪಡಿಸಲಾಗಿದೆ. ಈ ನಡುವೆ ಅಮಿತಾಬ್ ಸೊಸೆ ನಟಿ ಐಶ್ವರ್ಯ ರೈ ಸೇಫಾಗಿದ್ದಾರೆ. ಅವರ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಅಮಿತಾಭ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯ ಐಸೋಲೇಷನ್ ಘಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ತಾವು ಆಸ್ಪತ್ರೆಗೆ ದಾಖಲಾಗಿದೇವೆ. ತಮ್ಮೊಂದಿಗೆ ಸಂಪರ್ಕ ಹೊಂದಿದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. Earlier today both my father…
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಸ್ಟಾರ್
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ಗೆ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಈ ಬಾರಿ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ಆಚರಿಸಿಕೊಂಡರು. Birthday wishes and respects to Shivanna and happy to announce @NimmaShivanna ‘s next with @vijaymilton & @Dhananjayaka My hearty wishes to the team! #Shivanna58thBirthday pic.twitter.com/WW6S4rReZ3 — Suriya Sivakumar (@Suriya_offl) July 12, 2020 ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಯಾರೂ ತಮ್ಮ ಮನೆಯತ್ತ ಬರಬೇಡಿ ಎಂದು ಕೆಲವು ದಿನಗಳ ಹಿಂದೆಯೇ ಅಭಿಮಾನಿಗಳಿಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಶಿವಣ್ಣ ಮನೆ ಮುಂದೆ ಜನ ಜಮಾವಣೆಯ ಸನ್ನಿವೇಶ ಕಂಡುಬಂದಿಲ್ಲ. ಅಭಿಮಾನಿಗಳು ವೀಡಿಯೊ ಕಾಲ್ ಶಿವರಾಜ್ ಕುಮಾರ್ ಜೊತೆ ಮಾತನಾಡಿ ಶುಭಾಷಯ ಹಂಚಿಕೊಂಡರು.…
ಸಂಡೆ ಲಾಕ್’ಡೌನ್; ಕರ್ನಾಟಕ ಪೂರ್ತಿ ಬಂದ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಡೆ ಲಾಕ್’ಡೌನ್ ಜಾರಿಯಲ್ಲಿದೆ. ಕಳೆದ ವಾರದಿಂದ ಈ ಸಂಡೆ ಕರ್ಫ್ಯೂ ಜಾರಿಯಲ್ಲಿದ್ದು, ಈ ಭಾನುವಾರವೂ ರಾಜ್ಯದ ಎಲ್ಲೆಡೆ ಬಂದ್ ವಾತಾವರಣ ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಬಹುತೇಕ ನಗರಗಳು ನಿತ್ಯದ ಚಟುವಟಿಕೆಗಳಿಂದ ದೂರವಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಸ್ಸಾರ್ಟಿಸಿ ಸಹಿತ ಸಾರಿಗೆ ಬಸ್ಸುಗಳ ಹಾಗೂ ಸಾರಿಗೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳ ಸೇವೆಗಷ್ಟೇ ಅವಕಾಶವಿದೆ.
ಅಮಿತಾಭ್ ಬಚ್ಚನ್’ಗೆ ಕೊರೋನಾ ಸೋಂಕು; ಆಸ್ಪತ್ರೆಗೆ ದಾಖಲು
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಕೊರೋನಾ ಸೋಂಕು ಕಂಡುಬಂದಿದೆ. ಅವರನ್ನು ಕೊರೋನಾ ಪರೀಕ್ಷೆಗೆ ಗುರಿಪಡಿಸಿದಾಗ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಅಮಿತಾಭ್ ಬಚ್ಚನ್, ತಾವು ಕೊರೋನಾ ಸೋಂಕಿಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. . ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ಕುಟುಂಬ ಹಾಗೂ ಸಿಬ್ಬಂದಿ ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ ಎಂದಿರುವ ಅಮಿತಾಬ್ ಬಚ್ಚನ್, ಕಳೆದ 10 ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಗಾಗಬೇಕೆಂದು ಮನವಿ ಮಾಡಿದ್ದಾರೆ. T 3590 -I have tested CoviD positive .. shifted to Hospital .. hospital informing authorities .. family and staff undergone tests , results awaited ..All that have been in close proximity…
