ಉಡುಪಿ: ಬದುಕಿನಲ್ಲಿದ್ದಾಗ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು ಎಂಬುದು ನಾಣ್ಣುಡಿ. ಆದರೆ ಬಹಳಷ್ಟು ಮಂದಿಯ ಪಾಲಿಗೆ ಈ ಹೆಗ್ಗುರಿ ಕನಸಾಗಿಯೇ ಉಳಿಯುತ್ತದೆ. ಈ ಕನಸು ನನಸಾಗಲು ಅವೆಷ್ಟೋ ಬಡಪಾಯಿಗಳು ನಿತ್ಯ ದೇವರ ಜಪ, ಪೂಜೆ ಮಾಡ್ತಾರೆ. ಅಂತಹಾ ಅಸಹಾಯಕ ಕುಟುಂಬವೊಂದು ದೇವರ ಪ್ರಾರ್ಥನೆಯಲ್ಲಿದ್ದಾಗ ದೇವರಂತೆ ಮುಂದೆ ಬಂದು ನಿಂತವರು ಜನಾನುರಾಗಿ ಉದ್ಯಮಿ. ಹೌದು, ಊರಿಗೆಲ್ಲಾ ಊಟೋಪಚಾರ ನೀಡುವ ಕಾಯಕದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ. ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರ್ಯಟನೆ ನಿರತರಾಗಿರುವವರು. ಮಾರ್ಚ್-ಏಪ್ರಿಲ್ ವೇಳೆ ಕೊರೋನಾ ಸಂದರ್ಭದಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ಅವರು ಲಾಕ್’ಡೌನ್ ಜಾರಿಯಾದ ಕಾರಣ ಅಲ್ಲೇ ಕೆಲ…
Year: 2020
ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ
ಕರಾವಳಿಯ ವಿಶಿಷ್ಟ ತಿಂಡಿಗಳಲ್ಲಿ ಪತ್ರೊಡೆ ಕೂಡಾ ಒಂದು. ಮಳೆಗಾಲದ ತಿಂಡಿ ಎಂದೇ ಅದನ್ನು ಹೇಳಲಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಿಗುವ ಹಲಸು, ಕೇಸು, ಅಣಬೆ ಹಾಗೂ ಇನ್ನಿತರೇ ಸೊಪ್ಪುಗಳಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಕರಾವಳಿ ಪಾಕ ಪ್ರವೀಣರು, ನೈಸರ್ಗಿಕವಾಗಿ ಬೆಳೆಯುವ ಕೆಸುವಿನಿಂದ ಪತ್ರೊಡೆ ತಯಾರಿಸುತ್ತಾರೆ. ಪತ್ರೊಡೆ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯವೂ ಹೌದು. ಇದನ್ನು ತಯಾರಿಸುವ ವಿಧಾನವೂ ಬಲು ಸುಲಭ. ಇದನ್ನೂ ಮಾಡಿ ರುಚಿ ನೋಡಿ.. ‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ
ರುಚಿಯಾದ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ
ಪಪ್ಪಾಯ ಕೇವಲ ಹಣ್ಣಷ್ಟೆ ಅಲ್ಲ. ಅದು ಔಷಧಿ ಕೂಡಾ ಹೌದು. ಜ್ಯುಸ್ ಅಥವಾ ಸಲಾಡ್’ಗೆ ಉಪಯುಕ್ತ ಅಂದುಕೊಂಡಿರುವ ಪಪ್ಪಾಯದಿಂದ ಸಿಹಿತಿಂಡಿ ಮಾಡಲೂ ಸಾಧ್ಯವಿದೆ. ಅದರಲ್ಲೂ ಪಪ್ಪಾಯ ಲಡ್ಡು ತಯಾರಿ ಬಲು ಸುಲಭ.. ಬೇಕಾದ ಸಾಮಾಗ್ರಿ ಪಪ್ಪಾಯ ರಸ 2 ಕಪ್ ಉಪ್ಪು ಒಂದು ಚಿಟಿಕೆ ತೆಂಗಿನಕಾಯಿ ಹುಡಿ 1 ವರೆ ಕಪ್ ತುಪ್ಪ 5 ಚಮಚ ಏಲಕ್ಕಿ ಪುಡಿ 1 ಚಮಚ ಕಾರ್ನ್ ಹುಡಿ 1 ಚಮಚ ಮಾಡುವ ವಿಧಾನ ಮೊದಲಿಗೆ ಪಪ್ಪಾಯ ಸಿಪ್ಪೆ ಮತ್ತು ಬೀಜ ತೆಗೆದು ತುಂಡು ಮಾಡಿಕೊಳ್ಳಬೇಕು. ಒಂದು ಜಾರಿನಲ್ಲಿ ತುಂಡು ಮಾಡಿಕೊಂಡ ಪಪ್ಪಾಯ ಹಾಕಿ ನುಣ್ಣಗೆ ರುಬ್ಬಿಕೊಂಡಾಗ ರಸ ಸಿದ್ಧವಾಗುತ್ತದೆ. ನಂತರ ಒಂದು ಕಾಡಾಯಿ ಅಥವಾ ಬಾಣಲೆಯಲ್ಲಿ ಪಪ್ಪಾಯ ರಸ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪು, ತೆಂಗಿನ ಹುಡಿ ಹಾಕಿ ಚೆನ್ನಾಗಿ…
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಯಲ್ಲಿರುವ ನಾಲ್ವರಲ್ಲಿ ಕೊರೋನಾ ಸೋಂಕು
ಬೆಂಗಳೂರು: ಕಾಂಗ್ರೆಸ್ ಶಾಸಕ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಗನ್’ಮ್ಯಾನ್ ಸೇರಿ ಅವರ ಜೊತೆಯಲ್ಲಿರುವ ನಾಲ್ವರಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ. ಈ ಕುರಿತು ಶಾಸಕ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆಪ್ತಸಹಾಯಕ, ಗನ್ ಮ್ಯಾನ್ ಹಾಗೂ ಮತ್ತಿಬ್ಬರಲ್ಲಿ ಸೋಂಕು ಕಂಡುಬಂದಿದೆ. ನಾವೂ ಪರೀಕ್ಷೆಗೊಳಗಾಗಿದ್ದು ನಮ್ಮಲ್ಲಿ ವೈರಸ್ ದೃಢಪಟ್ಟಿಲ್ಲ. ಆದರೂ 10-14 ದಿನಗಳ ಕಾಲ ಐಸೋಲೇಷನ್ ಮತ್ತು ಕ್ವಾರಂಟೈನ್ ನಲ್ಲಿದ್ದೇವೆ. ಎಂದವರು ಟ್ವೀಟ್ ಮಾಡಿದ್ದಾರೆ. Well sadly our PA , one more Gunman and 2 house staff tested positive. We are all thankfully negative but in isolation and quarantine for 10 to 14 days from today, to check if we develop…
ಭಾರತದಲ್ಲಿ ಕೊರೋನಾ ಸೋಂಕಿನ ಪ್ರಮಾಣ 4 ದಿನಗಳಲ್ಲಿ 6 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ
ದೆಹಲಿ: ಜಗತ್ತಿನಾದ್ಯಂತ ಆತಂಕದ ಛಾಯೆ ಆವರಿಸುವಂತೆ ಮಾಡಿರುವ ಕೊರೋನಾ ವೈರಾಣು ಭಾರತದಲ್ಲಿ ಆರ್ಭಟ ಮುಂದುವರಿಸಿದೆ. ಸೋಮವಾರ ಒಂದೇ ದಿನ 22,252 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು ಭಾರತದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ. ಈ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೇಶದಲ್ಲಿ ಕೊರೋನಾ ಕಾರಣಕ್ಕಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆ. ಸೋಂಕಿನ ಪ್ರಮಾಣ ಕೇವಲ 4 ದಿನಗಳಲ್ಲಿ 6 ಲಕ್ಷದಿಂದ 7 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಎಂದು ಕಳವಳ ವ್ಯಕ್ತಪಡಿಸಿದೆ. ಇಂದು ಬೆಳಗ್ಗಿನ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 467 ಮಂದಿ ಬಲಿಯಾಗಿದ್ದು, ಇದರೊಂದಿಗೆ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ರಾಜ್ಯದಲ್ಲಿ ಮತ್ತೆ 1843 ಕೊರೋನಾ ಕೇಸ್; ಬೆಂಗಳೂರಿನಲ್ಲಿ 981 ಮಂದಿಯಲ್ಲಿ ಸೋಂಕು
ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣದ ತರಂಗ ಎಬ್ಬಿಸಿರುವ ಕೊರೋನಾ ವೈರಾಣು, ಇತ್ತ ಭಾರತವನ್ನೂ ಸಂದಿಗ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಅದರಲ್ಲೂ ಕರ್ನಾಟಕ ಕೂಡಾ ಆತಂಕದ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದು, ಇಂದು ಮತ್ತೆ 1843 ಪಾಸಿಟಿವ್ ಕೇಸ್’ಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಇಂಥದ್ದೊಂದು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 981 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 99, ಉತ್ತರಕನ್ನಡದ 81, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 68, ಧಾರವಾಡದಲ್ಲಿ 56, ಕಲಬುರಗಿ ಜಿಲ್ಲೆಯಲ್ಲಿ 53 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ಸಂಜೆಯ ಪತ್ರಿಕಾ ಪ್ರಕಟಣೆ 06/07/2020.ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/kMbTvZhK4U @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada…
ಸುಮಲತಾ ಅಂಬರೀಷ್’ಗೆ ಕೊರೋನಾ ಸೋಂಕು; ಅಭಿಮಾನಿಗಳಲ್ಲಿ ಆತಂಕ
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಅಭಿನೇತ್ರಿಯೂ ಆದ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್’ಗೆ ಕೊರೋನಾ ಸೋಂಕು ತಗುಲಿದೆ. ತಾವು ಕೋವಿಡ್-19 ಸೋಂಕಿನಿಂದಾಗಿ ಬಾಳುತ್ತಿರುವುದಾಗಿ ಸುಮಲತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ಧಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕಿರುವ ಪೋಸ್ಟ್ ಹೀಗಿದೆ. ಆತ್ಮೀಯರೆ, ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಟ್ಟಿದ್ದೀನಿ. ರೋಗನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ ಮತ್ತು ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ…
ಶ್ರೀಮದ್ ಸುಕ್ರ ತಿಂದ್ರ ಸ್ವಾಮೀಜಿಯವರ ಪುಣ್ಯತಿಥಿ ಆಚರಣೆ
ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ 19 ನೇ ಯತಿವರ್ಯರಾದ ಶ್ರೀಮದ್ ಸುಕ್ರ ತಿಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆಯು ಇಂದು ಮಂಗಳೂರಿನ ಕೊಂಚಾಡಿಯಲ್ಲಿ ನೆರವೇರಿತು. ಕೊಂಚಾಡಿ ಕ್ಷೇತ್ರದಲ್ಲಿರುವ ಕೊಂಚಾಡಿ ಕಾಶೀ ಮಠದಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದೊಂದಿಗೆ ನೆರವೇರಿತು. ಧಾರ್ಮಿಕ ಮುಖಂಡರು, ಯತಿವರ್ಯರು ಹಾಗೂ ಭಕ್ತರನೇಕರು ಈ ಕೈಂಕರ್ಯಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮ ಪ್ರಯುಕ್ತ ವಿವಿಧ ಗೊತ್ರೆಯ ವೈಧಿಕ ರು ಮಠಕ್ಕೆ ಆಗಮಿಸಿದ್ದು ಬೆಳಿಗ್ಗೆ ಶ್ರೀಗಳವರ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ , ಶ್ರೀ ದೇವರ ನಿರ್ಮಾಲ್ಯ ಪೂಜೆ ಬಳಿಕ ಸಂಸ್ಥಾನದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೇದವ್ಯಾಸ ದೇವರಿಗೆ ಶ್ರೀಗಳವರಿಂದ ಪಂಚಾಮೃತ ಅಭಿಷೇಕ, ಗಂಗಾಭಿಷೇಕ , ಪವಮಾನಾಭಿಷೇಕಗಳು ನೆರವೇರಿದವು. ಬಳಿಕ ಲಘು ವಿಷ್ಣು ಅಭಿಷೇಕ ನೆರವೇರಿಸಲಾಯಿತು. ಸಾಯಂಕಾಲ ಸಂಸ್ಥಾನದಲ್ಲಿ ಅತೀ ವಿಶೇಷ ದಿನಗಳಲ್ಲಿ ಶ್ರೀ ದೇವರಿಗೆ ಸ್ವರ್ಣ ಗರುಡ ವಾಹನ…
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕೇಸ್; ಸರ್ಕಾರ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದ್ದು ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಸಂಕಟ ಕಾಲದಲ್ಲೂ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಂಬುಲನ್ಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಹಾಗಾಗಿ ಜನರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಸುಧಾಕರ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವುದು ಕಾನೂನು ಬಾಹಿರ. ಯಾವುದೇ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಆಸ್ಪತ್ರೆಗಳಲ್ಲಿ ದಾಖಲಾತಿ, ಚಿಕಿತ್ಸೆ ಮತ್ತು ಇತರೆ…
ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮ ದಿನ; ನಾಯಕರಿಂದ ಗೌರವ ನಮನ
ಬೆಂಗಳೂರು: ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 119ನೇ ಜನ್ಮ ದಿನವನ್ನು ಇಂದು ಆಚರಿಸಲಾಯಿತು. ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಹಿರಿಯ ನಾಯಕರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
