ಮುಂಬೈ: ‘ಏಕ್ ದೋ ತೀನ್..’, ‘ಚೋಲಿ ಕೆ ಪೀಚೆ ಕ್ಯಾಹೆ..’, ‘ಡೋಲಾ ರೆ ಡೋಲಾ ರೇ..’ ಹಾಡುಗಳು ಒಂದು ಕಾಲದಲ್ಲಿ ಸೂಪರ್ ಹಿಟ್. ಈ ಹಾಡುಗಳನ್ನು ಕೇಳದವರಿಲ್ಲ. ಹಾಡುಗಳು ಮೊಳಗುತ್ತಿದ್ದಂತೆ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದವರೂ ಅನೇಕರು. ಈ ಹಾಡಿನ ನೃತ್ಯ ಸಂಯೋಜಕಿ ಇನ್ನು ನೆನಪು ಮಾತ್ರ. ಬಾಲಿವುಡ್ ಜಗತ್ತನ್ನು ಆಳಿದ ಮತ್ತೊಬ್ಬರು ಸೆಲೆಬ್ರಿಟಿ ವಿಧಿವಶರಾಗಿದ್ದಾರೆ. ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. 71 ವರ್ಷ ವಯಸ್ಸಿನ ಸರೋಜ್ ಖಾನ್ ಸುಮಾರು ೫ ದಶಕಗಳಿಂದ ಬಾಲಿವುಡ್ ಸಿನಿಮಾ ರಂಗದಲ್ಲಿ ನೃತ್ಯ ನಿರ್ದೇಶನ ಮಾಡಿ ಗಮನಸೆಳೆದಿದ್ದರು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮುಂಬೈನ ಬಾಂದ್ರಾದ ಗುರುನಾನಕ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ನಸುಕಿನ ಜಾವ ಹೃದಯಾಘಾತಕ್ಕೊಳಗಾದರೆಂದು ಆಸ್ಪತ್ರ್ ಮೂಲಗಳು ತಿಳಿಸಿವೆ. ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.…
Year: 2020
‘ಸಾರಾ ವಜ್ರ’ ಚಿತ್ರದ ಟ್ರೈಲರ್ ಮೋಡಿ
ನಟಿ ಅನು ಪ್ರಭಾಕರ್ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸುದ್ದಿ ನಿರೂಪಕ ರೆಹಮಾನ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದು, ಅವರ ಅಭಿನಯದ ‘ಸಾರಾ ವಜ್ರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೈಲರ್ ಸಕತ್ತಾಗಿ ಸದ್ದು ಮಾಡುತ್ತಿದೆ. https://www.youtube.com/watch?v=sOTKTDue7Qg&feature=emb_title
ಪೌರಕಾರ್ಮಿಕರಲ್ಲಿ ಭಗವಂತನನ್ನು ಕಂಡ ‘ಪೂಜಾರಿ’; ಬೆಂಗಳೂರಿನಲ್ಲೊಂದು ಅನನ್ಯ ಕಾರ್ಯಕ್ರಮ
ಬೆಂಗಳೂರು: ರಾಜಧಾನಿಯ ಪೌರ ಕಾರ್ಮಿಕರ ಮೊಗದಲ್ಲಿ ಅದೇನೋ ಹೊಸತನದ ಸಂತಸ. ತಮಗೆ ಸಿಕ್ಕಿದ ಅಪೂರ್ವ ಗೌರವ ಕಂಡು ಎಂದಿಲ್ಲದ ಪುಳಕ. ಸರ್ಕಾರ ಕೊಡುವ ಸಂಬಳಕ್ಕಿಂತಲೂ ಹೆಚ್ಚಿನ ಭಕ್ತಿ, ಸಮ್ಮಾನದ ಕೊಡುಗೆ ಸಿಕ್ಕಾಗ ನಿಜವಾಗಿಯೂ ತಾವು ಧನ್ಯ ಎಂಬ ಮನೋಭಾವ. ಹೌದು, ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಪೌರ ಕಾರ್ಮಿಕರ ಪಾಳಯದಲ್ಲಿ ಈ ಸಾಮಾಜಿಕ ಕಾರ್ಯಕರ್ತನ ಜನ್ಮ ದಿನ ಸಮಾರಂಭವು ತಾವೆಂದೂ ಕಾಣದ ಅಪರೂಪದ ಸಂತಸಕ್ಕೆ ಕಾರಣವಾಗಿತ್ತು. ಉದ್ಯಮಿಯೂ ಆಗಿರುವ ಸಾಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿಯವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಪೌರ ಕಾರ್ಮಿಕರ ಪಾಲಿಗೆ ಆಶಾದಾಯಕ ಸನ್ನಿವೇಶವನ್ನು ಸೃಷ್ಟಿಸಿ, ಖುಷಿ ಪಡಿಸಿ, ಆಮೂಲಕ ತಾನೂ ಖುಷಿಪಡುವ ರೀತಿಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿ ಅಲ್ಲಿದ್ದವರಲ್ಲೆರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾರೆ. ತನ್ನ ಕಾರ್ಯಕ್ಷೇತ್ರ ಇರುವ ಪ್ರದೇಶವಾದ ಬೊಮ್ಮನಹಳ್ಳಿ ಸುತ್ತಮುತ್ತಲ ಸಾವಿರಾರು ಪೌರ ಕಾರ್ಮಿಕರನ್ನು ತನ್ನ ಸಂಸ್ಥೆಗೆ ಕರೆಸಿಕೊಂಡು, ಅವರಿಗೆ ಸರ್ಕಾರ ಕೊಡುವ ವೇತನಕ್ಕಿಂತ…
ಪ್ರತಿಜ್ಞಾ ಕಾರ್ಯಕ್ರಮಕ್ಕೆ ಸಿಎಂ ಅನುಮತಿ ಕೊಟ್ಟಿದ್ದಾರೆ, ಪೊಲೀಸರು ಅಡಚಣೆ ಮಾಡುವಂತಿಲ್ಲ: ಡಿ.ಕೆ.ಶಿ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮ ಪ್ರತಿಜ್ಞಾಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುಮತಿ ನೀಡಿದ್ದಾರೆ. ಹಾಗಾಗಿ ಪೊಲೀಸರು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬುಧವಾರ ಮಾಧ್ಯಮಗಳಿಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ನಾಳೆ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಕೆಲವು ಕಡೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂಬ ಕರೆಗಳು ಬಂದಿವೆ ಎಂದರು. ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳೇ ಅನುಮತಿ ಕೊಟ್ಟಿದ್ದಾರೆ. ಈ ಸಂಬಂಧ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರ ಜತೆ ಮಾತನಾಡಿದ್ದೇನೆ. ಯಾರು ಧೃತಿಗೆಡುವ ಅಗತ್ಯವಿಲ್ಲ ಎಂದವರು ಹೇಳಿದರು. ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ಅನುಮತಿ ನೀಡಿದ್ದು, ಈ ಕಾರ್ಯಕ್ರಮಕ್ಕೆ ಲಿಖಿತ ಅನುಮತಿ ಬೇಕಿಲ್ಲ. ನಿಮ್ಮ ನಿಮ್ಮ ಪ್ರದೇಶಗಳಲ್ಲೇ ಇದ್ದು ಸುದ್ದಿ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಿ. ನಾನು ಆಮಂತ್ರಣ ನೀಡಿರುವವರನ್ನು ಬಿಟ್ಟು ಇನ್ಯಾರು ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು…
ಕೊರೋನಾಗೆ ಕೊನೆಗೂ ಸಿಕ್ತು ಔಷಧ; ಬೆಂಗಳೂರಿನ ವೈದ್ಯ ಕಂಡುಹಿಡಿದ ಸಂಜೀವಿನಿ ಯಶಸ್ವೀ ಪ್ರಯೋಗ
ಬೆಂಗಳೂರು: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಸೋಂಕು ನಿವಾರಣೆಗೆ ಔಷಧಿ ಸಿದ್ಧವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಈ ವಿಷಯದಲ್ಲಿ ವೇದಕಾಲದ ಆಯುರ್ವೇದ ಪದ್ಧತಿ ಅನುಸರಿಸುತ್ತಿರುವ ವೈದ್ಯರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಡಾ.ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲೊಂದಾಗಿರುವ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಕೊರೋನಾ ರೋಗಿಗಳಿಗೆ ಈ ಔಷಧಿ ನೀಡಲಾಗಿದ್ದು ಸೋಂಕಿತರು ಗುಣಮುಖರಾಗಿದ್ದಾರೆನ್ನಲಾಗಿದೆ. ಜೂನ್ 7ರಿಂದ ಜೂನ್ 25ರ ನಡುವೆ 23 ವರ್ಷದಿಂದ 65 ವರ್ಷದವರೆಗಿನ ಕೊರೋನಾ ರೋಗಿಗಳಿಗೆ ಈ ಔಷಧಿ ನೀಡಲಾಗಿತ್ತು. ಶೀತ, ಕೆಮ್ಮು, ಜ್ವರ, ಸುಸ್ತು, ತಲೆನೋವು, ಉಸಿರಾಟದ ತೊಂದರೆ ಸಂಪೂರ್ಣ ಗುಣಮುಖವಾಗಿದೆ. 3ರಿಂದ 9 ದಿನಗಳಲ್ಲಿ ರೋಗಿಗಳ ಪರೀಕ್ಷಾ ವರದಿಯೂ ನೆಗೆಟಿವ್ ಎಂದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಒಬ್ಬ ರೋಗಿಯ ಔಷಧಕ್ಕೆ 90ರಿಂದ 180 ರೂಪಾಯಿ ವೆಚ್ಚ ತಗಲುತ್ತದೆ ಆಯುರ್ವೇದ ವೈದ್ಯ ಗಿರಿಧರ ಕಜೆ ತಾವು ಕಂಡುಹಿಡಿದ ಔಷಧನ್ನು…
ಮದುವೆಯಲ್ಲಿ 300 ಮಂದಿ ಭಾಗಿ. ಈ ಪೈಕಿ 80 ಮಂದಿಗೆ ಸೋಂಕು, ವರ ಸಾವು
ಮದುವೆಯ ಸಂಭ್ರಮ.. ಸುಮಾರು 300 ಮಂದಿ ಪಾಲ್ಗೊಂಡಿದ್ದ ಸಮಾರಂಭ.. ಕೆಲವೇ ದಿನಗಳಲ್ಲಿ 80 ಮಂದಿಯಲ್ಲಿ ಕೊರೋನಾ ಸೋಂಕು.. ಈ ಪೈಕಿ ಮದುಮಗನೇ ಸೋಂಕಿಗೆ ಬಲಿ. ಕೊರೋನಾ ಸಂಕಟ ಕಾಲದಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧವಿದೆ. ಮದುವೆಯಂತಹಾ ಸಮಾರಂಭಗಳಿಗೆ ಅನುಮತಿ ಇದೆಯಾದರೂ ನಿರ್ದಿಷ್ಟ ಸಂಖ್ಯೆಯಷ್ಟು ಮಂದಿ ಮಾತ್ರ ಭಾಗಿಯಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಬಿಹಾರದ ಪಾಟೀನಾ ಬಳಿ ಮದುವೆಯಲ್ಲಿ ನಿಯಮ ಮೀರಿ ಜನ ಪಾಲ್ಗೊಂಡಿದ್ದು, ಬಹುತೇಕ ಮಂದಿ ಸೋಂಕಿಗೊಳಗಾದ ಆಘಾತಕಾರಿ ಘಟನೆ ನಡೆದಿದೆ. ಪಾಟ್ನದ ಪಾಲಿಗಂಜ್ ಎಂಬಲ್ಲಿ ಜೂನ್ 15 ರಂದು ಸಾಫ್ಟ್’ವೇರ್ ಇಂಜಿನಿಯರ್’ನ ವಿವಾಹ ಸಮಾರಂಭ ನೆರವೇರಿತ್ತು. ಕೆಲ ದಿನಗಳ ನಂತರ ವಾರ ಜ್ವರದಿಂದ ಬಳಲಿದ್ದು ಆತ ಕೊರೋನಾ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ. ಆದರೆ ಅಷ್ಟರಲ್ಲೇ ವಿಷಮ ಪರಿಸ್ಥಿತಿ ತಲುಪಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಇದರಿಂದ ಎಚ್ಛೆತ್ತುಕೊಂಡ ಅಧಿಕಾರಿಗಳು ಆ ಸಮಾರಂಭದಲ್ಲಿ ಸುಮಾರು ಪಾಲ್ಗೊಂಡಿದ್ದಾರೆನ್ನಲಾದ 300 ಮಂದಿಯ…
ಈ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್?
ಮುಂಬೈ: ದೇಶಾದ್ಯಂತ ಕೊರೋನಾ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಸಾವಿರ್ವಜನಿಕ ಗಣೇಶೋತ್ಸವ ಸಮಾರಂಭ ನಡೆಯುವುದು ಸಂಶಯ. ಜಗತ್ತಿನ ಗಮನಸೆಳೆಯುತ್ತಿರುವ ಮುಂಬೈ ನಗರದ ಅದ್ದೂರಿ ಗಣೇಶೋತ್ಸವವಂತೂ ಇತಿಹಾಸದಲ್ಲೇ ಮೊದಲಬಾರಿಗೆ ರದ್ದಾಗಿದೆ. ಗಣೇಶ ಹಬ್ಬಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಪ್ರತೀ ವರ್ಷ ತಿಂಗಳ ಮೊದಲೇ ಉತ್ಸವಕ್ಕೆ ತಯಾರಿ ನಡೆಯುತ್ತಿತ್ತು. ಈ ಸಿದ್ಧತೆಯೇ ಒಂದು ರೀತಿ ಸಡಗರದ ಕ್ಷಣಗಳು. ಆದರೆ ಈ ವರ್ಷದ ಗಣೇಶೋತ್ಸವಕ್ಕೆ ಕೋವಿಡ್ ವೈರಾಣು ಹಾವಳಿಯ ವಿಘ್ನ ಕಾಡಿದೆ. ಮುಂಬೈ ನ ಗಣೇಶೋತ್ಸವದ ಮೇಲೂ ಕೊರೋನಾ ಕರಿನೆರಳು ಆವರಿಸಿದ್ದು ವಿಶ್ವ ಪ್ರಸಿದ್ಧ ಮುಂಬೈ ನ ಲಾಲ್‌ಬೌಚಾ ರಾಜ ಗಣೇಶೋತ್ಸವ ಮಂಡಲ ಸಾರಥ್ಯದ ಗಣೇಶೋತ್ಸವ ರದ್ದುಪಡಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಂಡಿರುವ ಗಣೇಶೋತ್ಸವ ಮಂಡಲ ಈ ಬಾರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜನಪರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆಯಂತೆ.
ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 5,85,493ಕ್ಕೆ ಏರಿಕೆ
ದೆಹಲಿ: ಜಗತ್ತಿನಾದ್ಯಂತ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು, ಭಾರತವೂ ಈ ವೈರಾಣು ಹಾವಳಿಯಿಂದ ತತ್ತರಿಸಿದೆ. ಸೋಮವಾರ ಸಂಜೆಯಿಂದ ಮಂಗಳವಾರ ನಡುವೆ 24 ಗಂಟೆಗಳಲ್ಲಿ 18,653 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಈ ಕುರಿತಂತೆ ಮಾಹಿತಿ ಬಹಿರಂಗಪಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದಲ್ಲಿ ಕೋವಿಡ್ – ೧೯ ಸೋಂಕಿತರ ಸಂಖ್ಯೆ 5,85,493ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಮಂಗಳವಾರ ಒಂದೇ ದಿನ ಮಹಾಮಾರಿ ವೈರಸ್ ಸೋಂಕಿಗೆ 507 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ವೈರಸ್’ನಿಂದ ಸಾವನ್ನಪ್ಪಿದವರ ಸಂಖ್ಯೆ 17,400ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಒಂದು ಸಮಾಧಾನಕರ ಸಂಗತಿಯೆಂದರೆ 3,47,979 ಮಂದಿ ಸೂಕ್ತ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳ ಕ್ಷೇತ್ರದ ಗಜರಾಣಿ ಲಕ್ಷ್ಮೀ
ಮಂಗಳೂರು: ದಕ್ಷಿಣ ಭಾರತದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಗಜ ರಾಣಿ ಲಕ್ಷ್ಮೀ ಗುಡ್ ನ್ಯೂಸ್ ನೀಡಿದ್ದಾಳೆ. ಈ ಆನೆ ಇಂದು ಮುಂಜಾನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲೊಂದು. ಈ ಕ್ಷೇತ್ರದ ಮಹಿಮೆ ಜಗತ್ತಿನ ಉದ್ದಗಲಕ್ಕೂ ಚಾಚಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಕೆಲ ಸಮಯದ ಹಿಂದೆ ಸಚಿವ ಆನಂದ್ ಸಿಂಗ್ ಅವರು ಧರ್ಮಸ್ಥಳ ದೇಗುಲಕ್ಕೆ ಈ ಆನೆಯನ್ನು ಸರ್ಪಿಸಿದ್ದರು. ಈ ಆನೆ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸಹಿತ ಕ್ಷೇತ್ರದ ಸಿಬ್ಬಂದಿ ಪಾಲಿಗೂ ಈ ಲಕ್ಷ್ಮೀ ಪ್ರೀತಿ ಪಾತ್ರವಾಗಿತ್ತು. ಇಂದು ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.
ಸಕತ್ ಸುದ್ದಿಯಾಗುತ್ತಿದೆ ನಟಿ ಶಕೀಲಾ ಜೀವನಾಧಾರಿತ ಚಿತ್ರದ ಟೀಸರ್
ಮಾಲಿವುಡ್’ನಲ್ಲೀಗ ನಟಿ ಶಕೀಲಾ ಅವರದ್ದೇ ಸುದ್ದಿ. ಬಹಳಷ್ಟು ವರ್ಷ ಮಲಯಾಳಂ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರ ನಿರ್ಮಾಣಗೊಳ್ಳುತ್ತಿದೆ. ದಕ್ಷಿಣ ಭಾರತದ ಮಾದಕ ನಟಿ ಎಂದೇ ಗುರುತಾಗಿರುವ ಶಕೀಲಾ ಯುವ ಜನರ ಕನಸಿನ ರಾಣಿ. ಅವರ ಜೀವನಗಾಥೆಯ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಕತ್ ಸುದ್ದಿಯಾಗುತ್ತಿದೆ.
