ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಭವಾನಿ ಹೆಸರಿಲ್ಲ, ಹೆಚ್ಡಿಕೆ ನಡೆಯ‌ ಕುತೂಹಲ

ಬೆಂಗಳೂರು: ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಅಖಾಡಕ್ಕೆ ಧುಮುಕಿರುವ ಜಾತ್ಯಾತೀತ ಜನತಾದಳ ಶುಕ್ರವಾರ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನ ಕ್ಷೇತ್ರದಲ್ಲಿ ರೇವಣ್ಣ ಪತ್ನಿ ಭವಾನಿ ಅವರು ಸ್ಪರ್ಧಾಕಾಂಕ್ಷಿಯಾಗಿದ್ದರೂ ಅವರಿಗೆ ಟಿಕೆಟ್ ಘೋಷಣೆಯಾಗಿಲ್ಲ. ಈ ಕ್ಷೇತ್ರದಲ್ಲಿ ಭವಾನಿ ಪುತ್ರ ಸ್ವರೂಪ್‌ಗೆ ಟಿಕೆಟ್ ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ. ಕುಡುಚಿ- ಆನಂದ ಮಾಳಗಿ ರಾಯಭಾಗ-ಪ್ರದೀಪ ಮಾಳಗಿ ಸವದತ್ತಿ ಯಲ್ಲಮ್ಮ-ಸೌರಭ್ ಆನಂದ ಚೋಪ್ರಾ ಅಥಣಿ – ಶ್ರೀ ಶಶಿಕಾಂತ ಪಡಸಲಗಿ ಗುರುಗಳು ಹುಬ್ಬಳ್ಳಿ ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ ಕುಮಟಾ -ಸೂರಜ್ ಸೋನಿ ನಾಯ್ಕ ಹಳಿಯಾಳ-ಎಸ್.ಎಲ್. ಘೋಟ್ನೆಕರ್ ಭಟ್ಕಳ -ನಾಗೇಂದ್ರ ನಾಯಕ ಶಿರಸಿ- ಉಪೇಂದ್ರ ಪೈ ಯಲ್ಲಾಪುರ-ಡಾ.ನಾಗೇಶ್ ನಾಯಕ್ ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್ ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್ ಬಳ್ಳಾರಿ ನಗರ-ಅಲ್ಲಾಭಕ್ಷ ಅಲಿಯಾಸ್ ಮುನ್ನಾ ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ ಹರಪನಹಳ್ಳಿ- ಎನ್ .ಎಂ. ನೂರ್ ಅಹ್ಮದ್ ಸಿರಗುಪ್ಪ-ಪರಮೇಶ್ವರ ನಾಯಕ ಹೊಳೆನರಸೀಪುರ-ಹೆಚ್.ಡಿ.ರೇವಣ್ಣ ಪುತ್ತೂರು-ದಿವ್ಯಪ್ರಭಾ…

ನಕಲಿ ಮೀಸಲಾತಿ ಮೂಲಕ ರಾಜ್ಯದ ಜನರಿಗೆ ಬೊಮ್ಮಾಯಿ ಸರ್ಕಾರ ಮೋಸ; ಸುರ್ಜೇವಾಲ

ಬೆಂಗಳೂರು: ನಕಲಿ ಮೀಸಲಾತಿ ಮೂಲಕ ರಾಜ್ಯದ ಜನರಿಗೆ ಬೊಮ್ಮಾಯಿ ಸರ್ಕಾರ ಮೋಸ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಿದ್ಧಾಂತವನ್ನು ದೇಶ ಹಾಗೂ ವಿದೇಶಗಳಲ್ಲಿ ಪಾಲಿಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅಗೌರವಿಸಿದೆ. ನಕಲಿ ಮೀಸಲಾತಿ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ. ಅಷ್ಟೇ ಅಲ್ಲದೆ, ಈ ನಕಲಿ ಮೀಸಲಾತಿ ಮೂಲಕ ಲಿಂಗಾಯತ, ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ, ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿದೆ. ಬಿಜೆಪಿ ಸರ್ಕಾರದ ಈ ದ್ರೋಹ ಈಗ ಬಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ ಅವರ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ https://t.co/vzu8TWjigN — Karnataka Congress (@INCKarnataka) April 14, 2023 ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ…

ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ..

ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ ಶಶಿಕಾಂತ್ ನಾಯಕ್, ಮುಖಂಡ ಅಕ್ಕಪ್ಪ ಸಹಿತ ಅನೇಕ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ನಾಯಕರು ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ ಚಂದ್ರಪ್ಪ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಎ ಬಿ ಪಾಟೀಲ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಅಕ್ಕಪ್ಪ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜಕಾರಣಿಗಳ ‘ಶ್ರೀಮಂತ’ ಚಿತ್ರ ಬಿಡುಗಡೆಗೆ ಚುನಾವಣೆ ಅಡ್ಡಿ..

ಬಹುನಿರೀಕ್ಷಿತ ‘ಶ್ರೀಮಂತ’ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. ಚುನಾವಣಾ ನೀತಿಸಂಹಿತೆ ಅಟ್ಟಿಯಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಈ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ. ಏಪ್ರಿಲ್ 14ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾವನ್ನು ಚುನಾವಣೆ ಫ‌ಲಿತಾಂಶ ಬಂದ ನಂತರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಸಿನಿಮಾ ತಂಡ ತಿಳಿಸಿದೆ. ನಿರ್ದೇಶಕ ಹಾಸನ್‌ ರಮೇಶ್‌ ಅವರು ‘ಶ್ರೀಮಂತ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅವರೇ ನಿರ್ದೇಶನ ಮಾಡಿದ್ದಾರೆ.   ಯಾರಿವರು ‘ಶ್ರೀಮಂತ’ರು? ‘ಶ್ರೀಮಂತ’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡ, ಮಾಜಿ ಸಿಎಂ ಬಿ. ಎಸ್‌ ಯಡಿಯೂರಪ್ಪ, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ರಾಜಕಾರಣಿಗಳು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಗುರಿಯಾಗಬಹುದೆಂಬ ಆತಂಕ ಸಿನಿಮಾ ತಂಡದ್ದು.

ಬಿಜೆಪಿಯಲ್ಲೀಗ ರಾಜೀನಾಮೆ ಪರ್ವ; ಮತ್ತೊಬ್ಬ ಶಾಸಕ ಗುಡ್ ಬೈ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ರಾಜೀನಾಮೆ ಪರ್ವ ಆರಂಭವಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ನಾಯಕರು ರಾಜೀನಾಮೆ ನೀಡುವ ಪ್ರಕ್ರಿಯೆಯನ್ನು ಬಿರುಸುಗೊಳಿಸಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಆರ್.ಶಂಕರ್ ತಮ್ಮ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೂ ಗುಡ್ ಬೈ ಹೇಳಿದ್ದಾರೆ. ಅವರಷ್ಟೇ ಅಲ್ಲ, ಇನ್ನೂ ಕೆಲ ನಾಯಕರು ಬಿಜೆಪಿ ತ್ಯಜಿಸಿದ್ದಾರೆ. ಇದೀಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕೂಡಾ ಪಕ್ಷಕ್ಕೆ ರಾಜೀನಾನೆ ಸಲ್ಲಿಸಿದ್ದಾರೆ. ಬುಧವಾರ ಬಿಡುಗಡೆಯಾದ ಬಿಜೆಪಿ ಎರಡನೇ ಪಟ್ಟಿಯಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ಹಾಲಿ ಎಂ.ಪಿ.ಕುಮಾರಸ್ವಾಮಿ ಅವರನ್ನು ಕೈಬಿಟ್ಟು ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಘೊಷಿಸಲಾಗಿದೆ. ಇದರಿಂದ ಮುನಿಸಿಕೊಂಡಿರುವ ಶಾಸಕ ಎಂ‌ಪಿ.ಕುಮಾರಸ್ವಾಮಿ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರ ಆಪ್ತ‌ ಮೂಲಗಳು ತಿಳಿಸಿವೆ. ಇದೇ ವೇಳೆ, ಹಾವೇರಿಯಲ್ಲಿನ ಬಿಜೆಪಿ ಹಿರಿಯ ನಾಯಕ ನೆಹರೂ ಓಲೇಕಾರ್ ಕೂಡಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.…

ಯಶವಂತಪುರ: ಸಚಿವ ಎಸ್.ಟಿ.ಸೋಮಶೇಖರ್ ನಾಮಪತ್ರ

ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಆರಂಭವಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ನಾಮಪತ್ರ ಸಲ್ಲಿಸಿದರು. ಪತ್ನಿ ರಾಧಾ ಸೋಮಶೇಖರ್, ಪುತ್ರ ನಿಶಾಂತ್ ಸೋಮಶೇಖರ್ ಜೊತೆ ಹೇರೋಹಳ್ಳಿ ಬಿಬಿಎಂಪಿ ಕಚೇರಿಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು. ಸೂಚಕರಾದ ಅನಿಲ್ ಚೆಳಗೆರೆ ಮತ್ತು ರಂಗರಾಜ್ ಕೂಡಾ ಎಸ್.ಟಿ.ಸೋಮಶೇಖರ್ ಜೊತೆಗಿದ್ದರು.

ಬೈಂದೂರು, ಮೂಡಿಗೆರೆ ಸಹಿತ BJP ಎರಡನೇ ಪಟ್ಟಿಯಲ್ಲಿ ಹಲವು ಶಾಸಕರಿಗೆ ಟಿಕೆಟ್ ಇಲ್ಲ

ದೆಹಲಿ: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಬೈಂದೂರಿನಲ್ಲಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿದ್ದು, ಗುರುರಾಜ್ ಗಂಟಿಹೊಳೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಮೂಡಿಗೆರೆಯಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಬದಲಿಗೆ ದೀಪಕ್ ದೊಡ್ಡಯ್ಯಾವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲುಪಾಲಾಗಿರುವ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ತಪ್ಪಿದ್ದು, ಆ ಕ್ಷೇತ್ರದಿಂದ ಶಿವಕುಮಾರ್‌ಗೆ ಅವಕಾಶ ನೀಡಲಾಗಿದೆ. 2ನೇ ಪಟ್ಟಿಯಲ್ಲಿ ಟಿಕೆಟ್ ಕಳೆದುಕೊಂಡ  ಶಾಸಕರು: ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಲಘಟಗಿ ಶಾಸಕ ನಿಂಬಣ್ಣನವರ್ ಲಿಂಗಣ್ಣ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹಾವೇರಿ ಶಾಸಕ ನೆಹರು ಓಲೆಕಾರ್ ಮಾಯಕೊಂಡ ಶಾಸಕ ಎನ್ ಲಿಂಗಣ್ಣ ಗುರ್ಮಿಠಲ್ ಶಾಸಕ ನಾಗನಗೌಡ ಕಂದಕೂರ್

ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ: ಹಲವು ಶಾಸಕರಿಗೆ ಕೊಕ್

ದೆಹಲಿ: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಬೈಂದೂರಿನಲ್ಲಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿದ್ದು, ಗುರುರಾಜ್ ಗಂಟಿಹೊಳೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಮೂಡಿಗೆರೆಯಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ ಬದಲಿಗೆ ದೀಪಕ್ ದೊಡ್ಡಯ್ಯಾವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿ ಹೀಗಿದೆ:  ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್ ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ ಇಂಡಿ-ಕಾಸಗೌಡ ಬಿರಾದಾರ್ ಗುರುಮಿಠಕಲ್-ಲಲಿತ ಅನಪೂರ್ ಬೀದರ್-ಈಶ್ವರ್ ಸಿಂಗ್ ಠಾಕೂರ್ ಭಾಲ್ಕಿ -ಪ್ರಕಾಶ್ ಖಂಡ್ರೆ ಗಂಗಾವತಿ -ಪರಣ್ಣ ಮುನವಳ್ಳಿ ಕಲಘಟಗಿ-ನಾಗರಾಜ್ ಛಬ್ಬಿ ಹಾನಗಲ್-ಶಿವರಾಜ್ ಸಜ್ಜನರ್ ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್ ಹರಪನಹಳ್ಳಿ-ಕರುಣಾಕರ ರೆಡ್ಡಿ ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್ ದಾವಣಗೆರೆ ದಕ್ಷಿಣ-ಅಜಯ್ ಕುಮಾರ್ ಮಾಯಕೊಂಡ -ಬಸವರಾಜ್ ನಾಯ್ಕ್ ಚನ್ನಗಿರಿ-ಶಿವಕುಮಾರ್ ಬೈಂದೂರು -ಗುರುರಾಜ್ ಗಂಟಿಹೊಳೆ ಮೂಡಿಗೆರೆ-ದೀಪಕ್ ದೊಡ್ಡಯ್ಯ ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್ ಶಿಡ್ಲಘಟ್ಟ- ರಾಮಚಂದ್ರ ಗೌಡ ಕೆಜಿಎಫ್ -ಅಶ್ವಿನಿ ಸಂಪಂಗಿ ಶ್ರವಣಬೆಳಗೊಳ -ಚಿದಾನಂದ ಅರಸೀಕೆರೆ-ಜಿ.ಬಿ.ಬಸವರಾಜು ಹೆಗ್ಗಡದೇವನಕೋಟೆ-ಕೃಷ್ಣ…

ಸಾಮ್ರಾಟ್ ವಿರುದ್ದ ದುರ್ಬಲ ‘ಕೈ’ ಅಭ್ಯರ್ಥಿ? ಡಿಕೆಶಿ ಸ್ಪಷ್ಟನೆ ಹೀಗಿದೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ದ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಾಯಕರ ನಡೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕಾರಣ ಫುಟ್ಬಾಲ್ ಆಟವಲ್ಲ, ಅದೊಂದು ಚದುರಂಗದಾಟ. ಬಿಜೆಪಿಯವರು ಚದುರಂಗದ ದಾಳಗಳನ್ನು ಉರುಳಿಸುತ್ತಿದ್ದಾರೆ. ಉರುಳಿಸಲಿ ಬಿಡಿ. ಅವರಿಗೆ ಶುಭವಾಗಲಿ ಎಂದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕಾರಣದಲ್ಲಿ ಪ್ರತಿಸ್ಪರ್ಧೆ ಇರಬೇಕು. ಇಂತಹ ಹೋರಾಟ ನನಗೆ ಹೊಸತಲ್ಲ. ನಾನು 1985ರಲ್ಲಿ ದೇವೇಗೌಡರ ವಿರುದ್ಧ ಹೋರಾಡಿದ್ದೆ. ಕುಮಾರಸ್ವಾಮಿ ಅವರ ವಿರುದ್ಧವೂ ಹೋರಾಡಿದ್ದೆ. ಈಗಲೂ ಹೋರಾಡುತ್ತೇನೆ. ನನ್ನ ಜೀವನ ಹೋರಾಟದಿಂದಲೇ ಕೂಡಿದೆ ಎಂದರು. ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾರ ಜತೆಗೂ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಾಯ್ಡು ಸಮುದಾಯದವರನ್ನು ಹಾಕಿದ್ದರು. ನಾವು ಒಕ್ಕಲಿಗ ಸಮುದಾಯದವರನ್ನು ಕಣಕ್ಕಿಳಿಸಿದ್ದೆವು.…

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ.‌. ಹೊಸ ಮುಖಗಳಿಗೆ ಟಿಕೆಟ್..

ದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ಬಿಜೆಪಿ ಕೂಡಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಹಾಲಿ ಶಾಸಕರಿಗೆ ಕೊಕ್, 52 ಕಡೆ ಹೊಸಬರಿಗೆ ಟಿಕೆಟ್.‌. ಮೊದಲ ಪಟ್ಟಿಯಲ್ಲಿ 189 ಹೆಸರುಗಳ ಘೋಷಣೆಯೇ ಈ ಬೆಳವಣಿಗೆಯ ಹೈಲೈಟ್. ಹಲವು ಮಂದಿ ಹಿರಿಯ ಶಾಸಕರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸುದ್ದಿಯಿಂದಾಗಿ ಕೇಸರಿ ಕಲಿಗಳ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಗೊಂದಲಕ್ಕೆ ಕಾರಣವಾಗುವ ಬದಲು, ಬುಧವಾರ ಪಟ್ಟಿ ಬಿಡುಗಡೆ ಮಾಡುವ ಬಗ್ಗೆ ಮುಖಂಡರು ನಿರ್ಧಾರಕ್ಕೆ ಬಂದರು. ಆದರೆ ಸಂಜೆಯ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಹೈ ವೋಲ್ಟೇಜ್ ವಿದ್ಯಮಾನಗಳು ನಡೆದಿವೆ. ಸಂಜೆಯಾಗುತ್ತಿದ್ದಂತೆಯೇ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ತೆರಳಿ ವಿದ್ಯಮಾನಗಳಿಗೆ ರೋಚಕತೆ ತುಂಬಿದರು. ನಾಯಕರ…