ಕತಾರ್‌ನಲ್ಲಿ ಅನನ್ಯ ‘ಬುಧವಾರ ಉತ್ಸವ’; ಭಾರತೀಯ ಕಲಾವಿದರಿಗೆ ಸನ್ಮಾನ

ದೋಹ- ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನೀರಂತರವಾಗಿ ಕತಾರ್‌ನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡ ಅನಿವಾಸಿ ಭಾರತೀಯರ ಹೆಮ್ಮೆಯ ಸಂಸ್ಥೆ. ಭಾರತೀಯ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ “ಬುಧವಾರ ಉತ್ಸವ” ಗಮಸೆಳೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಖ್ಯಾತ ಚಲನಚಿತ್ರ, ಕಿರುತೆರೆ ನಟ-ನಟಿಯರು ಮತ್ತು ಹೆಸರಾಂತ ನೃತ್ಯ ಕಲಾವಿದರೂ ಆದ ವಿಕ್ರಮ ಸೂರಿ ಮತ್ತು ನಮಿತಾ ರಾವ್ ದಂಪತಿ ಸ್ಥಳೀಯ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣ ದಲ್ಲಿ ನೃತ್ಯ ಕಾರ್ಯಕ್ರಮ ಪ್ರಸ್ತುತಿಪಡಿಸಿದರು, ಈ ದಂಪತಿ ನಡೆಸಿಕೊಟ್ಟ ಅಮೋಘ ಪ್ರದರ್ಶನ ಕಲಾಭಿಮಾನಿಗಳ ಹೃದಯ ಗೆದ್ದಿತು. ಇದೇ ವೇಳೆ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠ ಮತ್ತು ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ ಅವರು ಕಲಾ ದಂಪತಿಗ ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಅವರನ್ನು…

ಸಿದ್ದರಾಮಯ್ಯ ಸಲಹೆಗಾರರಾಗಿ ಸುನೀಲ್ ಕನಗೋಲು ನೇಮಕ

ಬೆಂಗಳೂರು: ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಸೂತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿಸಿಕೊಟ್ಟ ‘ಚುನಾವಣಾ ಚಾಣಾಕ್ಷ’ ಸುನೀಲ್ ಕನಗೋಲು ಅವರೀಗ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನೂತನ‌ ಸಲಹೆಗಾರ. ಬಳ್ಳಾರಿ ಮೂಲದ ಸುನೀಲ್ ಕನಗೋಲು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೇ ಆದೇಶಿಸಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸಿನಂತೆ ಸುನೀಲ್ ಕನಗೋಲು ಅವರ ನೇಮಕಾತಿ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಯಾರಿವರು ಸುನೀಲ್ ಕನಗೋಲು? ಬಿಜೆಪಿಯ ಆಡಳಿತಾವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಪ್ರತಿಧ್ವನಿಸಿವೆ. ಈ ಬಗ್ಗೆ ಹಲವಾರು ದೂರುಗಳು ಸಲ್ಲಿಕೆಯಾದರೂ ಪರಿಣಾಮಕಾರಿ ತನಿಖೆಗಳು ನಡೆದಿಲ್ಲ. ಜೊತೆಗೆ ಕಾಂಗ್ರೆಸ್ ಮುಕ್ತ ಕರ್ನಾಟಕ ಸೂತ್ರ ಜಾರಿಗೆ ಆಡಳಿತಾರೂಢ ಬಿಜೆಪಿ ರಹಸ್ಯ ಕಾರ್ಯತಂತ್ರ ರೂಪಿಸಿತ್ತು. ಈ ನಡುವೆ ದೂರು, ಕೇಸ್‌ಗಳಿಂದ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಕೈ ನಾಯಕರಿಗೆ ಮನವರಿಕೆಯಾಗುತ್ತಿದ್ದಂತೆಯೇ…

‘ಹೆಲ್ಮೆಟ್’ ಬಗ್ಗೆ ಇರಲಿ ಎಚ್ಚರ.. ಹಾವು ತಂದೊಡ್ಡಿದ ಆತಂಕ

ಮೈಸೂರು: ಮನೆ ಮುಂದೆ ನಿಂತಿದ್ದ ಸ್ಕೂಟರ್‌ನಲ್ಲಿದ್ದ ‘ಹೆಲ್ಮೆಟ್’ ಒಳಗೆ ಅವಿತಿದ್ದ ನಾಗರಹಾವು.. ಸ್ನೇಕ್ ಶ್ಯಾಮ್ ಧಾವಿಸುತ್ತಿದ್ದಂತೆಯೇ ಬುಸುಗುಟ್ಟಿದ ನಾಗರ..ಮುಂದೇನಾಯಿತು ನೀವೇ ನೋಡಿ.. ಹೆಲ್ಮೆಟ್ ಒಳಗಿದ್ದ ನಾಗರಹಾವನ್ನ ರಕ್ಷಿಸಿದ ಸ್ನೇಕ್ ಶ್ಯಾಮ್! pic.twitter.com/NvDtLNC0o6 — Nannuru mysuru (@MysuruNannuru) May 30, 2023

ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ; ಕಾಯುವ ತಾಳ್ಮೆ ನನಗಿದೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದೂ ಆಗಿದೆ, ಬಿಜೆಪಿ-ಜೆಡಿಎಸ್ ಪಕ್ಷಗಳು ಆತ್ಮಾವಲೋಕನಕ್ಕೂ ಶರಣಾಗಿದೆ. ಇದೀಗ ಚುನಾವಣೋತ್ತರದಲ್ಲಿ ರಾಜಕೀಯ ನಾಯಕರ ನಡುವೆ ಟೀಕಾಸ್ತ್ರಗಳು ಪ್ರಯೋಗವಾಗುತ್ತಿವೆ. ಇದೇ ಸಂದರ್ಭದಲ್ಲಿ  ‘ಕೆಲ ಅರೆಬೆಂದ ಸಚಿವರು, ಶಾಸಕರು ಜೆಡಿಎಸ್ ಬಗ್ಗೆ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶದ ನುಡಿಗಳು ಅಚ್ಚರಿ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ‘ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ ವಿಸರ್ಜನೆ ಮಾಡುತ್ತಾರೆ? ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ? ಎಂದು ಕೆಲ ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದಿರುವ ಕುಮಾರಸ್ವಾಮಿ, ತಮ್ಮ ರಾಜಕೀಯ ಎದುರಾಳಿಗಳನ್ನುವಮೊಣಚು ಮಾತುಗಳಿಂದ ತಿವಿದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತರೆ @JanataDal_S ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ…

ಮೋದಿ ಹತ್ಯೆಗೆ ಮಂಗಳೂರಿನಲ್ಲಿ ಸಂಚು? ಕರಾವಳಿಯ 16 ಕಡೆ NIA ದಾಳಿ

ಮಂಗಳೂರು; ಕರಾವಳಿ ಜಿಲ್ಲೆ ದಕ್ಷಿಣಕನ್ನಡದ 16 ಕಡೆ ಇಂದು ಬೆಳ್ಳಂಬೆಳಗ್ಗೆ ಎನ್‌ಐ‌ಎ ದಾಳಿ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವೇಣೂರು, ಉಪ್ಪಿನಂಗಡಿ ಸೇರಿದಂತೆ ಹಲವೆಡೆ ಇಂದು ಈ ದಾಳಿ ನಡೆದಿದೆ. ಬಿಹಾರದ ಪಾಟ್ನಾದಲ್ಲಿ ಇತ್ತೀಚೆಗೆ ಮೋದಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಸುದ್ದಿ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತಿ. ಈ ಸಂಚಿನ ಸಂಬಂಧ ಕೆಲವು ದಿನಗಳ ಹಿಙದೆ ಕೆಲವರನ್ನು ಎನ್‌ಐ‌ಎ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ಕೃತ್ಯದಲ್ಲಿ ಮತ್ತಷ್ಟು ಮಂದಿಗೆ ನಂಟು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಪೇರಿಸಿರುವ ಕೇಂದ್ರೀಯ ತನಿಖಾ ತಂಡದ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬುಧವಾರ ಬೆಳ್ಳಂಬೆಳಿಗ್ಗೆಯೇ ಶಂಕಿತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಎನ್ಐಎ ತಂಡಗಳು ಹವಾಲಾ ಹಣ ವಹಿವಾಟು ಕುರಿತ ದಾಖಲೆಗಳಿಗೂ ಜಾಲಾಡಿದ್ದಾರೆನ್ನಲಾಗಿದೆ. ಇದೇ ವೇಳೆ ಮಂಗಳೂರು ಹೊರವಲಯದ ಆಸ್ಪತ್ರೆ ಜೊತೆ ಗುರುತಿಸಿಕೊಂಡಿರುವವರ ಮನೆ ಮೇಲೂ ಎನ್‌ಐಎ ದಾಳಿ…

ಮೇಕೆದಾಟು ಯೋಜನೆ; ತಮಿಳುನಾಡಿನ ಮೇಲೆ ಯುದ್ಧ ಮಾಡುವ ಉದ್ದೇಶವಿಲ್ಲ

ಬೆಂಗಳೂರು: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ,ಶಿವಕುಮಾರ್, ಮೇಕೆದಾಟು ಯೋಜನೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ ನಂತರ ರಾಜ್ಯ ಬಜೆಟ್ ನಲ್ಲಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ಅದನ್ನು ಖರ್ಚು ಮಾಡಿಲ್ಲ ಎಂದರು. ನಮಗೆ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರೆ. ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ ಎಂದ ಡಿಕೆಶಿ, ಮೇಕೆದಾಟು ನಮ್ಮ ಯೋಜನೆ. ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಕಾವೇರಿ ನದಿಗೆ ಆಣೆಕಟ್ಟುಗಳ ಬೀಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅವರಿಗೆ ಯಾವಾಗ ಎಷ್ಟು ನೀರು ಬಿಡಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ ಎಂದರು. ನಮ್ಮ…

ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ಪರ್ವ ಆರಂಭವಾಗಿದೆ. 2023-24 ಸಾಲಿನಲ್ಲಿ ಗ್ರೂಪ್ ಎ, ಬಿ, ಸಿ ಡಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟವಾಗಿದೆ. ಮಂಗಳವಾರ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಅಂಬಂಧ ಒಂದು ಜೇಷ್ಟತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ. ಜೂನ್ 1 ರಿಂದ 15 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.

ಬಳ್ಳಾರಿ ಜಿಲ್ಲೆ: ಯುನಿಸೆಫ್ ರಾಷ್ಟೀಯ ತಂಡದ ಭೇಟಿ

ಬಳ್ಳಾರಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಿಮಿತ್ತವಾಗಿ ಸಮುದಾಯದ ಸಹಭಾಗಿತ್ವಕ್ಕಾಗಿ ವಿಶೇಷ ಎನಿಸುವ ರೀತಿಯಲ್ಲಿ ಸಿದ್ಧಪಡಿಸಿ 2018ರಲ್ಲಿ ಅಂತರ್ ವ್ಯಕ್ತಿ ಸಂವಹನ ಕೌಶಲ್ಯ ಕುರಿತ ಬ್ರಿಡ್ಜ್ (BRIDGE) ತರಬೇತಿಯನ್ನು ಜಿಲ್ಲೆಯಲ್ಲಿ ನೀಡಿದರುವುದರಿಂದಾಗಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳ ಲಸಿಕಾರಕರಣಕ್ಕೆ ಸಮಯದಾಯದ ಸಹಭಾಗಿತ್ವ ಕುರಿತು ಮೌಲ್ಯಮಾಪನ ಕೈಗೊಳ್ಳಲು ಭೇಟಿ ನೀಡಿದ ತಂಡವು ಜನತೆಯ ಅಭಿಪ್ರಾಯಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದೆ. ಯುನಿಸೆಫ್ ತಂಡದ ಸದಸ್ಯರಾದ ಶ್ರೀಮತಿ ಸುಧಾ ನಾಯರ್, ಶ್ರೀಮತಿ ಅಂಜಲಿ ಅಯ್ಯರ್‌, ನೇತೃತ್ವದಲ್ಲಿ ಕೇಂದ್ರದ ಯುನಿಸೆಫ್ ತಂಡವು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಚ್‌.ಎಲ್‌.ಜನಾರ್ಧನ ರವರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುನಿಸೆಫ್ ನ ಆರೋಗ್ಯ ಜಾಗೃತಿ ವಿಭಾಗದ ರಾಜ್ಯ ಸಲಹೆಗಾರರು ಮನೋಜ್‌ ಸ್ಟೇಬಾಸಿನ್‌, ಶ್ರೀಕರ್‌ ತಂಡದೊಂದಿಗೆ ಇದ್ದರು. ನಂತರ ತಂಡವು ಆರ್‌ಸಿಎಚ್‌ ಅಧಿಕಾರಿಗಳಾದ ಡಾ.ಆರ್‌.ಅನೀಲ್ ಕುಮಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ,…