ಆಶಾ ಕಾರ್ಯಕರ್ತೆಯರ ಹೋರಾಟದ ಸಂಚಲನ; ಅಧಿಕಾರಿಗಳಿಗೆ ಆರೋಗ್ಯ ಸಚಿವರ ನಿರ್ದೇಶನ ಹೀಗಿದೆ

ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ತಿಂಗಳ 10ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಕಾಲದಲ್ಲಿ ಗೌರವಧನ ಪಾವತಿಯಾಗದೆ ಬಹುತೇಕ ಮಂದಿ ಪರದಾಡುತ್ತಿದ್ದಾರೆ‌. ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ದಿನೇಶ್ ಗುಂಡೂರಾವ್, ಅವರು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಗ್ಯ ಕಾರ್ಯಕರ್ತೆಯರಾಗಿರುವ ಆಶಾಗಳ ಮಾಸಿಕ ಗೌರವಧನವನ್ನು ತಿಂಗಳ 10 ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಸಚಿವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಶಾಗಳ ಮನವಿಗೆ…

‘ಗ್ಯಾರೆಂಟಿ’ ಅರ್ಜಿ; ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳು, ನಾಡಕಚೇರಿಗಳಲ್ಲೂ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ ನ ಸಾಮರ್ಥ್ಯ ವೃದ್ಧಿಸುವಂತೆ…

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ; ಇವರೇ ನೂತನ ಜಿಲ್ಲಾ ಮಂತ್ರಿಗಳು

ಬೆಂಗಳೂರು; ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟೊಯನ್ನು ಬಿಡುಗಡೆ ಮಾಡಲಾಗಿದೆ. ಸಂಪುಟ ವಿಸ್ತರಣೆಯಾಗಿ ಬಹುದಿನಗಳ ನಂತರ ಇದೀಗ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಡಿ.ಕೆ.ಶಿವಕುಮಾರ್​ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮಂತ್ರಿಗಳ ಪಟ್ಟಿ ಹೀಗಿದೆ: ಬೆಂಗಳೂರು ನಗರ-  ಡಿ.ಕೆ.ಶಿವಕುಮಾರ್​ ತುಮಕೂರು-ಡಾ.ಜಿ.ಪರಮೇಶ್ವರ್​ ಗದಗ – ಹೆಚ್​.ಕೆ.ಪಾಟೀಲ್ ಬೆಂಗಳೂರು ಗ್ರಾಮಾಂತರ-ಕೆ.ಹೆಚ್​.ಮುನಿಯಪ್ಪ ರಾಮಲಿಂಗಾರೆಡ್ಡಿ-ರಾಮನಗರ ಕೆ.ಜೆ.ಜಾರ್ಜ್​-ಚಿಕ್ಕಮಗಳೂರು ಎಂ.ಬಿ.ಪಾಟೀಲ್​-ವಿಜಯಪುರ ದಿನೇಶ್ ಗುಂಡೂರಾವ್​-ದಕ್ಷಿಣ ಕನ್ನಡ ಹೆಚ್​.ಸಿ.ಮಹದೇವಪ್ಪ-ಮೈಸೂರು, ಸತೀಶ್ ಜಾರಕಿಹೊಳಿ-ಬೆಳಗಾವಿ ಪ್ರಿಯಾಂಕ್​ ಖರ್ಗೆ-ಕಲಬುರಗಿ, ಶಿವಾನಂದಪಾಟೀಲ್-ಹಾವೇರಿ ಜಮೀರ್​ ಅಹ್ಮದ್ ಖಾನ್​​-ವಿಜಯನಗರ ಶರಣಬಸಪ್ಪ ದರ್ಶನಾಪುರ-ಯಾದಗಿರಿ ಈಶ್ವರ್ ಖಂಡ್ರೆ-ಬೀದರ್, ಚಲುವರಾಯಸ್ವಾಮಿ-ಮಂಡ್ಯ ಎಸ್​.ಎಸ್​.ಮಲ್ಲಿಕಾರ್ಜುನ್​-ದಾವಣಗೆರೆ ಸಂತೋಷ್ ಲಾಡ್-ಧಾರವಾಡ ಶರಣಪ್ರಕಾಶ್ ಪಾಟೀಲ್​-ರಾಯಚೂರು ಆರ್​.ಬಿ.ತಿಮ್ಮಾಪುರ-ಬಾಗಲಕೋಟೆ ಕೆ.ವೆಂಕಟೇಶ್​-ಚಾಮರಾಜನಗರ ಕೊಪ್ಪಳ-ಶಿವರಾಜ್​ ತಂಗಡಗಿ ಡಿ.ಸುಧಾಕರ್​-ಚಿತ್ರದುರ್ಗ ಬಿ.ನಾಗೇಂದ್ರ-ಬಳ್ಳಾರಿ ಕೆ.ಎನ್​.ರಾಜಣ್ಣ-ಹಾಸನ ಭೈರತಿ ಸುರೇಶ್​-ಕೋಲಾರ ಲಕ್ಷ್ಮೀ ಹೆಬ್ಬಾಳ್ಕರ್​-ಉಡುಪಿ ಮಂಕಾಳ್ ವೈದ್ಯ-ಉತ್ತರ ಕನ್ನಡ ಮಧು ಬಂಗಾರಪ್ಪ-ಶಿವಮೊಗ್ಗ ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ ಎನ್​.ಎಸ್​.ಬೋಸರಾಜು-ಕೊಡಗು ಜಿಲ್ಲಾ

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18ರಂದು ‘ಗೃಹ ಲಕ್ಷ್ಮಿ’ ಚಾಲನೆಗೆ; ಭರ್ಜರಿ ತಯಾರಿ 

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಅವರು, ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು. ಕುಂಟು ನೆಪ ನೀಡಿ ತಿರಸ್ಕರಿಸುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ ನ ಸಾಮರ್ಥ್ಯ ವೃದ್ಧಿಸುವಂತೆ…

“ಸಂಘ ಕಾರ್ಯಾಲಯಗಳು ರಾಷ್ಟ್ರಕಾರ್ಯದ ಮಂದಿರಗಳು”

ಬೆಂಗಳೂರು: ಸಂಘ ಕಾರ್ಯಕ್ಕೊಂದು ಸ್ಥಾಯಿರೂಪ, ಕಾರ್ಯದ ವಿಸ್ತಾರ ಮತ್ತು ಕಾರ್ಯಕರ್ತರ ವಿಕಾಸಕ್ಕಿರುವ ರಾಷ್ಟ್ರ ಕಾರ್ಯದ ಮಂದಿರ ಕಾರ್ಯಾಲಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಕಾರ್ಯವಾಹ ಜಯಪ್ರಕಾಶ್ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಯಲಹಂಕ ಭಾಗದ ಸಂಘ ಕಾರ್ಯಾಲಯ ‘ಉತ್ಕರ್ಷ’ ಇದರ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಅವರು ಗುರುವಾರ ಮಾತನಾಡಿದರು. ಸಂಘದಲ್ಲಿ ಸ್ವಾರ್ಥವಿಲ್ಲ ಹಾಗಾಗಿ ಸಂಘಟನೆಯಲ್ಲಿ ಬಲವಿದೆ. ಧ್ಯೇಯಕ್ಕಾಗಿ ತಪಸ್ವಿಗಳಂತೆ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿದ್ದಾರೆ‌. ಅಂತಹ ಕಾರ್ಯಕರ್ತರಿಗೆ ಕಾರ್ಯಾಲಯ ಸಂಘ ಕಾರ್ಯದ ಧ್ಯೇಯದ ದರ್ಶನವನ್ನು ಮಾಡಿಸುತ್ತದೆ. ಕಾರ್ಯಾಲಯಕ್ಕೆ ಬಂದಂತಹ ಪ್ರತಿ ವ್ಯಕ್ತಿಗೂ ಸ್ವಯಂಸ್ಫೂರ್ತಿಯಿಂದ ರಾಷ್ಟ್ರಕಾರ್ಯದ ಸಂಕಲ್ಪ ಕೈಗೊಳ್ಳಲು ಪ್ರೇರಣೆ ತುಂಬುವ ಶ್ರದ್ಧಾಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟರು. ಸಂಘ ತನ್ನ ಕಾರ್ಯದ ಮೂಲಕ ಸರ್ವವ್ಯಾಪಿಯಾಗುವ ಜೊತೆಗೆ, ಬಂಧುತ್ವದ ಮೂಲಕ ಸರ್ವಸ್ಪರ್ಶಿಯೂ ಆಗುತ್ತಿದೆ. ಹಿಂದುಗಳು ಬಂಧುಗಳಾಗಿ ಒಂದಾದಾಗ ಮಾತ್ರ ಸಮಾಜದಲ್ಲಿರುವ ವಿವಿಧ ಬೇಧಭಾವಗಳು ತೊಲಗಿ ಅಸ್ಪೃಶ್ಯತೆಯಂತಹ ಅನೇಕ…

ಬಾಡಿಗೆದಾರರಿಗೂ ಗೃಹ ಜ್ಯೋತಿ ಅನ್ವಯಿಸಲು ಅಧಿಕಾರಿಗಳಿಗೆ ಸೂಚನೆ : ಗೊಂದಲಕ್ಕೆ ತೆರೆ

ಬೆಂಗಳೂರು : ಗೃಹಜ್ಯೋತಿ, ಉಚಿತ ವಿದ್ಯುತ್ ಯೋಜನೆ ಬಾಡಿಗೆದಾರರಿಗೂ ಅನ್ವಯಿಸುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿಯ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ತೆರಿಗೆ ಪಾವತಿಸುವವರು ಹಾಗೂ ಜಿಎಸ್ ಟಿ ನೋಂದಣಿ ಮಾಡಿಕೊಂಡಿರುವವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

‘ಗ್ಯಾರೆಂಟಿ’ ಅವಾಂತರ; ದಾಖಲಾಯಿತು ಮೊದಲ ದೂರು.. ಬಡವರು ಬಡವರಾಗಿಯೇ ಉಳಿಯಬೇಕೆ? ಇದು ‘ಸಿಟಿಜನ್ಸ್’ ಪ್ರಶ್ನೆ.. 

ಬೆಂಗಳೂರು: ಮಹತ್ವಾಕಾಂಕ್ಷೆಯ ‘ಗ್ಯಾರೆಂಟಿ’ ಅವಾಂತರ ಕುರಿತಂತೆ ಮೊದಲ ದೂರು ದಾಖಲಾಗಿದೆ. ಈ ಗ್ಯಾರೆಂಟಿ ಭರವಸೆಗಳ ಪೈಕಿ ‘ಗೃಹ ಜ್ಯೋತಿ’ ಉಳ್ಳವರಿಗೆ ಮಾತ್ರವೇ, ಬಡವರು ಬಡವರಾಗಿಯೇ ಉಳಿಯಬೇಕೆ? ಎಂಬ ಆಕ್ರೋಶ ಪ್ರತಿಧ್ವನಿಸಿದೆ‌. ಈ ಕುರಿತು ಸಿಎಂ, ಡಿಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿರುವ ‘ಸಿಟಿಜನ್ಸ್ ದೂರು’ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಚುನಾವಣಾ ಪೂರ್ವದಲ್ಲಿ ಜನತೆಗೆ ಭರವಸೆ ನೀಡಿರುವ ‘ಐದು ಗ್ಯಾರೆಂಟಿ’ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಮುನ್ನುಡಿ ಬರೆದಿದೆ. ಆದರೆ ಷರತ್ತುಗಳ ವಿಚಾರದಿಂದಾಗಿ ಗೊಂದಲ ಉಂಟಾಗಿದೆ. ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಕುರಿತ ಆದೇಶವು ‘ಬಡವರು ಬಡವರಾಗಿಯೇ ಉಳಿಯಬೇಕೇ’ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಷರತ್ತುಗಳನ್ನು ಪರಿಷ್ಕರಿಸಬೇಕು, ಹಿಂದೆ ನೀಡಿರುವ ಭರವಸೆಯಂತೆಯೇ ಬಡವರೆಲ್ಲರಿಗೂ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಈ ಸಂಘಟನೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಏನಿದು ಅವಾಂತರ?…

 ಶ್ರೀ ಘಾಟಿ ಸಮೀಪ ಮದುವೆ ಬಸ್ ಪಲ್ಟಿ: ಅನೇಕ ಪ್ರಯಾಣಿಕರಿಗೆ ಗಾಯ

ದೊಡ್ಡಬಳ್ಳಾಪುರ: ಪುಣ್ಯಕ್ಷೇತ್ರ  ಶ್ರೀ ಘಾಟಿ ಸಮೀಪ ಮದುವೆಗೆ ದಿಬ್ಬಣ ತೆರಳುತ್ತಿದ್ದವರ ಬಸ್ ಪಲ್ಟಿಯಾಗಿ ಅನೇಕರು ಗಾಯಗೊಂಡಿದ್ದಾರೆ. ಮದುವೆಗೆಂದು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.