ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯೆಲ್ ನೇಮಕ

ಬೆಂಗಳೂರು: ಮಹತ್ವದ ಆದೇಶವೊಂದರಲ್ಲಿ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರನ್ನು ಸರ್ಕಾರ ನೇಮಕ ಮಾಡಿದೆ.‌ ಪ್ರಸಕ್ತ ಮುಖ್ಯ ಕಾರ್ಯದರ್ಶಿಯಾಗಿರುವ ವಂದಿತಾ ಶರ್ಮಾ ಅವರು ಈ ತಿಂಗಳಾಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ. ರಾಜ್ಯ ಕಾರ್ಯಾಂಗದ ಅತ್ಯುನ್ನತ ಹುದ್ದೆಯಾಗಿರುವ ಮುಖ್ಯಕಾರ್ಯದರ್ಶಿ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ಸರ್ಕಾರ ನೇಮಕ ಮಾಡಿದೆ. ರಜನೀಶ್ ಗೋಯೆಲ್ ಅವರು 1986ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.‌

‘ಖಜಾನೆ ಖಾಲಿ ಸರ್ಕಾರ ಪಾಪರ್’: ಪ್ರತಿಪಕ್ಷ ನಾಯಕ ವಾಗ್ದಾಳಿ

ಕಲಬುರಗಿ : ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಮುಂದಾಗದ ರಾಜ್ಯ ಸರಕಾರ ಅವರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಕಲಬುರಗಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ರೈತರ ಜತೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪರಿಹಾರ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಒಂದಕ್ಕೆ ಎರಡರಷ್ಟು ಪರಿಹಾರ ನೀಡಿ ರೈತರ ಹಿತ ಕಾಯಲಾಗಿತ್ತು. NDRF ಮಾನದಂಡಗಳ ಅನ್ವಯ ಕೇಂದ್ರ ಪರಿಹಾರ ನೀಡುವುದು ವಾಡಿಕೆ. ಅದಕ್ಕೆ ಮುಂಚೆ ರಾಜ್ಯ ಸರಕಾರ ನೆರವಿಗೆ ಧಾವಿಸುವ ಕೆಲಸ ಮಾಡದೆ ಹೊಣೆಗಾರಿಕೆ ಯಿಂದ ನುಣುಚಿಕೊಳ್ಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಮನಮೋನ್ ಸಿಂಗ್ ಅವರ ಕಾಲದಿಂದಲೂ ಅನುಸರಿಸಿರುವ ನೀತಿ…

ಉತ್ತರಕಾಶಿ ದುರಂತ: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ವೀಡಿಯೋ ಲಬ್ಯ

ದೆಹಲಿ: ಉತ್ತರಕಾಶಿಯಲ್ಲಿ ಸುರಂಗ ಕುಸಿದು ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಘಟನೆ ಇಡೀ ದೇಶವನ್ನು ಆತಂಕಕ್ಕೀಡುಮಾಡಿದೆ. ಉತ್ತರಖಂಡ್ ರಾಜ್ಯದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಸಮರ ಸಜ್ಜಿನಿಂದ ಸಾಗಿದೆ. ಸುಮಾರು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಮಾಡಲಾಗಿದೆ. ಸಂದಿಗ್ಧ ಸ್ಥಿತಿಯಲ್ಲಿರುವ ಕಾರ್ಮಿಕರಿಗೆ ಪೈಪ್ ಮೂಲಕ ಆಹಾರ ರವಾನಿಸಲಾಗುತ್ತಿದೆ. ಈ ನಡುವೆ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ದೃಶ್ಯಗಳು ಕಾರ್ಯಾಚರಣೆ ತಂಡಕ್ಕೆ ಲಭಿಸಿದೆ. ಈ ವೀಡಿಯೋ ಮಂಗಳವಾರ ಬೆಳಿಗ್ಗೆ ಬಿಡುಗಡೆಯಾಗಿದೆ.ರಕ್ಷಣಾ ಕಾರ್ಯಾಚರಣೆಯ ನಡುವೆ, ಸೋಮವಾರ 6 ಇಂಚು ಅಗಲದ ಪೈಪ್‌ವೊಂದನ್ನು ಸುರಂಗದೊಳಗೆ ಕಳುಹಿಸುವ ಪ್ರಯತ್ನ ಸಫಲವಾಗಿದೆ. ಈ ಪೈಪ್ ಕಾರ್ಮಿಕರಿದ್ದ ಸ್ಥಳವನ್ನು ತಲುಪಿದೆ. ಈ ಮೂಲಕ ಕ್ಯಾಮೆರಾದಿಂದ ಕಾರ್ಮಿಕರ ಚಲನವಲನದ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. #WATCH | Uttarkashi (Uttarakhand) tunnel rescue | Rescue…

ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ದಾಳಿ. ಸತತ 7 ತಾಸು ದಾಖಲೆ ಪರಿಶೀಲನೆ

ಬೆಂಗಳೂರು (ಗ್ರಾ): ದೊಡ್ಡಬಳ್ಳಾಪುರದ ತಾಲ್ಲೂಕು ಕಚೇರಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ (ಎಡಿಎಲ್‌ಆರ್) ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು. ಎಡಿಎಲ್ ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಮಂದಿ ತಂಡ ದಾಖಲೆ ಪರಿಶೀಲನೆ ನಡೆಸಿತು. ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಡಿ, ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು. ಇದೇ ವೇಳೆ, ಭೂ…

ICC ಕ್ರಿಕೆಟ್ ಸಾಧಕರ ತಂಡ ಪ್ರಕಟ; ಭಾರತದ 6 ಆಟಗಾರು, ಚಾಂಪಿಯನ್ ಆಸಿಸ್‌ನಿಂದ ಕೇವಲ ಇಬ್ಬರು ಆಯ್ಕೆ

ದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ತನ್ನ ವಿಶ್ವಕಪ್ ಸಾಧಕರ ಪಟ್ಟಿಯನ್ನೊಳಗೊಂಡ ತಂಡವನ್ನು ಸೋಮವಾರ ಪ್ರಕಟಿಸಿದೆ. ಈ ತಂಡದಲ್ಲಿ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡದ 6 ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಸಿಸಿ ವಿಶ್ವಕಪ್ ತಂಡದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ಶ್ರೇಷ್ಠ ಇಯಾನ್ ಬಿಷಪ್, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಶೇನ್ ವ್ಯಾಟ್ಸನ್ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಸೇರಿದಂತೆ ಪ್ರಮುಖರನ್ನೊಳಗೊಂಡ ಸಮಿತಿಯು ಈ ಪಟ್ಟಿಯನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿದ ಈ ಪಟ್ಟಿಯಲ್ಲಿ ಭಾರತದ ಆರು ಆಟಗಾರರು ಇದ್ದರೆ ಚಾಂಪಿಯನ್ ಶಿಪ್ ಗೆದ್ದ ಆಸ್ಟ್ರೇಲಿಯಾದ ಕೇವಲ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ. ಪಟ್ಟಿ ಹೀಗಿದೆ:  ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) (ದಕ್ಷಿಣ ಆಫ್ರಿಕಾ) ರೋಹಿತ್ ಶರ್ಮಾ (ನಾಯಕ) (ಭಾರತ) ವಿರಾಟ್ ಕೊಹ್ಲಿ (ಭಾರತ) ಡೇರಿಲ್…

ಮಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿ; ಈ ಪ್ರದೇಶದಲ್ಲಿ ವಾಹನಗಳಲ್ಲಿ ಹಾರ್ನ್ ನಿಷೇಧ.. ಉಲ್ಲಂಘಿಸಿದರೆ ದುಬಾರಿ ದಂಡ..

ಮಂಗಳೂರು: ವೇಗವಾಗಿ ಬೆಳೆಯುತ್ತಿರುವ ಬಂದರು ನಗರಿ ಮಂಗಳೂರಿನಲ್ಲಿ ಪೊಲೀಸರು ಕ್ಷಿಪ್ರ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ಇನ್ನು ಮುಂದೆ ವಾಹನ ಸಾವಾರು ಹಾಗೂ ಚಾಲಕರು ಎಲ್ಲೆಂದರಲ್ಲಿ, ಹೇಗೆಂದರಲ್ಲಿ ಹಾರ್ನ್ ಹಾಕುವಂತಿಲ್ಲ. ಹಾರ್ನ್ ಕರ್ಕಶ ಧ್ವನಿ ನಿರ್ಬಂಧ ನಿಯಮ‌ ಜಾರಿಗೊಳಿಸಲಾಗಿದೆ. ವಾಹನಗಳ ಹಾರ್ನ್ ಶಬ್ಧದ ಕಾರಣದಿಂದ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಹೊತ ದೃಷ್ಟಿಯಿಂದ, ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ಮಂಗಳೂರು ನಗರದ ಕೆಲಚ ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್)ರಂತೆ ಈ ಕ್ರಮ ಜಾರಿಗೊಳಿಸಲಾಗಿದ್ದು, ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗಾಗಿ 1000 ರೂಪಾಯಿ ದಂಡ, ಅನಂತರದ ಪ್ರತೀ ಉಲ್ಲಂಘನೆಗೆ…

ಮತ್ತೊಂದು ಪೋಕ್ಸೋ ಕೇಸ್; ಮುರುಘಾ ಶರಣರ ಬಂಧನ; ಹೈಕೋರ್ಟ್ ತಡೆ

ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾರೆ. ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯದ ಅರೆಸ್ಟ್ ವಾರೆಂಟ್ ಆಧರಿಸಿ ಪೊಲೀಸರು ಮುರುಘಾ ಶರಣರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀಗಳ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆನೀಡಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ ಮುರುಘಾ ಶರಣರನ್ನು ಬಂಧಿಸಿದ್ದಾರೆ. ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದ್ದ ಮುರುಘಾ ಶರಣರು ನವೆಂಬರ್ 16ರಂದು ಜಮೀನಿನಲ್ಲಿ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಾಲ್ಕೇ ದಿನದಲ್ಲಿ ಶರಣರನ್ನು ಜಿಲ್ಲಾ ನ್ಯಾಯಾಲಯದ ಆದೇಶದಂತೆ  ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಮತ್ತೊಮ್ಮೆ ಶ್ರೀಗಳ ಬಂಧನವಾಗಿದೆ. ಈ ನಡುವೆ, ಶ್ರೀಗಳ ಬಂಧನ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಜಿಲ್ಲಾ ನ್ಯಾಯಾಲಯದ ಆದೇಶದಿಂದ ಆರೋಪಿಯಾಗಿರುವ ಮುರುಘಾ ಶರಣರಶ್ರೀಗಳಿಗೆ ಅನ್ಯಾಯವಾಗಿದ್ದು, ಜಾಮೀನು ರಹಿತ ಬಂಧನದ ವಾರೆಂಟ್​ಗೆ ತಡೆ ನೀಡಿ, ಆದೇಶ…

ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಭೀಕರ ಅಗ್ನಿ ಅನಾಹುತ; 40ಕ್ಕೂ ಹೆಚ್ಚು ಬೋಟ್‌ಗಳು ಭಸ್ಮ

ವಿಶಾಖಪಟ್ಟಣಂ: ಆಂದ್ರಪ್ರದೇಶದ ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿದ್ದ ಪ್ರದೇಶದಲ್ಲಿ ಭೀಕರ ಅಗನಿ ಅನಾಹುತ ಸಂಭವಿಸಿದೆ. ಭಾನುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 40ಕ್ಕೂ ಹೆಚ್ಚು ಬೋಟ್‌ಗಳು ಬೆಂಕಿಗೆ ಆಹುತಿಯಾಗಿದೆ. ರಾತ್ರಿ ಇದ್ದಕ್ಕಿದ್ದಂತೆಯೇ ಕಾಣಿಸಿಕೊಂಡ ಬೆಂಕಿ ಏಕಾಏಕಿ ಹಬ್ಬಿದೆ. ಸ್ವಲ್ಪ ಹೊತ್ತಿನಲ್ಲೇ ಅಪಾರ ಸಂಖ್ಯೆಯ ಬೋಟುಗಳು ಧಗಧಗಿಸಿ ಹೊತ್ತಿ ಉರಿದಿದೆ. ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರ ತಂಡಗಳು ರಾತ್ರಿ ವೇಳೆ ಬೋಟ್‌ಗಳಲ್ಲಿ ತಂಗುವುದು ಸಾಮಾನ್ಯ. ಅದೇ ರೀತಿ ಕಳೆದ ರಾತ್ರಿಯೂ ಮೀನುಗಾರರು ದೋಣಿಗಳಲ್ಲಿ ವಿರಮಿಸಿರಬಹುದೆಂಬ ಸಂಶಯ ಕಾಡಿದೆ. Vizag Harbour: Sunday (Nov 19th,2023): On sunday Night, Massive Fire at Vizag Harbour has led to damage of around 40 fishing boats, each boat costing at least Rs 50 lakh. At least 25 to…

‘ನಮ್ಮ ತಂಡ ನಮ್ಮ ಹೆಮ್ಮೆ’; ಟೀಂ ಇಂಡಿಯಾದ ಆತ್ಮಸ್ಥೈರ್ಯ ಹೆಚ್ಚಿಸಿದ ಮೋದಿ

ದೆಹಲಿ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಪರಿಸ್ಥಿತಿ ವಿರುದ್ದವಾಗಿತ್ತು. ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎಂದೇ ಬಿಂಬಿತವಾಗಿದ್ದ ಟೀಂ ಇಂಡಿಯಾ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಮುಂದೆ ತಲೆಬಾಗಲೇಬೇಕಾಯಿತು. ಇದು ಭಾರತದ ಪಾಲಿಗೆ ವೀರೋಚಿತ ಸೋಲಾಗಿದ್ದರೂ ಸರಣಿ ದಾಖಲೆಗಳ ವೀರನೆನಿಸಿದ ತಂಡಕ್ಕೆ ಶುಭಾಶಯಗಳ ಮಹಾಮಳೆಯಾಗುತ್ತಿದೆ. ‘ಕ್ರಿಕೆಟ್‌ನಲ್ಲಿ ಭಾರತ ಸೋತರೂ ಸಾಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ’ ಎಂಬ ವಿಶ್ಲೇಷಣೆಯ ಮಾತುಗಳು ಹರಿದಾಡುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಟೀಮ್ ಇಂಡಿಯಾಗೆ  ಧೈರ್ಯ ತುಂಬುವ ಸಂದೇಶ ರವಾನಿಸಿದ್ದಾರೆ. ‘ಆತ್ಮೀಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ .ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದವರು ಹೇಳಿದ್ದಾರೆ.…

ವಿಶ್ವಕಪ್ ಕ್ರಿಕೆಟ್: 6ನೇ ಬಾರಿಗೆ ಸರಣಿ ಗೆದ್ದ ಆಸ್ಟ್ರೇಲಿಯಾ

ಅಹ್ಮದಾಬಾದ್: ಈ ಬಾರಿಯ ವಿಶ್ವಕಪ್ ಸರಣಿಯುದ್ದಕ್ಕೂ ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಮುಗ್ಗರಿಸಿದೆ. ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ಮುಂದೆ ಶರಣಾದ ಭಾರತ ಈ ಬಾರಿಯೂ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಯಿತು. ಭಾನುವಾರ ಅಹಮಾದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7ವಿಕೆಟ್‌ಗಳ ಸೋಲು ಅನುಭವಿಸಿತಿ. ಟಾಸ್ ಗೆದ್ದ ಆಸ್ಟ್ರೇಲಿಯಾ ಭಾರತಕ್ಕೆ ಬ್ಯಾಟಿಂಗ್ ಅವಕಾಶವನ್ನು ಬಿಟ್ಟುಕೊಟ್ಟಿತು. ನಿಗದಿತ 50 ಓವರುಗಳಲ್ಲಿ 240 ರನ್‌ಗಳಿಗೆ ಸರ್ವತನ ಕಂಡ ಟೀಂ ಇಂಡಿಯಾ ಆಸಿಸ್‌ಗೆ 432ರ ಸರಳ ಮೊತ್ತದ ಗುರಿಯನ್ನು ಒಡ್ಡಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ, ಇನ್ನೂ 40 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ಸಾಧಿಸಿತು. ಆಸ್ಚ್ರೇಲಿಯಾ ತಂಡ ಟ್ರಾವಿಸ್ ಹೆಡ್ ಶತಕ ಮತ್ತು ಲಬುಶೇನ್‌ರ ಅರ್ಧಶತಕದ ನೆರವಿನಿಂದ ಗುರಿ ತಲುಪಿ ಜಯಭೇರಿ ಭಾರಿಸಿತು. 7 ವಿಕೆಟ್‌ಗಳ ಭರ್ಜರಿ ಗೆಲುವು…