ಶ್ರೀನಗರ: ಪ್ರಪಾತಕ್ಕೆ ಉರುಳಿ ಬಿದ್ದ ಬಸ್; 30 ಮಂದಿ ದುರ್ಮರಣ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ಬಸ್ಸು ಕಂದಕಕ್ಕೆ ಬಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಬಟೋಟ್-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರುಂಗಲ್-ಅಸ್ಸಾರ್ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು ನತದೃಷ್ಟ ಬಸ್ಸಿನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದರೆಂದು ಹೇಳಲಾಗಿದ್ದು ಹಲವರು ಗಾಯಗೊಂಡಿದ್ದಾರೆ.

ಪಕ್ಷಾಂತರ ಪರ್ವ: ‘ಕೈ’ ಹಿಡಿದ ಗೌರಿಶಂಕರ್, ಮಂಜುನಾಥ್

ಬೆಂಗಳೂರು: ಜೆಡಿಎಸ್ ಮುಖಂಡರು, ಮಾಜಿ ಶಾಸಕರಾದ ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್, ಬೆಂಗಳೂರು ದಾಸರಹಳ್ಳಿಯ ಆರ್ ಮಂಜುನಾಥ್ ಅವರು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮ ಬೆಂಬಲಿಗ ನಾಯಕರು, ಬೆಂಬಲಿಗರ ಜತೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಬುಧವಾರ ಈ ಪ್ರಮುಖರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಉಪಾಧ್ಯಕ್ಷ ಬಿ ಎಲ್ ಶಂಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಾಸಕರಾದ ನರೇಂದ್ರಸ್ವಾಮಿ, ಡಾ. ರಂಗನಾಥ, ನೆಲಮಂಗಲ ಶ್ರೀನಿವಾಸಯ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಕೆ ಗೋವಿಂದರಾಜು, ನಸೀರ್ ಅಹಮದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ಭಾವನೆ ನಿಮ್ಮೊಂದಿಗಿದೆ, ಪಕ್ಷ ಕಟ್ಟಲು ನಿಮ್ಮ ಜೊತೆಗಿರುತ್ತೇನೆ’; ‘ಜೈ ಶ್ರೀ ರಾಮ್’ ಎನ್ನುತ್ತಾ ವಿಜಯೇಂದ್ರಗೆ ಶುಭ ಹಾರೈಸಿದ ರವಿ

ಭೋಪಾಲ್: ಕರ್ನಾಟಕ ಪ್ರದೇಶ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆಗಳ ಮಹಾಮಳೆಯಾಗುತ್ತಿದೆ. ಬುಧವಾರ ಅಧಿಕಾರ ವಹಿಸಿಕೊಂಡಿರುವ ವಿಜಯೇಂದ್ರ ಅವರಿಗೆ ಪಕ್ಷದ ಹಿರಿಯ ನಾಯಕ ಸಿ.ಟಿ.ರವಿ ಕಳುಹಿಸಿರುವ ಶುಭ ಹಾರೈಕೆಯ ಸಂದೇಶದ ವೀಡಿಯೊ ಗಮನಸೆಳೆದಿದೆ. ಆರೆಸ್ಸೆಸ್ ಕಟ್ಟಾಳುವಾಗಿರುವ ಸಿ.ಟಿ.ರವಿ ಅವರು ಕಾರ್ಯಕರ್ತರ ನಡುವೆ ಸಂಭ್ರಮಾಚರಣೆ ಮಾಡುತ್ತಾ ವಿಜಯೇಂದ್ರ ಅವರ ಪದಗ್ರಹಣ ಬಗ್ಗೆ ತಮ್ಮದೇ ಶೈಲಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರ ಚತುರತೆಯನ್ನು ಹಾಡಿ ಹೊಗಳಿರುವ ಸಿ.ಟಿ.ರವಿ, ಪಕ್ಷವನ್ನು ಗಟ್ಟಿಗೊಳಿಸಲು ವಿಜಯೇಂದ್ರ ಸಮರ್ಥರು. ಅವರ ನಾಯಕತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರು ಎಲ್ಲಾ ನಾಯಕರ ವಿಶ್ವಾಸವನ್ನು ಗಿಟ್ಟಿಸಿಕೊಂಡು ಪಕ್ಷವನ್ನು ಗಟ್ಟಿಗೊಳಿಸಲಿ, ಲೋಕಸಭೆ, ವಿಧಾನ ಪರಿಷತ್, ಜಿಲ್ಲಾ-ತಾಲೂಕು ಪಂಚಾಯತ್ ಸಹಿತ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯವನ್ನು ದೇವರು ವಿಜಯೇಂದ್ರರಿಗೆ ಕರುಣಿಸಲಿ ಎಂದು ರವಿ…

ಆಸ್ಪತ್ರೆ ಆವರಣದಲ್ಲಿ ರಹಸ್ಯ ಸುರಂಗ; ಹಮಾಸ್ ಕಿತಾಪತಿಯ ವೀಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಗಾಜಾ: ಮಧ್ಯಪ್ರಾಚ್ಯ ಸಮರಕ್ಕೆ ನಾಂದಿ ಹಾಡಿದ್ದ ಹಮಾಸ್ ಉಗ್ರರ ಕಿತಾಪತಿಗಳು ಬಯಲಾಗುತ್ತಲಿವೆ. ಹಮಾಸ್ ಮೂಲೋಚ್ಚಾಟನೆಗೆ ಪಣತೊಟ್ಟು ಸೆಣಸಾಡುತ್ತಿರುವ ಇಸ್ರೇಲ್ ಸೇನೆ ಇಸ್ರೇಲ್‌ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿ ಕುತೂಹಲಕಾರಿ ಸಂಗತಿಯನ್ನು ಬಯಲು ಮಾಡಿದೆ. ಹಮಾಸ್ ಬಂಡುಕೋರರು ಅಡುಗುದಾಣಗಳ ಧ್ವಂಸ ಮಾಡಲು ಕಾರ್ಯಾಚರಣೆ ನಡೆಸಿರುವ ಇಸ್ರೇಲ್ ಸೇನೆ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದನ್ನು ಪತ್ತೆ ಮಾಡಿದೆ. ಇದರಲ್ಲಿ ಹಮಾಸ್‌ ಉಗ್ರರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು ಎನ್ನಲಾಗುತ್ತಿದೆ. ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರು ಸಂಗ್ರಹಿಸಿಟ್ಟಿದ್ದಾರೆನ್ನಲಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೇನಾ ವಕ್ತಾರರು ತಿಳಿಸಿದ್ದಾರೆ. ಈ ಸುರಂಗದ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. EXCLUSIVE RAW FOOTAGE: Watch IDF Spokesperson RAdm. Daniel Hagari walk through one of Hamas' subterranean terrorist tunnels—only to exit in Gaza's Rantisi hospital on…

ಬೆಂಗಳೂರು- ಧಾರವಾಡ ‘ವಂದೇ ಭಾರತ್’ ಬೆಳಗಾವಿಯವರೆಗೆ ವಿಸ್ತರಣೆ

ಬೆಳಗಾವಿ: ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ ಎಂದು ರೈಲ್ವೇ ಮೂಲಗಳು ಮಾಹಿತಿ ನೀಡಿವೆ.

ತಿಗಳಪೇಟೆಯಲ್ಲಿನ ನೈಜ ಘಟನೆಯೇ ‘ಕೈವ’: ಕನ್ನಡ ಸಿನಿ ಲೋಕದಲ್ಲಿ ಮತ್ತೊಂದು ಅಚ್ಚರಿ

1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ. ‘ಕೈವ’ ಹೆಸರಿನ ಈ ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ‘ಕೈವ’ ಎಂಬುದು ಒಬ್ಬ ವ್ಯಕ್ತಿಯ ಹೆಸರು. ಬೆಂಗಳೂರು ಕರಗದಲ್ಲಿ ಸೃಷ್ಟಿಯಾದ ಪ್ರೇಮಪ್ರಸಂಗವೊಂದು ಕೋತೂಹಲಘಟ್ಟಕ್ಕೆ ತಲುಪಿ ನಿರ್ಣಾಯಕ ತಿರುವನ್ನು ಪಡೆಯುವ ನಡುವೆ ಅನೇಕಾನೇಕ ಅಚ್ಚರಿಯ ಪ್ರಸಂಗಗಳು ಘಟಿಸುತ್ತವೆ. ಈ ಸಿನಿಮಾದ ಬಹುತೇಕ ಸನ್ನಿವೇಶಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಗಂಗಾರಾಮ್ ಕಟ್ಡಡದ ದುರಂತಕ್ಕೂಈ ಚಿತ್ರದ ಕಥೆಗೂ ಸಂಬಂಧವಿದೆ ಎಂಬುದೂ ಮತ್ತೊಂದು ಅಚ್ಚರಿ. ಚಿತ್ರದ ನಾಯಕನಾಗಿ ಧನ್ವೀರ್, ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದು, ದಿನಕರ್ ತೂಗುದೀಪ್ ಕೂಡಾ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐವರು ನಿರ್ದೇಶಕರು ನಟನೆ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಡಿಸೆಂಬರ್ ನಲ್ಲಿ ‘ಕೈವ’ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ಈ ಸಿನಿಮಾದ ಟೀಸರನ್ನು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ…

ಉಡುಪಿ ನರಮೇಧ; ಮೃತರ ಕುಟುಂಬದವರಿಗೆ ಜಿ.ಎ.ಬಾವ ಸಾಂತ್ವನ; ಆರೋಪಿಯನ್ನು ಸೆರೆಹಿಡಿದ ಪೊಲೀಸ್ ಕ್ರಮಕ್ಕೆ ಶ್ಲಾಘನೆ

ಉಡುಪಿ: ಕರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿರುವ ನರಮೇಧ ಪ್ರಕರಣ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಭಾನುವಾರ ಮಲ್ಪೆ ಸಮೀಪದ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರನ್ನು ಹಂತಕ ನಿರ್ದಯಿಯಾಗಿ ಕೊಲೆ ಮಾಡಿದ್ದು, ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕೊಲೆ ನಡೆದ ಸ್ಥಳಕ್ಕೆ ಶಾಸಕರು ಸೇರಿದಂತೆ ಗಣ್ಯರು ಭೇಟಿ ನೀಡಿ ಮೃತರ ಬಂಧುಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಹಿರಿಯ ಕಾಂಗ್ರೆಸ್ ನಾಯಕ ಜಿ.ಎ.ಬಾವ ಅವರು ಮಂಗಳವಾರ ಮಲ್ಪೆ ಸಮೀಪದ ನೇಜಾರಿನಲ್ಲಿರುವ ಮೃತರ ಮನೆಗೆ ತೆರಳಿ ಕುಟುಂಬ ಸದಸ್ಯರ ಜೊತೆ ಮಾತನಾಡಿದರು. ಹಸೀನಾ ಹಾಗೂ ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್ (14) ಕೊಲೆಯಾಗಿದ್ದು ಮೃತರ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಸಮಾಧಾನದ ಮಾತುಗಳನ್ನಾಡಿದ ಜಿ.ಎ.ಬಾವ, ಗಾಯಾಳು ಸಹಿತ ಕುಟುಂಬದಲ್ಲಿ ನೊಂದವರಿಗೆ ನೆರವು ನೀಡುವ ಭರವಸೆ ನೀಡಿದರು. ಮೃತ…

ವಿದ್ಯುತ್ ಕಳ್ಳತನ ಒಪ್ಪಿಕೊಂಡ ಕುಮಾರಸ್ವಾಮಿಗೆ ಅಭಿನಂದನೆ ಎಂದ ಡಿಸಿಎಂ

ಬೆಂಗಳೂರು: “ಅಚಾತುರ್ಯವೋ, ಕಳ್ಳತನವೋ ಒಟ್ಟಿನಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಕುಮಾರಸ್ವಾಮಿ ಅವರು ಒಪ್ಪಿಕೊಂಡು, ದಂಡ ಕಟ್ಟುತ್ತೇನೆ ಎಂದು ಹೇಳಿರುವುದು ಅಭಿನಂದನೀಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. “ಕುಮಾರಸ್ವಾಮಿ ಅವರು ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದಾರೆ” ಎಂಬ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಕಾಂಗ್ರೆಸ್ ಪಕ್ಷದ ‘ಎಕ್ಸ್’ ಖಾತೆಯಲ್ಲಿ ಮಾಡಿರುವ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ವಿಧಾನಸೌಧ ಹಾಗೂ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬಳಿ ಡಿಸಿಎಂ ಡಿ‌.ಕೆ.ಶಿವಕುಮಾರ್ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. “ಕುಮಾರಸ್ವಾಮಿ ಮನೆಗೆ ವಿದ್ಯುತ್ ಕಳವು ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಅವರ ನೆರೆಹೊರೆಯವರೇ ಅಕ್ರಮ ವಿದ್ಯುತ್ ಸಂಪರ್ಕದ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ. ಆನಂತರ ನಮ್ಮ ಪಕ್ಷದ ಸಾಮಾಜಿಕ ಜಾಲತಾಣ ಘಟಕ ಏನು ಕೆಲಸ ಮಾಡಬೇಕೊ ಅದನ್ನು ಮಾಡಿದೆ. ಅವರ ಪಕ್ಷದ ಸೋಶಿಯಲ್ ಮೀಡಿಯಾದಲ್ಲಿ ಬೇಕಾದಷ್ಟು ಬರೆದಂತೆ, ನಮ್ಮ ಪಕ್ಷದವರು ಏನು ಕೆಲಸ…