ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಹೋರಾಟದ ನಾಟಕವಾಡುತ್ತಿರುವ ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಅವರು ಮೊದಲು ತಮ್ಮ ವಿರುದ್ಧವೇ ಇರುವ ಆರೋಪಗಳಿಗೆ ಉತ್ತರಿಸಲಿ ಎಂದು KPCC ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಂಸದ ಸುಧಾಕರ್ ಅವರನ್ನು ‘ಭಲೇ ಜೋಡಿ’ ಎಂದು ಕರೆದಿರುವ ರಮೇಶ್ ಬಾಬು, ಸರ್ಕಾರದ ವಿರುದ್ಧದ ಹೋರಾಟ ನಡೆಸುವ ತಾವು ಮೊದಲು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಅಶೋಕ್ ಹಾಗೂ ಸುಧಾಕರ್ ಅವರ ಮುಂದಿಟ್ಟಿದ್ದಾರೆ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ರವರು ಕರ್ನಾಟಕದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಸುಧಾಕರ್ ಅವರ ಜೊತೆಯಲ್ಲಿ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಭಲೇ ಜೋಡಿಯ ರೂಪದಲ್ಲಿ…