ಮಂಗಳೂರು: ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ವಿಧಿವಶ

ಮಂಗಳೂರು: ಹೊಸದಿಗಂತ ಪತ್ರಿಕೆಯ ವರದಿಗಾರ, ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಅಸೌಖ್ಯದಿಂದ ಇದ್ದ ಅವರು ಭಾನುವಾರ ನಿಧನರಾಗಿದ್ದಾರೆ. ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸುಮಾರು ಎರಡೂವರೆ ದಶಕಗಳಿಂದ ಹೊಸದಿಗಂತ ಪತ್ರಿಕೆಯ ಮಂಗಳೂರು ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಯಾಶೀಲ ಬರಹಗಾರರಾಗಿದ್ದ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ‌ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11: ಪ್ರಶಸ್ತಿ ಗೆದ್ದ ಹನುಮಂತ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಳ್ಳಿ ಹೈದ ಹನುಮಂತ ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಂಟ್ರಿಕೊಟ್ಟಿದ್ದ ಹನುಮಂತ ಪ್ರಶಸ್ತಿ ಗೆದ್ದು ಅಚ್ಚರಿ ಮೂಡಿಸಿದೆ. ಟಾಪ್ ಐವರ ಪೈಕಿ ಉಗ್ರಂ ಮಂಜು, ರಜತ್ ಮತ್ತು ಮೋಕ್ಷಿತ ಒಬ್ಬೊಬ್ಬರಾಗಿಯೇ ಹೊರನಡೆದರು. ಅಂತಿಮವಾಗಿ ತ್ರಿವಿಕ್ರಮ್ ಮತ್ತು ಹನುಮಂತ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಿಚ್ಚ ಸುದೀಪ್ ಅವರು ಹನುಮಂತ ಅವರ ಗೆಲುವನ್ನು ಪ್ರಕಟಿಸುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುತೂಹಲಕ್ಕೆ ತೆರೆ ಬಿದ್ದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕುತೂಹಲದ ಕೇಂದ್ರಬಿಂದುವಾದ ಕರುನಾಡಿನ ‘ಲಕ್ಕುಂಡಿ ವೈಭವ’

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕದ ಲಕ್ಕುಂಡಿ ದೇಗುಲದ ಸ್ಥಬ್ದಚಿತ್ರ ಗಮನಸೆಳೆಯಿತು. ಕರ್ತವ್ಯಪಥದಲ್ಲಿ ವಿವಿಧ ರಾಜ್ಯಗಳ ಸ್ಥಬ್ದ ಚಿತ್ರಗಳ ನಡುವೆ ಕರ್ನಾಟಕದ ಈ ಟ್ಯಾಬ್ಲೋ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು. #RepublicDay🇮🇳: Karnataka’s tableau showcased during the 76th #RepublicDay Parade on Kartavya Path, in Delhi The tableau celebrates the historic town of Lakkundi, located in the Gadag district, often referred to as the “Cradle of Stone Craft.” (Source: DD News) pic.twitter.com/dNoVtRuS16 — ANI (@ANI) January 26, 2025