ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆನರಾ ಬ್ಯಾಂಕ್ ನೊಂದಿಗೆ ರೂ. 1.5 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ ಮಾಡಿಕೊಂಡಿದ್ದು, ಮೃತರ ಅವಲಂಬಿತರಿಗೆ ರೂ. 1 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು. ಬೆಂ.ಮ.ಸಾ.ಸಂಸ್ಥೆಯು ಒಟ್ಟು 51 ಘಟಕಗಳನ್ನು ಹೊಂದಿದದ್ದು, ಪ್ರತಿದಿನ 5861 ಅನುಸೂಚಿಗಳಿಂದ 61536 ಸುತ್ತುವಳಿಗಳನ್ನು 12.04 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಸ್ತುತ 1279 ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ 352 ಎಲೆಕ್ನಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಒಟ್ಟು 6158 ವಾಹನಗಳನ್ನು ಹೊಂದಿದ್ದು, ಪರಿಸರಸ್ನೇಹಿ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಯಲ್ಲೇ, ನಿಗಮದ ನೌಕರರ…
Day: February 1, 2025
ಕೇಂದ್ರ ಬಜೆಟ್: ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 30,000 ಮಿತಿಯೊಂದಿಗೆ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್
ನವದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ 2025-2026ರ ಬಜೆಟ್ ಮಂಡಿಸಿದರು. ‘ನಗರಗಳು ಬೆಳವಣಿಗೆಯ ಕೇಂದ್ರಗಳು’ ಮತ್ತು ಇತರೆ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ₹ 1 ಲಕ್ಷ ಕೋಟಿಯ ನಗರ ಚಾಲೆಂಜ್ ನಿಧಿಯನ್ನು ಸ್ಥಾಪಿಸಲಿದೆ ಎಂದು ಹೇಳಿದರು. ‘ನಗರಗಳ ಸೃಜನಾತ್ಮಕ ಪುನರಾಭಿವೃದ್ಧಿ’ ಮತ್ತು ನೀರು ಮತ್ತು ನೈರ್ಮಲ್ಯ’ ಎಂದು ಜುಲೈ ಬಜೆಟ್‌ನಲ್ಲಿ ಘೋಷಿಸಿದರು. ಈ ನಿಧಿಯು ಬ್ಯಾಂಕಬಲ್ ಯೋಜನೆಗಳ ವೆಚ್ಚದ 25 ಪ್ರತಿಶತದವರೆಗೆ ಹಣಕಾಸು ನೀಡುತ್ತದೆ. ಕನಿಷ್ಠ 50 ಪ್ರತಿಶತದಷ್ಟು ವೆಚ್ಚವನ್ನು ಬಾಂಡ್‌ಗಳು, ಬ್ಯಾಂಕ್ ಸಾಲಗಳು ಮತ್ತು PPP ಗಳಿಂದ ನಿಧಿಸಲಾಗುವುದು. 2025-26ಕ್ಕೆ ₹ 10,000 ಕೋಟಿ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಭೌಗೋಳಿಕ ಮೂಲಸೌಕರ್ಯ ಮತ್ತು ಡೇಟಾವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಅನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನಮಂತ್ರಿ ಗತಿ ಶಕ್ತಿಯನ್ನು ಬಳಸಿಕೊಂಡು, ಈ ಮಿಷನ್ ಭೂ ದಾಖಲೆಗಳ…
ಕೇಂದ್ರ ಬಜೆಟ್; ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ
ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಶನಿವಾರ ಬಜೆಟ್ ಮಂಡಿಸಿದರು. ಮಧ್ಯಮ ವರ್ಗದ ಬಹು ದಿನಗಳ ಬೇಡಿಕೆಯಂತೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಭರವಸೆ ಪ್ರಕಟಿಸಿದರು. ಹೊಸ ತೆರಿಗೆ ಪದ್ಧತಿಯಂತೆ 12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. 4 ಲಕ್ಷದಿಂದ 8 ಲಕ್ಷದವರೆಗೆ ಶೇ.5 ತೆರಿಗೆ, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10 ತೆರಿಗೆ, 12 ಲಕ್ಷದಿಂದ 15 ಲಕ್ಷದವರೆಗೆ ಶೇ.15 ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20 ತೆರಿಗೆ 20 ಲಕ್ಷದಿಂದ 24 ಲಕ್ಷದರೆಗೆ ಶೇ.25 ತೆರಿಗೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಹೊಸ ತೆರಿಗೆ ಪದ್ಧತಿ ಅನ್ವಯ 4 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ…
‘ಪೂರ್ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ನೀಡಿದ ‘ಪೂರ್ ಲೇಡಿ’ ಹೇಳಿಕೆ ಅತ್ಯಂತ ಖಂಡನೀಯ ಎಂದಿರುವ ಬಿಜೆಪಿ, ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ ಸಾಕ್ಷಿ ಎಂದಿದೆ. ಈ ದೇಶದ ಆದಿವಾಸಿ ಹಾಗೂ ದಲಿತ ಸಮುದಾಯದವರ ಬಗ್ಗೆ ಕಾಂಗ್ರೆಸ್ ಎಂತಹ ಮನಸ್ಥಿತಿ ಹೊಂದಿದೆ ಎಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದೆ. ಸೋನಿಯಾ ಗಾಂಧಿಯವರು ತಮ್ಮ ಹೇಳಿಕೆಯ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರಾಷ್ಟ್ರಪತಿ @rashtrapatibhvn ದ್ರೌಪದಿ ಮುರ್ಮು ಅವರ ಬಗ್ಗೆ @INCIndia ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರು ನೀಡಿದ “ಪೂರ್ ಲೇಡಿ” ಹೇಳಿಕೆ ಅತ್ಯಂತ ಖಂಡನೀಯ. ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ…
ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ
ಓಮನ್: ಓಮನ್ ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಉನ್ನತ ಆಶಯದಿಂದ “ವಿಶ್ವವಾಣಿ” “ಸಂಸ್ಥೆ ಕರ್ನಾಟಕ ಸಂಘ ಮಸ್ಕತ್” ಅವರ ಸಹಯೋಗದೊಂದಿಗೆ ಓಮನ್ ನಲ್ಲಿ ನಡೆದ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಸಾಧಕರನ್ನು ಗೌರವಿಸುವ ಮಹೋನ್ನತ ಕಾರ್ಯಮಾಡಿದ ವಿಶ್ವವಾಣಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಎರಡು ದೇಶಗಳ ಮೈತ್ರಿ ಮತ್ತು ಪರಸ್ಪರ ಸಂಸ್ಕೃತಿಕ ವಿನಿಮಯದ ಆಶಯದಿಂದ ನೆರವೇರಿಸಲಾದ ಮಹಾ ಸಮಾರಂಭದಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಜನ ಸಾಧಕರೊಂದಿಗೆ,…
ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ
ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿ 67 ಜನರ ಸಾವಿಗೆ ಕಾರಣವಾದ ವಿಮಾನ ಡಿಕ್ಕಿಯಿಂದ ಅಮೆರಿಕ ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಸಂಜೆ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಪೆನ್ಸಿಲ್ವೇನಿಯಾ ಪ್ರಾಂತ್ಯದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿಕೊಂಡಿದೆ. ಈ ವಿಮಾನದಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಅದು ವೈದ್ಯಕೀಯ ಸೇವಾ ನಿರತ ವಿಮಾನವಾಗಿತ್ತು ಎನ್ನಲಾಗಿದೆ. ಈ ವಿಮಾನ ಪತನದಿಂದಾಗಿ ನ್ಯೂ ರೂಸ್‌ವೆಲ್ಟ್ ಬೌಲೆವಾರ್ಡ್ ಮತ್ತು ಕಾಟ್‌ಮನ್ ಅವೆನ್ಯೂದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಶುಕ್ರವಾರ ಸಂಜೆ 6 ಗಂಟೆಯ ನಂತರ ವಸತಿ ಬೀದಿಯಾದ ಕ್ಯಾಲ್ವರ್ಟ್ ಸ್ಟ್ರೀಟ್‌ನ 7200 ಬ್ಲಾಕ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತುರ್ತು ಸೇವೆಗಳ ರವಾನೆಗಳನ್ನು ಸುದ್ದಿ ತಾಣ ಉಲ್ಲೇಖಿಸಿದೆ.
ಭವಿಷ್ಯದ ಆರ್ಥಿಕತೆಯನ್ನು ಯುವಜನರ ಮಾನಸಿಕ ಆರೋಗ್ಯ ಮುನ್ನಡೆಸಲಿದೆ: ಆರ್ಥಿಕ ಸಮೀಕ್ಷೆ 2024-25
ನವದೆಹಲಿ: ಮಾನಸಿಕ ಸೌಖ್ಯ ಎಂದರೆ ಜೀವನದ ಸವಾಲುಗಳನ್ನು ಎದುರಿಸುವ ಮತ್ತು ಫಲಪ್ರದವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ. ಮಾನಸಿಕ ಯೋಗಕ್ಷೇಮವು ನಮ್ಮ ಎಲ್ಲಾ ಮಾನಸಿಕ-ಭಾವನಾತ್ಮಕ, ಸಾಮಾಜಿಕ, ಅರಿವು ಮತ್ತು ದೈಹಿಕ ಸಾಮರ್ಥ್ಯಗಳನ್ನು ಒಳಗೊಂಡಿದೆ. ಇದನ್ನು ಮನಸ್ಸಿನ ಸಂಯೋಜಿತ ಆರೋಗ್ಯ ಎಂದೂ ಅರ್ಥೈಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆ ತಿಳಿಸಿದೆ. ಜೀವನಶೈಲಿಯ ಆಯ್ಕೆಗಳು, ಕಾರ್ಯ ಸ್ಥಳದ ಸಂಸ್ಕೃತಿ ಮತ್ತು ಕೌಟುಂಬಿಕ ಸನ್ನಿವೇಶಗಳು ಉತ್ಪಾದಕತೆಗೆ ನಿರ್ಣಾಯಕವಾಗಿವೆ ಮತ್ತು ಭಾರತದ ಆರ್ಥಿಕ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು, ಬಾಲ್ಯ/ಯೌವನದಲ್ಲಿ ಮಾಡುವ ಜೀವನಶೈಲಿಯ ಹೆಚ್ಚಿನ ಆಯ್ಕೆಗಳಿಗೆ ತಕ್ಷಣ ಗಮನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯು ವಿವರಿಸುತ್ತದೆ. ಅಂತರ್ಜಾಲದ ಅತಿಯಾದ ಅವಲಂಬನೆ ವಿಶೇಷವಾಗಿ ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯ ಕಾರಣದಿಂದ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ ಎಂದು ಆರ್ಥಿಕ…
ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಡ್ಡಿ; ಟೆಂಟ್ ಕಿತ್ತುಹಾಕಿಸಿದ ಸರ್ಕಾರದ ವಿರುದ್ಧ ಆಕ್ರೋಶ
ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೂಲಕ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಹಿಟ್ಲರ್ ಧೋರಣೆ ತೋರಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ. ಈಗ ಅವರ ಶಾಂತಿಯುತ…
ದೇಶದ 14.72 ಲಕ್ಷ ಶಾಲೆಗಳಲ್ಲಿ 24.8 ಕೋಟಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ : ಆರ್ಥಿಕ ಸಮೀಕ್ಷೆ 2024-25
ನವದೆಹಲಿ: ಆರ್ಥಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳನ್ನು ಸಾಧಿಸಲು ಪೀರ್ ಬೋಧನೆ(ಶಿಕ್ಷಕರಿಗೆ ಬದಲಾಗಿ ಮಕ್ಕಳ ನಡುವೆ ಬೋಧನೆ)ಯಂತಹ ನಾವೀನ್ಯತೆಗೆ ಆರ್ಥಿಕ ಸಮೀಕ್ಷೆ ಒತ್ತು ನೀಡಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಶುಕ್ರವಾರ 2024-25ರ ಆರ್ಥಿಕ ಸಮೀಕ್ಷೆ ಮಂಡಿಸಿದರು. ಶಿಕ್ಷಣ ಮತ್ತು ಮಾನವ ಬಂಡವಾಳ ಅಭಿವೃದ್ಧಿಯು ಅಭಿವೃದ್ಧಿಯ ಮೂಲಭೂತ ಆಧಾರಸ್ತಂಭಗಳಲ್ಲಿ ಸೇರಿವೆ, ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್ಇಪಿ) ಅನ್ನು ಈ ತತ್ವದ ಮೇಲೆ ನಿರ್ಮಿಸಲಾಗಿದೆ ಎಂದು ಈ ಸಮೀಕ್ಷೆ ಹೇಳಿದೆ. ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯು 14.72 ಲಕ್ಷ ಶಾಲೆಗಳಲ್ಲಿ 98 ಲಕ್ಷ ಶಿಕ್ಷಕರನ್ನು ಹೊಂದಿದ್ದು, 24.8 ಕೋಟಿ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಎತ್ತಿ ತೋರಿಸಿದೆ(ಯುಡಿಐಎಸ್ಇ+ 2023-24). ಸರ್ಕಾರಿ ಶಾಲೆಗಳು ಒಟ್ಟು 69% ಪ್ರಮಾಣದಷ್ಟಿದ್ದು, 50% ವಿದ್ಯಾರ್ಥಿಗಳನ್ನು ದಾಖಲಿಸಿ 51% ಶಿಕ್ಷಕರನ್ನು ನೇಮಿಸಿಕೊಂಡಿವೆ. ಅದೇ ಖಾಸಗಿ…
ಬಿಜೆಪಿಗೆ ಪರ್ಯವಾಗಿ ಸಂಘ ‘ಕ್ರಾಂತಿ ವೀರ ಬ್ರಿಗೇಡ್’ ಹಿಂದೂ ಸಂಘಟನೆ
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ‘ಕ್ರಾಂತಿ ವೀರ ಬ್ರಿಗೇಡ್’ ಸಂಘಟನೆ ಕಟ್ಟುವ ಘೋಷಣೆ ಮಾಡಿದ್ದಾರೆ. ‘ಕ್ರಾಂತಿವೀರ ಬ್ರಿಗೇಡ್’ ಎಲ್ಲಾ ಜಾತಿಗಳ ಮಠಾಧೀಶರನ್ನು ಒಳಗೊಂಡಿದ್ದು, ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಫೆಬ್ರವರಿ 4 ರಂದು ಬಸವನ ಬಾಗೇವಾಡಿಯಲ್ಲಿ ‘ಕ್ರಾಂತಿ ವೀರ ಬ್ರಿಗೇಡ್’ ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಲು ಕೆಲಸ ಮಾಡುವ ಮಠಾಧೀಶರ ವೇದಿಕೆ ರಚನೆ ‘ಕ್ರಾಂತಿ ವೀರ ಬ್ರಿಗೇಡ್’ನ ಉದ್ದೇಶವಾಗಿದೆ ಎಂದಿರುವ ಈಶ್ವರಪ್ಪ, ಉತ್ತರ ಕರ್ನಾಟಕದ ಮಠಾಧೀಶರ ಸಲಹೆಯಂತೆ ಈ ಸಂಘಟನೆಯನ್ನು ಹುಟ್ಟುಹಾಕಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.