ಬೆಂಗಳೂರು: ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು. ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ರೂ.5900 ಕೋಟಿ ಸಾಲ ತೀರಿಸಬೇಕಾದ ಅನಿವಾರ್ಯತೆ ಇದೆಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಪಕ್ಷ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿ.ಜೆ.ಪಿ ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ. ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬುರುಡೆ ಪಕ್ಷ ಬಿಂಬಿಸುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಪದೇ ಪದೇ ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ. ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿ.ಜೆ.ಪಿಯವರು ಎಂದು ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾಡಿದ ಸಾಲ ರೂ…