ಭಾರತದ ವೈಮಾನಿಕ ಶಕ್ತಿ ಅನಾವರಣ; ಏರೋ ಇಂಡಿಯಾ 2025 ವೈಶಿಷ್ಟ್ಯಗಳು ಹೀಗಿವೆ

ಬೆಂಗಳೂರು: ಉದ್ಯಾನ ನಗರಿಯ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ಐದು ದಿನಗಳ ಏರೋ ಇಂಡಿಯಾ 2025 ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಲಘು ಉಪಯುಕ್ತ ಹೆಲಿಕಾಪ್ಟರ್, ಫೈಟರ್ ಜೆಟ್ ಮತ್ತು ತರಬೇತಿ ವಿಮಾನಗಳನ್ನು ಪ್ರದರ್ಶಿಸುತ್ತಿದೆ. “HAL ‘ಇನ್ನೋವೇಟ್. ಕೊಲಾಬರೇಟ್. ಲೀಡ್’ ಎಂಬ ಥೀಮ್ ಅನ್ನು ಕೇಂದ್ರೀಕರಿಸಿ ಏರೋ ಇಂಡಿಯಾ 2025 ರಲ್ಲಿ ತನ್ನ ಸ್ಥಳೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ” ಎಂದು HAL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಸುನಿಲ್ ಹೇಳಿದ್ದಾರೆ. HAL ನ ಒಳಾಂಗಣ ಪೆವಿಲಿಯನ್ (HAL-E) ನಲ್ಲಿ LUH, ಹಿಂದೂಸ್ತಾನ್ ಟರ್ಬೊ ಟ್ರೈನರ್ (HTT)-40 ಸಿಮ್ಯುಲೇಟರ್, LCA Mk1A ಫೈಟರ್, LCA Mk1 ಟ್ರೈನರ್, ಹಿಂದೂಸ್ತಾನ್ ಜೆಟ್ ಟ್ರೈನರ್ (HJT)-36, HTT-40, LCH ಮತ್ತು ALH Mk IV ನ ಸ್ಕೇಲ್ಡ್ ಮಾದರಿಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ ಎಂದು ಕಂಪನಿಯ…

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣ; ನಾಲ್ವರು ಡೈರಿ ಪ್ರಮುಖರ ಬಂಧನ

ತಿರುಮಲ: ದಕ್ಷಿಣ ಭಾರತದ ಪುಣ್ಯಕ್ಷೇತ್ರ ತಿರುಪತಿ ತಿರುಮಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖರ ಬಂಧನವಾಗಿದೆ. ಭಾನುವಾರ ನಾಲ್ವರನ್ನು ತನಿಖಾ ತಂಡ ಬಂಧಿಸಿದೆ. ಲಡ್ಡು ಪ್ರಸಾದ ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿರುವ ಸಿಬಿಐ ಹೈದರಾಬಾದ್ ವಿಭಾಗದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ. ಈ ಆರೋಪಿಗಳು ವಿವಿಧ ಡೈರಿಗಳ ಪ್ರಮುಖರೆಂದು ಹೇಳಲಾಗುತ್ತಿದೆ.

ನಟ ದರ್ಶನ್ ಹುಟ್ಟುಹಬ್ಬದಂದೇ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ

ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 16ರಂದು ನಟ ದರ್ಶನ್ ರ ಹುಟ್ಟುಹಬ್ಬವಿದ್ದು ಅಂದೇ ಡೆವಿಲ್ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಈ ಕುರಿತಂತೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ!’ ಎಂದು ಅವರು ಹಾಕಿರುವ ಪೋಸ್ಟ್ ಗಮನಸೆಳೆದಿದೆ.

ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆ: ರಾಜನಾಥ್ ಸಿಂಗ್

ಬೆಂಗಳೂರು: ಏರೋ ಇಂಡಿಯಾ ನಮ್ಮ ಯುವಕರಿಗೆ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ವೈಜ್ಞಾನಿಕ ಮನೋಧರ್ಮ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುವುದರ ಜೊತೆಗೆ ಸರ್ಕಾರದ ಬಲವಾದ ಮತ್ತು ಸ್ವಾವಲಂಬಿ ಭಾರತದ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಏರೋ ಇಂಡಿಯಾದ 15 ನೇ ಆವೃತ್ತಿಯ ಮುನ್ನಾದಿನ, ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದು ಭಾರತದ ರಕ್ಷಣಾ ಸನ್ನದ್ಧತೆಗೆ ನಿರ್ಣಾಯಕ ಮಾತ್ರವಲ್ಲ, ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ರೂಪಿಸುತ್ತದೆ. ಎಂದರು. ಆರ್ಡನೆನ್ಸ್ ಫ್ಯಾಕ್ಟರಿ ಮಂಡಳಿಯ ಕಾರ್ಪೊರೇಟೀಕರಣದ ನಂತರ, ಹೊಸದಾಗಿ ರೂಪುಗೊಂಡ ಕಂಪನಿಗಳು ರಕ್ಷಣಾ ಉತ್ಪಾದನೆಯಲ್ಲಿ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು…