ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ; ಕೇಜ್ರಿವಾಲ್ ಮಣಿಸಿದ ಪರ್ವೇಶ್ ವರ್ಮಾಗೆ ಡಿಸಿಎಂ ಸ್ಥಾನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರೇಖಾ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಇದೇ ವೇಳೆ, ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಯಗಳಿದ್ದ ಪರ್ವೇಶ್ ವರ್ಮಾ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ದೆಹಲಿಯ ನೂತನ ಸಿಎಂ, ಡಿಸಿಎಂ ಹಾಗೂ ಸಂಪುಟ ಸಚಿವರು ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಇಲಾಖೆಗಳ ವಿದ್ಯುತ್ ಬಿಲ್ ಪಾವತಿಗೂ ಸರ್ಕಾರದ ಬಳಿ ಹಣ ಇಲ್ಲ? ಬಿಜೆಪಿ ವ್ಯಂಗ್ಯ

ಬೆಂಗಳೂರು: ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯದ ಹೀನಾಯ ಸ್ಥಿತಿ ಬಗ್ಗೆ ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತ ಪರಿಸ್ಥಿತಿಯತ್ತ ಬೊಟ್ಟು ಮಾಡಿದ ವಿಜಯೇಂದ್ರ, ರಾಜ್ಯದ ವಿವಿಧ ಇಲಾಖೆಗಳ ಕಚೇರಿಗಳಿಂದ ₹6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದು, ಅದರ ವಸೂಲಿಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸ್ವತಃ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ ಎಂದು ಗಮನಸೆಳೆದರು. ರಾಜ್ಯದ ಯಾವ ಇಲಾಖೆಗಳಲ್ಲೂ ವಿದ್ಯುತ್ ಬಿಲ್ ಪಾವತಿಸುವಷ್ಟೂ ಹಣ ಇಲ್ಲದೆ ಇರುವ ದಾರುಣ ಪರಿಸ್ಥಿತಿಗೆ ತಲುಪಿರುವುದಕ್ಕೆ ಯಾರು ಹೊಣೆಗಾರರು ಎನ್ನುವುದನ್ನು ಮುಖ್ಯಮಂತ್ರಿಗಳೇ ತಿಳಿಸಬೇಕಿದೆ ಎಂದು ವಿಜಯೇಂದ್ರ ಹೇಳಿದರು. ರಾಜ್ಯದ ವಿವಿಧ ಇಲಾಖೆಗಳ ಕಚೇರಿಗಳಿಂದ ₹6 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದ್ದು, ಅದರ ವಸೂಲಿಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಜೊತೆ…

ಅನ್ನಭಾಗ್ಯ: ಇನ್ನುಮುಂದೆ ಹಣಕ್ಕೆ ಬದಲು ಅಕ್ಕಿ

ಬೆಂಗಳೂರು: ರಾಜ್ಯಸರ್ಕಾರ ಇನ್ನುಮುಂದೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ 170 ರೂಪಾಯಿ ಹಣ ನೀಡಲಾಗುತ್ತಿತ್ತು. ಇನ್ನು ಮುಂದೆ 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಈ ತಿಂಗಳಿಂದಲೇ ಅಕ್ಕಿಯನ್ನು ನೀಡಲಾಗುತ್ತದೆ ಎಂದವರು ತಿಳಿಸಿದರು. ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿನೀಡಲು ಒಪ್ಪಿದೆ ಎಂದ ಅವರು, ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಅವಶ್ಯಕತೆ ಇದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ವಿವರಿಸಲಾಗಿದ್ದು, ನಮ್ಮ ಮನವಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಪಂದಿಸಿದ್ದಾರೆ ಎಂದು ಸಚಿವ ಮುನಿಯಪ್ಪ ಹೇಳಿದರು.

ಕಾರವಾರ ನೌಕಾ ನೆಲೆಯ ಸೂಕ್ಷ್ಮ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ; ಮೂವರ ಬಂಧನ

ನವದೆಹಲಿ: ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಕಾ ತಂಡ NIA ಮೂವರನ್ನು ಬಂಧಿಸಿದೆ. ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿ ಪಾಕಿಸ್ತಾನ ಮೂಲದ ಗುಪ್ತಚರ ಅಧಿಕಾರಿಗಳಿಗೆ ನೀಡಿದ ಆರೋಪದಲ್ಲಿ ವೇತನ್ ಲಕ್ಷ್ಮಣ್ ತಂಡೇಲ್, ಅಕ್ಷಯ್ ರವಿ ನಾಯಕ್ ಹಾಗೂ ಅಭಿಲಾಷ್ ಎಂಬವರನ್ನು ಬಂಧಿಸಲಾಗಿದೆ ಎಂದು NIA ಮೂಲಗಳು ತಿಳಿಸಿವೆ. ಕಾರವಾರ ನೌಕಾ ನೆಲೆ ಮತ್ತು ಕೊಚ್ಚಿ ನೌಕಾ ನೆಲೆಯಲ್ಲಿರುವ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಈ ಆರೋಪಿಗಳು ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಹಾಗೂ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು NIA ಅಧಿಕಾರಿಗಳು ತಿಳಿಸಿದ್ದಾರೆ.

26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಪದಗ್ರಹಣ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಬುಧವಾರ ಅಧಿಕಾರ ವಹಿಸಿಕೊಂಡರು. ಸೋಮವಾರದಂದು ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸ್ಥಾನಕ್ಕೆ ಕೇಂದ್ರ ಸರ್ಕಾರದ ಉನ್ನತ ಸಮಿತಿ ನೇಮಕ ಮಾಡಿತ್ತು. ಈ ನೇಮಕಾತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ ನಂತರ ಬುಧವಾರ ಬೆಳಿಗ್ಗೆ ಜ್ಞಾನೇಸ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರವಹಿಸಿಕೊಂಡರು. Gyanesh Kumar's message after taking charge as Chief Election Commissioner.#ChiefElectionCommissioner | #CEC | #GyaneshKumar @ECISVEEP pic.twitter.com/xEfhDbnAgi — All India Radio News (@airnewsalerts) February 19, 2025

ಇದೊಂದು ಬಾರಿ ಕೊನೆಯದಾಗಿ ಸರ್ಕಾರ ಅನಧಿಕೃತ ಬಡಾವಣೆಗಳಿಗೆ ‘ಬಿ ಖಾತಾ’: ಸಿಎಂ

ಬೆಂಗಳೂರು: ‘ಬಿ ಖಾತಾ’ ಅಭಿಯಾನದ ಮೂಲಕ ರಾಜ್ಯದ ಪಟ್ಟಣ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೊಂದು ಬಾರಿ ಕೊನೆಯದಾಗಿ ಸರ್ಕಾರ ಅನಧಿಕೃತ ಬಡಾವಣೆಗಳಿಗೆ ಬಿ ಖಾತಾ ನೀಡುತ್ತಿದೆ. ಮುಂದೆ ಎಲ್ಲಿಯೂ ಅನಧಿಕೃತ ಬಡಾವಣೆಗಳು ತಲೆಯೆತ್ತಬಾರದು, ಎತ್ತಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ನಿಶ್ಚಿತ ಎಂದವರು ತಿಳಿಸಿದ್ದಾರೆ. " ಬಿ ಖಾತಾ" ಅಭಿಯಾನದ ಮೂಲಕ ರಾಜ್ಯದ ಪಟ್ಟಣ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ. ಇದೊಂದು ಬಾರಿ ಕೊನೆಯದಾಗಿ ಸರ್ಕಾರ ಅನಧಿಕೃತ ಬಡಾವಣೆಗಳಿಗೆ ಬಿ ಖಾತಾ ನೀಡುತ್ತಿದೆ. ಮುಂದೆ ಎಲ್ಲಿಯೂ ಅನಧಿಕೃತ ಬಡಾವಣೆಗಳು ತಲೆಯೆತ್ತಬಾರದು, ಎತ್ತಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ನಿಶ್ಚಿತ. pic.twitter.com/HlsyqED95L — Siddaramaiah (@siddaramaiah) February 18, 2025