‘ಇಡೀ ಸಮಾಜವನ್ನು ‘ಸಜ್ಜನ ಶಕ್ತಿ’ ನಾಯಕತ್ವದಲ್ಲಿ ಒಟ್ಟಿಗೆ ಕೊಂಡೊಯ್ಯುತ್ತೇವೆ’: RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ನಾಗ್ಪುರ: ಆರ್‌ಎಸ್‌ಎಸ್ ಯಾರನ್ನೂ ವಿರೋಧಿಸುವುದರಲ್ಲಿ ನಂಬಿಕೆ ಇಡುವುದಿಲ್ಲ ಅಷ್ಟೇ ಅಲ್ಲ, ನಮ್ಮನ್ನು ವಿರೋಧಿಸುವವರು ಮುಂದೊಂದು ದಿನ ನಮ್ಮ ಗುಂಪಿಗೆ ಸೇರುತ್ತಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಕಳೆದ 100 ವರ್ಷಗಳಲ್ಲಿ, ರಾಷ್ಟ್ರೀಯ ಪುನರ್ನಿರ್ಮಾಣದ ಚಳುವಳಿಯಾಗಿ ಸಂಘವು ನಿರ್ಲಕ್ಷ್ಯ ಮತ್ತು ಅಪಹಾಸ್ಯದಿಂದ ಕುತೂಹಲ ಮತ್ತು ಸ್ವೀಕಾರದತ್ತ ಸಾಗಿದೆ ಎಂದು ಅವರು ಗಮನಸೆಳೆದಿದ್ದಾರೆ. ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸೇವೆಯ ನೂರನೇ ವರ್ಷವನ್ನು ಪೂರ್ಣಗೊಳಿಸುತ್ತಿರುವಾಗ, ಸಂಘವು ಈ ಹೆಗ್ಗುರುತನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಕುತೂಹಲವಿದೆ. ಅಂತಹ ಸಂದರ್ಭಗಳು ಆಚರಣೆಗಾಗಿ ಅಲ್ಲ, ಆದರೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಆ ಉದ್ದೇಶಕ್ಕೆ ಪುನರ್ ಸಮರ್ಪಿಸಲು ನಮಗೆ ಅವಕಾಶವನ್ನು ಒದಗಿಸುತ್ತವೆ ಎಂಬುದು ಸಂಘಕ್ಕೆ ಪ್ರಾರಂಭದಿಂದಲೂ ಸ್ಪಷ್ಟವಾಗಿದೆ. ಚಳುವಳಿಗೆ ಮಾರ್ಗದರ್ಶನ ನೀಡಿದ ಧೀಮಂತ, ಸಂತ ವ್ಯಕ್ತಿಗಳ ಕೊಡುಗೆಗಳನ್ನು ಮತ್ತು ಈ ಪ್ರಯಾಣದಲ್ಲಿ ನಿಸ್ವಾರ್ಥವಾಗಿ…

‘RSS ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್ ವೃಕ್ಷ’ವಾಗಿದೆ’: ಪ್ರಧಾನಿ ನರೇಂದ್ರ ಮೋದಿ.

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್’ ಆಗಿದ್ದು, ಇದು ರಾಷ್ಟ್ರವನ್ನು ನಿರಂತರವಾಗಿ ಚೈತನ್ಯಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್‌ನ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯಲ್ಲಿ ಅದರ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ. ಮಾಧವ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಹೊಸ ವಿಸ್ತರಣಾ ಕಟ್ಟಡವಾದ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಅಡಿಪಾಯ ಹಾಕಿದ ನಂತರ ಅವರು”ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ಆಧುನಿಕ ಅಕ್ಷಯ ವತ್ ಆಗಿದೆ; ಈ ಅಕ್ಷಯ ವತ್ ಭಾರತೀಯ ಸಂಸ್ಕೃತಿ ಮತ್ತು ನಮ್ಮ ರಾಷ್ಟ್ರದ ಪ್ರಜ್ಞೆಯನ್ನು ನಿರಂತರವಾಗಿ ಚೈತನ್ಯಗೊಳಿಸುತ್ತಿದೆ” ಎಂದು ಹೇಳಿದರು. “ನೂರು ವರ್ಷಗಳ ಹಿಂದೆ ಬಿತ್ತಲ್ಪಟ್ಟ ವಿಚಾರಗಳು ಈಗ ಪ್ರಪಂಚದ ಮುಂದೆ ‘ವತ್ ವೃಕ್ಷ’ದಂತೆ ಇವೆ. ತತ್ವಗಳು…

197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದೆ. 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ. ಪದಕ ಪುರಸ್ಕೃತರ ಪಟ್ಟಿ: ಸಿ.ಕೆ. ಬಾಬಾ- ಪೊಲೀಸ್ ಅಧೀಕ್ಷಕರು- ಬೆಂಗಳೂರು ಡಾ: ಅನೂಪ್ ಎ ಶೆಟ್ಟಿ – ಪೊಲೀಸ್ ಅಧೀಕ್ಷಕರು, ಸಿಐಡಿ ಅಂಷುಕುಮಾರ್ – ಪೊಲೀಸ್ ಅಧೀಕ್ಷಕರು, ಹಾವೇರಿ, ರಾಮನಗೌಡ ಎ ಹಟ್ಟಿ – ಅಡಿಷನಲ್ ಎಸ್‌ಪಿ, ವಿಜಯಪುರ, ಸುರೇಶ ಟಿ.ವಿ – ಅಡಿಷನಲ್ ಎಸ್‌ಪಿ, ರಾಮನಗರ ಪ್ರಕಾಶರಾಠೋಡ – ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು, ರೀನಾ ಸುವರ್ಣಾ ಎನ್ಎ -ಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು ಧನ್ಯ ಎನ್ ನಾಯಕ – ಎಸಿಪಿ, ಮಂಗಳೂರು ಉಪ-ವಿಭಾಗ, ಶಾಂತಮಲ್ಲಪ್ಪ – ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು, ಗೋಪಿ ಬಿ.ಆರ್. – ಡಿವೈಎಸ್‌ಪಿ, ಆಳಂದ ಉಪ-ವಿಭಾಗ, ಕಲಬುರಗಿ, ಅರವಿಂದ ಎನ್ ಕಲಗುಜ್ಜಿ –…

ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

ವಿಜಯಪುರ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸುಳಿವನ್ನು ನೀಡಿದ್ದಾರೆ. ಕುಟುಂಬ ರಾಜಕಾರಣದಿಂದಾಗಿ ಬಿಜೆಪಿ ಸರ್ವನಾಶವಾಗಲಿದೆ ಎಂದಿರುವ ಯತ್ನಾಳ್. ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದು ಪಕ್ಷ ಆಸ್ತಿತ್ವಕ್ಕೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ. ಯುಗಾದಿ ಸಂದರ್ಭದಲ್ಲಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬಹಳಷ್ಟು ಜನರು ಬಿಜೆಪಿಯಿಂದ ಹಿಂದು ರಕ್ಷಣೆ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನು ದುರ್ಬಲ ಮಾಡಿದೆ. ಹೀಗಾಗಿ ಹಿಂದುಗಳ ರಕ್ಷಣೆ, ದೇಶಕ್ಕಾಗಿ ಹಿಂದು ಪಕ್ಷ ಆಸ್ವಿತ್ವ ತರಬೇಕಾಗಿದೆ ಎಂದು ಪ್ರತಿಪಾದಿಸಿದರು. ‘ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಯಡಿಯೂರಪ್ಪ ಬಿಟ್ಟು ನಮಗೆ ಬೇರೆ ಗತಿಯಿಲ್ಲ ಎಂದು ನೀವು ಹೇಳಿದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತದೆ ಎಂದಿರುವ ಯತ್ನಾಳ್, ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೂ ಒತ್ತಾಯಿಸಿದ್ದಾರೆ.…

ಕಿತ್ತೂರು ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಕೇಂದ್ರಕ್ಕೆ ಸಿಎಂ ಆಗ್ರಹ

ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪಾತ್ರ ಬರೆದಿದ್ದಾರೆ. ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿಮಾಡಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವೀರ ರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ ತಾಣ ಇರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಮೊದಲಿಗರು. ಅವರ ಶೌರ್ಯ ಮತ್ತು ಅದಮ್ಯ ಚೈತನ್ಯ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಿದ್ದರಾಮಯ್ಯ ಗಮನಸೆಳೆದಿದ್ದಾರೆ. ಈ ಅಪ್ರತಿಮ ನಾಯಕಿಯ ಸಮಾಧಿಯು ಕೇವಲ ವಿಶ್ರಾಂತಿ ಸ್ಥಳವಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು…

ಸಂವತ್ಸರದ ಮೊದಲ ದಿನ.. ಭಾರತೀಯ ವರ್ಷಾರಂಭ..! ಯುಗಾದಿಯ ಮಹತ್ವ ಹೀಗಿದೆ..

ಸಂವತ್ಸರದ ಮೊದಲ ದಿನ ‘ಯುಗಾದಿ’ ಹನಬ್ಬ ನಾಡಿನಾದ್ಯಂತ ಸಂಭ್ಯಮ ಸಡಗರಕ್ಕೆ ಸಾಕ್ಷಿಯಾಗಿದೆ. ಭಾರತೀಯರ ಪಾಲಿಗೆ ಯುಗಾದಿಯಂದೇ ಹೊಸವರ್ಷಾಚರಣೆ. ಹಾಗಾಗಿ ಹೊಸ ಸಾಂತ್ಸರವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಶುಭಾಶಯಗಳ ವಿನಿಮಯವೂ ಜೋರಾಗಿ ಸಾಗಿದೆ. ಭಾರತೀಯ ಪರಂಪರೆಯಲ್ಲಿ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಅದರಲ್ಲೂ ವರ್ಷಾರಂಭಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಭಾರತೀಯ ಪರಂಪರೆಯಲ್ಲಿ ಯುಗಾದಿಯೇ ಹೊಸವರ್ಷಾರಂಭ. ಯುಗದ ಆದಿಯೇ ಯುಗಾದಿ ಎಂಬ ಅರ್ಥದಲ್ಲಿ ಒಂದು ವರ್ಷದ ಅವಧಿಯ ಆದಿ ಇಂದು. ಹಾಗಾಗಿಯೇ ವ್ಯವಹಾರಿಕ ವರ್ಷಕ್ಕೆ ಕ್ಯಾಲೆಂಡರ್ ಆಧಾರವಾಗಿದ್ದರೆ, ಸಂಪ್ರದಾಯ, ಧಾರ್ಮಿಕ ಆಚರಣೆಗೆ ಸಂವತ್ಸರವೇ ಆಧಾರ. ಹಾಗಾಗಿ ಸಂವತ್ಸರದ ಮೊದಲ ದಿನ (ಆದ್ಯ ದಿನ) ಈ ‘ಯುಗಾದಿ’ಗೆ ಧಾರ್ಮಿಕ ಮಹತ್ವ ಇದೆ. ಪ್ರಕೃತಿಯೂ ಸಹ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಈ ಸಮಯದಲ್ಲಿ ವೃಕ್ಷಗಳೂ ಹಳೇ ಎಲೆಗಳನ್ನು ಕಳೆದುಕೊಂಡು ಹೊಸ ಎಲೆಗಳೊಂದಿಗೆ ಚಿಗುರಿ ತನ್ನ ಯೌವ್ವನವನ್ನು ಮತ್ತೆ ಹೊಸದಾಗಿ ಆರಂಭಿಸುತ್ತದೆ.…

‘ಒಂದು‌ ಮಚ್ಚಿನ ಕಥೆ’: ಬಹಿರಂಗ ಕ್ಷಮೆ ಯಾಚಿಸಿದ ವಿನಯ್

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ‌ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ರಜತ್ ಹಾಗೂ ವಿನಯ್ ಗೌಡ ‘ಒಂದು‌ ಮಚ್ಚಿನ ಕಥೆ’ಯಿಂದಾಗಿ ವಿಲನ್ ಎನಿಸಿಕೊಂಡರು. ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಹಕ್ಕಿಗಳಾದ ಈ ಇಬ್ಬರು ಸೆಲೆಬ್ರೆಟಿಗಳು ಇದೀಗ ಜಾಮೀನಿನ‌ ಮೂಲಕ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿರುವ ವಿನಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಕ್ಷಮೆಕೋರಿದ್ದಾರೆ.   View this post on Instagram   A post shared by Vinay Gowda (@vinaygowdaactor) ‘ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿರುವ ವಿನಯ್, ಮಚ್ಚು ಇಡ್ಕೊಂಡು ವಿಡಿಯೋ ಮಾಡಬಾರದಿತ್ತು. ಇದರಿಂದ ತೊಂದರೆ ಆಗಿದೆ. ನನ್ನಿಂದ ತಪ್ಪಾಗಿದೆ’ ಎಂದಿದ್ದಾರೆ. ಇದು ಇಷ್ಟು ದೊಡ್ಡ ಸಮಸ್ಯೆ ತಂದುಕೊಡುತ್ತದೆ ಅಂಥ ಅನ್ನೊಂಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ’ ಎಂದವರು ಹೇಳಿರುವ ವೀಡಿಯೋ…

ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ; ಎನ್ಕೌಂಟರ್’ನಲ್ಲಿ 16 ಬಲಿ

ಸುಕ್ಮಾ: ಛತ್ತೀಸ್‌ಗಢದಲ್ಲಿ ನಕ್ಸಲ್ ಹಾವಳಿ ವಿರುದ್ಧ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಸುಕ್ಮಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಬಲಿಯಾಗಿದ್ದಾರೆ. ಸುಕ್ಮಾ ಜಿಲ್ಲೆಯ ಕೆರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಶನಿವಾರ ಮುಂಜಾನೆ ಈ ಎನ್‌ಕೌಂಟರ್‌ ನಡೆದಿದ್ದು ಕನಿಷ್ಠ 16 ನಕ್ಸಲರು ಮೃತಪಟ್ಟಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಮೀಸಲು ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್-ಥೈಲ್ಯಾಂಡ್‌ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು

ಮ್ಯಾನ್ಮಾರ್: ಭೀಕರ ಭೂಕಂಪ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ ದೇಶಗಳನ್ನು ಸ್ಮಶಾನವನ್ನಾಗಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ. Earthquake sum up 3pm (Mynamar/Thailand)– 7.7 quake hit near Mandalay/Myanmar– Hundreds of homes collapsed (various Myanmar cities)– Strong shocks in Thailand + multiple building collapse in Bangkok – USGS predicts thousands of people dead (Bangkok clips from social media:) pic.twitter.com/kJodTn6BIg — Florian Witulski (@vaitor) March 28, 2025 ಎರಡೂ ದೇಶಗಳಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಟ್ಟಡಗಳು ಕುಸಿದು ಹಿಂದೆಂದೂ ಕಂಡರಿಯದ ರೀತಿ ಮಾರಣಹೋಮವೇ ಸಂಭವಿಸಿದೆ. ಮ್ಯಾನ್ಮಾರ್‌ ಸರ್ಕಾರದ ಮೂಲಗಳ ಪ್ರಕಾರ ಭೀಕರ ಭೂಕಂಪದಲ್ಲಿ ಮೃತಪಟ್ಟವರ…

ಗೌಡ ಸಾರಸ್ವತ ಸಂಪ್ರದಾಯಯುಕ್ತ ವಿಶ್ವವಸು ಕ್ಯಾಲೆಂಡರ್ ಅನಾವರಣ

ಮಂಗಳೂರಿನ ಡೊಂಗೇರಕೇರಿಯ ವೇದಮೂರ್ತಿ ದಿನೇಶ್ ಭಟ್ ರವರ ನಿವಾಸದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ಸಮ್ಮುಖದಲ್ಲಿ ಹಿಂದೂ ಪಂಚಾಂಗ ಆಧಾರಿತ ವಿಶ್ವವಸು ಕ್ಯಾಲೆಂಡರನ್ನು ಮಾರ್ಚ್ 9, 2025 ರಂದು ಬಿಡುಗಡೆ ಮಾಡಲಾಯಿತು. ಪೈ ಸೇಲ್ಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ. ಗಣಪತಿ ಪೈ, ಡಿವಿಕೆ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಡಿ. ವಾಸುದೇವ್ ಕಾಮತ್ ಮತ್ತು ಇನ್ನಿತರ ಹಲವಾರು ಗಣ್ಯ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಂಡು ಶುಭಾಶಯಗಳನ್ನು ಹಾರೈಸಿದರು. ವೇದಮೂರ್ತಿ ಎಂ. ದಿನೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಕ್ಯಾಲೆಂಡರ್‌ನ್ನು ರಚಿಸಿದ ಹಾಗೂ ಸಂಪಾದಕರಾದ ಎಂ.ನರಸಿಂಹ ಭಟ್ ಅವರು ಚಂದ್ರಮಾನ ಯುಗಾದಿಯಿಂದ ಪ್ರಾರಂಭವಾಗುವ ಈ ಕ್ಯಾಲೆಂಡರನ್ನು ಅನುಸರಿಸುವ ಮಹತ್ವವನ್ನು ವಿವರಿಸಿದರು. ಈ ಕ್ಯಾಲೆಂಡರ್ ಪಂಚಾಗ ಮಾಸಗಳ ಪ್ರಕಾರ ತಿಂಗಳುಗಳನ್ನು ಒಳಗೊಂಡಿದ್ದು, ಉದಾಹರಣೆಗೆ ಚೈತ್ರಾ, ವೈಶಾಕಾದಿಂದ ಫಲ್ಗುನಾ ವರೆಗೆ, ತಿಥಿ, ನಕ್ಷತ್ರ ಮತ್ತು ಹಲವಾರು ಪ್ರಮುಖ ದಿನಗಳನ್ನು ಎತ್ತಿ ತೋರಿಸುದಲ್ಲದೆ, ಏಕಾದಶಿ…