ಲಕ್ಷ್ಮೇಶ್ವರ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ: 23 ಜನರನ್ನು ದೋಷಿ ಎಂದ ಕೋರ್ಟ್

ಗದಗ್: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ 2017ರಲ್ಲಿ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನರ ವಿರುದ್ಧ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. 8 ವರ್ಷಗಳ ಹಿಂದೆ, 2017ರಲ್ಲಿ ಅಕ್ರಮ ಮರಳು ಸಾಗಿಸುವ ವಾಹನ ತಡೆದ ಪೊಲೀಸರು ಚಾಲಕನನ್ನು ಥಳಿಸಿದ್ದರಿಂದ ಆತ ಮೃತಪಟ್ಟಿದ್ದ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಉದ್ರಿಕ್ತರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಪೀಠೋಪಕರಗಳು, ಪೊಲೀಸ್ ಜೀಪ್ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆ ಸಂಬಂಧ 112 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ 8 ಮಂದಿ ಮೃತಪಟ್ಟಿದ್ದಾರೆ. ಈ ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 23 ಜನರನ್ನು ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ.

‘X’ ಮೇಲೆ ಸೈಬರ್‌ ದಾಳಿ: ಬಳಕೆದಾರರ ಪರದಾಟ..

ವಾಷಿಂಗ್ಟನ್:‌ ಟ್ವಿಟರ್‌’ ಕೈಕೊಟ್ಟ ಪರಿಣಾಮ ಸೋಮವಾರ ಸಾಮಾಜಿಕ ಮಾಧ್ಯಮ ಅಲ್ಲೋಲಕಲ್ಲೋಲವಾಯಿತು. ಎಲಾನ್‌ ಮಸ್ಕ್ ಒಡೆತನದ ಟ್ವಿಟರ್‌’ಗೆ ಸೋಮವಾರ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಗೆ ತುತ್ತಾಯಿತು. ಸರ್ವರ್‌ ಏರುಪೇರಿನಿಂದಾಗಿ ಟ್ವಿಟರ್‌ ಬಳಕೆ ನಿಧಾನವಾಗಿತ್ತು. ಈ ಬಗ್ಗೆ ಸಾರ್ವಜನಿಕವಲಯದಲ್ಲಿ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ, ಸೈಬರ್ ದಾಳಿಯಿಂದಾಗಿ ಈ ರೀತಿ ಆಗಿದೆ ಎಂದು ‘X’ ಮಾಲೀಕ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ. ಈ ಕುರಿತು ತಮ್ಮ ‘X’ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ‘X’ ಮೇಲೆ ಸೈಬರ್‌ ದಾಳಿ ನಡೆದಿದ್ದು, ಸಂಘಟಿತ ಗುಂಪು ಅಥವಾ‌ ವಿರೋಧಿ ರಾಷ್ಟ್ರ ಇದರ ಹಿಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. “There was (still is) a massive cyberattack against 𝕏. We get attacked every day, but this was done with a lot of resources.…

ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಪ್ಲಾಟ್​ಫಾರ್ಮ್ ಎಪಿಎಂಸಿ ವ್ಯಾಪ್ತಿಗೆ

ಬೆಂಗಳೂರು: ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಪ್ಲಾಟ್​ಫಾರ್ಮ್ ವೇದಿಕೆಗಳು ಇನ್ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಈ ಸಂಬಂಧದ ವಿದೇಯಕವನ್ನು ವಿಧಾನಸಭೆ ಅಂಗೀಕರಿಸಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ವಿದೇಯಕ ಸೋಮವಾರ ಅಂಗೀಕಾರಗೊಂಡಿದೆ. ಮಸೂದೆ ಮಂಡಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಈ ಹಿಂದೆ ಸರ್ಕಾರ ಎಪಿಎಂಸಿ ಯಾರ್ಡ್‌ಗಳನ್ನು ಮಾತ್ರ ನಿಯಂತ್ರಿಸುತ್ತಿತ್ತು. ಆದರೆ ಈ ಕಾಮರ್ಸ್ ಕ್ಷೇತ್ರವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರುತ್ತಿದ್ದೇವೆ ಎಂದು ತಿಳಿಸಿದರು ಈ ಮಸೂದೆಯಿಂದಾಗಿ ಇ- ಪ್ಲಾಟ್ ಫಾರ್ಮ್’ಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್, ಸೆಸ್ ನಿರ್ವಹಿಸುವ, ಅಮಾನತುಪಡಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ.

ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಬೆಂಗಳೂರಿನಲ್ಲಿ‌ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಟಿ ಶಬಾನಾ ಆಜ್ಮಿ ಅವರಿಗೆ ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಬಾನಾ ಆಜ್ಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಪತ್ರ ಮತ್ತು 10 ಲಕ್ಷದ ಚೆಕ್ ನೀಡಿ, ಗೌರವಿಸಿದರು. ವಿಶ್ವ ವಿಖ್ಯಾತ ಕವಿ, ಗೀತರಚನೆಕಾರ ಜಾವೇದ್ ಅಖ್ತರ್ ಅವರು ಈ ಸಂದರ್ಭದಲ್ಲಿ ಸಿಎಂ ಜೊತೆಗಿದ್ದರು. ಈ ಸಂದರ್ಭದ ಫೋಟೋಗಳನ್ನು ಸಿಎಂ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾದು ಕೋಕಿಲ, ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಅವರು ಉಪಸ್ಥಿತರಿದ್ದರು.