ಕೆ.ಎ.ಎಸ್. ಪರೀಕ್ಷೆ: ಭಾಷಾಂತರ ಅವಾಂತರ ಕೊನೆಗೊಳಿಸಲು KPSCಗೆ ಸಿಎಂ ತಾಕೀತು

ಬೆಂಗಳೂರು: ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಲೋಪದೋಷಗಳಿಗೆ ಕಾರಣರಾದ ವಿಷಯ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದವರು ಸೂಚಿಸಿದ್ದಾರೆ. ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಆಯೋಗವು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ತಯಾರಿಸಿ, ನಂತರ ಇಂಗ್ಲೀಷ್ ಬಗ್ಗೆ ಭಾಷಾಂತರ ಮಾಡಲು ಆಯೋಗಕ್ಕೆ ಸೂಚನೆಯನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಏನೇ ಆದರೂ ಈಗ ಪ್ರಕರಣವು ಉಚ್ಛ ನ್ಯಾಯಾಲಯ ಹಾಗೂ ಕೆಎಟಿಗಳು ನೀಡುವ ಆದೇಶಗಳನ್ನು ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಯಾವುದೇ ಮುಲಾಜುಗಳು…

‘ಉತ್ತರ ಪ್ರದೇಶದ ಬಹುತೇಕ ಮಸೀದಿಗಳನ್ನು ಟಾರ್ಪಲಿನ್ ನಿಂದ ಮುಚ್ಚಲಾಗಿದೆ’ ಯಾಕೆ ಗೊತ್ತಾ?

ಲಖನೌ: ಉತ್ತರ ಪ್ರದೇಶದ ಬಹುತೇಕ ಮಸೀದಿಗಳನ್ನು ಟಾರ್ಪಲಿನ್ ನಿಂದ ಮುಚ್ಚಲಾಗಿದೆ. ಐತಿಹಾಸಿಕ ‘ಲಾಟ್‌ ಸಾಹೇಬ್‌’ ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಲು ನಗರ ಪಾಲಿಕೆ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ಮಸೀದಿಗಳನ್ನು ಟಾರ್ಪಲಿನ್ ನಿಂದ ಮುಚ್ಚಲಾಗಿದೆ. This was never happening before 2014 that mosques in India were being covered before Holi. BJP has destroyed this country 👇 pic.twitter.com/ezd1n7tR3w — Dhruv Rathee (Parody) (@dhruvrahtee) March 12, 2025 ಹೋಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಾಗಾಗಿ ಶಹಜಹಾನ್‌ಪುರದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗುವ ‘ಲಾಟ್‌ ಸಾಹೇಬ್‌’ ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಲು ನಗರ ಪಾಲಿಕೆ ಕರಮ್ ಕೈಗೊಂಡಿದೆ. 20…

ಬಲೂಚಿಸ್ತಾನ ರೈಲು ಅಪಹರಣ: ಯಶಸ್ವೀ ಕಾರ್ಯಾಚರಣೆಯಲ್ಲಿ ಎಲ್ಲಾ ಪ್ರಯಾಣಿಕರ ರಕ್ಷಣೆ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲು ಅಪಹರಣ ಮಾಡಿರುವ ಉಗ್ರರ ವಿರುದ್ದ ಸೆಣಸಾಡಿರುವ ಸೇನಾ ಪಡೆಗಳು ಎಲ್ಲಾ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ್ನು ವಶಕ್ಕೆ ಪಡೆದು ಅಪಹರಿಸಿದ್ದ ಉಗ್ರರು, 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿದ್ದರು. ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಂದೂಕುಧಾರಿಗಳು ಮಂಗಳವಾರ ಈ ರೈಲನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ ರೈಲನ್ನು ಹೈಜಾಕ್ ಮಾಡಿದ್ದ ಬಲೂಚಿಸ್ತಾನ ಬಂಡುಕೋರರ ಪೈಕಿ ಸುಮಾರು 30 ಉಗ್ರರನ್ನು ಹತ್ಯೆ ಮಾಡಿದೆ. 30 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆಯಲ್ಲಿ, 340 ಕ್ಕೂ ಹೆಚ್ಚು ರೈಲು ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಈ…

‘ಗ್ರೇಟರ್ ಬೆಂಗಳೂರು’: ರಾಜಧಾನಿ ನಗರ ವಿಭಜನೆ ಮೂಲಕ ಲೂಟಿಗೆ ಹುನ್ನಾರ?

ಬೆಂಗಳೂರು: ರಾಜಧಾನಿಯನ್ನು ಗ್ರೇಟರ್ ಬೆಂಗಳೂರು ಹೆಸರಲ್ಲಿ ವಿಭಜಿಸುವ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. https://publish.twitter.com/?query=https%3A%2F%2Ftwitter.com%2FBJP4Karnataka%2Fstatus%2F1899852358441665000&widget=Video ಬೆಂಗಳೂರನ್ನು ಕೆಂಪೇಗೌಡರು ಯೋಜನಾ ಬದ್ಧವಾಗಿ ರೂಪಿಸಿದ್ದರು. ಮೈಸೂರು ಮಹಾರಾಜರ ಕಾಲದಲ್ಲೂ ಬೆಂಗಳೂರು ಯೋಜನಾಬದ್ಧವಾಗಿತ್ತು. ಆದರೆ ನಮ್ಮ ಕಾಲದಲ್ಲಿ ಯೋಜನಾ ಬದ್ಧವಾಗಿದ್ದ ನಗರವನ್ನು ಯಾವ ಸ್ಥಿತಿಗೆ ತಲುಪಿಸಿದ್ದೇವೆ ಎಂಬುದರ ಬಗ್ಗೆ ನಾವು ಅವಲೋಕಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಎಂದು ವಿಭಾಗಿಸುವ ಮೂಲಕ ಲೂಟಿ ಹೊಡೆಯುವವರಿಗೆ ಅವಕಾಶ ಮಾಡಿಕೋಸಲಾಗುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.