ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಗಳು ಮೇಲುಗೈ ಸಾಧಿಸಿದ್ದಾರೆ. ಮೇಯರ್ ಆಗಿ ಬಿಜೆಪಿಯ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಆಯ್ಕೆಯಾಗಿದ್ದಾರೆ. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 65 ಮತದಾರ ಪೈಕಿ 60 ಮಂದಿ ಚುನಾವಣಾ ಸಂದರ್ಭದಲ್ಲಿ ಹಾಜರಿದ್ದರು. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್ ಹಾಗೂ ಓರ್ವ ಪಾಲಿಕೆ ಸದಸ್ಯ ಗೈರಾಗಿದ್ದರು.
Day: March 15, 2025
‘ನಾನು ಮುಗ್ದೆ, ನನ್ನಿಂದ ಏನನ್ನೂ ವಶಪಡಿಸಿಲ್ಲ’: ತನಿಖಾಧಿಕಾರಿಗಳ ವಿರುದ್ಧ ರನ್ಯಾ ಗಂಭೀರ ಆರೋಪ
ಬೆಂಗಳೂರು: ನಟಿ ರನ್ಯಾ ರಾವ್ ತಮ್ಮ ವಿರುದ್ದದ ಗೋಲ್ಡ್ ಸ್ಮಗ್ಲಿಂಗ್ ಕೇಸಿಗೆ ಹಠಾತ್ ತಿರುವು ನೀಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ರಾಣ್ಯಾರಾವ್ ಜೈಲಿನಿಂದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿದಿದ್ದು ತಮ್ಮ ವಿರುದ್ದದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮಾರ್ಚ್ 6 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರನ್ಯಾರಾವ್, ಇತರ ಕೆಲ ಪ್ರಯಾಣಿಕರನ್ನು ರಕ್ಷಿಸಲು ನನ್ನನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ. ‘ಈ ಪ್ರಕರಣದಲ್ಲಿ ನಾನು ಮುಗ್ಧೆ, ನನ್ನಿಂದ ಏನನ್ನೂ ವಶಕ್ಕೆ ಪಡೆಯದಿದ್ದರೂ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ರನ್ಯಾ ರಾವ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಹೇಳಿದ್ದಾರೆ. ಅಧಿಕಾರಿಗಳು ಹೇಳಿದಂತೆ ಯಾವುದೇ ಮಹಜರ್ ಮಾಡಿಲ್ಲ ಅಥವಾ ಯಾವುದೇ ಶೋಧ ಕಾರ್ಯ ನಡೆದಿಲ್ಲ. ನನ್ನಿಂದ ಏನನ್ನೂ ವಶಕ್ಕೆ ಪಡೆದಿಲ್ಲ ಎಂದು ಅವರು ನಾಲ್ಕು ಪುಟಗಳ ಪತ್ರದಲ್ಲಿ ಬರೆದುಕೊಂಡಿದ್ದಾರೆ.…
ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ
ಕರ್ನಾಟಕದ ಪುರಾಣ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರ ಒಂದಿಲ್ಲೊಂದು ಮಹಿಮೆಯಿಂದ ಗಮನಸೆಳೆಯುತ್ತಿರುತ್ತದೆ. ಶತಮಾನಗಳಷ್ಟು ಹಳೆಯ ಈ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 105 ವರ್ಷಗಳ ಬಳಿಕ ನಡೆದ ‘ಶತ ಚಂಡಿಕಾಯಾಗ’ ಆಸ್ತಿಕ ವಲಯದ ಕುತೂಹಲದ ಕೇಂದ್ರಬಿಂದುವಾಗಿತ್ತು. ಇದೀಗ ಪುರಾಣ ಪ್ರಸಿದ್ಧ ‘ಚೆಂಡಿನ ಉತ್ಸವ’ಕ್ಕೆ ಪೊಳಲಿ ಕ್ಷೇತ್ರ ಸಜ್ಜಾಗಿರುವಂತೆಯೇ ಶ್ರೀ ಕ್ಷೇತ್ರದ ಗುಣಗಾನ ಮಾಡಿರುವ ಹಾಡೊಂದು ಬಿಡುಗಡೆಯಾಗಿದೆ. ಪೊಳಲಿ ಸನ್ನಿಧಾನದಲ್ಲಿ ಮಾರ್ಚ್ 12ರಂದು ಬಿಡುಗಡೆಯಾಗಿರುವ ‘ಪುರಲ್ದ ಸಿರಿಯೇ..’ ಹೆಸರಿನ ಭಕ್ತಿ ಗಾಯನದ ವೀಡಿಯೊ ನಾಡಿನ ಆಸ್ತಿಕ ಸಮೂಹದ ಚಿತ್ತವನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಳ್ಳುವಂತಿದೆ. ದೇವೀ ನೆಲೆಯಾಗಿರುವ ಪೊಳಲಿಯನ್ನು ತುಳು ಭಾಷೆಯಲ್ಲಿ ‘ಪುರಾಲ್’ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಭಕ್ತ ಸೀಮೆಗೆ ಪೊಳಲಿ ರಾಜರಾಜೇಶ್ವರಿಯೇ ನಾಡಿನ ಅಧಿದೇವತೆ. ಈ ಸೀಮೆಯುದ್ದಕ್ಕೂ ಪೊಳಲಿ ದೇವಿಯನ್ನು ‘ಪುರಲ್ದ ಉಳ್ಳಾಲ್ತಿ’ ಎಂದೇ ಆಸ್ತಿಕರು ಕರೆಯುತ್ತಾರೆ. ದುಃಖ ದುಮ್ಮಾನಗಳಿಗೆ ಸಾಂತ್ವಾನ…
ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ
ಭಾರತೀಯ ಅಥ್ಲೀಟ್ ವಿಸ್ಪಿ ಖರಡಿ ಅವರು ವಿಶ್ವದ ಅತೀ ದೊಡ್ಡ ‘ಹರ್ಕ್ಯುಲಸ್ ಪಿಲ್ಲರ್ ಹೋಲ್ಡ್’ ಅನ್ನು ಅತೀ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. Longest duration holding Hercules pillars (male) 💪⏱️ 2 mins 10.75 seconds by @VispyKharadi 🇮🇳 pic.twitter.com/JxFFSU4xGv — Guinness World Records (@GWR) March 13, 2025 ಗುಜರಾತ್‌ನ ಸೂರತ್‌ನಲ್ಲಿ ಹೊಸ ದಾಖಲೆಯ ಸನ್ನಿವೇಶ ನಡೆದಿದೆ. ಖರಡಿ ಅವರು 2 ನಿಮಿಷ 10.75 ಸೆಕೆಂಡುಗಳ ಕಾಲ ಬೃಹತ್ ಕಂಬಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತಮ್ಮ ಅಸಾಧಾರಣ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಗ್ರೀಕ್ ವಾಸ್ತುಶಿಲ್ಪದಿಂದ ಪ್ರೇರಿತವಾದ ಈ ಕಂಬಗಳು 123 ಇಂಚು ಎತ್ತರ ಮತ್ತು 20.5 ಇಂಚು ವ್ಯಾಸವನ್ನು ಹೊಂದಿವೆ. ಇದು ಸುಮಾರು166.7 – 168.9 ಕೆಜಿ ತೂಕವಿದ್ದು, ಅವು ಮಾನವ ಸಹಿಷ್ಣುತೆ…
‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು
ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು ‘ಕಡೆ ಚೆಂಡು’ ನಿಗದಿಯಾಗಿದೆ. ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್ ಹೀಗಿದೆ: ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ. ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ …
ಬಿಜೆಪಿ ಅಧ್ಯಕ್ಷರಿಂದ PSI ಮೇಲೆ ಹಲ್ಲೆ ಆರೋಪ
ಚಿತ್ರದುರ್ಗ: ಚಿತ್ರದುರ್ಗ ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ರಸ್ತೆ ಮೇಲೆ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದನ್ನು ಪಿಎಸ್ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪಿಎಸ್ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಹಲ್ಲೆ ಆರೋಪದಲ್ಲಿ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸರೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತೇಗೌಡ ಆರೋಪಿಸಿದ್ದಾರೆ. ಇದೆಲ್ಲದರ ನಡುವೆ, ಬಿಜೆಪಿ ನಾಯಕ ಹನುಮಂತೇಗೌಡ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.