ನವದೆಹಲಿ: ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರು ತುಳಸಿ ಗಬ್ಬಾರ್ಡ್ ಅವರಿಗೆ ಗಂಗಾ ಜಲ ಮತ್ತು ಉಡುಗೊರೆಗಳನ್ನು ನೀಡಿ ಗೌರವಿಸಿದರು. Hon. PM Shri @narendramodi Ji gifting the holy water from the sacred Mahakumbh to USA’s Director of National Intelligence, @TulsiGabbard, is a symbol of India’s civilizational strength and spiritual diplomacy. It embodies Bharat’s growing global stature and showcases the… pic.twitter.com/McHgquba47 — Yogi Adityanath (@myogiadityanath) March 17, 2025 ಪ್ರಧಾನಿ ಮೋದಿ ಅವರು ಮಹಾ ಕುಂಭದಿಂದ ತಂಡ ಗಂಗಾ ಜಲವನ್ನು ನೀಡಿ, ವಿಶ್ವದ ಅತಿದೊಡ್ಡ ಧಾರ್ಮಿಕ ಕೈಂಕರ್ಯದ ಮಹತ್ವದ ಬಗ್ಗೆ…
Day: March 18, 2025
ಔರಂಗಜೇಬ್ ಸಮಾಧಿ ವಿವಾದ: ನಾಗಪುರದಲ್ಲಿ ಹಿಂಸಾಚಾರ ಭುಗಿಲು
ನಾಗ್ಪುರ: ಮೊಘಲ್ ದೊರೆ ಔರಂಗಜೇಬ್ ಸಮಾಧಿ ವಿಚಾರ ಇದೀಗ ಮಹಾರಾಷ್ಟ್ರದ ನಾಗಪುರವನ್ನು ಪ್ರಕ್ಷುಬ್ಧಗೊಳಿಸಿದೆ. ಎರಡು ಗುಂಪುಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು ಘಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಹಿಂಸಾಚಾರದಲ್ಲಿ ಮೂವರು ಪೊಲೀಸರು ಸೇರಿ 9 ಮಂದಿ ಗಾಯಗೊಂಡಿದ್ದಾರೆ. #WATCH | Maharashtra: Efforts underway to douse fire in vehicles that have been torched in Mahal area of Nagpur. Tensions have broken out here following a dispute between two groups. pic.twitter.com/rRheKdpGh4 — ANI (@ANI) March 17, 2025 ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಸೋಮವಾರ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿತ್ತು. ಅದರ ಬೆನ್ನಲ್ಲೆ ಕುರಾನ್ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿ ಹಬ್ಬಿದೆ. ಈ ವದಂತಿ ನಂತರ ಹಿಂಸಾಚಾರ…
ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ತಿ
ಚಿತ್ರ : ಮಂಜು ನೀರೇಶ್ವಾಲ್ಯ ಮಂಜೇಶ್ವರ: ಕರಾವಳಿಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿರುವ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನ ವಿಶೇಷ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯದ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ಐತಿಹಾಸಿಕವಾಗಿ ಅಪೂರ್ವ ವಿಜೃಂಭಣೆಯಿಂದ ನೆರವೇರಿದೆ. ಸೋಮವಾರ ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾಹ್ನ ಸಮಾಜ ಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣ ದೊಂದಿಗೆ ಪ್ರದಕ್ಷಿಣಾ ಸೇವೆ ನಡೆಯಿತು. ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಡಿದ ಸನ್ನಿವೇಶವೂ ಭಕ್ತ ಸಮೂಹದ ಗಮನಕೇಂದ್ರೀಕರಿಸಿತು. ರಾತ್ರಿ 150 ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ, ಉತ್ಸವದಲ್ಲಿ ಅದ್ಧುರಿ ವಾದ್ಯಘೋಷ್ಠಿ, ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು.
ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತಿಬ್ಬರು ಬಲಿ
ಬೆಂಗಳೂರು: ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ವಿದ್ಯುತ್ ಕಂಬ ತಲೆ ಮೇಲೆ ಬಿದ್ದು 4 ತಿಂಗಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಸೋಮವಾರ ನಡೆದಿದೆ. ರಸ್ತೆ ಕಾಮಗಾರಿ ನಡೆಯುವ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿತ್ತು. ಆ ಕಂಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮತಿ (35) ಮತ್ತು ಸೋನಿ ( 36) ಎಂಬ ಮಹಿಳೆಯರ ಮೇಲೆ ಬಿದ್ದಿದೆ ಎನ್ನಲಾಗಿದೆ. ಈ ಇಬ್ಬರೂ ಮೃತಪಟ್ಟಿದ್ದು, ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮತೀಯವಾಗಿ ಮೀಸಲಾತಿಯನ್ನು ಅಂಬೇಡ್ಕರ್ ಅವರೇ ವಿರೋಧಿಸಿದ್ದರು, ಸುಪ್ರೀಂ ಕೋರ್ಟ್ ಕೂಡಾ ಆಕ್ಷೇಪಿಸಿತ್ತು’
ಬೆಂಗಳೂರು: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಬಿಜೆಪಿಯ ವಿರೋಧವಿದೆ ಎಂದು ವಿಧಾನಪರಿಷತ್ತಿನಲ್ಲಿ ಶಾಸಕ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಸಾಂವಿಧಾನಿಕವಾಗಿ ತಿರಸ್ಕರಿಸಲಾಗಿದೆ, ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಾ ಮೀಸಲಾತಿ ನೀಡುವುದನ್ನು ವಿರೋಧಿಸಿದೆ. ಮತೀಯವಾಗಿ ಮೀಸಲಾತಿ ನೀಡುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ ಎಂದು ಸ್ವತಃ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಇಂದು ಮುಸ್ಲಿಮರಿಗೆ ಮೀಸಲಾತಿ ನೀಡುವ… pic.twitter.com/kbIxdbPS3C — BJP Karnataka (@BJP4Karnataka) March 17, 2025 ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಸಾಂವಿಧಾನಿಕವಾಗಿ ತಿರಸ್ಕರಿಸಲಾಗಿದೆ, ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಾ ಮೀಸಲಾತಿ ನೀಡುವುದನ್ನು ವಿರೋಧಿಸಿದೆ ಎಂದು ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಮತೀಯವಾಗಿ ಮೀಸಲಾತಿ ನೀಡುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ ಎಂದು ಸ್ವತಃ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಇಂದು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಸಂವಿಧಾನ, ಅಂಬೇಡ್ಕರ್…