ಬೆಂಗಳೂರು: ನಂದಿನಿ ಹಾಲಿನ ಬೆಲೆ ಏರಿಕೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಲೀಟರ್ ಹಾಲಿನ ದರ 4 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ದರ ಹೆಚ್ಚಿಸಬೇಕೆಂಬ ಹಾಲು ಒಕ್ಕೂಟಗಳ ಮನವಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ದರ ಏರಿಕೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಬಾರಿಗೆ ಹಾಲಿನ ಏರಿಕೆ ಮಾಡಿದಂತಾಗಿದೆ.
Day: March 27, 2025
ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಾ ಬಂದವರು ಬಿಜೆಪಿಯವರು: ಹಳೆಯ ಸನ್ನಿವೇಶಗಳನ್ನು ಮುನ್ನೆಲೆಗೆ ತಂದ ರಮೇಶ್ ಬಾಬು..
ಬೆಂಗಳೂರು: ಆಗಾಗ್ಗೆ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರತ್ತ ಬೆರಳು ತೋರಿಸುವ ಮುನ್ನ ತಮ್ಮನ್ನು ತಾವೇ ನೋಡಿಕೊಳ್ಳಲಿ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಧ್ಯಗಳಿಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಬಾಬು, ಅನಾದಿ ಕಾಲದಿಂದಲೂ ಬಿಜೆಪಿ-ಆರೆಸ್ಸೆಸ್ ನಾಯಕರು ಸಂವಿಧಾನ ಬದಲಾವಣೆ ಬಾಗೆ ಹೇಳಿಕೊಂಡಿರುವ ಸನ್ನಿವೇಶಗಳ ಬಗ್ಗೆ ಗಮನಸೆಳೆದರು. ಸಂಘ ಪರಿವಾರದ ಮೂಲಭೂತ ಸಿದ್ಧಾಂತಗಳಿಗೆ ಅನುಗುಣವಾಗಿ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಹಿಡನ್ ಅಜೆಂಡ ಹೊಂದಿರುವ ಬಿಜೆಪಿ, ಸಮಯಕ್ಕೆ ಅನುಗುಣವಾಗಿ ತನ್ನ ಬಣ್ಣ ಬದಲಾಯಿಸಿಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದೆ. ಜನಸಂಘದ ಕಾಲದಿಂದಲೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಬಿಜೆಪಿ ಆಯಾ ಸಂದರ್ಭದಲ್ಲಿ ಸಂಘ ಪರಿವಾರದ ವೇದಿಕೆಗಳಲ್ಲಿ, ನಾಯಕರ ಹೇಳಿಕೆಗಳಲ್ಲಿ ನಿರಂತರವಾಗಿ ನಮ್ಮ ದೇಶದ ಸಂವಿಧಾನವನ್ನು ಮನುಸ್ಮೃತಿಗೆ ಅನುಗುಣವಾಗಿ ಮೂಲಭೂತವಾದಕ್ಕೆ ಪೂರಕವಾಗಿ ಬದಲಾವಣೆ…
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: ಮತ್ತೊಬ್ಬ ಆಭರಣ ಉದ್ಯಮಿ ಬಂಧನ
ಬೆಂಗಳೂರು : ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಳ್ಳಾರಿ ಮೂಲದ ಚಿನ್ನ ವ್ಯಾಪಾರಿಯನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ದಂಧೆ ಬೇಧಿಸುತ್ತಿರುವ ಡಿಆರ್‌ಐ ಅಧಿಕಾರಿಗಳು ಬಂಧಿತ ಆರೋಪಿ ತರುಣ್ ನೀಡಿದ ಸುಳಿವನ್ನಾಧರಿಸಿ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರೀ ಸಾಹಿಲ್ ಜೈನ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಯತ್ನಾಳ್ ಉಚ್ಚಾಟನೆ: ‘ವರಿಷ್ಠರ ನಿರ್ಧಾರವನ್ನು ಸಂಭ್ರಮಿಸಬೇಡಿ’
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವ ಪಕ್ಷದ ವರಿಷ್ಠರ ನಿರ್ಧಾರವನ್ನು ಸಂಭ್ರಮಿಸಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರನ್ನು ಬುಧವಾರ ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಆ ಸುದ್ದಿ ಹರಡುತ್ತಿದ್ದಂತೆಯೇ ವಿಜಯೇಂದ್ರ ಬೆಂಬಲಿಗರು ಹಲವೆಡೆ ಸಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ಬೆಳವಣಿಗೆ ಬಗ್ಗೆ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಬಿ.ವೈ.ವಿಜಯೇಂದ್ರ, ‘ಭಾರತೀಯ ಜನತಾ ಪಾರ್ಟಿ ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಅಶಿಸ್ತಿನ ವಿರುದ್ಧ ಇಂದು ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರವನ್ನು ಸಂಭ್ರಮಿಸಬಾರದೆಂದು ವಿನಂತಿಸುತ್ತೇನೆ’ ಎಂದಿದ್ದಾರೆ. ‘ಸಂಸ್ಕಾರವಂತ ಹಾಗೂ ಶಿಸ್ತುಬದ್ಧ ಸಂಘಟನೆಯ ವ್ಯವಸ್ಥೆಯಲ್ಲಿರುವ ನಾವು…
ರಾಮ್ ಚರಣ್ ಹೊಸ ಸಿನಿಮಾ ‘ಪೆಡ್ಡಿ’ ಟೈಟಲ್ ರಿವೀಲ್
ನಟ ರಾಮ್ ಚರಣ್ ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈವರೆಗೂ ‘RC16’ ಎನ್ನುವ ತಾತ್ಕಾಲಿಕ ಹೆಸರನ್ನು ಇಡಲಾಗಿತ್ತು. ಇದೀಗ (ಮಾರ್ಚ್ 27) ರಾಮ್ ಚರಣ್ ಅವರ ಜನ್ಮದಿನದಂದು ಈ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಪೆಡ್ಡಿ’ ಎನ್ನುವ ಟೈಟಲ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಬುಚಿ ಬಾಬು ಸನಾ ನಿರ್ದೇಶಿಸಲಿದ್ದಾರೆ.
ಯತ್ನಾಳ್ ಉಚ್ಛಾಟನೆಯ ಪ್ರತಿಧ್ವನಿ; ಬಿಜೆಪಿ ತೊರೆಯಲು ಪಂಚಮಸಾಲಿ ನಾಯಕರಿಗೆ ಸ್ವಾಮೀಜಿ ಕರೆ
ಧಾರವಾಡ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಹೈಕಮಾಂಡ್ ನಿರ್ಧಾರದ ವಿರುದ್ಧ ಪಂಚಮಸಾಲಿ ಸಮಾಜ ಸಿಡಿದೆದ್ದಿದೆ. ಯತ್ನಾಳ್ ಅವರ ಉಚ್ಚಾಟನೆ ಖಂಡಿಸಿ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಶ್ರೀಗಳು, ಯತ್ನಾಳ್ ಉಚ್ಛಾಟನೆಗೆ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬವೇ ಕಾರಣ ಎಂದು ದೂರಿದರು. ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದುತ್ವದ ಬಗ್ಗೆಯೇ ಮಾತನಾಡಿದ್ದಾರೆ ಎಂದು ತಮ್ಮ ಸಮೈದಾಯದ ಶಾಸಕನ ಬೆನ್ನಿಗೆ ನಿಂತಿರುವ ಶ್ರೀಗಳು, ಯತ್ನಾಳ್ ಉಚ್ಛಾಟನೆ ಆದೇಶವನ್ನು ಹೈಕಮಾಂಡ್ ವಾಪಸ್ ಪಡೆಯಬೇಕು.…