‘ಒಂದು‌ ಮಚ್ಚಿನ ಕಥೆ’: ಬಹಿರಂಗ ಕ್ಷಮೆ ಯಾಚಿಸಿದ ವಿನಯ್

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ‌ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ರಜತ್ ಹಾಗೂ ವಿನಯ್ ಗೌಡ ‘ಒಂದು‌ ಮಚ್ಚಿನ ಕಥೆ’ಯಿಂದಾಗಿ ವಿಲನ್ ಎನಿಸಿಕೊಂಡರು. ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಹಕ್ಕಿಗಳಾದ ಈ ಇಬ್ಬರು ಸೆಲೆಬ್ರೆಟಿಗಳು ಇದೀಗ ಜಾಮೀನಿನ‌ ಮೂಲಕ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿರುವ ವಿನಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಕ್ಷಮೆಕೋರಿದ್ದಾರೆ.   View this post on Instagram   A post shared by Vinay Gowda (@vinaygowdaactor) ‘ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿರುವ ವಿನಯ್, ಮಚ್ಚು ಇಡ್ಕೊಂಡು ವಿಡಿಯೋ ಮಾಡಬಾರದಿತ್ತು. ಇದರಿಂದ ತೊಂದರೆ ಆಗಿದೆ. ನನ್ನಿಂದ ತಪ್ಪಾಗಿದೆ’ ಎಂದಿದ್ದಾರೆ. ಇದು ಇಷ್ಟು ದೊಡ್ಡ ಸಮಸ್ಯೆ ತಂದುಕೊಡುತ್ತದೆ ಅಂಥ ಅನ್ನೊಂಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ’ ಎಂದವರು ಹೇಳಿರುವ ವೀಡಿಯೋ…

ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ; ಎನ್ಕೌಂಟರ್’ನಲ್ಲಿ 16 ಬಲಿ

ಸುಕ್ಮಾ: ಛತ್ತೀಸ್‌ಗಢದಲ್ಲಿ ನಕ್ಸಲ್ ಹಾವಳಿ ವಿರುದ್ಧ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಸುಕ್ಮಾ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಬಲಿಯಾಗಿದ್ದಾರೆ. ಸುಕ್ಮಾ ಜಿಲ್ಲೆಯ ಕೆರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಶನಿವಾರ ಮುಂಜಾನೆ ಈ ಎನ್‌ಕೌಂಟರ್‌ ನಡೆದಿದ್ದು ಕನಿಷ್ಠ 16 ನಕ್ಸಲರು ಮೃತಪಟ್ಟಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಮೀಸಲು ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್-ಥೈಲ್ಯಾಂಡ್‌ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು

ಮ್ಯಾನ್ಮಾರ್: ಭೀಕರ ಭೂಕಂಪ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ ದೇಶಗಳನ್ನು ಸ್ಮಶಾನವನ್ನಾಗಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ. Earthquake sum up 3pm (Mynamar/Thailand)– 7.7 quake hit near Mandalay/Myanmar– Hundreds of homes collapsed (various Myanmar cities)– Strong shocks in Thailand + multiple building collapse in Bangkok – USGS predicts thousands of people dead (Bangkok clips from social media:) pic.twitter.com/kJodTn6BIg — Florian Witulski (@vaitor) March 28, 2025 ಎರಡೂ ದೇಶಗಳಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಟ್ಟಡಗಳು ಕುಸಿದು ಹಿಂದೆಂದೂ ಕಂಡರಿಯದ ರೀತಿ ಮಾರಣಹೋಮವೇ ಸಂಭವಿಸಿದೆ. ಮ್ಯಾನ್ಮಾರ್‌ ಸರ್ಕಾರದ ಮೂಲಗಳ ಪ್ರಕಾರ ಭೀಕರ ಭೂಕಂಪದಲ್ಲಿ ಮೃತಪಟ್ಟವರ…

ಗೌಡ ಸಾರಸ್ವತ ಸಂಪ್ರದಾಯಯುಕ್ತ ವಿಶ್ವವಸು ಕ್ಯಾಲೆಂಡರ್ ಅನಾವರಣ

ಮಂಗಳೂರಿನ ಡೊಂಗೇರಕೇರಿಯ ವೇದಮೂರ್ತಿ ದಿನೇಶ್ ಭಟ್ ರವರ ನಿವಾಸದಲ್ಲಿ ಶ್ರೀ ಲಕ್ಷ್ಮೀನಾರಾಯಣ ದೇವರ ಸಮ್ಮುಖದಲ್ಲಿ ಹಿಂದೂ ಪಂಚಾಂಗ ಆಧಾರಿತ ವಿಶ್ವವಸು ಕ್ಯಾಲೆಂಡರನ್ನು ಮಾರ್ಚ್ 9, 2025 ರಂದು ಬಿಡುಗಡೆ ಮಾಡಲಾಯಿತು. ಪೈ ಸೇಲ್ಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ. ಗಣಪತಿ ಪೈ, ಡಿವಿಕೆ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಡಿ. ವಾಸುದೇವ್ ಕಾಮತ್ ಮತ್ತು ಇನ್ನಿತರ ಹಲವಾರು ಗಣ್ಯ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಂಡು ಶುಭಾಶಯಗಳನ್ನು ಹಾರೈಸಿದರು. ವೇದಮೂರ್ತಿ ಎಂ. ದಿನೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಕ್ಯಾಲೆಂಡರ್‌ನ್ನು ರಚಿಸಿದ ಹಾಗೂ ಸಂಪಾದಕರಾದ ಎಂ.ನರಸಿಂಹ ಭಟ್ ಅವರು ಚಂದ್ರಮಾನ ಯುಗಾದಿಯಿಂದ ಪ್ರಾರಂಭವಾಗುವ ಈ ಕ್ಯಾಲೆಂಡರನ್ನು ಅನುಸರಿಸುವ ಮಹತ್ವವನ್ನು ವಿವರಿಸಿದರು. ಈ ಕ್ಯಾಲೆಂಡರ್ ಪಂಚಾಗ ಮಾಸಗಳ ಪ್ರಕಾರ ತಿಂಗಳುಗಳನ್ನು ಒಳಗೊಂಡಿದ್ದು, ಉದಾಹರಣೆಗೆ ಚೈತ್ರಾ, ವೈಶಾಕಾದಿಂದ ಫಲ್ಗುನಾ ವರೆಗೆ, ತಿಥಿ, ನಕ್ಷತ್ರ ಮತ್ತು ಹಲವಾರು ಪ್ರಮುಖ ದಿನಗಳನ್ನು ಎತ್ತಿ ತೋರಿಸುದಲ್ಲದೆ, ಏಕಾದಶಿ…

ಚಳ್ಳಕೆರೆ ಬಳಿ ಟಿಟಿ ವಾಹನ ಪಲ್ಟಿ; ಮೂವರು ದುರ್ಮರಣ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಟಿಟಿ ವಾಹನ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. 65 ವರ್ಷದ ಶಂಕರಿಬಾಯಿ, 46 ವರ್ಷ ವಯಸ್ಸಿನ ಕುಮಾರ ನಾಯ್ಕ್ ಮತ್ತು 38ರ ಹರೆಯದ ಶ್ವೇತಾ ಎಂಬವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಐವರು ಗಾಯಗೊಂಡಿದ್ದು ಅವರು ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಳಮೀಸಲಾತಿ: ನಾಗಮೋಹನ್ ದಾಸ್ ಆಯೋಗದಿಂದ 4 ಪ್ರಮುಖ ಶಿಫಾರಸ್ಸು

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನುಗುರುವಾರ ನಡೆದ ಸಚಿವ ಸಂಪುಟ ಸಭೆಯು ಅಂಗೀಕರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಆಯೋಗವು ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿವಸಗಳೊಳಗೆ ಹೊಸ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು. ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ…

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ

ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಹಂಚಿಕೊಂಡಿರುವ ಮಾಹಿತಿ ಗಮನಸೆಳೆದಿದೆ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಹೈನುಗಾರರ ನೆರವಿಗೆ ನಮ್ಮ ಸರ್ಕಾರ ಧಾವಿಸಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ. ಕೆಎಂಎಫ್’ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ ಎಂದವರು ತಿಳಿಸಿದ್ದಾರೆ. ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತೇಜನ ಸಿಗುತ್ತಿದ್ದು, ಇದೀಗ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಹಾಲಿನ ದರವು ನೇರವಾಗಿ ಹೈನುಗಾರರ…