‘ರಕ್ತದ ಹನಿ’ ವಯಸ್ಸನ್ನು ವಿವರಿಸಬಲ್ಲದು..!

ನವದೆಹಲಿ: ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ವ್ಯಕ್ತಿಯ ಜೈವಿಕ ವಯಸ್ಸನ್ನು ಅಂದಾಜು ಮಾಡಲು ಹೊಸ AI ಮಾದರಿಯನ್ನು ರೂಪಿಸಿದ್ದಾರೆ. ಇದು ಜನನದ ನಂತರದ ವರ್ಷಗಳನ್ನು ಎಣಿಸುವ ಬದಲು, ಅವರ ದೇಹವು ಎಷ್ಟು ವಯಸ್ಸಾಗಿದೆ ಎಂಬುದರ ಅಳತೆ ವಿಧಾನವಾಗಬಹುದು. ಕೇವಲ ಐದು ಹನಿ ರಕ್ತದ ಹನಿಗಳನ್ನು ಬಳಸಿಕೊಂಡು, ಈ ಹೊಸ ವಿಧಾನವು 22 ಪ್ರಮುಖ ಸ್ಟೀರಾಯ್ಡ್‌ಗಳು ಮತ್ತು ಅವುಗಳ ಪರಸ್ಪರ ಕ್ರಿಯೆಗಳನ್ನು ವಿಶ್ಲೇಷಿಸಿ ಹೆಚ್ಚು ನಿಖರವಾದ ಆರೋಗ್ಯ ಮೌಲ್ಯಮಾಪನವನ್ನು ಒದಗಿಸುತ್ತದೆ. ಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ತಂಡದ ಅದ್ಭುತ ಅಧ್ಯಯನವು ವೈಯಕ್ತಿಕಗೊಳಿಸಿದ ಆರೋಗ್ಯ ನಿರ್ವಹಣೆಯಲ್ಲಿ ಸಂಭಾವ್ಯ ಹೆಜ್ಜೆಯನ್ನು ನೀಡುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಅಪಾಯಗಳು ಮತ್ತು ಸೂಕ್ತವಾದ ಮಧ್ಯಸ್ಥಿಕೆಗಳನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. “ನಮ್ಮ ದೇಹವು ಹೋಮಿಯೋಸ್ಟಾಸಿಸ್ ಅನ್ನು ಕಾಪಾಡಿಕೊಳ್ಳಲು ಹಾರ್ಮೋನುಗಳನ್ನು ಅವಲಂಬಿಸಿದೆ, ಆದ್ದರಿಂದ ನಾವು ಯೋಚಿಸಿದ್ದೇವೆ, ಇವುಗಳನ್ನು ವಯಸ್ಸಾದ ಪ್ರಮುಖ ಸೂಚಕಗಳಾಗಿ…

‘ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್’: ರಾಜಕೀಯ ಗುರುವಿಗೆ ನಮಿಸಿದ ಡಿಕೆಶಿ

ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಗದಗ್ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಆದರ್ಶ ನಾಯಕರಾಗಿದ್ದ ಕೆ.ಹೆಚ್.ಪಾಟೀಲ್ ಅವರನ್ನು ಸ್ಮರಿಸಿದ ಡಿ.ಕೆ.ಶಿವಕುಮಾರ್, ಸಹಕಾರ ರಂಗದ ಭೀಷ್ಮ ಕೆ.ಹೆಚ್.ಪಾಟೀಲ್ ಅವರ ಜನಪರ ಕಾಳಜಿಯ ನಿದರ್ಶನಗಳು ನಮ್ಮ ಮುಂದಿವೆ. ಅವರು ಚುನಾವಣೆಯಲ್ಲಿ ಸೋತಾಗ ಕುಗ್ಗದೆ, ಅಧಿಕಾರ ಸಿಕ್ಕಾಗ ಹಿಗ್ಗದೆ ದಕ್ಷತೆಯಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದೃಢ ನಿರ್ಧಾರಗಳನ್ನು ಕೈಗೊಂಡು,…

ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿ: ನಾಯಕರ ಸ್ಮರಣೆ

ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರನ್ನು ನಾಯಕರು ಮಹಾಮಾನವತಾವಾದಿ ಎಂದು ಬಣ್ಣಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು ಎಂದು ಸ್ಮರಿಸಿದರು. ಧೀಮಂತ ನಾಯಕ ಕೆ.ಹೆಚ್. ಪಾಟೀಲ್ ಅವರನ್ನು ಸ್ಮರಿಸಲು ನಾವು ಸೇರಿದ್ದೇವೆ. ಪಾಟೀಲರ ಬದುಕು, ಚಿಂತನೆ, ಆದರ್ಶ ಬೇರೆಯವರ ಬದುಕಿಗೆ ದಾರಿ ದೀಪವಾಗಲಿ. ನಾವು ಇತ್ತೀಚೆಗೆ ಮಹಾತ್ಮಾ ಗಾಂಧೀಜಿ ಅವರು…

ಅಂಡಾಶಯ ಕ್ಯಾನ್ಸರನ್ನು ಪ್ರಚೋದಿಸುವ ಅಪಾಯಕಾರಿ ಕೋಶಗಳ ಬಗ್ಗೆ ತಿಳಿಯಿರಿ..

ನವದೆಹಲಿ: ಅಮೆರಿಕದ ಸಂಶೋಧಕರ ತಂಡವು ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಮಾರಕ ರೂಪದ ಅಂಡಾಶಯ ಕ್ಯಾನ್ಸರನ್ನು ಪ್ರಚೋದಿಸುವ ಹೆಚ್ಚಿನ ಅಪಾಯಕಾರಿ ಕೋಶಗಳ ಬಗ್ಗೆ ಬೆಳಕುಚೆಲ್ಲಿದೆ. ಫಾಲೋಪಿಯನ್ ಟ್ಯೂಬ್ ಪೋಷಕ ಅಂಗಾಂಶ ಅಥವಾ ಸ್ಟ್ರೋಮಾದಲ್ಲಿ ವಾಸಿಸುವ ಪೂರ್ವಗಾಮಿ ಕೋಶಗಳ ಉಪವಿಭಾಗವಾದ ಹೈ-ರಿಸ್ಕ್ ಕೋಶಗಳ ಆವಿಷ್ಕಾರವು ಹೈ-ಗ್ರೇಡ್ ಸೀರಸ್ ಅಂಡಾಶಯ ಕ್ಯಾನ್ಸರ್ (HGSOC) ಅನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಉತ್ತಮ ವಿಧಾನಗಳಿಗೆ ದಾರಿ ಮಾಡಿಕೊಡಬಹುದು ಎಂದು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ತಂಡ ಹೇಳಿದೆ. HGSOC ಎಂಬುದು ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಪ್ರಾರಂಭವಾಗಿ ಅಂಡಾಶಯಗಳಿಗೆ ಹರಡುವ ಒಂದು ರೀತಿಯ ಅಂಡಾಶಯ ಕ್ಯಾನ್ಸರ್ ಆಗಿದೆ. ಇದು ಅಂಡಾಶಯ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ರೂಪವಾಗಿದೆ. “ಅಂಡಾಶಯದ ಕ್ಯಾನ್ಸರ್ ಸ್ತ್ರೀರೋಗ ಕ್ಯಾನ್ಸರ್‌ನಿಂದ ಸಾವಿಗೆ ಪ್ರಮುಖ ಕಾರಣವಾಗಬಲ್ಲದು. ಆದರೆ ಅದನ್ನು ಮೊದಲೇ ಪತ್ತೆಹಚ್ಚಲು ಯಾವುದೇ ಮಾರ್ಗವಿಲ್ಲ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಸ್ಟ್ರೇಶನ್ ಹೊರತುಪಡಿಸಿ ಯಾವುದೇ ತಡೆಗಟ್ಟುವ ತಂತ್ರಗಳಿಲ್ಲ. ಇದನ್ನು ಹೆಚ್ಚಿನ ಅಪಾಯದ ಮಹಿಳೆಯರಲ್ಲಿ ಮಾತ್ರ…

ರೂಪಾಯಿ ಚಿಹ್ನೆ ಬದಲಾವಣೆ: ಎಂ.ಕೆ.ಸ್ಟಾಲಿನ್ ಸಮರ್ಥನೆ

ಚೆನ್ನೈ: ತಮಿಳುನಾಡು ರಾಜ್ಯ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ ‘ರು’ (‘ರುಬಾಯಿ’ ನಿಂದ, ಅಂದರೆ ರೂಪಾಯಿ) ನೊಂದಿಗೆ ಬದಲಾಯಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಮರ್ಥಿಸಿಕೊಂಡಿದ್ದಾರೆ. ತಮಿಳು ಭಾಷೆಯನ್ನು ವಿರೋಧಿಸುವವರು ಈ ವಿಷಯವನ್ನು ಅತಿರೇಕಕ್ಕೆ ತಳ್ಳಿದ್ದಾರೆ ಎಂದು ಅವರು ವಾದಿಸಿದ್ದಾರೆ. ಮಾರ್ಚ್ 14 ರಂದು ಮಂಡಿಸಲಾದ ತಮಿಳುನಾಡು ಬಜೆಟ್ 2025-26 ಲೋಗೋದಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ನಿರ್ಧಾರವು ಬಿಜೆಪಿ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೂಪಾಯಿ ಲೋಗೋ ವಿಚಾರದ್ಲಲಿನ ಚರ್ಚೆಗಳ ಕುರಿತಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಕ್ರಮವು ತಮಿಳುನಾಡಿನ ಭಾಷಾ ನೀತಿಗೆ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಇಂಗ್ಲಿಷ್‌ನಲ್ಲಿ ‘ರೆ’ ಬದಲಿಗೆ ತಮಿಳು ಅಕ್ಷರ ‘ರು’ ಅನ್ನು ಬಳಸಿದ್ದಾರೆ…

“ನಾನು ಸಂಘ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

ನವದೆಹಲಿ: ತನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೀವನದಲ್ಲಿದೇಶಭಕ್ತಿ ಬೆಳೆಸುವಂತಾಗಿ, ತಮ್ಮನ್ನು ಪೋಷಿಸಿದ್ದಕ್ಕಾಗಿ ಸಂಘಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ AI ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಾಂಘಿಕ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ RSS ತಮ್ಮನ್ನು ಒಬ್ಬ ವ್ಯಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. “RSS ಮೂಲಕ, ನಾನು ಉದ್ದೇಶಿತ ಜೀವನವನ್ನು ಕಂಡುಕೊಂಡೆ. ನಂತರ ಸಂತರ ನಡುವೆ ಸಮಯ ಕಳೆಯುವ ಅದೃಷ್ಟ ಸಿಕ್ಕಿತು, ಅದು ನನಗೆ ಬಲವಾದ ಆಧ್ಯಾತ್ಮಿಕ ಅಡಿಪಾಯವನ್ನು ನೀಡಿತು. ನಾನು ಶಿಸ್ತು ಮತ್ತು ಉದ್ದೇಶಿತ ಜೀವನವನ್ನು ಕಂಡುಕೊಂಡೆ” ಎಂದು ಮೋದಿ ಸಂಘದ ಜೊತೆ ಸಾಗಿಬಂದ ಅರ್ಥಪೂರ್ಣ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಕಳೆದ 100 ವರ್ಷಗಳಲ್ಲಿ RSS…

ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ವಾಗ್ವಾದದ ಅಖಾಡಕ್ಕಿಳಿದ ವಿಜಯೇಂದ್ರ

ಬೆಂಗಳೂರು: ಚಿತ್ರದುರ್ಗದಲ್ಲಿ PSI ಮೇಲೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣಕ್ಕೆ ಹಠಾತ್ ತಿರುವು ಸಿಕ್ಕಿದೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪೊಲೀಸ್ ಅಧಿಕಾರಿಯೇ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ… pic.twitter.com/zf5ZN3pk3J — Vijayendra Yediyurappa (@BYVijayendra) March 15, 2025 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ…

ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧಕರು ಹೇಳೋದೇನು?

ನವದೆಹಲಿ: ಪಾಶ್ಚಿಮಾತ್ಯ ಆಹಾರ ಪದ್ಧತಿಯಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗಿದ್ದು, ಶ್ವಾಸಕೋಶದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ಬಯಲುಮಾಡಿದೆ. ಈ ಸಂಶೋಧನೆಯು ಕಳಪೆ ಆಹಾರ ಪದ್ಧತಿ ಮತ್ತು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಂತಹ ಅಂಗಗಳ ಕ್ಯಾನ್ಸರ್ ನಡುವಿನ ಸಂಬಂಧವನ್ನು ತೋರಿಸಿದೆ. ಹೀಗಾಗಿ ಆಹಾರದ ದೀರ್ಘಕಾಲೀನ ಪರಿಣಾಮದತ್ತ ಅಧ್ಯಯನವು ಬೆಳಕುಚೆಲ್ಲಿದೆ. ‘ಶ್ವಾಸಕೋಶದ ಕ್ಯಾನ್ಸರ್ ಅನ್ನು ಸಾಂಪ್ರದಾಯಿಕವಾಗಿ ಆಹಾರ-ಸಂಬಂಧಿತ ಕಾಯಿಲೆ ಎಂದು ಭಾವಿಸಲಾಗಿಲ್ಲ’ ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ಸುಧಾರಿತ ಪ್ರಾದೇಶಿಕ ಜೈವಿಕ ಅಣು ಸಂಶೋಧನಾ ಕೇಂದ್ರದ ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ನಿರ್ದೇಶಕ ರಾಮನ್ ಸನ್ ಹೇಳಿದ್ದಾರೆ. . ‘ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಥವಾ ಯಕೃತ್ತಿನ ಕ್ಯಾನ್ಸರ್‌ನಂತಹ ರೋಗಗಳು, ಹೌದು. ಆದಾಗ್ಯೂ, ಶ್ವಾಸಕೋಶದ ಕ್ಯಾನ್ಸರ್‌ಗೆ ಬಂದಾಗ, ಆಹಾರವು ಒಂದು ಪಾತ್ರವನ್ನು ವಹಿಸುತ್ತದೆ ಎಂಬ ಕಲ್ಪನೆಯನ್ನು ವಿರಳವಾಗಿ ಚರ್ಚಿಸಲಾಗುತ್ತದೆ’ ಎಂಬುದು ಸನ್ ಅವರ ಅಭಿಪ್ರಾಯವಾಗಿದೆ. ನೇಚರ್ ಮೆಟಾಬಾಲಿಸಮ್…

ಪಾಕ್ ಇಬ್ಭಾಗಕ್ಕೆ ಬಂಡುಕೋರರು ಪಟ್ಟು: 214 ಸೈನಿಕರ ಹತ್ಯೆ?

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂಡುಕೋರರು ರೈಲನ್ನು ಅಪಹರಿಸಿದ್ದ ನಂತರ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಸೇನಾಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡಿಲೊಂಡ ಬಳಿಕ ಬಲೂಚ್ ಬಂಡುಕೋರರು ಸೇಡು ತೀರಿಸುತ್ತಿದ್ದಾರೆ. ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದ ಬಲೂಚ್ ಲಿಬರೇಶನ್ ಆರ್ಮಿ, ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ 214 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಒತ್ತಾಯಿಸುತ್ತಿದೆ. ಮಂಗಳವಾರ ರೈಲ್ವೆ ಹಳಿಯನ್ನು ಸ್ಫೋಟಿಸಿ ರೈಲನ್ನು ಅಪಹರಿಸಿತ್ತು. ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಸೇನೆ ಕಾರ್ಯಾಚರಣೆ ನಡೆಸಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಹಲವು ಪಾಕ್ ಸೈಕೀಕರನ್ನು ಬಲೂಚ್ ಲಿಬರೇಶನ್ ಆರ್ಮಿ ಬಂಡೂಕೋರರು ಅಪಹರಿಸಿದ್ದರು. ಇದೀಗ ಈ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಂಡೂಕೋರರು ಹೇಳಿದ್ದಾರಾದರೂ ಪಾಕ್ ಆಡಳಿತ ತಳ್ಳಿಹಾಕಿದೆ.

ಬಿಜೆಪಿಗೆ ಒಲಿದ ಬೆಳಗಾವಿ ಗದ್ದುಗೆ ; ಮೇಯರ್ ಆಗಿ ಮಂಗೇಶ ಪವಾರ, ಉಪ ಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಗಳು ಮೇಲುಗೈ ಸಾಧಿಸಿದ್ದಾರೆ. ಮೇಯರ್ ಆಗಿ ಬಿಜೆಪಿಯ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆಯಾಗಿದ್ದಾರೆ. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 65 ಮತದಾರ ಪೈಕಿ 60 ಮಂದಿ ಚುನಾವಣಾ ಸಂದರ್ಭದಲ್ಲಿ ಹಾಜರಿದ್ದರು. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್ ಹಾಗೂ ಓರ್ವ ಪಾಲಿಕೆ ಸದಸ್ಯ ಗೈರಾಗಿದ್ದರು.