ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ರಾತ್ರಿ ವೇಳೆ ಬಂದ್ ಆಗಲಿದೆ. ರಾತ್ರಿ ವೇಳೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಮಾಹಿತಿ ನೀಡಿದ್ದು, ಬುಧವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯ ತನಕ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ರಾತ್ರಿ ಎಲ್ಲಾ ರೀತಿಯ ವಾಹನಗಳ ಸಂಚಾರ ಬಂದ್ ಮಾಡಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
Month: March 2025
ವರ್ಷಪೂರ್ತಿ ‘ಸಂಘ ಶತಾಬ್ದಿ’ ವರ್ಷ; ಮಾರ್ಚ್ 21, 22, 23ರಂದು RSS ಅಖಿಲ ಭಾರತೀಯ ಪ್ರತಿನಿಧಿ ಸಭಾ ಭೈಠಕ್’ನಲ್ಲಿ ಕಾರ್ಯತಂತ್ರ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಇದೇ 2025ರ ಮಾರ್ಚ್ 21, 22, 23 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆಯಲಿದೆ. ಬೈಠಕ್ ನಲ್ಲಿ ಹಿಂದಿನ ವರ್ಷ 2024-25ರ ಕಾರ್ಯಚಟುವಟಿಕೆಗಳ ಕುರಿತು ವಿಮರ್ಶಾತ್ಮಕ ಚರ್ಚೆಯ ಜೊತೆಗೆ ವಿಶೇಷ ಕಾರ್ಯಗಳ ಪ್ರಸ್ತುತಿಯೂ ಆಗಲಿದೆ. ಮುಂದಿನ ವಿಜಯದಶಮಿ (ದಸರಾ) 2025ಕ್ಕೆ ಸಂಘಕಾರ್ಯಕ್ಕೆ ನೂರು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘ ಶತಾಬ್ದಿಯ ವರ್ಷ ಎಂದು ಕರೆಯಲಾಗುತ್ತದೆ. ಸಭೆಯಲ್ಲಿ ಶತಾಬ್ದಿ ವರ್ಷದ ಕಾರ್ಯವಿಸ್ತಾರದ ಯೋಜನೆಯ ಜೊತೆ ಜೊತೆಗೆ ಮುಂಬರುವ ಶತಾಬ್ದಿ ವರ್ಷದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಹಾಗೂ ಅಭಿಯಾನಗಳ ರೂಪುರೇಷೆಯ ತಯಾರಿ ನಡೆಯಲಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಎರಡು ಪ್ರಸ್ತಾವನೆಯ ಕುರಿತು ವಿಚಾರ ವಿನಿಮಯಗೊಳ್ಳಲಿದೆ. ಜೊತೆಯಲ್ಲಿ ಸಂಘದ…
ಕೇರಳಕ್ಕೂ KSRTC ಮಾದರಿ..! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಚೇರಿಗೆ ನೆರೆ ರಾಜ್ಯದ ನಿಯೋಗ ಭೇಟಿ
ಬೆಂಗಳೂರು: ದೇಶದಲ್ಲಿ ಜನಪ್ರಿಯ ಸಾರಿಗೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಕೇರಳಕ್ಕೂ ಮಾದರಿಯಾಗಿದೆ. ಹಲವಾರು ವಿಶೇಷತೆಗಳಿಂದ ಗಮನಸೆಳೆದಿರುವ KSRTC ಬಗ್ಗೆ ಅಧ್ಯಯನಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ತಂಡ ಬೆಂಗಳೂರಿನಲ್ಲಿರುವ KSRTC ನಿಗಮದ ಕಚೇರಿ ಹಾಗೂ ಕಾರ್ಯಾಗಾರಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಈ ಸಂದರ್ಭದಲ್ಲಿ ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ KSRTC ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ಶ್ರೀ.ಪಿ.ಎಸ್.ಪ್ರಮೋಜ್ ಸಂಕರ್, ಐ.ಒ.ಎಫ್.ಎಸ್. ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದರು. ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ಕೇರಳ ತಂಡವು ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಬಸ್ಸುಗಳ ಕಾರ್ಯ ನಿರ್ವಹಣೆ, ಪುನಶ್ಚೇತನ ಕಾರ್ಯ, ರೂ.1 ಕೋಟಿ On…
ಕೃಷ್ಣಾ ನದಿಗೆ ಹಾರಿ ತಾಯಿ, ಮೂವರು ಮಕ್ಕಳು ಆತ್ಮಹತ್ಯೆ
ಬೆಳಗಾವಿ: ಮಹಿಳೆಯೊಬ್ಬಳು ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ಸಮೀಪದ ಚಿಂಚಲಿ ಬಳಿ ನಡೆದಿದೆ. 32 ವರ್ಷದ ಶಾರದಾ ಎಂಬವರು ತನ್ನ ಮಕ್ಕಳ ಜೊತೆ ನದಿಗೆ ಹಾರಿದ್ದಾರೆ. ಈ ಘಟನೆಯನ್ನು ಕಂಡ ಸ್ಥಳೀಯರು ಹೆಣ್ಣುಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸಗೆ ಸ್ಪಂದಿಸದೆ ಆಕೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ FIR: ವಿಜಯೇಂದ್ರ ಆಕ್ರೋಶ
ಬೆಂಗಳೂರು: ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಪೊಲೀಸರು ಎಫ್.ಐ.ಆರ್. ದಾಖಲಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳನ್ನು ಬೆದರಿಸಲು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ದುರುದ್ದೇಶಪೂರಿತ ಎಫ್ಐಆರ್ ದಾಖಲಿಸಿರುವ ಕ್ರಮ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ನಿರ್ಭಯವಾಗಿ ತಮ್ಮ ಕರ್ತವ್ಯ ನಿರ್ವಹಿಸದಂತೆ ಬೆದರಿಸುವ ಮಾರ್ಗವನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ. ಈ ಹಿಂದೆಯೂ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಮೇಲೂ ಪೊಲೀಸರು ದೂರು ದಾಖಲಿಸಿಕೊಂಡು ದೌರ್ಜನ್ಯ ಮೆರೆಯಲು ಹೊರಟಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿರುವ ಕಾಂಗ್ರೆಸ್ ಹತಾಶೆಯಿಂದ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರನ್ನು ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಹತ್ತಿಕ್ಕಲು ಪೊಲೀಸ್ ಠಾಣೆಗಳನ್ನು ಬಳಸಿಕೊಳ್ಳುತ್ತಿರುವುದು ಸಾಂವಿಧಾನಿಕ ವ್ಯವಸ್ಥೆಯನ್ನು ಅಪಮಾನಿಸಿದಂತಿದೆ ಎಂದು…
ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ
ಮಂಗಳೂರು: ಆಸ್ತಿಕರ ನಾಡು, ರಾಜ್ಯ ಕರಾವಳಿ ಇದೀಗ ಸಾಲು ಸಾಲು ವೈದ್ಧಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿವೆ. ಅದರ ನಡುವೆಯೇ ಮಂಗಳೂರಿನಲ್ಲಿ ನೆರವೇರಿದ ‘ಮಹಾಮಾಯ ರಥೋತ್ಸವ’ವು ಮಹಾ ವೈಭವವಾಗಿ ಗಮನಸೆಳೆಯಿತು. ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು. ಯಜ್ಞ ಮಂಟಪದಲ್ಲಿ ನಡೆದ ಮಹಾ ಪೂರ್ಣಾಹುತಿ ಸಂದರ್ಭದಲ್ಲಿ ಧರ್ಮಿಕ ಪ್ರಮುಖರು ಯತಿಗಳು ಭಾಗಿಯಾದರು. ಸಂಜೆ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣವು ಅನನ್ಯ ಮಹೋತ್ಸವವಾಗಿ ಆಸ್ತಿಕರ ಗಮನಕೇಂದ್ರೀಕರಿಸಿತು. ಭಕ್ತರು ರಥ ಎಳೆದು ಪುನೀತರಾದರು. ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ.ಎ.ಶ್ರೀನಿವಾಸ್ ಕಾಮತ್, ಮಾರೂರ್ ಸುಧೀರ್ ಪೈ, ಪ್ರಕಾಶ್ ಕಾಮತ್, ಅನಂತ್ ಭಟ್, ಗಣೇಶ್ ಭಟ್, ದಕ್ಷಿಣ ಕನ್ನಡ…
ಹುಲಿ ಹಾಗೂ ಸಿಂಹದ ಮರಿಗೆ ಹಾಲು ಕುಡಿಸಿ ಗಮನಸೆಳೆದ ಮೋದಿ
ಅಹಮದಾಬಾದ್: ಗುಜರಾತ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಾಮ್‌ನಗರದಲ್ಲಿರುವ ವಂತಾರದಲ್ಲಿ ವನ್ಯಜೀವಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. Inaugurated Vantara, a unique wildlife conservation, rescue and rehabilitation initiative, which provides a safe haven for animals while promoting ecological sustainability and wildlife welfare. I commend Anant Ambani and his entire team for this very compassionate effort. pic.twitter.com/NeNjy5LnkO — Narendra Modi (@narendramodi) March 4, 2025 ಜಗತ್ತಿನ ವಿವಿಧೆಡೆ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸಿ ಸಲಹುವ ಪ್ರಾಣಿ ಸಂಗ್ರಹಾಲಯ ಇದಾಗಿದೆ. 2,000ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳು ವಂತಾರದ ವನ್ಯಜೀವಿ ಕೇಂದ್ರದಲ್ಲಿವೆ. ಈ ಪೈಕಿ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ರಕ್ಷಿಸಲ್ಪಟ್ಟವುಗಳಾಗಿವೆ. ಈ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದ ನರೇಂದ್ರ ಮೋದಿ, ಪ್ರಾಣಿಗಳೊಂದಿಗೆ…
ಬೊಜ್ಜಿನ ಬೆಳವಣಿಗೆಯಲ್ಲಿ ಮೆದುಳು ಹೀಗೆ ಪಾತ್ರ ವಹಿಸುತ್ತದೆ..!
ನವದೆಹಲಿ: ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಮೂಲದ ಬಗ್ಗೆ ಹಾಗೂ ನಿರ್ಣಾಯಕ ನಿಯಂತ್ರಣ ಕೇಂದ್ರವಾಗಿ ಮೆದುಳಿನ ಕಾರ್ಯದ ಬಗ್ಗೆ ಹೊಸ ಅಧ್ಯಯನವು ಕುತೂಹಲಕಾರಿ ಹೊಸ ಒಳನೋಟಗಳನ್ನು ನೀಡಿದೆ. ಬೊಜ್ಜಿನ ಬೆಳವಣಿಗೆಯಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನವರೆಗೂ, ಇನ್ಸುಲಿನ್ ನರಶೂಲೆ ಮತ್ತು ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ ಎಂದು ಸೂಚಿಸುವ ಹಲವಾರು ಚಿಹ್ನೆಗಳು ವಿಶೇಷವಾಗಿ ಮೆದುಳಿನಲ್ಲಿ ಕಂಡುಬಂದಿವೆ, ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ಟ್ಯೂಬಿಂಗೆನ್, ಜರ್ಮನ್ ಸೆಂಟರ್ ಫಾರ್ ಡಯಾಬಿಟಿಸ್ ರಿಸರ್ಚ್ (DZD) ಮತ್ತು ಹೆಲ್ಮ್‌ಹೋಲ್ಟ್ಜ್ ಮ್ಯೂನಿಚ್‌ನ ಇತ್ತೀಚಿನ ಅಧ್ಯಯನವು ಈ ಹೊಸ ಒಳನೋಟಗಳನ್ನು ನೀಡಿದೆ. ಅನಾರೋಗ್ಯಕರ ದೇಹದ ಕೊಬ್ಬಿನ ವಿತರಣೆ ಮತ್ತು ದೀರ್ಘಕಾಲದ ತೂಕ ಹೆಚ್ಚಳವು ಇನ್ಸುಲಿನ್‌ಗೆ ಮೆದುಳಿನ ಸೂಕ್ಷ್ಮತೆಗೆ ಸಂಬಂಧಿಸಿದೆ. ಮೆದುಳಿನಲ್ಲಿ ಇನ್ಸುಲಿನ್ ಯಾವ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತದೆ ಮತ್ತು ಅದು ಸಾಮಾನ್ಯ ತೂಕದ ವ್ಯಕ್ತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ…
“ರಾಜ್ಯದಲ್ಲಿ ಅಭಿವೃದ್ಧಿಯ ಪರ್ಸೆಂಟೇಜ್ ತಳಕಚ್ಚಿದೆ, ಕಾಮಗಾರಿಯ ಕಮಿಷನ್ ಪರ್ಸೆಂಟೇಜ್ ಮುಗಿಲುಮುಟ್ಟಿದೆ”
ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ಧಿಯ ಪರ್ಸೆಂಟೇಜ್ ತಳಕಚ್ಚಿದೆ, ಕಾಮಗಾರಿಯ ಕಮಿಷನ್ ಪರ್ಸೆಂಟೇಜ್ ಮುಗಿಲುಮುಟ್ಟಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಸರ್ಕಾರ ಎಂದು ಅಪಪ್ರಚಾರದ ಜಾಲ ವಿಸ್ತರಿಸಿ ಅಧಿಕಾರಕ್ಕೆ ಬಂದವರು ನೀವು. ನಿಮ್ಮ ಅವಧಿಯಲ್ಲಿ 80 % ಕಮಿಷನ್ ದಂಧೆ ನಡೆಯುತ್ತಿದೆ ಎಂದು ಸ್ವತಃ ಗುತ್ತಿಗೆದಾರರೇ ನಿಮ್ಮ ಮುಂದೆ ದೂರಿಕೊಂಡರೂ ಅದನ್ನು ಲಘುವಾಗಿ ಪರಿಗಣಿಸಿರುವ ನೀವು ಕಮಿಷನ್ ನೀವೇಕೆ ನೀಡುತ್ತೀರಿ? ಎಂದು ಗುತ್ತಿಗೆದಾರರನ್ನೇ ಬೆದರಿಸಿದ್ದೀರಿ. – ಬಿ.ವೈ.ವಿಜಯೇಂದ್ರ. ಖಾಲಿಯಾಗಿರುವ ಸರ್ಕಾರದ ಖಜಾನೆಯಲ್ಲಿ ಅಭಿವೃದ್ಧಿಗಾಗಿ ಬಳಸಲು ಬಿಡಿಗಾಸೂ ಇಲ್ಲ, ಇನ್ನು ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲು ಹಣವಿಲ್ಲದ ಪರಿಸ್ಥಿತಿ ಇರುವುದು ಅಸಲಿ ಸತ್ಯ,ಆದಾಗ್ಯೂ ಕಮಿಷನ್ ಪಾವತಿಸಿದರೆ ಮಾತ್ರ ಹೇಗಾದರೂ ಮಾಡಿ ಬಿಲ್ ಕೊಡಿಸುವುದಾಗಿ ಅಧಿಕಾರಿಗಳ ಮೂಲಕ ಸಂಕಷ್ಟಿತ ಗೊತ್ತಿಗೆದಾರರ ಬೆನ್ನು ಹತ್ತಲಾಗಿದೆ, ಇದನ್ನು ನೇರಾ ನೇರ ನಿಮ್ಮ ಮುಂದೆಯೇ ಗುತ್ತಿಗೆದಾರರು…
ಸಿಸಿಬಿ ಭರ್ಜರಿ ಬೇಟೆ: ಇಬ್ಬರು ಡ್ರಗ್ ಪೆಡ್ಲರ್’ಗಳ ಸೆರೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಡ್ರ್ಯಾಗ್ ಮಾಫಿಯಾವನ್ನು ಬೇಧಿಸಿದ್ದಾರೆ. ಮಾದಕದ್ರವ್ಯ ನಿಗ್ರಹದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಸೆರೆಹಿಡಿದಿದ್ದಾರೆ. ಬಂಧಿತರನ್ನು ನೈಜೀರಿಯಾ ಮೂಲದ ಎಸ್ಸೋ ಜರ್ಮನ್, ಜಾನ್ ಚುಕುವಾ ಎಂದು ಗುರುತಿಸಲಾಗಿದೆ. ಈ ಹಿಂದೆಯೂ ಕೂಡ ಡ್ರಗ್ ಮಾರಾಟ ಆರೋಪದಲ್ಲಿ ಈ ಆರೋಪಿಗಳು ಜೈಲು ಸೇರಿದ್ದರು. ಬಿಡುಗಡೆಯಾದ ನಂತರವೂ ದಂಧೆಯನ್ನು ಮುಂದುವರಿಸಿರುವ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಪೊಲೀಸರು ಈ ಆರೋಪಿಗಳ ಬಗ್ಗೆ ನಿಗಾ ವಹಿಸಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲೇ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನುಸೆರೆಹಿಡಿದಿದ್ದಾರೆ. ಆರೋಪಿಗಳಿಂದ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 108 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
