‘ಶಕ್ತಿ’ ಗ್ಯಾರೆಂಟಿಯಷ್ಟೇ ಅಲ್ಲ, 2,000 ಹೊಸ ಬಸ್‌ಗಳ ಮೂಲಕ KSRTCಗೆ ಮತ್ತಷ್ಟು ಶಕ್ತಿ; ‘ನುಡಿದಂತೆ ನಡೆದ ಸಿಎಂ’ ಎಂದ ರಾಮಲಿಂಗ ರೆಡ್ಡಿ

ಬೆಂಗಳೂರು: ಶಕ್ತಿ ಯೋಜನೆ ಎಂಬುದು ಮಹಿಳಾ ಸಬಲೀಕರಣದೆಡೆಗಿನ ನಮ್ಮ ಸರ್ಕಾರದ ದಿಟ್ಟ ಹೆಜ್ಜೆಯಾಗಿದ್ದು, 2,000 ಹೊಸ ಬಸ್‌ಗಳ ಖರೀದಿ ಗೆ ಸರ್ಕಾರದ ಅನುಮತಿ ಸಿಕ್ಕಿದೆ. ಜೊತೆಗೆ ಸರ್ಕಾರದಿಂದ ಅನುದಾನ ಸಿಕ್ಕಿದ್ದು ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಣ್ಣಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ದಿನನಿತ್ಯ ಪ್ರಯಾಣಿಸುವವರ ಸಂಖ್ಯೆ ಲಕ್ಷಗಳಿಂದ ಕೋಟಿಗೆ ದಾಟಿದೆ. ಹಿಂದಿನ ಸರ್ಕಾರದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿರಲಿಲ್ಲ. ಹೊಸ ನೇಮಕಾತಿ ಕೂಡ ಸ್ಥಗಿತಗೊಂಡಿದ್ದರಿಂದ ಸಾರಿಗೆ ಸಂಸ್ಥೆಗಳು ತತ್ತರಿಸಿ ಹೋಗಿದ್ದ ಆ ಸಮಯದಲ್ಲಿ, ಶಕ್ತಿ ಯೋಜನೆ ಅನುಷ್ಠಾನ ಸುಲಭದ ಮಾತಾಗಿರಲಿಲ್ಲ, ನಿಜಕ್ಕೂ ಸವಾಲಾಗಿತ್ತು. ಆ ಸಮಯದಲ್ಲಿ ನಮ್ಮ ಸರ್ಕಾರವು 5800 ಹೊಸ ಬಸ್ಸುಗಳ ಸೇರ್ಪಡೆಗೆ ಹಾಗೂ 9000 ಹೊಸ ನೇಮಕಾತಿಗೆ ಅನುಮತಿ ಮತ್ತು 1000 ಅನುಕಂಪದ ಆಧಾರದ ನೇಮಕಾತಿಗಳು, ಈ ಸವಾಲನ್ನು…

ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ಪದಗ್ರಹಣ

ತಿರುವನಂತಪುರಂ: ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಧಿಕಾರ ಸ್ವೀಕರಿಸಿದ್ದಾರೆ. ಸೋಮವಾರ ನಡೆದ ಸಮಾರಂಭದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. Historic moment! Shri Rajeev Chandrashekhar ji took charge as the new state president of @BJP4Keralam. A new era of politics of development begins! Under the leadership of @NarendraModi ji and @RajeevRC_X ji, BJP is poised to write new chapters in shaping Kerala’s future. pic.twitter.com/NleURsEbln — Anoop Antony Joseph (@AnoopKaippalli) March 24, 2025 ತಿರುವನಂತಪುರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಕೇಂದ್ರ ವೀಕ್ಷಕರಾದ ಪ್ರಹ್ಲಾದ್ ಜೋಶಿ ಅವರು ರಾಜೀವ್‌ ಚಂದ್ರಶೇಖರ್‌ ಆಯ್ಕೆಯನ್ನು ಪ್ರಕಟಿಸಿದರು. ರಾಜೀವ್ ಚಂದ್ರಶೇಖರ್ ಅವರೊಬ್ಬರೇ ಭಾನುವಾರ ನಾಮಪತ್ರ ಸಲ್ಲಿಸಿದ್ದು…

ಹನಿಟ್ರ್ಯಾಪ್ ಬೆನ್ನಲೇ ಇದೀಗ ಫೋನ್ ಕದ್ದಾಲಿಕೆಯ ಗುಮ್ಮಾ..! ರಾಜ್ಯ ರಾಜಕಾರಣದಲ್ಲಿ ಸಂಚಲನ

ಬೆಂಗಳೂರು: ಹನಿಟ್ರ್ಯಾಪ್‌‌ ಅವಾಂತರದ ಬೆನ್ನಲ್ಲೇ ಇದೀಗ ರಾಜ್ಯ ರಾಜಕಾರಣವನ್ನು ಫೋನ್ ಕದ್ದಾಲಿಕೆ ಗುಮ್ಮಾ ಕಾಡತೊಡಗಿದೆ. ಸರ್ಕಾರ ಪ್ರಮುಖ ನಾಯಕರ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು‌. ಸಚಿವ ರಾಜಣ್ಣ ಹಾಗೂ ಅವರ ಮಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮತಿ ಪಡೆದು ಹನಿಟ್ರ್ಯಾಪ್‌ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಇದರ ಸೂತ್ರದಾರರು ಯಾರೆಂದು ತಿಳಿದುಬಂದಿದೆ. ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆಯವರೇ ಬಂದು ಚರ್ಚೆ ನಡೆಸುವ ಸ್ಥಿತಿ ಬಂದಿದೆ. ಇಲ್ಲಿ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ ಎಂದರು. ಸರ್ಕಾರ ಪ್ರಮುಖ ನಾಯಕರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ಇದನ್ನು ಹೇಳಿದ್ದಾರೆ. ವಿರೋಧಿಗಳನ್ನು ಬಗ್ಗು ಬಡಿಯಬೇಕೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ. ಇದರಲ್ಲಿ ಅನುಮಾನವೇ ಬೇಡ ಎಂದವರು ಹೇಳಿದರು.

ಮುಸ್ಲಿಂ ಮೀಸಲಾತಿಯನ್ನು ಬಾಬಾ ಸಾಹೇಬ್‌ ಅಂಬೇಡ್ಕರರೇ ವಿರೋಧಿಸಿದ್ದರು: ಆರ್‌.ಅಶೋಕ*

ಬೆಂಗಳೂರು: ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಪ್ರತಿಭಟನೆ ಮಾಡಿರುವುದಕ್ಕೆ ಶಾಸಕರನ್ನೇ ಅಮಾನತು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಪುಸ್ತಕದಲ್ಲಿ ಬಹಳ ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಹೊಗಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ ಮುಂದೆ ಇಡಲಿದ್ದೇವೆ. ಜನರ ನ್ಯಾಯಾಲಯದಲ್ಲಿ ಸರ್ಕಾರದ ಬಗ್ಗೆ ಜನರೇ ತೀರ್ಮಾನ ಮಾಡಲಿದ್ದಾರೆ ಎಂದರು. ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ ವೀಲ್‌ ಚೇರ್‌ನಲ್ಲಿದ್ದರೆ, ಸರ್ಕಾರ ಇನ್ನೂ ತೆವಳುತ್ತಿದೆ. 18 ಶಾಸಕರನ್ನು ಸ್ಪೀಕರ್‌ ಯು.ಟಿ.ಖಾದರ್‌ ಅಮಾನತು ಮಾಡಿದ್ದಾರೆ. ಮಾನಗೇಡಿ ಕಾಂಗ್ರೆಸ್‌ನವರು ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಎಸ್‌.ಎಲ್‌.ಧರ್ಮೇಗೌಡ…

ಹನಿಟ್ರ್ಯಾಪ್ ವಿಷಯದಲ್ಲಿ ಬಿಜೆಪಿ ರಾಜಕೀಯ : ಸಚಿವ ಶರಣಪ್ರಕಾಶ

ಯಾದಗಿರಿ:: ಹನಿಟ್ರ್ಯಾಪ್ ಪ್ರಕರಣವನ್ನು ವಿಚಾರಣೆ ಮಾಡ್ತೀವಿ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಬಿಜೆಪಿಯವ್ರು ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ರಾಜ್ಯದಲ್ಲಿ ಜನಪ್ರತಿನಿಧಿಗಳ ಮೇಲೆ ಹನಿಟ್ರ್ಯಾಪ್ ವಿಚಾರವಾಗಿ ಯಾದಗಿರಿ‌ ಜಿಲ್ಲೆಯ ಮಹಲ್ ರೋಜಾದಲ್ಲಿ ವೈದ್ಯಕೀ‌ಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ‌ ನೀಡಿದರು. ಹನಿಟ್ರ್ಯಾಪ್ ಆಗಿದೆ, ಹೇಗೆ, ಏನು ಎನ್ನುವುದು ಎಲ್ಲಾ ವಿಚಾರ ತನಿಖೆ ಆದ್ಮೇಲೆ ಗೊತ್ತಾಗುತ್ತದೆ. ಯಾರ್ಯಾರು ಸಚಿವರು, ಶಾಸಕರು ಅವರವರ ವಿಡಿಯೋ ರಿಲೀಸ್ ಆಗಬಾರದು ಎಂದು ಹೈಕೋರ್ಟ್ ಸ್ಟೇ ತಂದಿದ್ದಾರೆ ಅವರಿಗೆ ಕೇಳಬೇಕು ಎಂದರು. ಬಿಜೆಪಿಯವರಿಗೆ ಸಿಬಿಐ ತನಿಖೆ ಮುಕ್ತ ಅವಕಾಶವಿತ್ತು, ಆದರೆ ಅವರ ಅವಧಿಯಲ್ಲಿ ಯಾವುದೇ ತನಿಖೆ ಆಗಿಲ್ಲ, ಯಾವುದನ್ನೂ ಸಿಬಿಐ ತನಿಖೆಗೆ ಕೊಟ್ಟಿಲ್ಲ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ…

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ಇಂಗಿತ

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಬೆಳಿಗ್ಗೆಯಷ್ಟೇ ಹುದ್ದೆ ತೊರೆಯುವ ಬಗ್ಗೆ ಹೊರಟ್ಟಿ ಮಾತನಾಡಿದ್ದರು. ಆ ಸುದ್ದಿಗೋಷ್ಠಿಯ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿದೆ‌. ಈ ನಡುವೆ ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್​ ಅವರಿಗೆ ಬಸವರಾಜ ಹೊರಟ್ಟಿಯವರು ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಭಾಪತಿ ಹೊರಟ್ಟಿ, ತಾವು ರಾಜೀನಾಮೆ ಪತ್ರ ಸಿದ್ದಪಡಿಸಿದ್ದೇನೆಯೇ ಹೊರತು ಅಧಿಕೃತವಾಗಿ ನೀಡಿಲ್ಲ ಎಂದಿದ್ದಾರೆ. ತಮ್ಮ ಕಚೇರಿ ಸಿಬ್ಬಂದಿಯಿಂದ ಸಹಿ ಇಲ್ಲದ ಪತ್ರ ಸೋರಿಕೆಯಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣರ ‘ಸಿಕಂದರ್’ ಬಗ್ಗೆಯೇ ಕೌತುಕ..

ಬಾಲಿವುಡ್ ನಟ ನಟ ಸಲ್ಮಾನ್ ಖಾನ್ ಅವರ ಆ್ಯಕ್ಷನ್ ಡ್ರಾಮಾ ‘ಸಿಕಂದರ್’ ಸಿನಿಮಾ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.   ಈ ಸಿನಿಮಾ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಸಲ್ಮಾನ್ ಖಾನ್, ತಮ್ಮ ‘ಸಿಕಂದರ್ ಚಿತ್ರ’ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.   View this post on Instagram   A post shared by Salman Khan (@beingsalmankhan)

ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಐವರ ಬಂಧನ ಬೆನ್ನಲ್ಲೇ ಪ್ರಮೋದ್ ಮಧ್ವರಾಜ್ ವಿರುದ್ಧ ಕೇಸ್

ಉಡುಪಿ: ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿರುವ ಬೆನ್ನಲ್ಲೀ ಇದೀಗ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೀನುಗಾರರ ಬಂಧನ ವಿರೋಧಿಸಿ ಶನಿವಾರ ಮಲ್ಪೆ ಮೀನುಗಾರರ ಸಂಘಟನೆಗಳು ಮಲ್ಪೆ ಬಂದರಿನಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯನ್ನು ಕಟ್ಟಿಹಾಕಿ ಎರಡು ಏಟು ಕೊಟ್ಟದ್ದನ್ನು ಸಮರ್ಥಿಸಿಕೊಂಡಿದ್ದ ಪ್ರಮೋದ್ ಮಧ್ವರಾಜ್, ಕಳ್ಳರನ್ನು ಕಟ್ಟಿ ಹಾಕದೆ ಇನ್ನೇನು ಮಾಡಲು ಸಾಧ್ಯ? ಎಂದು ಪ್ರತಿಭಟನೆಯಲ್ಲಿ ಹೇಳಿದ್ದಾರೆ ಎನ್ನಲಾಗಿದ್ದು, ಈ ಹೇಳಿಕೆ ಹಿನ್ನೆಲೆಯಲ್ಲಿಮಲ್ಪೆ ಠಾಣೆ ಪೊಲೀಸರು ಸ್ವಯಂಪ್ರೇರಿತ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೈಪ್ 2 ಮಧುಮೇಹ.. ಬೊಜ್ಜು ಸಂಬಂಧಿತ ಕೆಲವು ಕ್ಯಾನ್ಸರ್‌ಗಳೂ.. ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆ

ಲಂಡನ್: ಟೈಪ್ 2 ಮಧುಮೇಹದ (T2D) ಹೊಸ ರೋಗನಿರ್ಣಯವು ಕೆಲವು ಬೊಜ್ಜು ಸಂಬಂಧಿತ ಕ್ಯಾನ್ಸರ್‌ಗಳನ್ನು ಉಲ್ಬಣಗೊಳಿಸುವ ಅಪಾಯವಿದೆ ಎಂಬುದನ್ನು ಹೊಸ ಸಂಶೋಧನೆ ತೆರೆದಿಟ್ಟಿದೆ. ಟೈಪ್ 2 ಮಧುಮೇಹ ಮೆಲ್ಲಿಟಸ್ ಮತ್ತು ಹಲವಾರು ಬೊಜ್ಜು-ಸಂಬಂಧಿತ ಕ್ಯಾನ್ಸರ್‌ಗಳ ಹೆಚ್ಚಿನ ಅಪಾಯದ ನಡುವಿನ ಸಂಬಂಧಗಳತ್ತ ಸಂಶೋಧನೆ ಬೆಳಕುಚೆಲ್ಲಿದೆ. ಬೊಜ್ಜಿನ ಪರಸ್ಪರ ಅಪಾಯಕಾರಿ ಅಂಶ, ಅನೇಕ ಅಧ್ಯಯನಗಳು ಪ್ರಚಲಿತ ಮತ್ತು ಹೊಸದಾಗಿ ಪ್ರಾರಂಭವಾಗುವ T2D ಅನ್ನು ಸಂಯೋಜಿಸುವ, ಸಮಯ ಪತ್ತೆ ಪಕ್ಷಪಾತ (ಉದಾಹರಣೆಗೆ, ಒಂದೇ ಸಮಯದಲ್ಲಿ ಎರಡು ಸಾಮಾನ್ಯ ಪರಿಸ್ಥಿತಿಗಳ ಸಹ-ರೋಗನಿರ್ಣಯ) ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅತಿಯಾದ ಅಪಾಯ ಸಾಧ್ಯತೆಗಳತ್ತ ಈ ಸಂಶೋಧನೆ ಬೆಳಕುಚೆಲ್ಲಿದೆ. ಯುರೋಪಿಯನ್ ಬೊಜ್ಜು ಕಾಂಗ್ರೆಸ್ (ECO 2025, ಮಲಗಾ, ಸ್ಪೇನ್, ಮೇ 11-14) ನಲ್ಲಿ ಪ್ರಸ್ತುತಪಡಿಸಲಾದ ಈ ಅಧ್ಯಯನದಲ್ಲಿ ತಜ್ಞರು ದೋಷಗಳನ್ನು ಪರಿಹರಿಸುವಬಗ್ಗೆಯೂ ಗಮನಸೆಳೆದಿದ್ದಾರೆ. ಅವರು ಯುಕೆ ಬಯೋಬ್ಯಾಂಕ್‌ನಲ್ಲಿ ಹೊಸದಾಗಿ ಪ್ರಾರಂಭವಾದ T2D (ಮೊದಲು ವರದಿಯಾದ ಇನ್ಸುಲಿನ್…

ಮುಸ್ಲಿಮರ ಟೆಂಡರ್ ಮೀಸಲಾತಿ ಹೋರಾಟ: ದೋಸ್ತಿಗಳು ದೂರ ದೂರ?

ಬೆಂಗಳೂರು: ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಿರ್ಧರಿಸಿದೆ. ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರುದ್ಧದ ಬಿಜೆಪಿ ಹೋರಾಟದಲ್ಲಿ ಕೈಜೋಡಿಸುವುದಿಲ್ಲ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ಗಹನವಾದ ಚರ್ಚೆ ನಡೆದಿದೆ. ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರೋಧಿಸಿ ಬಿಜೆಪಿ ನಡೆಸುವ ಹೋರಾಟದಲ್ಲಿ ಭಾಗವಹಿಸಬಾರದೆಂಬ ಅಭಿಪ್ರಾಯ ಜೆಡಿಎಸ್ ನಾಯಕರಿಂದ ವ್ಯಕ್ತವಾಗಿದೆ ಎನ್ನಲಾಗಿದೆ. ಬಿಜೆಪಿ ಜೊತೆಗೆ ರಾಜಕೀಯ ಮೈತ್ರಿ ಮಾಡಿಕೊಂಡರೂ ಸಿದ್ಧಾಂತ ಮತ್ತು ತತ್ವಗಳಲ್ಲಿ ತಮ್ಮ ಪಕ್ಷ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂದೇಶ ಸಾರಿರುವ ಜೆಡಿಎಸ್ ನಾಯಕರು, ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರವು ಸೈದ್ದಂತಿಕ ಹೋರಾಟವಾಗಿದ್ದು ಅದರಿಂದ ದೂರ ಉಳಿಯುವ ಬಗ್ಗೆ ಅನೇಕರು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ. ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳ…