ನವದೆಹಲಿ: ಆಕ್ರಮಣಶೀಲವಲ್ಲದ ಮೂತ್ರಕೋಶ ಒತ್ತಡ ಪರೀಕ್ಷೆಗಳು ಆಕ್ರಮಣಕಾರಿ ಮೌಲ್ಯಮಾಪನಗಳಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಸ್ಕಾಟ್ಲೆಂಡ್‌ನ ಅಬರ್ಡೀನ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು, ನಿರಂತರ ಮೂತ್ರ ಅಸಂಯಮ ಅಥವಾ ಅತಿಯಾದ ಮೂತ್ರಕೋಶ ಹೊಂದಿರುವ ಮಹಿಳೆಯರು, ಮುಖ್ಯವಾಗಿ ಮೂತ್ರ ವಿಸರ್ಜಿಸಲು ಹಠಾತ್ ತುರ್ತುಸ್ಥಿತಿಯಿಂದ ನಿರೂಪಿಸಲ್ಪಟ್ಟವರು, ಆಕ್ರಮಣಕಾರಿ ಮೂತ್ರಕೋಶ ಒತ್ತಡ ಪರೀಕ್ಷೆಗಳನ್ನು ತಪ್ಪಿಸಬಹುದು ಎಂದು ಸೂಚಿಸುತ್ತದೆ ಎಂಬುದನ್ನು ಅನಾವರಣ ಮಾಡಿದೆ. ಆಕ್ರಮಣಕಾರಿ ಯುರೊಡೈನಾಮಿಕ್ಸ್ ಪರೀಕ್ಷೆ – ಸಾಮಾನ್ಯವಾಗಿ 40 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಅಭ್ಯಾಸದಲ್ಲಿ ಬಳಸಲ್ಪಡುತ್ತಿದೆ – ಮೂತ್ರಕೋಶವು ಮೂತ್ರವನ್ನು ಎಷ್ಟು ಚೆನ್ನಾಗಿ ಸಂಗ್ರಹಿಸುತ್ತದೆ ಮತ್ತು ಬಿಡುಗಡೆ ಮಾಡುತ್ತದೆ ಮತ್ತು ಅನೇಕರಿಗೆ ಅನಾನುಕೂಲ ಪರೀಕ್ಷೆಯಾಗಿರಬಹುದು. ಪರೀಕ್ಷೆಗಳು ಮೂತ್ರಕೋಶಕ್ಕೆ ಸೇರಿಸಲಾದ ಕ್ಯಾತಿಟರ್ ಮೂಲಕ ಮೂತ್ರಕೋಶವನ್ನು ನೀರಿನಿಂದ ತುಂಬಿಸುವುದನ್ನು ಒಳಗೊಂಡಿವೆ. ಮೂತ್ರಕೋಶ ಮತ್ತು ಹೊಟ್ಟೆಯೊಳಗಿನ ಒತ್ತಡವನ್ನು ಅಳೆಯಲು ಯೋನಿ ಅಥವಾ ಗುದನಾಳಕ್ಕೆ ಮತ್ತೊಂದು ಕ್ಯಾತಿಟರ್ ಅನ್ನು ಸೇರಿಸಲಾಗುತ್ತದೆ. ಮತ್ತೊಂದೆಡೆ,…
Month: March 2025
ಕೊಲೆಸ್ಟ್ರಾಲ್ ವಿಚಾರ: ಕಾಫಿ ಯಂತ್ರವೂ ನಿಮಗೆ ಸಂಚಕಾರ ತರಬಲ್ಲದು..!
ನವದೆಹಲಿ: ಕಾಫಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಕಾಫಿ ತಯಾರಿಸುವ ಯಂತ್ರವು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಈ ಆತಂಕಕಾರಿ ವಿಷಯಗಳ ಬಗ್ಗೆ ಸಂಶೋಧನೆಯೊಂದು ಬೆಳಕುಚೆಲ್ಲಿದೆ. ಉಪ್ಸಲಾ ವಿಶ್ವವಿದ್ಯಾಲಯ ಮತ್ತು ಸ್ವೀಡನ್‌ನ ಚಾಲ್ಮರ್ಸ್ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು ಕೆಲಸದ ಸ್ಥಳದಲ್ಲಿ ಸ್ವಯಂಚಾಲಿತ ಕಾಫಿ ತಯಾರಿಸುವ ಯಂತ್ರಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಡೈಟರ್ಪೀನ್‌ಗಳು ಎಂದು ಕರೆಯಲ್ಪಡುವ ನೈಸರ್ಗಿಕ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂಬುದನ್ನು ಪತ್ತೆ ಮಾಡಿದೆ. ಹೆಚ್ಚು ಕೊಲೆಸ್ಟ್ರಾಲ್ ಮಟ್ಟಗಳು ಹೃದಯರಕ್ತನಾಳದ ಕಾಯಿಲೆಗಳಿಗೆ ಸ್ಥಾಪಿತ ಅಪಾಯಕಾರಿ ಅಂಶವಾಗಿದೆ. ನ್ಯೂಟ್ರಿಷನ್, ಮೆಟಾಬಾಲಿಸಮ್ ಮತ್ತು ಕಾರ್ಡಿಯೋವಾಸ್ಕುಲರ್ ಡಿಸೀಸಸ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ, ಸ್ವೀಡಿಷ್ ಆರೋಗ್ಯ ಸೌಲಭ್ಯಗಳಲ್ಲಿರುವ 14 ಯಂತ್ರಗಳಿಂದ ಪರೀಕ್ಷಿಸಲಾದ ಕಾಫಿಯಲ್ಲಿ ಕೆಫೆಸ್ಟಾಲ್ ಮತ್ತು ಕಹ್ವಿಯೋಲ್ ಗಮನಾರ್ಹವಾಗಿ ಹೆಚ್ಚಿನ ಮಟ್ಟವನ್ನು ಕಂಡುಕೊಂಡಿರುವ ವಿಷಯಗಳತ್ತ ಕೇಂದ್ರೀಕೃತವಾಗಿದೆ. ಕೆಫೆಸ್ಟಾಲ್ ಮತ್ತು ಕಹ್ವಿಯೋಲ್ ಕಾಫಿ-ನಿರ್ದಿಷ್ಟ ಡೈಟರ್ಪೀನ್‌ಗಳಾಗಿವೆ – ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ…
ಭಾರೀ ಮಳೆ; ಬೆಂಗಳೂರಿನಲ್ಲಿ ಅವಾಂತರ, ಮರದ ಕೊಂಬೆ ಬಿದ್ದು ಮಗು ಸಾವು
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಂತೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಈ ನಡುವೆ, ಮಳೆ ಸಂದರ್ಭದಲ್ಲೇ, ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಮೂರು ವರ್ಷದ ಹೆಣ್ಣುಮಗು ಸಾವನ್ನಪ್ಪಿ ಘಟನೆ ಮನಕಲಕುವಂತಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ. ಗಾಳಿ ಮಳೆಗೆ ರಸ್ತೆ ಬದಿ ಮರ ಬೈಕ್ ಮೇಲೆ ಬಿದ್ದಿದೆ. ಬೈಕ್ ನಲ್ಲಿತಂದೆ ಜೊತೆ ತೆರಳುತ್ತಿದ್ದ ರಕ್ಷಾ ಎಂಬ ಮಗುವೀಣೆ ತಲೆ ಮೇಲೆಯೇ ಮರದ ತುಂಡು ಬಿದ್ದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದಾಗಿ ಬದುಕುಳಿಯಲಿಲ್ಲ.
ಸದನದಲ್ಲಿ ಗಲಭೆಗೆ ಪ್ರಚೋದಿಸಿದರೇ ಅಶೋಕ್? ಸ್ಪೀಕರ್’ಗೆ ಕಾಂಗ್ರೆಸ್ ದೂರು, ವಿಪಕ್ಷ ನಾಯಕರ ಅಮಾನತಿಗೆ ಆಗ್ರಹ
ಬೆಂಗಳೂರು: ವಿಧಾನಸಭೆಯಲ್ಲಿ ಸದನಕ್ಕೆ ಅಗೌರವ ತೋರಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆಯಾದರೂ ಆ ಅಶಿಸ್ತಿಗೆ ಪ್ರಚೋದನೆ ನೀಡಿರುವ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಗಮನಸೆಳೆದಿದೆ. ಈ ಕುರಿತಂತೆ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸ್ಪೀಕರ್ ಯು.ಟಿ.ಖದರ್ ಅವರಿಗೆ ನೀಡಿದ್ದಾರೆ. ಸಂಸದೀಯ ವಿಶ್ಲೇಷಕರೂ, ವಕೀಲರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಅವರು ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ ಸದನವು ಅಂಗೀಕರಿಸಿದ ಪ್ರಸ್ತಾವದ ಲೋಪ ಕುರಿತು ಸ್ಪೀಕರ್ ಅವರ ಗಮನಸೆಳೆದಿದ್ದಾರೆ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ 21-03-2025 ರಂದು ಸದನದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್…
2026ರ ತಮಿಳುನಾಡು ಚುನಾವಣೆಗೆ ಕಮಲ್ ಹಾಸನ್ ತಯಾರಿ: MNMಗೆ ಹೊಸ ಪದಾಧಿಕಾರಿಗಳ ನೇಮಕ
ಚೆನ್ನೈ: ತಮಿಳು ಸೂಪರ್‌ಸ್ಟಾರ್ ಮತ್ತು ಮಕ್ಕಳ್ ನೀಧಿ ಮೈಯಂ (MNM) ಅಧ್ಯಕ್ಷ ಕಮಲ್ ಹಾಸನ್ ಅವರು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳ ಭಾಗವಾಗಿ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಡಿಎಂಕೆ ನೇತೃತ್ವದ ಪಕ್ಷದೊಂದಿಗೆ ಕೈಜೋಡಿಸಿದ ಕಮಲ್ ಹಾಸನ್, ನಾಲ್ಕು ರಾಜ್ಯ ಕಾರ್ಯದರ್ಶಿಗಳು ಮತ್ತು ಎಂಟು ಜಿಲ್ಲಾ ಕಾರ್ಯದರ್ಶಿಗಳನ್ನು ಒಳಗೊಂಡ 13 ಹೊಸ ಪದಾಧಿಕಾರಿಗಳ ತಂಡವನ್ನು ಅನಾವರಣಗೊಳಿಸಿದರು. ಶನಿವಾರ ಎಂಎನ್‌ಎಂನ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸಭೆ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ. ಸಭೆಯಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಹಾಸನ್, ತ್ವರಿತ ಸದಸ್ಯತ್ವ ಡ್ರೈವ್‌ಗಳು, ರಾಜಕೀಯ ಸಂಪರ್ಕ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಪಕ್ಷದ ತಳಮಟ್ಟದ ಉಪಸ್ಥಿತಿಯನ್ನು ಬಲಪಡಿಸುವ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು. ‘ಇದು ನಿರ್ಣಾಯಕ ಕ್ಷಣ. ಅರ್ಥಪೂರ್ಣ ಪರಿಣಾಮ ಬೀರಲು ನಮ್ಮ ಪ್ರಯತ್ನಗಳು ಹಲವು ಪಟ್ಟು ಹೆಚ್ಚಾಗಬೇಕು ಎಂಬುದನ್ನು…
ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ
ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಭಾಷಿಗರಿಂದ ಕನ್ನಡಿಗರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬಂದ್ ಕರೆ ಬೆಂಬಲಿಸಿ ಹಲವಾರು ಅಂಗಡಿ-ಮುಂಗಟ್ಟುಗಳು ಮುಚ್ಚಿವೆ ಆದರೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಕಡೆ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. #WATCH | Karnataka: Several pro-Kannada groups have called a bandh in the state today from 6 am to 6 pm, in protest against the alleged assault on a bus conductor in Belagavi for not speaking Marathi. Visuals from Kalaburagi, where Police personnel have been deployed as a… pic.twitter.com/atR3C3pPxw — ANI (@ANI) March 22,…
ನಾವು ಹಲೋ ಅಂದ್ರೆ ಅವರು ಹಲೋ ಅಂತಾರೆ; ಹನಿಟ್ರ್ಯಾಪ್‌ಗೆ ಒಳಗಾದವರು ಮೂರ್ಖರು!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಕೋಲಾಹಲ ಸೃಷ್ಟಿಸಿದೆ. ಸುಮಾರು 48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರೆ, ಇನ್ನೊಂದೆಡೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ರಾಜ್ಯದಲ್ಲಿ ಕನಿಷ್ಠ 400 ಜನರನ್ನು ಹನಿಟ್ರ್ಯಾಪ್‌ಗೆ ಬಲಿ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ನಾಯಕರಿಂದ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಈ ವಿಚಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಯಕರು ಆಗ್ರಹಿಸಿದ್ದಾರೆ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಇದೇ ವೇಳೆ, ಹನಿಟ್ರ್ಯಾಪ್’ಗೆ ಒಳಗಾಗುವರ ವೀಕ್ನೆಸ್ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕೂಡಾ ಗಮನಸೆಳೆದಿದೆ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಹನಿಟ್ರ್ಯಾಪ್ ಸುಮ್ಮನೆ ಆಗುತ್ತಾ? ನಾವು ಹಲೋ ಅಂದ್ರೆ ಅವರು ಹಲೋ ಅಂತಾರೆ, ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ ಎಂದು ಹೇಳುವ…
ಬರೋಬ್ಬರಿ 400 ಜನರನ್ನು ಹನಿಟ್ರ್ಯಾಪ್? ಸಚಿವರ ಸ್ಫೋಟಕ ಹೇಳಿಕೆ
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಕೋಲಾಹಲ ಸೃಷ್ಟಿಸಿದೆ. ಸುಮಾರು 48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರೆ, ಇನ್ನೊಂದೆಡೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕನಿಷ್ಠ 400 ಜನರನ್ನು ಹನಿಟ್ರ್ಯಾಪ್‌ಗೆ ಬಲಿ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಹನಿಟ್ರ್ಯಾಪ್ ಕೋಲಾಹಲ ಕುರಿತಂತೆ ಆರಂಭದಿಂದಲೂ ಆಕ್ರೋಶ ಹೊರಹಾಕುತ್ತಿದ್ದ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಮತ್ತು ಅಧಿಕಾರಿಗಳನ್ನು ಕೂಡ ಹನಿಟ್ರ್ಯಾಪ್‌ಗೆ ಬಲಿ ಮಾಡಲಾಗಿದೆ. ಎಲ್ಲಾ ಪಕ್ಷಗಳ ನಾಯಕರನ್ನು ಇದರಲ್ಲಿ ಸಿಲುಕಿಸಲಾಗಿದೆ ಎಂದು ಗಮನಸೆಳೆದಿದ್ದಾರೆ. ಹನಿಟ್ರ್ಯಾಪ್ ಮಾಡಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿರುವ ನಿದರ್ಶನಗಳು ಈ ಹಿಂದೆಯೂ ನಡೆದಿವೆ.ಕಳೆದ 20 ವರ್ಷಗಳಿಂದಲೂ ಹನಿಟ್ರ್ಯಾಪ್ ಆಗಿವೆ. ಈ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರೌ ಪ್ರತಿಪಾದಿಸಿದ್ದಾರೆ.
ಬಿಜೆಪಿಯ 18 ಶಾಸಕರ ಅಮಾನತು: ಇದು ಪ್ರಜಾತಂತ್ರ ವ್ಯವಸ್ಥೆಯ ದಮನ ಎಂದ ಬಿವೈವಿ
ಬೆಂಗಳೂರು: ವಿಧಾನ ಸಭೆಯಲ್ಲಿ ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತ್ತು ಗೊಳಿಸಿರುವ ಸಭಾಧ್ಯಕ್ಷರ ನಿರ್ಧಾರ ಏಕಪಕ್ಷೀಯ ಹಾಗೂ ಪ್ರಜಾತಂತ್ರ ವ್ಯವಸ್ಥೆಯನ್ನು ದಮನ ಮಾಡುವ ಮನಸ್ಥಿತಿಯನ್ನು ಪ್ರತಿಬಿಂಬಿಸಿದ ಕ್ರಮವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನ ಸಭೆಯಲ್ಲಿ ನಮ್ಮ ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತ್ತು ಗೊಳಿಸಿರುವ ಸಭಾಧ್ಯಕ್ಷರ ನಿರ್ಧಾರ ಏಕಪಕ್ಷೀಯ ಹಾಗೂ ಪ್ರಜಾತಂತ್ರ ವ್ಯವಸ್ಥೆಯನ್ನು ದಮನ ಮಾಡುವ ಮನಸ್ಥಿತಿಯನ್ನು ಪ್ರತಿಬಿಂಬಿಸಿದ ಕ್ರಮವಾಗಿದೆ, ಆಡಳಿತ ಪಕ್ಷದ ಜನವಿರೋಧಿ ನಿಲುವುಗಳನ್ನು ವಿರೋಧ ಪಕ್ಷವಾಗಿ ಪ್ರಶ್ನಿಸಿ, ಹೋರಾಡುವುದು ಸದಸ್ಯರ ಹಕ್ಕು, ಸಭಾಧ್ಯಕ್ಷ… https://t.co/uWGNuoxoTE — Vijayendra Yediyurappa (@BYVijayendra) March 21, 2025 ಆಡಳಿತ ಪಕ್ಷದ ಜನವಿರೋಧಿ ನಿಲುವುಗಳನ್ನು ವಿರೋಧ ಪಕ್ಷವಾಗಿ ಪ್ರಶ್ನಿಸಿ, ಹೋರಾಡುವುದು ಸದಸ್ಯರ ಹಕ್ಕು, ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತ ಮಾನ್ಯ… ರವರು ಅದನ್ನು ಕಸಿಯುವ ಪಕ್ಷಪಾತಿ ನಿಲುವು ತಳೆದದ್ದು ಕಾಂಗ್ರೆಸ್ನ ತುಘಲಕ್ ಸರ್ಕಾರದ ತಾಳಕ್ಕೆ ತಕ್ಕಂತೆ…
ಮೈಸೂರು ಪೊಲೀಸ್ ಮೇಲೆ ದಾಳಿ; ದರೋಡೆ ಆರೋಪಿಗೆ ಗುಂಡೇಟು
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ದರೋಡೆ ಆರೋಪಿಯ ಮೇಲೆ ಗುಂಡಿನ ದಾಳಿ ನಡೆದಿದೆ. ದರೋಡೆ ಪ್ರಕರಣದ ಆರೋಪಿ ಕೇರಳ ಮೂಲದ ಆರೋಪಿ ಆದರ್ಶ್ ಎಂಬಾತ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ತಾನು ಗಾಯಗೊಂಡರೂ ಕರ್ತವ್ಯಪ್ರಜ್ಞೆ ಮೆರೆದಿರುವ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಮಹಜರ್ ವೇಳೆ ಶುಕ್ರವಾರ ರಾತ್ರಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆ ವೇಳೆ ಪೊಲೀಸರು ಗುಂಡು ಹಾರಿಸಿದ್ದು, ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಬಳಿ ಆರೋಪಿ ನಡೆಸಿದ ಈ ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಗಾಯಗೊಂಡಿದ್ದು, ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.