ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿರುವ ಲ್ಯಾಂಬೆತ್ ಬಸವೇಶ್ವರ ಪ್ರತಿಮೆ ಬಳಿ ಈ ಬಾರಿ ಬಸವೇಶ್ವರರ 891 ನೇ ಜಯಂತಿಯನ್ನು ವಿಶೇಷ ಕೈಂಕರ್ಯವಾಗಿ ಆಚರಿಸಲು ತಯಾರಿ ನಡೆದಿದೆ. ಏಪ್ರಿಲ್ 30ರಂದು ಬೆಳಿಗ್ಗೆ 11:30 ಕ್ಕೆ ಬ್ರಿಟಿಷ್ ಸಂಸತ್ ಬಳಿ ಭವ್ಯ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ ಎಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ. ಏಪ್ರಿಲ್ 30ರಂದು ನಡೆಯುವ ಸಮಾರಂಭದಲ್ಲಿ ಯುಕೆಯ ಪ್ರಧಾನಿ ಸರ್ ಕಿಯರ್ ಸ್ಟಾರ್ಮರ್ ಸಂಪುಟದ ಸಚಿವರು ಹಾಗೂ ಲಂಡನಿನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಲಂಡನ್ನಿನ ಕಾರ್ಮಿಕ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆದ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಲು ಕನ್ನಡಿಗರಾದ…
Day: April 7, 2025
ವಿನಯ್ ಸಾವಿನ ಪ್ರಕರಣ? ಬಿಜೆಪಿಗೆ ಪ್ರತಿಭಟನೆ ಮೂಲಕವೇ ತಿರುಗೇಟು ನೀಡಲು ಕಾಂಗ್ರೆಸ್ ರಣತಂತ್ರ
ಬೆಂಗಳೂರು: ವಿನಯ್ ಸೋಮಯ್ಯ ಸಾವಿನ ಪ್ರಕರಣ ಕುರಿತಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ್ ಆರೋಪಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು. ತನ್ನೇರಾ ಮೈನಾ ಅವರು ಮಡಿಕೇರಿ ಸರ್ಕಲ್ ಠಾಣೆಯಲ್ಲಿ ಮಾರ್ಚ್ 5 ರಂದು ಕೊಡಗಿನ ಸಮಸ್ಯೆಗಳು ಹಾಗೂ ಸೂಚನೆಗಳು ಎನ್ನುವ ವಾಟ್ಸಪ್ ಗುಂಪಿನಲ್ಲಿ ಬರುವ ಸಂದೇಶವನ್ನು ಗಮನಿಸಿದ ತನ್ನೇರಾ ಮೈನಾ ಅವರು ರಾಜೇಂದ್ರ, ವಿಷ್ಣು ನಾಚಪ್ಪ, ವಿನಯ್ ಸೋಮಯ್ಯ ಅವರ ವಿರುದ್ದ ದೂರು ಸಲ್ಲಿಸುತ್ತಾರೆ. ವಿನಯ್ ಸೋಮಯ್ಯ ಅವರ ಕೊನೆಯ ವಾಟ್ಸಪ್ ಸಂದೇಶದ ಕೊನೆಯ ಪ್ಯಾರದಲ್ಲಿ ‘ನನ್ನ ವಿರುದ್ದ ಎಫ್ ಐಆರ್ ದಾಖಲಾದಾಗ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜೆ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಪಿ ಚರಣ್, ವಕೀಲ ರಾಕೇಶ್ ದೇವಯ್ಯ, ನಿಶಾಂತ್,ಮೋಹನ್ ಅವರಿಗೆ ಧನ್ಯವಾದಗಳು…