ಬೆಂಗಳೂರು: ಸುರಂಗ ರಸ್ತೆ ಯೋಜನೆಯ ಮೊದಲ ಹಂತದ ಟೆಂಡರ್ ಪ್ರಕ್ರಿಯೆಯನ್ನು 4-5 ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ ರಾತ್ರಿ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತಕ್ಕೆ ಅಂದಾಜು 17,000 ಕೋಟಿ ರೂ. ಮತ್ತು ಎರಡನೇ ಹಂತಕ್ಕೆ 23,000 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು. “ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 40 ಕಿಲೋಮೀಟರ್ ಮತ್ತು ಮೈಸೂರು ರಸ್ತೆಯಿಂದ ಕೆ.ಆರ್. ಪುರಂವರೆಗೆ ಸುಮಾರು 23 ಕಿಲೋಮೀಟರ್ ಉದ್ದದ ಅವಳಿ ಸುರಂಗ ರಸ್ತೆ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ” ಎಂದು ಶಿವಕುಮಾರ್ ಹೇಳಿದರು. “130 ಕಿಲೋಮೀಟರ್ ಫ್ಲೈಓವರ್‌ಗಳು ಮತ್ತು ಹೊಸ ಮೆಟ್ರೋ ಮಾರ್ಗಗಳನ್ನು ಯೋಜಿಸಲಾಗಿರುವ ಸ್ಥಳಗಳಲ್ಲಿ ಡಬಲ್ ಡೆಕ್ಕರ್ ರಚನೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ, 7 ಕಿಲೋಮೀಟರ್ ಡಬಲ್ ಡೆಕ್ಕರ್ ರಚನೆಗಳನ್ನು ನಿರ್ಮಿಸಲಾಗಿದೆ ಮತ್ತು 37 ಕಿಲೋಮೀಟರ್ ಡಬಲ್ ಡೆಕ್ಕರ್ ಯೋಜನೆಯು…
Day: July 5, 2025
ಪರಿಶಿಷ್ಟ ಜಾತಿಯೇತರ ಮನೆಗಳಿಗೂ ಜಾತಿ ಜನಗಣತಿ ಸ್ಟಿಕ್ಕರ್; ಬಿಜೆಪಿ ಆಕ್ರೋಶ
ಬೆಂಗಳೂರು: ಪರಿಶಿಷ್ಟ ಜಾತಿಯವರ ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಮೀಕ್ಷೆ ಕೈಗೊಳ್ಳುವವರು ಮಾಹಿತಿ ಸಂಗ್ರಹಿಸದೇ ಮನೆಗಳಲ್ಲಿ ಸ್ಟಿಕ್ಕರ್ ಅಂಟಿಸಿ ಹೊಂದುತ್ತಿದ್ದಾರೆ. ಪರಿಶಿಷ್ಟ ಜಾತಿಯವರಲ್ಲದವರ ಮನೆಗಳಿಗೂ ಸ್ಟಿಕ್ಕರ್ ಅಂಟಿಸಿ ಸಮೀಕ್ಷೆ ನಡೆಸುತ್ತಿರುವವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಪ್ರತಿಧ್ವನಿಸಿದೆ. ಈ ಬಗ್ಗೆ ಆಕ್ರೋಶ ಹೊರ ಹಾಕಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ’ರಿಶಿಷ್ಟ ಜಾತಿಯವರ ಮನೆಗೆ ಬಂದು ಸ್ಟಿಕರ್ ಅಂಟಿಸಿ ಹೋಗಿದ್ದರೆ ಅದನ್ನು ಒಪ್ಪಬಹುದಿತ್ತು, ಆದರೆ ಎಲ್ಲಾ ಮನೆಗಳಿಗೂ ಸರ್ಕಾರ ಸ್ಟಿಕರ್ ಅಂಟಿಸಿಕೊಂಡು ಹೋಗುತ್ತಿದ್ದಾರೆ. ಪರಿಶಿಷ್ಟ ಜಾತಿಯೇತರ ಮನೆಗಳಿಗೂ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿಯವರ ಮನೆಗೆ ಬಂದು ಸ್ಟಿಕರ್ ಅಂಟಿಸಿ ಹೋಗಿದ್ದರೆ ಅದನ್ನು ಒಪ್ಪಬಹುದಿತ್ತು, ಆದರೆ ಎಲ್ಲಾ ಮನೆಗಳಿಗೂ ಸರ್ಕಾರ ಸ್ಟಿಕರ್ ಅಂಟಿಸಿಕೊಂಡು ಹೋಗುತ್ತಿದೆ. ಪರಿಶಿಷ್ಟ ಜಾತಿಯೇತರ ಮನೆಗಳಿಗೂ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಆನ್‍ಲೈನ್‍ನಲ್ಲೂ ಅವಕಾಶ ಇದೆ ಎಂದು ಮುಖ್ಯಮಂತ್ರಿಗಳು…
ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ‘ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಹೆಸರು
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ‘ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಎಂದು ಮರು ನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ( SLN ಚಾರಿಟಿ) ಯನ್ನು ಶ್ರೀ ದೊಡ್ಡಣ್ಣಶೆಟ್ಟರು 1906 ರಲ್ಲಿಯೇ ಸ್ಥಾಪಿಸಿ. ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಶ್ರೀ ದೊಡ್ಡಣ್ಣ ಶೆಟ್ಟರ ಸೇವೆಯನ್ನು ಗುರುತಿಸಿ, ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ರಾಜರ ದರ್ಭಾರಿಗೆ ಆಹ್ವಾನಿಸಿ ‘ಜನೋಪಕಾರಿ’ ಎಂಬ ಬಿರುದನ್ನು ಹಾಗೂ ಪದಕವನ್ನು ನೀಡಿ ಸನ್ಮಾನಿಸಿದ್ದರು. ದೊಡ್ಡಣ್ಣ ಶೆಟ್ಟರು ತಮ್ಮ 5 ಎಕರೆ ಭೂಮಿಯನ್ನು ಉಚಿತವಾಗಿ ಕಲಾಸಿಪಾಳ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನೀಡಿದ ಮಹಾದಾನಿ. ದೊಡ್ಡಣ್ಣ ಶೆಟ್ಟರು ಸ್ಥಾಪಿಸಿರುವ ಈ ಸಂಸ್ಥೆಯ…