ನವದೆಹಲಿ: ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಿಯಾ ಕಳೆದ ಮೂರು ವರ್ಷಗಳಿಂದ ಯೆಮೆನ್ ಜೈಲಿನಲ್ಲಿದ್ದಾರೆ. ಮಂಗಳವಾರ ಮರಣದಂಡನೆಯ ಸುದ್ದಿ ಬಂದ ನಂತರ, ಅವರು ಯೆಮೆನ್‌ಗೆ ತೆರಳಲಿದ್ದಾರೆ ಎಂದು ಸಂಧಾನಕಾರ ಎಸ್.ಜೆ. ಭಾಸ್ಕರನ್ ಹೇಳಿದ್ದಾರೆ. ಪ್ರಿಯಾ ಅವರ ಪತಿ ಟಾಮಿ ಥಾಮಸ್ ಮತ್ತು ಅವರ ಮಗಳು ರಕ್ತದ ಹಣವನ್ನು ಪಾವತಿಸುವ ಮೂಲಕ ಪ್ರಕರಣವನ್ನು ಪರಿಹರಿಸಲು ಮೆಹದಿ ಅವರ ಕುಟುಂಬವನ್ನು ಮನವೊಲಿಸಲು ಸಾಧ್ಯವಿದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಇಲ್ಲಿಯವರೆಗೆ, ಮೆಹದಿ ಅವರ ಕುಟುಂಬವು ರಕ್ತದ ಹಣವನ್ನು ನೀಡುವ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ. ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್‌ನ ಪ್ರಿಯಾ, ತನ್ನ ದೈನಂದಿನ ವೇತನ ಪಡೆಯುವ ಪೋಷಕರನ್ನು ಬೆಂಬಲಿಸಲು 2008 ರಲ್ಲಿ ಯೆಮೆನ್‌ಗೆ ತೆರಳಿದರು. ವಿವಿಧ ಆಸ್ಪತ್ರೆಗಳಲ್ಲಿ…
Day: July 9, 2025
ರಾಜ್ಯದಲ್ಲಿ ಮಳೆ ಮುನ್ಸೂಚನೆ: ಕರಾವಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ಮುಂದಿನ ಒಂದು ವಾರಗಳ ಕಾಲ ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಮಲೆನಾಡು ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಇದೇ ಸಂದರ್ಭದಲ್ಲಿ ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ನಡುಕರ್ನಾಟಕದ ಹಲವಾರು ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಇದೇ ರೀತಿ ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ.
ಅನ್ನಭಾಗ್ಯ ಲಾರಿ ಮುಷ್ಕರಕ್ಕೆ ಸ್ಪಂಧಿಸಿದ ಸರ್ಕಾರ: 244 ಕೋಟಿ ರೂ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಣಿಕೆ ಲಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ಗಾಬರಿಗೊಂಡ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ. 2025ರ ಫೆಬ್ರವರಿಯಿಂದ ಮೇವರೆಗೆ ಬಾಕಿ ಉಳಿದಿದ್ದ ರೂ. 244 ಕೋಟಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ. ಈ ಮೊದಲು ಸರ್ಕಾರಿ ಖಜಾನೆಯಿಂದ ರೂ. 2,082.99 ಕೋಟಿಯ ಹಣ ಬಿಡುಗಡೆ ಆಗಿದ್ದು, ಈಗ ನಾಲ್ಕು ತಿಂಗಳ ಅವಧಿಗೆ ಫಲಾನುಭವಿಗಳಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಾಗೂ ಇತರ ವೆಚ್ಚಗಳ ಸಂಬಂಧವಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.