ನವದೆಹಲಿ: ಭಾರತವು ಗುರುವಾರ ತನ್ನ ಎರಡು ಪ್ರಮುಖ ಕಾರ್ಯತಂತ್ರದ ಆಸ್ತಿಗಳಾದ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-II ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-I ಗಳ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದ ಚಾಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಲಾಯಿತು. ರಕ್ಷಣಾ ಸಚಿವಾಲಯದ ಪ್ರಕಾರ, ನಿಯಮಿತ ತರಬೇತಿ ಮತ್ತು ಮೌಲ್ಯೀಕರಣ ವ್ಯಾಯಾಮಗಳ ಭಾಗವಾಗಿ ಕಾರ್ಯತಂತ್ರದ ಪಡೆಗಳ ಕಮಾಂಡ್‌ನ ಆಶ್ರಯದಲ್ಲಿ ಉಡಾವಣೆಗಳನ್ನು ನಡೆಸಲಾಯಿತು. ಎರಡೂ ಕ್ಷಿಪಣಿಗಳು ಎಲ್ಲಾ ಕಾರ್ಯಾಚರಣೆಯ ಉದ್ದೇಶಗಳು ಮತ್ತು ತಾಂತ್ರಿಕ ನಿಯತಾಂಕಗಳನ್ನು ಯಶಸ್ವಿಯಾಗಿ ಪೂರೈಸಿದವು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ಸಚಿವಾಲಯವು ಪರೀಕ್ಷೆಗಳು ಪ್ರಮುಖ ಸಾಮರ್ಥ್ಯಗಳನ್ನು ಮೌಲ್ಯೀಕರಿಸಿದೆ ಎಂದು ದೃಢಪಡಿಸಿತು. ಇದು ಭಾರತದ ಪರಮಾಣು-ಸಮರ್ಥ ವಿತರಣಾ ವ್ಯವಸ್ಥೆಗಳ ವಿಶ್ವಾಸಾರ್ಹತೆ ಮತ್ತು ನಿಖರತೆಯನ್ನು ಪುನರುಚ್ಚರಿಸಿತು. ಈ ಪರೀಕ್ಷಾ-ಉಡಾವಣೆಗಳ ಮೂಲಕ ಭಾರತವು ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲು…
Day: July 17, 2025
ಜಾಮೀನು ಯಾಕೆ ರದ್ದುಪಡಿಸಬಾರದು? ನಟ ದರ್ಶನ್’ಗೆ ಸುಪ್ರೀಂ ಪ್ರಶ್ನೆ.. ಜುಲೈ 22ರಂದು ಭವಿಷ್ಯ ನಿರ್ಧಾರ
ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಆರೋಪಿ ಗಳಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಾಮೀನು ಯಾಕೆ ರದ್ದುಪಡಿಸಬಾರದು ಎಂಬ ಪ್ರಶ್ನೆಯನ್ನು ದರ್ಶನ್ ಪರ ವಕೀಲರಿಗೆ ಕೇಳಿದೆ. ಅಂತಿಮ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. 2024ರ ಜೂನ್ 8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಇವರಲ್ಲಿ ಎಂಟು ಮಂದಿಗೆ, ಜಾರಿಗೊಂಡ 6 ತಿಂಗಳ ನ್ಯಾಯಾಂಗ ಬಂಧನದ ನಂತರ, 2024ರ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ…
‘ರಸ್ತೆ ರೇಸಿಂಗ್ ಅಪಾಯಕಾರಿ, ಸುರಕ್ಷತೆಗೆ ಆದ್ಯತೆ ನೀಡಿ’: ಬೈಕ್ ರೈಡರ್ಸ್’ಗೆ ಸಲ್ಮಾನ್ ಸಲಹೆ
ಮುಂಬೈ: “ರಸ್ತೆಯಲ್ಲಿ ರೇಸ್ ಮಾಡುವುದು ನಿಮ್ಮ ಜೀವಕ್ಕೂ ಅಪಾಯ, ಇತರರಿಗೂ ಅಪಾಯ ತಂದೀತು. ಬೈಕ್ ಸವಾರರು ಸದಾ ಎಲ್ಲಾ ಸುರಕ್ಷತಾ ಸಾಧನಗಳೊಂದಿಗೆ ಮಾತ್ರ ಸವಾರಿ ಮಾಡಬೇಕು,” ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ. ಬುಧವಾರ ಇಂಡಿಯನ್ ಸೂಪರ್‌ಕ್ರಾಸ್ ರೇಸಿಂಗ್ ಲೀಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್, ದೇಶದ ರೇಸಿಂಗ್ ಪ್ರಿಯರಿಗೆ ಸುರಕ್ಷತೆಯ ಸಂದೇಶ ನೀಡಿದ್ದಾರೆ. “ನೀವು ಇಲ್ಲಿ ಬರುವವರೆಗೆ ಸುರಕ್ಷಿತವಾಗಿರಿ. ಬಂದ ಮೇಲೆ ನಿಮ್ಮ ಸುರಕ್ಷತೆಗೆ ನಾವು ಜವಾಬ್ದಾರರಿದ್ದೇವೆ. ಆದರೆ ನೀವು ಎಲ್ಲಾ ಸುರಕ್ಷತಾ ಸಾಧನಗಳನ್ನು ಧರಿಸಿದ್ದೀರಿ ಎಂಬುದು ಖಚಿತವಾಗಬೇಕು,” ಎಂದು ಅವರು ಒತ್ತಾಯಿಸಿದರು. “ನಾನು ಬಾಂದ್ರಾದಲ್ಲಿ ವಾಸಿಸುತ್ತೇನೆ. ನಮ್ಮ ಬಡಾವಣೆಯಲ್ಲಿಯೇ ಹಲವು ಯುವಕರು ರಸ್ತೆ ಮೇಲೆ ಬೈಕ್ ರೇಸ್ ಮಾಡುತ್ತಾರೆ. ನಾನು ಇವರೆಗೆ ಮೂವರು–ನಾಲ್ವರು ಮಕ್ಕಳನ್ನು ತಮ್ಮ ಅಪಘಾತದ ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ರಸ್ತೆಯಲ್ಲಿ ಅಕ್ರಮ ರೇಸಿಂಗ್ ಮಾಡುವುದು ಕೇವಲ ನಿಮ್ಮ ಅವಘಡಕ್ಕೆ ಕಾರಣವಾಗದು, ಇತರರ…
Artificial flowers ನಿಂದ ಕ್ಯಾನ್ಸರ್ ಆತಂಕ; ಚೀನಾದ ಪ್ಲಾಸ್ಟಿಕ್ ಹೂವುಗಳ ನಿಷೇಧಿಸಲು ‘ಮಹಾ’ ನಿರ್ಧಾರ
ಮುಂಬೈ: ಚೀನಾದಿಂದ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್ ಹೂವುಗಳನ್ನು ನಿಷೇಧಿಸುವ ನಿರ್ಧಾರವನ್ನು ಈ ವಾರ ಪ್ರಕಟಿಸಲಾಗುವುದು ಎಂದು ಮಹಾರಾಷ್ಟ್ರ ತೋಟಗಾರಿಕೆ ಸಚಿವ ಭರತ್ ಗೊಗವಾಲೆ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ. ಶಾಸಕ ಮಹೇಶ್ ಶಿಂಧೆ ಅವರು ವಿಧಾನಸಭೆಯಲ್ಲಿ ಈ ವಿಷಯದ ಕುರಿತು ರೈತರ ಆಂದೋಲನದ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೊಗವಾಲೆ, ಮಂಗಳವಾರ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಲಾಗಿದ್ದು, ಪ್ಲಾಸ್ಟಿಕ್ ಹೂವುಗಳ ಮೇಲೆ ಶಾಶ್ವತ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ನಿರ್ಧಾರವನ್ನು ಈ ವಾರ ಪ್ರಕಟಿಸಲಾಗುವುದು ಎಂದು ಪುನರುಚ್ಚರಿಸಿದರು. ಕಳೆದ ವಾರ, ಶಾಸಕ ಶಿಂಧೆ ಈ ಬಗ್ಗೆ ವಿಧಾನಸಭೆಯಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಿದ್ದರು. ಆ ವೇಳೆ ಇತರ ಶಾಸಕರು ಕೂಡಾ ಧ್ವನಿಗೂಡಿಸಿ, ಈ ಹೂವುಗಳಲ್ಲಿ ಬಳಸಲಾಗುವ ಹಾನಿಕಾರಕ ಬಣ್ಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ನೈಸರ್ಗಿಕ ಹೂವು ಬೆಳೆಗಾರರು ಪ್ಲಾಸ್ಟಿಕ್ ಹೂವುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಗಮನಸೆಳೆದಿದ್ದರು.
ಧರ್ಮಸ್ಥಳ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಎಸ್‌ಐಟಿ ರಚನೆಗೆ ವಕೀಲರ ಆಗ್ರಹ
ಬೆಂಗಳೂರು: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಬಳಿಯ ಅತ್ಯಾಚಾರ-ಕೊಲೆ ಸರಣಿ ಪ್ರಕರಣಗಳು ನಡೆದಿದೆ ಎಂಬ ಆರೋಪ ಕುರಿತು ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂದು ವಕೀಲರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ. ಸಿಎಂ ನಿವಾಸ ‘ಕಾವೇರಿ’ಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವಕೀಲರ ತಂಡ, ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕೆಂದು ಒತ್ತಾಯಿಸಿತು. ವಿಚಾರಣಾ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೋ ದಾಖಲಾತಿಯಾಗಿ ಮಾಡಬೇಕು ಎಂದು ಅವರು ಮನವಿ ಸಲ್ಲಿಸಿದರು. ವಕೀಲರಾದ ಸಿ.ಎಸ್. ದ್ವಾರಕನಾಥ್, ಎಸ್. ಬಾಲನ್ ಮತ್ತು ಉಮಾಪತಿ ಎಸ್ ಸಹಿತ ನಿಯೋಗ ಮುಖ್ಯಮಂತ್ರಿಗೆ ಈ ಕುರಿತು ಮನವಿ ಪತ್ರವನ್ನು ಸಲ್ಲಿಸಿದರು. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಿರಿಯ ವಕೀಲರಾದ ಬಾಲನ್ ಮತ್ತು ಸಿ.ಎಸ್.ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗದವರು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ,…
ಸಿಗಂದೂರು ಸೇತುವೆ ಉದ್ಘಾಟನೆಯ ಕುರಿತು ವಿಜಯೇಂದ್ರ ಸ್ಪಷ್ಟನೆ
ಶಿವಮೊಗ್ಗ: ಸಿಗಂದೂರು ಸೇತುವೆ ಉದ್ಘಾಟನೆಯು ತರಾತುರಿಯಲ್ಲಿ ನಡೆದಿದೆಯೆಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. “ಶರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುವ ಭೀತಿಯು ಇದ್ದ ಕಾರಣ ಮತ್ತು ಸೇತುವೆಯಡಿ ಲಾಂಚ್ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೇತುವೆಯನ್ನು ತುರ್ತಾಗಿ ಉದ್ಘಾಟಿಸಲಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ,” ಎಂದು ವಿಜಯೇಂದ್ರ ಹೇಳಿದ್ದಾರೆ. ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಸೇತುವೆಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಲಿಲ್ಲ ಎನ್ನುವ ಕಾಂಗ್ರೆಸ್ ಆರೋಪವನ್ನೂ ವಿಜಯೇಂದ್ರ ಖಂಡಿಸಿ, “ಅದರಲ್ಲಿ ಯಾವುದೇ ಸತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಸಿಗಂದೂರಿಗೆ ತೆರಳುವ ಮಾರ್ಗದಲ್ಲಿರುವ ಶರಾವತಿ ನದಿಯಲ್ಲಿ ನೀರು ಹೆಚ್ಚಾಗುವ ಆತಂಕ ಮತ್ತು ಸೇತುವೆಯಡಿ ಲಾಂಚ್ ಓಡಾಟಕ್ಕೆ ಸಮಸ್ಯೆಯಾಗಬಹುದು ಎನ್ನುವ ಕಾರಣದಿಂದ ಸೇತುವೆ ಉದ್ಘಾಟನೆ ಮಾಡಲಾಗಿದೆಯೇ ಹೊರತು…
ಜಾತಿ ಜನಗಣತಿಗೆ ದೇಶವ್ಯಾಪಿ ಅಭಿಯಾನ: AICCಯಿಂದ ‘ಬೆಂಗಳೂರು ಘೋಷಣೆ’
ಬೆಂಗಳೂರು: ಜಾತಿ ಆಧಾರಿತ ಸಮೀಕ್ಷೆಗೆ ಒತ್ತಾಸೆಯೊಂದಿಗೆ, ದೇಶವ್ಯಾಪಿ ಅಭಿಯಾನ ನಡೆಸುವ ನಿರ್ಧಾರವನ್ನು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ತೆಗೆದುಕೊಂಡಿದ್ದು, ಈ ನಿರ್ಧಾರವನ್ನು “ಬೆಂಗಳೂರು ಘೋಷಣೆ” ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಓಬಿಸಿ ಸಮಿತಿಯ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಾಹಿತಿ ನೀಡಿ, “ತೆಲಂಗಾಣದ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ತೆಗೆದುಕೊಂಡು, ರಾಷ್ಟ್ರಮಟ್ಟದಲ್ಲಿ ಜಾತಿ ಜನಗಣತಿ ನಡೆಸಬೇಕು ಎಂಬ ಒತ್ತಾಯವಿದೆ” ಎಂದು ಹೇಳಿದರು. ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಎರಡು ದಿನಗಳ ಸಭೆಗಳಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ನಿರ್ಣಯಗಳು ಸರ್ವಾನುಮತದಿಂದ ಅಂಗೀಕಾರಗೊಂಡವು. ಈ ಸಭೆಯಲ್ಲಿ ಭಾರತ್ ಜೋಡೋ ಸಂಚಾಲನೆಗೆ ಉತ್ಸಾಹದ ನುಡಿಗಳು ವ್ಯಕ್ತವಾಯಿತು. “ನ್ಯಾಯಯೋಧ” ರಾಹುಲ್ ಗಾಂಧಿ ಅವರು ಸಮಾಜದ ಅಂಚಿನಲ್ಲಿರುವ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಾಡಿದ ಧೈರ್ಯಶಾಲಿ ಹೋರಾಟಕ್ಕೆ ಎಐಸಿಸಿ ಓಬಿಸಿ ವಿಭಾಗ ಕೃತಜ್ಞತೆ ಸಲ್ಲಿಸಿದೆ. “ಮೋದಿ ನೇತೃತ್ವದ…
ಕಾಂಕ್ರೀಟ್ ಶಾಖದ ಸುಳಿಯಲ್ಲಿ ಬೆಂಗಳೂರು! ಬಿಜೆಪಿ-ಜೆಡಿಎಸ್ ನಾಯಕರಿಗೆ ಸುರ್ಜೇವಾಲಾ ಪ್ರಶ್ನೆ
ಬೆಂಗಳೂರು: ಬಿಜೆಪಿ-ಜೆಡಿಎಸ್ ಬೆಂಗಳೂರಿನ ಪರಿಸರ ಹಾಗೂ ಜೀವ ಪರಿಸರವನ್ನು ಹೇಗೆ ನಾಶಪಡಿಸುತ್ತಿದೆ ಎಂಬುದರ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾಡಿರುವ ಟ್ವೀಟ್ ಗಮನಸೆಳೆದಿದೆ. ಹವಾನಿಯಂತ್ರಿತ ನಗರ, ಉದ್ಯಾನನಗರ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು “ಕಾಂಕ್ರೀಟ್ ಶಾಖದ ಸುಳಿಗೆ” ಸಿಲುಕುತ್ತಿದೆ. ಇದರ ನಡುವೆಯೇ ನಾನು ಕರ್ನಾಟಕ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ನಡೆಸಿದ ಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ಬಿಜೆಪಿ-ಜೆಡಿಎಸ್ ಬೆಂಗಳೂರಿನ ಪರಿಸರ ಹಾಗೂ ಜೀವ ಪರಿಸರವನ್ನು ಹೇಗೆ ನಾಶಪಡಿಸುತ್ತಿದೆ ಎಂಬ ಬಗ್ಗೆ ಆಘಾತಕಾರಿ ವಿಷಯಗಳು ಹೊರಬಂದಿವೆ ಎಂದವರು ಬೆಳಕುಚೆಲ್ಲಿದ್ದಾರೆ. 1960 ರ ದಶಕದಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನ ಹೃದಯಭಾಗದಲ್ಲಿರುವ ಗೋರಗುಂಟೆ ಪಾಳ್ಯದ ಬಳಿ ಕಾರ್ಖಾನೆಗಾಗಿ ಎಚ್.ಎಂ.ಟಿ ಸಂಸ್ಥೆಗೆ 443 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಾರ್ಖಾನೆ ಕಳೆದ 15 ವರ್ಷಗಳಿಂದಲೂ ಸ್ಥಗಿತಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಈ ಜಮೀನಿನಲ್ಲಿ…
ಒಂದು ವಾರ ಕಾಲ ವರ್ಷಾಧಾರರೆ: ಕರಾವಳಿ–ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ
ಗಳೂರು: ಮುಂದಿನ ಏಳು ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಗಳಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಬುಧವಾರ ಬಿಡುಗಡೆ ಮಾಡಿದ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.