ಚೆನ್ನೈ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ‘ಆಪರೇಷನ್ ಸಿಂಧೂರ್’ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಅಪರೂಪದ ಒಳನೋಟ ಹಂಚಿಕೊಂಡಿದ್ದಾರೆ. ಮಿಲಿಟರಿ ನಿಖರತೆ ಮತ್ತು ರಾಜಕೀಯ ಸ್ಪಷ್ಟತೆ ಸಂಗಮಗೊಂಡ ಉನ್ನತ ಮಟ್ಟದ ಕಾರ್ಯಾಚರಣೆ ಎಂದು ಅವರು ಬಣ್ಣಿಸಿದರು. ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 22ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ದಾಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿತೆಂದರು. “ಮರುದಿನವೇ ನಾವು ಚರ್ಚೆಗೆ ಕುಳಿತೆವು. ರಕ್ಷಣಾ ಸಚಿವರು ‘ಸಾಕು ಸಾಕು’ ಎಂದರು. ಮೂವರು ಸೇನಾ ಮುಖ್ಯಸ್ಥರೂ ನಿರ್ಣಾಯಕ ಕ್ರಮಕ್ಕೆ ಒಪ್ಪಿಕೊಂಡು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಇಷ್ಟು ಸ್ಪಷ್ಟ ರಾಜಕೀಯ ನಿರ್ದೇಶನವನ್ನು ಮೊತ್ತಮೊದಲು ನೋಡಿದೆವು,” ಎಂದರು. ಏಪ್ರಿಲ್ 25ರಂದು ಉತ್ತರ ಕಮಾಂಡ್ ಕೇಂದ್ರದಲ್ಲಿ ಕಾರ್ಯಯೋಜನೆ ರೂಪಿಸಿ ತಕ್ಷಣವೇ ಕಾರ್ಯಗತಗೊಳಿಸಲಾಯಿತು. ಒಂಬತ್ತು ಗುರಿಗಳಲ್ಲಿ ಏಳು ನಾಶವಾಗಿದ್ದು,…
Day: August 10, 2025
ಮತಗಳ್ಳತನ ಆರೋಪ ಬಗ್ಗೆ ರಾಹುಲ್ ‘ಹಿಟ್ ಅಂಡ್ ರನ್’; ಜೋಶಿ
ಬೆಂಗಳೂರು: ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ ಬಳಿಕ ಆಯೋಗದ ಕಚೇರಿಗೆ ಭೇಟಿ ನೀಡದೆ, ಯಾವುದೇ ದಾಖಲೆಗಳನ್ನು ಸಲ್ಲಿಸದೇ “ಹಿಟ್ ಅಂಡ್ ರನ್” ಪದ್ದತಿ ಪಾಲಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಟೀಕಿಸಿದ ಅವರು, “ಸಾರ್ವಜನಿಕವಾಗಿ ದೊಡ್ಡ ದೊಡ್ಡ ಸುಳ್ಳು ಹೇಳಿಕೆಗಳನ್ನು ನೀಡುವ ರಾಹುಲ್, ಸಾಕ್ಷಿ ಕೇಳಿದರೆ ಮಾಯವಾಗುತ್ತಾರೆ. ಗುರುವಾರ ಮತಗಳ್ಳತನದ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ, ಆಯೋಗದ ಕಚೇರಿಗೆ ತೆರಳಿಲ್ಲ. ಫ್ರೀಡಂ ಪಾರ್ಕ್‌ನಿಂದ ಆಯೋಗದ ಕಚೇರಿಗೆ 5 ನಿಮಿಷ ನಡೆದು ಹೋಗಬಹುದು. ಬದಲಾಗಿ, ಬೇರೆವರನ್ನು ಕಳುಹಿಸಿದ್ದಾರೆ” ಎಂದು ವ್ಯಂಗ್ಯವಾಡಿದರು. “ಆರೋಪ ಮಾಡಿ ಇನ್ನೊಬ್ಬರಿಂದ ಉತ್ತರ ಕೊಡಿಸುವುದು, ಸುಳ್ಳಿಗೆ ಆಧಾರವಿಲ್ಲವೆಂಬುದರ ಪುರಾವೆ. ರಾಜ್ಯ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ, ಇದುವರೆಗೂ ಫೈಲ್ ಮಾಡಿಲ್ಲ” ಎಂದು ಹೇಳಿದರು. ರಾಹುಲ್…
ರಕ್ಷಾ ಬಂಧನ: ಅಂಗನವಾಡಿ ಶಿಕ್ಷಕಿಯರಿಗೆ ಇವರು ಸಚಿವರಲ್ಲ ಸಹೋದರ
ಚಿಂಚೋಳಿ: ಸೇಡಂ ಕ್ಷೇತ್ರದ ಪೆಂಚೆನಪಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ, ಗ್ರಾಮ ಸಹೋದರಿಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಮಕ್ಕಳು ರಾಕಿ ಕಟ್ಟಿ ಸಿಹಿ ತಿನ್ನಿಸಿ ಆತ್ಮೀಯ ಸ್ವಾಗತ ಕೋರಿದರು. ರಕ್ಷಾಬಂಧನ ಹಬ್ಬದ ಸಂಭ್ರಮದಲ್ಲಿ ಗ್ರಾಮಸ್ಥರು ಪ್ರೀತಿಯ ಸಂಕೇತವಾಗಿ ಸಚಿವರಿಗೆ ರಾಖಿಯನ್ನು ಕಟ್ಟಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.