ನವದೆಹಲಿ: 79 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಶುಕ್ರವಾರ ಖಾಸಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಅನ್ನು ಪರಿಚಯಿಸಿದೆ. ವಾರ್ಷಿಕ ಪಾಸ್‌ನ ಬೆಲೆ 3,000 ರೂ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಡೆಸುವ ಟೋಲ್ ಪ್ಲಾಜಾಗಳಲ್ಲಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳು ಈ ಸೌಲಭ್ಯವನ್ನು ಬಳಸಬಹುದು. ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟೋಲ್ ಟ್ರಿಪ್‌ಗಳಿಗೆ, ಯಾವುದು ಮೊದಲು ಸಂಭವಿಸುತ್ತದೆಯೋ ಅದು ಮಾನ್ಯವಾಗಿರುತ್ತದೆ. ಮಿತಿಯನ್ನು ತಲುಪಿದಾಗ, ಫಾಸ್ಟ್‌ಟ್ಯಾಗ್ ಸ್ವಯಂಚಾಲಿತವಾಗಿ ಪ್ರಮಾಣಿತ ಪೇ-ಪರ್-ಟ್ರಿಪ್ ಮೋಡ್‌ಗೆ ಬದಲಾಗುತ್ತದೆ. ಪಾಯಿಂಟ್-ಆಧಾರಿತ ಟೋಲ್ ಪ್ಲಾಜಾಗಳಿಗೆ, ಪ್ರತಿ ಒನ್-ವೇ ಕ್ರಾಸಿಂಗ್ ಅನ್ನು ಒಂದು ಟ್ರಿಪ್ ಆಗಿ ಎಣಿಕೆ ಮಾಡಲಾಗುತ್ತದೆ ಮತ್ತು ರಿಟರ್ನ್ ಅನ್ನು ಎರಡು ಎಂದು ಎಣಿಕೆ ಮಾಡಲಾಗುತ್ತದೆ. ಮುಚ್ಚಿದ ಅಥವಾ ಟಿಕೆಟ್ ಮಾಡಿದ ವ್ಯವಸ್ಥೆಗಳಲ್ಲಿ, ಸಂಪೂರ್ಣ…
Day: August 15, 2025
‘ಸ್ವರಾಜ್’ ಪದದ ಅರ್ಥವನ್ನು ವಿಶ್ಲೇಷಿಸಿದ RSS ಸರಸಂಘಚಾಲಕ್ ಭಾಗವತ್..
ಭುವನೇಶ್ವರ: ಬಲಿಷ್ಠ, ಭಾರತವನ್ನು ನಿರ್ಮಿಸಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಫೂರ್ತಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋಹನ್ ಭಾಗವತ್ ಶುಕ್ರವಾರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟಗಾರರ ಸಮರ್ಪಣೆ ಮತ್ತು ತ್ಯಾಗವನ್ನು ದೇಶ ಬಲಪಡಿಸಲು ಸ್ಫೂರ್ತಿಯಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು. ಉತ್ಕಲ್ ಬಿಪನ್ನ ಸಹಾಯತ ಸಮಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “1857ರ ಮೊದಲ ಹೋರಾಟದಿಂದ ಹಿಡಿದು ಮೂರು ತಲೆಮಾರುಗಳ ನಿರಂತರ ಹೋರಾಟದ ಬಳಿಕ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ನಮ್ಮ ಪೂರ್ವಜರು ಊಹಿಸಲಾಗದ ಕಷ್ಟ, ಸೆರೆವಾಸ ಮತ್ತು ತ್ಯಾಗವನ್ನು ಭರಿಸಿದ್ದಾರೆ. ಇಂದಿನ ಭಾರತ ಬಲಿಷ್ಠವಾಗಲು ಆ ತ್ಯಾಗದ ಆತ್ಮಸ್ಫೂರ್ತಿಯನ್ನು ಜೀವಂತವಾಗಿರಿಸುವುದು ನಮ್ಮ ಕರ್ತವ್ಯ” ಎಂದರು. ‘ಸ್ವರಾಜ್’ ಪದದ ಅರ್ಥವನ್ನು ವಿಶ್ಲೇಷಿಸಿದ ಭಾಗವತ್, “ಸ್ವರಾಜ್ ಎಂದರೆ ಕೇವಲ ಆಡಳಿತವಲ್ಲ; ‘ಸ್ವ’ ಅರಿವಿನ ಮೇಲೆ ನಿಂತ ವ್ಯವಸ್ಥೆ. ನಿಜವಾದ ಸ್ವಾತಂತ್ರ್ಯ…
ಜಮ್ಮು–ಕಾಶ್ಮೀರದಲ್ಲಿ ಮೇಘಸ್ಫೋಟ: 45 ಸಾವು
ಶ್ರೀನಗರ: ಜಮ್ಮು–ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪದ್ದಾರ್ ಉಪವಿಭಾಗದ ಚಶೋತಿ ಪ್ರದೇಶದಲ್ಲಿ ಗುರುವಾರ ಸಂಜೆ ಸಂಭವಿಸಿದ ಭಾರೀ ಮೇಘಸ್ಫೋಟದಿಂದ ಕನಿಷ್ಠ 45 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಮಚೈಲ್ ಮಾತಾ ಯಾತ್ರಿಕರು ಸೇರಿದ್ದಾರೆ. ಸುಮಾರು 120 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 35ಕ್ಕೂ ಹೆಚ್ಚು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅನೇಕರು ಕಾಣೆಯಾಗಿದ್ದಾರೆ. SDRF, NDRF, ಸೇನೆ, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಜಂಟಿಯಾಗಿ ಶೋಧ–ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸೇನೆಯ 300ಕ್ಕೂ ಹೆಚ್ಚು ಸೈನಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಮೇಘಸ್ಫೋಟದಿಂದ ಡಜನ್‌ಗಟ್ಟಲೆ ಮನೆಗಳು, ಸರ್ಕಾರಿ ಕಟ್ಟಡಗಳು, ದೇವಸ್ಥಾನಗಳು, ಗೋಶಾಲೆಗಳು ಮತ್ತು ಒಂದು ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಭಕ್ತರಿಗಾಗಿ ಸ್ಥಾಪಿಸಿದ್ದ ‘ಲಂಗರ್’ ಹಾಗೂ ತಾತ್ಕಾಲಿಕ ಅಂಗಡಿಗಳು ಸಂಪೂರ್ಣ ನಾಶವಾಗಿವೆ. ದುರಂತದ ಹಿನ್ನೆಲೆಯಲ್ಲಿ ಮಚೈಲ್ ಮಾತಾ ಯಾತ್ರೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಯಾತ್ರೆ ಜುಲೈ 25ರಂದು ಆರಂಭಗೊಂಡಿದ್ದು, ಸೆಪ್ಟೆಂಬರ್ 5ರಂದು…
ಆಪ್ ಸಿಂಧೂರ್ ಪಾಕಿಸ್ತಾನ ನಿದ್ರೆ ಭಂಗ; ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಘರ್ಜನೆ
ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪಾಕಿಸ್ತಾನದ ನಿದ್ರೆಯನ್ನು ಭಂಗಪಡಿಸಿದ್ದು, ಅಲ್ಲಿನ ವಿನಾಶದ ಪ್ರಮಾಣ ಅಗಾಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದರು. “ಭಾರತ ಇನ್ನು ಮುಂದೆ ಪರಮಾಣು ಬ್ಲ್ಯಾಕ್‌ಮೇಲ್‌ಗೆ ತಲೆಬಾಗುವುದಿಲ್ಲ. ಶತ್ರುಗಳು ದುಸ್ಸಾಹಸ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡುತ್ತವೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ” ಎಂದು ಅವರು ಎಚ್ಚರಿಸಿದರು. ಪಹಲ್ಗಾಂಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಆಪ್ ಸಿಂಧೂರ್‌ನಲ್ಲಿ, ಭಾರತೀಯ ಸೈನಿಕರು ಶತ್ರು ಪ್ರದೇಶದೊಳಗೆ ನೂರಾರು ಕಿಲೋಮೀಟರ್ ನುಗ್ಗಿ ಭಯೋತ್ಪಾದಕರ ಕೇಂದ್ರ ಕಚೇರಿಯನ್ನು ಧ್ವಂಸ ಮಾಡಿದ ಉದಾಹರಣೆ ನೀಡಿದ ಮೋದಿ, “ನಮ್ಮ ಧೈರ್ಯಶಾಲಿ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಶಿಕ್ಷೆ ನೀಡಿದ್ದಾರೆ” ಎಂದರು. “ಭಯೋತ್ಪಾದಕರು ಮತ್ತು ಅವರಿಗೆ ಆಶ್ರಯ ನೀಡುವವರಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಮಾನವೀಯತೆಗೆ ಸಮಾನ ಅಪಾಯ” ಎಂದು ಸ್ಪಷ್ಟಪಡಿಸಿದ ಪ್ರಧಾನಿ, 140 ಕೋಟಿ…
ಜಾಗತಿಕ ಶಿಕ್ಷಣ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ವಿಶೇಷ ಮೇಳ
ಬೆಂಗಳೂರು: ವಿದೇಶ ವ್ಯಾಸಂಗ ಶ್ರೀಮಂತರಿಗೆ ಮಾತ್ರವಲ್ಲ ಈಗ ಎಲ್ಲರಿಗೂ ಕೈಗೆಟುಕಲಿದೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಕನಸು ಕಂಡಿರುವವರಿಗೆ ಅದು ನನಸಾಗುವ ಕಾಲ ಬಂದಿದೆ. ಆರ್ಥಿಕವಾಗಿ ದುರ್ಬಲವಾಗಿರುವ, ಮಧ್ಯಮವರ್ಗದ ಹಿನ್ನೆಲೆಯ ವಿದ್ಯಾರ್ಥಿಗಳು ಸಹ ಈಗ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಯಾವುದೇ ತೊಂದರೆಯಿಲ್ಲದೇ ಪಡೆಯಬಹುದಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಆಗಸ್ಟ್ 17 ರ ಭಾನುವಾರ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಅಂತಾರಾಷ್ಟ್ರೀಯ ವಿದೇಶದಲ್ಲಿ ಅಧ್ಯಯನ ಮೇಳ – 2025 ಅನ್ನು ಆಯೋಜಿಸಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಪ್ರಮುಖ ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂಸ್ಥೆಗಳು ವಿಶ್ವದ ಟಾಪ್ 500 ರಲ್ಲಿ ಸ್ಥಾನ ಪಡೆದಿವೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ…
140 ಕೋಟಿ ಜನರ ಸಂಕಲ್ಪದ ಹಬ್ಬವಾಗಿ ಸ್ವಾತಂತ್ರ್ಯೋತ್ಸವ
ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪಾಕಿಸ್ತಾನದ ನಿದ್ರೆಯನ್ನು ಭಂಗಪಡಿಸಿದ್ದು, ಅಲ್ಲಿನ ವಿನಾಶದ ಪ್ರಮಾಣ ಅಗಾಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದರು. “ಭಾರತ ಇನ್ನು ಮುಂದೆ ಪರಮಾಣು ಬ್ಲ್ಯಾಕ್‌ಮೇಲ್‌ಗೆ ತಲೆಬಾಗುವುದಿಲ್ಲ. ಶತ್ರುಗಳು ದುಸ್ಸಾಹಸ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡುತ್ತವೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ” ಎಂದು ಅವರು ಎಚ್ಚರಿಸಿದರು. ಪಹಲ್ಗಾಂಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಆಪ್ ಸಿಂಧೂರ್‌ನಲ್ಲಿ, ಭಾರತೀಯ ಸೈನಿಕರು ಶತ್ರು ಪ್ರದೇಶದೊಳಗೆ ನೂರಾರು ಕಿಲೋಮೀಟರ್ ನುಗ್ಗಿ ಭಯೋತ್ಪಾದಕರ ಕೇಂದ್ರ ಕಚೇರಿಯನ್ನು ಧ್ವಂಸ ಮಾಡಿದ ಉದಾಹರಣೆ ನೀಡಿದ ಮೋದಿ, “ನಮ್ಮ ಧೈರ್ಯಶಾಲಿ ಸೈನಿಕರು ಶತ್ರುಗಳಿಗೆ ಕಲ್ಪನೆಗೂ ಮೀರಿದ ಶಿಕ್ಷೆ ನೀಡಿದ್ದಾರೆ” ಎಂದರು. “ಭಯೋತ್ಪಾದಕರು ಮತ್ತು ಅವರಿಗೆ ಆಶ್ರಯ ನೀಡುವವರಲ್ಲಿ ವ್ಯತ್ಯಾಸವಿಲ್ಲ. ಇಬ್ಬರೂ ಮಾನವೀಯತೆಗೆ ಸಮಾನ ಅಪಾಯ” ಎಂದು ಸ್ಪಷ್ಟಪಡಿಸಿದ ಪ್ರಧಾನಿ, 140 ಕೋಟಿ…
ಸೆಪ್ಟೆಂಬರ್‌ನಲ್ಲಿ ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಲೋಕಾರ್ಪಣೆ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ನಾಗರಿಕರ ಬಹುದಿನಗಳ ಕನಸಾದ ವೈದ್ಯಕೀಯ ಕಾಲೇಜು ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಸಚಿವರು ಈ ಮಾಹಿತಿ ನೀಡಿದರು. 433.94 ಕೋಟಿ ರೂ. ವೆಚ್ಚದಲ್ಲಿ ಈ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿತ್ತು. ಅದೀಗ ಶೇಕಡ 95ರಷ್ಟು ಪೂರ್ಣಗೊಂಡಿದ್ದು, ಉಳಿದ ಸಣ್ಣಪುಟ ಕೆಲಸಗಳು ಮುಂದಿನ ಕೆಲವೇ ದಿನಗಳಲ್ಲಿ ಮುಗಿಯಲಿದೆ ಎಂದರು. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ವೈದ್ಯಕೀಯ ಕಾಲೇಜಿನ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈಗಾಗಲೇ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಸ್ಥಳೀಯ ಶಾಸಕರೊಂದಿಗೆ ಎರಡು ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ…