ಶಾಂತಿಪಾಲನೆಯಲ್ಲಿ ಭಾರತವೇ ಭಾರತ ಅಗ್ರೇಸರ

ನವದೆಹಲಿ: “ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿ ಅಲ್ಲ, ಅದು ಘನತೆ, ಸಮಾನತೆ ಮತ್ತು ಹಂಚಿಕೆಯ ಉದ್ದೇಶದ ವಿಜಯ. ಆ ವಿಜಯದಲ್ಲಿ ಮಹಿಳೆಯರು ಮುನ್ನಡೆಸಬೇಕು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು. ನವದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ಆಗಸ್ಟ್ 18ರಿಂದ 29ರವರೆಗೆ ನಡೆದ ವಿಶ್ವಸಂಸ್ಥೆಯ ಮಹಿಳಾ ಮಿಲಿಟರಿ ಅಧಿಕಾರಿಗಳ ಕೋರ್ಸ್ (UNWMOC-2025) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ 15 ರಾಷ್ಟ್ರಗಳ ಮಹಿಳಾ ಮಿಲಿಟರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಸೌತ್ ಬ್ಲಾಕ್‌ನಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆದ್ದೇಶಿಸಿ ಮಾತನಾಡಿದ ಸಿಂಗ್, “ನೀವು ಬದಲಾವಣೆಯ ಪಥದರ್ಶಕರು. ನಿಮ್ಮ ಸಮರ್ಪಣೆ ಜಾಗತಿಕ ಭದ್ರತೆಯ ರಚನೆಯನ್ನು ಬಲಪಡಿಸುತ್ತದೆ. ಭಾರತವು ನಿಮ್ಮ ಕೊಡುಗೆಯನ್ನು ಹೆಮ್ಮೆಪಡುವುದರೊಂದಿಗೆ ನಿಮ್ಮ ಪ್ರಯಾಣಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಹೇಳಿದರು. ಮಹಿಳಾ ಶಾಂತಿಪಾಲಕರು ಸಂಘರ್ಷ ಪ್ರದೇಶಗಳಲ್ಲಿ ವಿಶಿಷ್ಟ ದೃಷ್ಟಿಕೋನ ತರುತ್ತಾರೆ, ವಿಶೇಷವಾಗಿ ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸ ನಿರ್ಮಾಣದಲ್ಲಿ ಅವರ ಪಾತ್ರ…