ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಬಾಲಿವುಡ್ ನಟರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರು ಜಾಹೀರಾತು ಮಾಡಿದ ಕಾರಿನಲ್ಲಿ ಉತ್ಪಾದನಾ ದೋಷವಿದೆ ಎಂದು ವಕೀಲ ಕೀರ್ತಿ ಸಿಂಗ್ ಆರೋಪಿಸಿದ್ದಾರೆ. 2022ರಲ್ಲಿ 23.97 ಲಕ್ಷ ರೂ.ಗೆ ಕಾರು ಖರೀದಿಸಿದ ಸಿಂಗ್, 51 ಸಾವಿರ ರೂ. ಮುಂಗಡ ಪಾವತಿಸಿ, 10 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದರು. ಡೀಲರ್‌ಶಿಪ್ “ಕಾರು ತೊಂದರೆ-ಮುಕ್ತ”ವಾಗಿರುತ್ತದೆ ಎಂದು ಭರವಸೆ ನೀಡಿದ್ದರೂ, ಕೆಲವೇ ತಿಂಗಳಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡವು ಎಂದು ಅವರು ದೂರು ನೀಡಿದ್ದಾರೆ. “ಓವರ್‌ಟೇಕ್ ಮಾಡುವಾಗ ಕಾರು ಸರಿಯಾಗಿ ವೇಗ ಪಡೆಯುವುದಿಲ್ಲ. ಆರ್‌ಪಿಎಂ ಮಾತ್ರ ಹೆಚ್ಚಾಗುತ್ತದೆ. ಹೆಚ್ಚಿನ ವೇಗದಲ್ಲಿ ಕಾರು ಕಂಪಿಸಿ ಅಸಾಮಾನ್ಯ ಶಬ್ದ ಮಾಡುತ್ತದೆ. ದೂರಮಾಪಕದಲ್ಲಿ ಪದೇ ಪದೇ ಎಚ್ಚರಿಕೆ ಸಂದೇಶ ಬರುತ್ತದೆ,” ಎಂದು ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಡೀಲರ್‌ಶಿಪ್‌ಗೆ ವಿಚಾರಿಸಿದಾಗ, ದೋಷವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಕಂಪನಿ…

ಮಾತೃಭೂಮಿ ಬಗ್ಗೆ ಗುಣಗಾನ ಮಹಾಪಾಪವೆ? ಕಾಂಗ್ರೆಸ್’ಗೆ ವಿಜಯೇಂದ್ರ ಪ್ರಶ್ನೆ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಗಮನಸೆಳೆದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ’ ಎಂದು ತೋರಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದ್ದಾರೆ. ‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ…’ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆ ಮಾತೃಭೂಮಿಗೆ ಧನ್ಯತೆ ಸಮರ್ಪಿಸುವ ಸಂಕೇತವನ್ನು ರವಾನಿಸುತ್ತದೆ, ರಾಷ್ಟ್ರಭಕ್ತಿ ಪ್ರೇರೇಪಿಸುತ್ತದೆ, ಇದು ಸಂಘಟನೆಯ ಗೀತೆಯಷ್ಟೇ ಅಲ್ಲ ದೇಶಭಕ್ತಿಯ ಬದ್ಧತೆಯನ್ನು ಜಗತ್ತಿಗೇ ಸಾರಿ ಹೇಳುವ ಗೀತೆ ಎಂದು ವಿಜಯೇಂದ್ರ ಹೇಳಿದ್ದಾರೆ. ನಮ್ಮನ್ನು ಹೆರುವ ತಾಯಿಗೆ ಮಡಿಲ ಆಸರೆ ನೀಡುವವಳು ಭೂಮಿತಾಯಿ. ಈ ಹಿನ್ನಲೆಯಲ್ಲಿಯೇ ‘ಮಾತೃ ಭೂಮಿ’ ಎಂದು ಜನ್ಮದಾತೆಯಷ್ಟೇ ಜನ್ಮಭೂಮಿಯನ್ನು ಆರಾಧಿಸುತ್ತೇವೆ, ತಾಯ್ನೆಲಕ್ಕಾಗಿ ನಮ್ಮನ್ನೇ ಸಮರ್ಪಿಸಿಕೊಳ್ಳುವಷ್ಟು ಭಾವುಕರಾಗುತ್ತೇವೆ. ಜನನಿ, ಜನ್ಮ ಭೂಮಿ ಮಹತ್ವ ತಿಳಿಸಿಕೊಟ್ಟು ರಾಷ್ಟ್ರ ಭಕ್ತಿ ಪಡಿಮೂಡಿಸುವ RSS ಪ್ರಾರ್ಥನೆ ಬಗ್ಗೆ ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಅಸಹನೆ ಏಕೆಂದರೆ ಗುಲಾಮಿ ಚೌಕಟ್ಟಿನಲ್ಲಿ…

FIDE ವಿಶ್ವಕಪ್ 2025ಕ್ಕೆ ಗೋವಾ ಆತಿಥ್ಯ: ‘ಭಾರತಕ್ಕೆ ಹೆಮ್ಮೆಯ ಕ್ಷಣ’ ಎಂದ ಪ್ರಧಾನಿ

ನವದೆಹಲಿ, ಆಗಸ್ಟ್ 26 (IANS): ಪ್ರಧಾನಿ ನರೇಂದ್ರ ಮೋದಿ ಅವರು FIDE ವಿಶ್ವಕಪ್ 2025 ರ ಆತಿಥ್ಯ ನಗರವಾಗಿ ಗೋವಾ ಆಯ್ಕೆಯಾಗಿರುವುದನ್ನು ಸ್ವಾಗತಿಸಿದ್ದು, ಇದನ್ನು ಭಾರತೀಯ ಚೆಸ್‌ಗೆ ‘ಹೆಮ್ಮೆಯ ಕ್ಷಣ’ ಎಂದು ಬಣ್ಣಿಸಿದ್ದಾರೆ. ಅಕ್ಟೋಬರ್ 30ರಿಂದ ನವೆಂಬರ್ 27ರವರೆಗೆ ನಡೆಯಲಿರುವ ವಿಶ್ವಕಪ್, 20 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಅತಿದೊಡ್ಡ ನಾಕೌಟ್ ಚೆಸ್ ಪ್ರದರ್ಶನವನ್ನು ತರಲಿದೆ. ಆದರೆ, ಐದು ಬಾರಿಯ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿಲ್ಲ. ‘ಭಾರತವು ಪ್ರತಿಷ್ಠಿತ FIDE ವಿಶ್ವಕಪ್ 2025 ಅನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ. ಚೆಸ್ ಯುವಕರಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಈ ಪಂದ್ಯಾವಳಿಯು ರೋಮಾಂಚಕ ಕ್ಷಣಗಳನ್ನು ನೀಡುತ್ತದೆ ಮತ್ತು ಪ್ರಪಂಚದ ಉನ್ನತ ಆಟಗಾರರ ಪ್ರತಿಭೆಯನ್ನು ಪ್ರದರ್ಶಿಸುತ್ತದೆ’ ಎಂದು ಮೋದಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಆರಂಭದಲ್ಲಿ ನವದೆಹಲಿಯನ್ನು ಆತಿಥೇಯ ನಗರವಾಗಿ ಪರಿಗಣಿಸಲಾಗಿದ್ದರೂ, ವ್ಯವಸ್ಥಾಪನಾ ಕಾಳಜಿಗಳ ಹಿನ್ನೆಲೆಯಲ್ಲಿ FIDE ಗೋವಾವನ್ನು…

ಗ್ಯಾರೆಂಟಿ ಹೆಸರಲ್ಲಿ ಕೈ ಕಾರ್ಯಕರ್ತರಿಗೆ 50 -60 ಸಾವಿರ ರೂ ಸಂಬಳ; ರಾಜ್ಯದ ಬೊಕ್ಕಸ ಬರಿದು?

ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಯಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಕಾಟು ಟೀಕೆ ಮಾಡಿರುವ ಜೆಡಿಎಸ್, ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ಎಂದು ವಿಶ್ಲೇಷಿಸಿದೆ. ತೆಲಂಗಾಣದಲ್ಲೂ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರ ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದೆ ಏನು ಜೆಡಿಎಸ್ ಪಕ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದೆ. ಕರ್ನಾಟಕದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿಹೊಡೆದು, ಆ ದುಡ್ಡಲ್ಲಿ ಸರ್ಕಾರ ರಚಿಸಿದ್ದ ತೆಲಂಗಾಣ ಕಾಂಗ್ರೆಸ್‌ ಇಂದು, ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ನಯಾಪೈಸೆ ಇಲ್ಲವಾಗಿದೆ. ಭಿಕ್ಷೆ ಬೇಡಿದರೂ ಒಂದು ರೂ. ಸಿಗುತ್ತಿಲ್ಲ. ಸರ್ಕಾರದ ಬೊಕ್ಕಸವೂ ಬತ್ತಿಹೋಗಿದೆ. ಅಡಮಾನವಿಟ್ಟು ಹಣ ಪಡೆಯಲು 1 ಇಂಚು ಜಾಗವೂ ಸಹ ಸರ್ಕಾರದ ಬಳಿ ಇಲ್ಲ ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಮ್ಮ…

ಡಿಕೆಶಿಗೆ ಸ್ವಾಭಿಮಾನ ಇದ್ದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಬಿಸಾಕಬೇಕಿತ್ತು; ಅಶೋಕ್

ಬೆಂಗಳೂರು: ವಿಧಾನಸಭೆಯಲ್ಲಿ ಆರೆಸ್ಸೆಸ್ ಪ್ರಾರ್ಥನೆ ಗೀತೆ ಹಾಡಿದ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಕ್ಷಮೆ ಯಾಚಿಸಿರುವ ಬೆಳವಣಿಗೆ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ಬೇಸರ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಡಿಕೆಶಿ ಅವರಿಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ, ಕಿಂಚಿತ್ತಾದರೂ ಧೈರ್ಯ ಇದ್ದಿದ್ದರೆ, ಕ್ಷಮೆ ಕೇಳಬಾರದಿತ್ತು. ಕೇಳಲೇಬೇಕು ಎನ್ನುವ ಒತ್ತಡ ಇದ್ದಿದ್ದರೆ ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅವರು ಸಾಮಾಜಿಕ ಮಾಧ್ಯಮ ‘X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ಆರ್ ಎಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೆಯ ಸಾಲಿನ ಸಾರಾಂಶ ಇಷ್ಟೇ. ‘ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ…