ಮಂಗಳೂರು ದಸರಾ: ಅಕ್ಟೊಬರ್ 2ರಂದು ಅದ್ಧೂರಿ ಶೋಭಾಯಾತ್ರೆ;

ಮಂಗಳೂರು: ಕರಾವಳಿಯಲ್ಲಿ ಮಂಗಳೂರು ದಸರಾ ಮಹೋತ್ಸವದ ವೈಭವ ಗರಿಗೆದರಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರವನ್ನು ಕೇಂದ್ರೀಕರಿಸಿ ನೆರವೇರುತ್ತಿರುವ ಅದ್ದೂರಿ ಮಂಗಳೂರು ದಸರಾದ ಆಕಷಣೆಯ ಕೇಂದ್ರಬಿಂದುವೆನಿಸಿರುವ ಶೋಭಾ ಯಾತ್ರೆಯು ಅಕ್ಟೊಬರ್ 2ರಂದು ನಡೆಯಲಿದೆ. ಮೈಸೂರು ದಸರಾ ಮಾದರಿಯಲ್ಲೇ ವಿಶ್ವವಿಖ್ಯಾತ ಉತ್ಸವವಾಗಿ ನೆರವೇರಿಸಲು ಕಸರತ್ತು ನಡೆಸಿರುವ ಕುದ್ರೋಳಿ ದೇವಾಲಯದ ಉತ್ಸವ ಸಮಿತಿ, ಅದ್ಧೂರಿ ಶೋಭಾಯಾತ್ರೆಗೆ ಬೇಕಾದ ವ್ಯವಸ್ಥೆಗಳಿಗೆ ಅಂತಿಮ ಸ್ಪರ್ಶ ನೀಡಿದೆ. ಈ ನಡುವೆ, ವರ್ಷಂಪ್ರತಿಯಂತೆ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಪ್ರತಿಪಾದಿಸಿದ್ದಾರೆ. ದಸರಾ ಮಹೋತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಶುಕ್ರವಾರ ಟ್ಯಾಬ್ಲೋ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶೋಭಾ ಯಾತ್ರೆಯನ್ನು ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಸಾಕ್ಷೀಕರಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಕಡೆಯಿಂದ ಕಲಾತಂಡಗಳು, ವಾದ್ಯ ತಂಡಗಳು, ಭಜನಾ ತಂಡಗಳು,…

ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ; ಗುತ್ತಿಗೆದಾರರ ಸಂಘ ಆರೋಪ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ದುಪ್ಪಟ್ಟಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್‌ಸಿಎ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್‌ಸಿಎ) ಅಧ್ಯಕ್ಷ ಆರ್. ಮಂಜುನಾಥ್ ಮತ್ತು ಜಿ.ಎಂ. ರವೀಂದ್ರ ಅವರು ಸಹಿ ಮಾಡಿದ ಪತ್ರದಲ್ಲಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಯಾವುದೇ ಲಂಚ ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದಾರೆ. ನಿರ್ಮಿತಿ ಕೇಂದ್ರಗಳು ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್‌ಐಡಿಎಲ್) ಅಡಿಯಲ್ಲಿರುವ ಯೋಜನೆಗಳನ್ನು ಶಾಸಕರು ಮತ್ತು ಸಚಿವರ ಅನುಯಾಯಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅವರು ಯೋಜನೆಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುತ್ತಾರೆ ಮತ್ತು ಲಂಚ ಪಡೆಯಬೇಕೆಂದು ಒತ್ತಾಯಿಸುತ್ತಾರೆ ಎಂದು ಪಾತ್ರದಲ್ಲಿ ಆರೋಪಿಸಲಾಗಿದೆ. “ಯೋಜನೆಗಳನ್ನು ನಮಗೆ ಉಪಗುತ್ತಿಗೆ ನೀಡಿದಾಗ…

ಸವಿತಾ ಜಾತಿಗಳನ್ನು ದಲಿತ ಸಮುದಾಯಕ್ಕೆ ಸೇರಿಸಲು ಹೆಚ್ಚಿದ ಒತ್ತಡ

ದಾವಣಗೆರೆ: ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ತಮ್ಮ ಸಮುದಾಯಗಳನ್ನು ದಲಿತ ಸಮುದಾಯವಾಗಿ ಗುರುತಿಸಬೇಕೆಂದು ಸವಿತಾ ಸಮುದಾಯದ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸವಿತಾ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಸವಿತಾ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ತಮ್ಮ ಸಮುದಾಯಗಳನ್ನು ದಲಿತ ಸಮುದಾಯವಾಗಿ ಪರಿಗಣಿಸಿ ಮೀಸಲಾತಿಯ ಲಾಭ ದೊರಕಿಸಿಕೊಡಬೇಕೆಂದು ಹಲವು ವರ್ಷಗಳಿಂದಲೇ ಹೋರಾಟ ನಡೆಯುತ್ತಿದೆ. ಕನಿಷ್ಠ ಪಕ್ಷ ಒಳ ಮೀಸಲಾತಿಯನ್ನಾದರೂ ಸರ್ಕಾರ ಕಲ್ಪಿಸಬಹುದಾಗಿತ್ತು ಎಂದು ಸವಿತಾ ಸಮಾಜ ಸಂಘದ ಅಧ್ಯಕ್ಷರಾದ ಎನ್.ರಂಗಸ್ವಾಮಿ ದಾವಣಗೆರೆಯಲ್ಲಿ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಎನ್.ರಂಗಸ್ವಾಮಿ, ಸವಿತಾ ಸಮಾಜಕ್ಕೆ ದಲಿತ ಸಮುದಾಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅನೇಕ ಬಾರಿ ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗಲೂ,…

ಕರೂರಿನಲ್ಲಿ ರಾಜಕೀಯ ರ್ಯಾಲಿ ವೇಳೆ ಕಾಲ್ತುಳಿತ: 36 ಸಾವು, ಪ್ರಧಾನಿ ಸಂತಾಪ

ಕರೂರು: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ಟಿವಿಕೆ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ–ರಾಜಕಾರಣಿ ವಿಜಯ್ ಭಾಷಣ ಕೇಳಲು ನೆರೆದ ದಟ್ಟವಾದ ಜನಸಮೂಹದಲ್ಲಿ ಕಾಲ್ತುಳಿತ ಸಂಭವಿಸಿ 36 ಜನರು ಮೃತಪಟ್ಟಿದ್ದು, 58ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಗಾಯಿತರಲ್ಲಿ ಮೂವರು ಮಕ್ಕಳು ತೀವ್ರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಶಕ್ತಿ ನೀಡಲಿ, ಗಾಯಿತರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ದುಃಖ ವ್ಯಕ್ತಪಡಿಸಿ ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಎಸ್‌ಟಿ ಸುಧಾರಣೆ, ಮೂಲಸೌಕರ್ಯ ವ್ಯವಸ್ಥೆ ಜನರಿಗೆ ಪ್ರಯೋಜನವಾಗಬೇಕೆಂಬುದೇ ಮೋದಿ ಆದ್ಯತೆ

ನವದೆಹಲಿ: ಜಿಎಸ್‌ಟಿ ಸರಳೀಕರಣ ಹಾಗೂ ನಾಗರಿಕರ ಮೊದಲ ಆದ್ಯತೆಯ ಮೂಲಸೌಕರ್ಯದಂತಹ ಕ್ರಮಗಳು ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಬರೆದ ಲೇಖನವನ್ನು ಹಂಚಿಕೊಂಡ ಅವರು, “ವಿವರಗಳಿಗೆ ಗಮನ ಹಾಗೂ ಶಿಸ್ತಿನ ಯೋಜನೆಗಳಿಂದ ಪ್ರಯೋಜನ ಪ್ರತಿಯೊಬ್ಬ ನಾಗರಿಕರಿಗೆ ತಲುಪುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಪುರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ‘ನರೇಂದ್ರ ಮೋದಿಯವರ ವೃತ್ತಿಪರತೆ ಹಾಗೂ ನಿಷ್ಕಳಂಕ ಕೆಲಸದ ಶೈಲಿಯೇ ಪ್ರಧಾನಿಯನ್ನು ವಿಭಿನ್ನಗೊಳಿಸುತ್ತದೆ. ಅವರ ಶಿಸ್ತು ದೃಷ್ಟಿಯನ್ನು ಬಾಳಿಕೆ ಬರುವ ವ್ಯವಸ್ಥೆಗಳಾಗಿ ಪರಿವರ್ತಿಸುತ್ತದೆ” ಎಂದಿದ್ದಾರೆ. ಸಭೆಯ ಮೊದಲು ಪ್ರತಿಯೊಂದು ಕಡತವನ್ನು ತಾಳ್ಮೆಯಿಂದ ಪರಿಶೀಲಿಸುವ ಶೈಲಿಯೇ ಅವರಿಂದ ನಿರೀಕ್ಷಿಸುವ ನಿಖರತೆಯನ್ನು ತೋರಿಸುತ್ತದೆ ಎಂದು ಗಮನಸೆಳೆದಿದ್ದಾರೆ. “ಚರ್ಚೆಗಳು ನಾಗರಿಕವಾಗಿರುತ್ತವೆ ಆದರೆ ನಿರ್ದಾಕ್ಷಿಣ್ಯವಾಗಿಯೂ ಇರುತ್ತವೆ. ಬಲವಾದ ವಾದಗಳಿಗೆ ಸದಾ ಆದ್ಯತೆ ದೊರಕುತ್ತದೆ. ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಯೋಜಿಸುವುದು ಮತ್ತು ಯಶಸ್ಸಿನ ಮಾಪಕಗಳನ್ನು…

ಬೆಂಗಳೂರು–ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು

ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ಸೂಪರ್‌ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಮೂರು ದಶಕಗಳಿಂದ ಬಾಕಿ ಉಳಿದ ಬೇಡಿಕೆ ಈಡೇರಿದಂತಾಗಿದ್ದು, ಈಗಾಗಲೇ ಉದ್ಯಾನ ಎಕ್ಸ್‌ಪ್ರೆಸ್ ಒಂದೇ ರೈಲು ಕಾರ್ಯನಿರ್ವಹಿಸುತ್ತಿತ್ತು. ಹೊಸ ಸೇವೆಯಿಂದ ಲಕ್ಷಾಂತರ ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಸುಗಮ ಸಂಚಾರ ಸಿಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿರುವ ತೇಜಸ್ವಿ, ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. I have some great news for people of Bengaluru and Mumbai. From last 30 years, our two great cities were connected by only one super fast train -Udyan Express. Even that train took…

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಲ್ಡರ್‌ಗಳ ವಿರುದ್ಧ ಆರು ಪ್ರಕರಣ

ನವದೆಹಲಿ: ಸಾವಿರಾರು ಮನೆ ಖರೀದಿದಾರರನ್ನು ವಂಚಿಸಿದ ಆರೋಪ ಹೊತ್ತಿರುವ ಬಿಲ್ಡರ್‌ಗಳ ವಿರುದ್ಧ ಸಿಬಿಐ ಭಾರೀ ದಾಳಿ ನಡೆಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಕೋಲ್ಕತ್ತಾ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ ಶನಿವಾರ 12 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ವಿವಿಧ ದಾಖಲೆಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. ಮನೆ ಖರೀದಿದಾರರು ಸಲ್ಲಿಸಿದ್ದ ಅರ್ಜಿಗಳ ಆಧಾರದ ಮೇಲೆ ತನಿಖೆ ಆರಂಭಗೊಂಡಿದ್ದು, ಗೃಹಸಾಲದ ವಿವಾದಾತ್ಮಕ ಸಬ್ವೆನ್ಷನ್ ಯೋಜನೆ ಮೂಲಕ ಬಿಲ್ಡರ್‌ಗಳು ಮತ್ತು ಸಾಲದಾತರ ನಡುವೆ ಅಸಮರ್ಪಕ ಸಂಬಂಧವಿದೆ ಎಂದು ಸುಪ್ರೀಂ ಕೋರ್ಟ್ ಹಿಂದೆಯೇ ಗಮನಿಸಿದೆ. ಅದರಂತೆ, ಏಳು ಪ್ರಾಥಮಿಕ ವಿಚಾರಣೆಗಳನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಇದಕ್ಕೂ ಮೊದಲು NCR ಪ್ರದೇಶದಲ್ಲಿ 22 ಎಫ್‌ಐಆರ್‌ಗಳನ್ನು ದಾಖಲಿಸಿದ್ದ ಸಿಬಿಐ, ಇದೀಗ NCR ಹೊರಗಿನ ಯೋಜನೆಗಳನ್ನು ಒಳಗೊಂಡ ಏಳನೇ ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್ ಸೂಚನೆಯಂತೆ ಆರು ನಿಯಮಿತ ಪ್ರಕರಣಗಳನ್ನು ದಾಖಲಿಸಿದೆ. ಇಥಾಕಾ ಎಸ್ಟೇಟ್…

ಸರ್ಕಾರಿ ಗೌರವಗಳೊಂದಿಗೆ ಸಾಹಿತಿ ಎಸ್.ಎಲ್. ಭೈರಪ್ಪ ಅಂತ್ಯಕ್ರಿಯೆ

ಮೈಸೂರು: ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12:30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಬ್ರಾಹ್ಮಣ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನದಲ್ಲಿ ಪೊಲೀಸ್ ಪಡೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿತು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಟಿ.ಎಸ್. ಶ್ರೀವತ್ಸ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ನಮನ ಸಲ್ಲಿಸಿದರು. ರಾಷ್ಟ್ರಧ್ವಜವನ್ನು ಪ್ರಹ್ಲಾದ್ ಜೋಷಿ ಹಾಗೂ ಮಹದೇವಪ್ಪ ಅವರು ಭೈರಪ್ಪರ ಪುತ್ರರಾದ ರವಿಶಂಕರ್ ಮತ್ತು ಉದಯ್ ಶಂಕರ್ ಅವರಿಗೆ ಹಸ್ತಾಂತರಿಸಿದರು. ಪುತ್ರರು ಅಂತಿಮ ವಿಧಿ ನೆರವೇರಿಸಿದ ವೇಳೆ, ಭೈರಪ್ಪರ ಇಚ್ಛೆಯಂತೆ ಉದಯೋನ್ಮುಖ ಲೇಖಕಿ ಸಹನಾ ವಿಜಯ್‌ಕುಮಾರ್ ಸಹ ಹಾಜರಿದ್ದರು. ವಿಧಿ ವಿಧಾನಗಳ ಬಳಿಕ ಪುತ್ರರ ಜೊತೆಗೂಡಿ ಅವರು ಭೈರಪ್ಪರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಬಾಂಗ್ಲಾದೇಶದಲ್ಲಿ ಶಾಂತಿಯುತ ಪ್ರಜಾಪ್ರಭುತ್ವ ಪರಿವರ್ತನೆ ನಿರೀಕ್ಷೆ: ಭಾರತ

ನವದೆಹಲಿ: ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾಮಾನ್ಯ ಚುನಾವಣೆಗಳು ಮುಕ್ತ, ನ್ಯಾಯಯುತ, ವಿಶ್ವಾಸಾರ್ಹ ಹಾಗೂ ಎಲ್ಲರನ್ನೂ ಒಳಗೊಂಡ ರೀತಿಯಲ್ಲಿ ನಡೆಯಬೇಕು ಎಂಬುದು ಭಾರತದ ನಿರೀಕ್ಷೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ತಿಳಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ MEA ವಕ್ತಾರ ರಣಧೀರ್ ಜೈಸ್ವಾಲ್, “ಫೆಬ್ರವರಿ ಚುನಾವಣೆಯ ಮೂಲಕ ಸುಗಮ ಮತ್ತು ಶಾಂತಿಯುತ ಪ್ರಜಾಪ್ರಭುತ್ವ ಪರಿವರ್ತನೆ ನಡೆಯಬೇಕೆಂಬುದು ನಮ್ಮ ನಿರೀಕ್ಷೆ” ಎಂದು ಸ್ಪಷ್ಟಪಡಿಸಿದರು. ಈ ನಡುವೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಫೆಬ್ರವರಿ 15, 2026ರೊಳಗೆ ಚುನಾವಣೆಗಳು ನಡೆಯಲಿವೆ ಎಂದು ಘೋಷಿಸಿದ್ದು, ಯಾವುದೇ ಅಡ್ಡಿಪಡಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಎಚ್ಚರಿಸಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಪತನದ ನಂತರದಿಂದ ಬಾಂಗ್ಲಾದೇಶ ರಾಜಕೀಯ ಅನಿಶ್ಚಿತತೆಯಲ್ಲಿ ಸಿಲುಕಿದೆ.

ಬಿಹಾರ ಚುನಾವಣೆಯಲ್ಲಿ ಮತ ಖರೀದಿಗಾಗಿ NDAಯಿಂದ ಭಾರೀ ಹಣ ರವಾನೆ; ಪ್ರಿಯಾಂಕಾ ಆರೋಪ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತ ಖರೀದಿಸಲು ಎನ್‌ಡಿಎ ಸರ್ಕಾರವೇ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ “ಶಕ್ತಿ ಅಧಿಕಾರ ಮಹಿಳಾ ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರ ಶಕ್ತಿಯನ್ನು ರಾಜಕೀಯ ಪಕ್ಷಗಳು ಚೆನ್ನಾಗಿ ಅರಿತಿವೆ. ಅದಕ್ಕಾಗಿ ಚುನಾವಣೆಗೂ ಮೊದಲು 10,000 ರೂ. ನೀಡಲಾಗುತ್ತಿದೆ. ನಿಮ್ಮ ಬೆಂಬಲವಿಲ್ಲದೆ ಅವರಿಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದಿದ್ದಾರೆ” ಎಂದು ವ್ಯಂಗ್ಯವಾಡಿದರು. ಮಹಿಳೆಯರ ಜೀವನಮಟ್ಟ ಸುಧಾರಿಸಲು ಮಹಾಮೈತ್ರಿಕೂಟದ ಐದು ಅಂಶಗಳ ಭರವಸೆಯನ್ನು ಪ್ರಿಯಾಂಕಾ ಪ್ರಕಟಿಸಿದರು. ಇದರಲ್ಲಿ ಪ್ರತೀ ಮಹಿಳೆಗೆ ಮಾಸಿಕ 2,500 ರೂ. ಭತ್ಯೆ, ಆರೋಗ್ಯ ವಿಮೆ 25 ಲಕ್ಷ ರೂ.ವರೆಗೆ, ಭೂಹೀನ ಕುಟುಂಬಗಳಿಗೆ ಉಚಿತ ಜಮೀನು ಹಂಚಿಕೆ, ಮಹಿಳೆಯರ ಹೆಸರಿನಲ್ಲಿ ನೋಂದಣಿ, ಉದ್ಯೋಗ ಸೃಷ್ಟಿ ಮೊದಲಾದವು ಸೇರಿವೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು…