ಸಿಎಂ ಆಗುವ ಕಾಲ ಸನ್ನಿಹಿತ..?’; ಈ ಬಗ್ಗೆ ಡಿಕೆಶಿ ಸ್ಪಷ್ಟನೆ

ಬೆಂಗಳೂರು: ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಡಿಕೆಶಿ, ‘ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ. ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಕೆಲವರು ಕೇಳಿದ ಪ್ರಶ್ನೆಯನ್ನು ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡಿ ವಿವಾದ ಸೃಷ್ಟಿಸುತ್ತಿರುವುದು ಬೇಸರ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ‘ನನಗೆ ನನ್ನ ಗುರಿ ಗೊತ್ತಿದೆ, ನನಗೆ ಯಾವ ಆತುರವೂ ಇಲ್ಲ, ಈ ರೀತಿ ಹೇಳುವ ಅವಶ್ಯಕತೆಯೂ ಇಲ್ಲ’ ಎಂದವರು ಹೇಳಿದ್ದಾರೆ. ‘ನಾನು ಯಾವುದೇ ಹುದ್ದೆಗಾಗಿ ಆತುರದಲ್ಲಿಲ್ಲ. ರಾಜ್ಯದ ಜನರ ಸೇವೆ ಮತ್ತು ಬೆಂಗಳೂರು ನಾಗರಿಕರಿಗೆ ಉತ್ತಮ ಆಡಳಿತ ನೀಡುವುದೇ ನನ್ನ ಉದ್ದೇಶ. ನಾನು ಸಾರ್ವಜನಿಕರ ಸೇವೆಗಾಗಿಯೇ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ. ಸತ್ಯವನ್ನು ತಿರುಚಿ, ದಾರಿ ತಪ್ಪಿಸುವ ವರದಿಗಳಿಂದ ದೂರವಿರುವಂತೆ ಮಾಧ್ಯಮ ಮಿತ್ರರಲ್ಲಿ ನನ್ನ ಮನವಿ’…

ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ‘ಡೆವಿಲ್’ ಚಿತ್ರದ ಹೊಸ ಹಾಡು

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಇದೀಗ ಹಾಡುಗಳ ಮೂಲಕ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದು, ಹೊಸ ಹಾಡೊಂದು ಬಿಡುಗಡೆಯಾದ ಕ್ಷಣದಿಂದಲೇ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ‘ಒಂದೆ ಒಂದು ಸಲ’ ಎಂಬ ಶೀರ್ಷಿಕೆಯ ಸುಮಧುರ ಹಾಡು ಸರಿಗಮಪ ಸಂಸ್ಥೆಯ ಮೂಲಕ ಬಿಡುಗಡೆಯಾಗಿದ್ದು, ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಸಂಪಾದಿಸಿದೆ. ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದು, ಕಪಿಲ್ ಕಪಿಲನ್ ಮತ್ತು ಚಿನ್ಮಯಿ ಶ್ರೀಪಾದ ಕಂಠ ನೀಡಿದ್ದು, ಸಂಗೀತ ಸಂಯೋಜನೆಗೆ ಅಜನೀಶ್ ಲೋಕನಾಥ್ ಸಹಕರಿಸಿದ್ದಾರೆ. ಸಂತು ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದು, ದರ್ಶನ್ ಮತ್ತು ರಚನಾ ರೈ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸುತ್ತಿದ್ದು, ವಿಜಯಲಕ್ಷ್ಮಿ ದರ್ಶನ್ ಸೇರಿದಂತೆ ತಂಡದವರು ಪ್ರಚಾರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿನ ಪ್ರತಿ ಹಾಡು ಕ್ರಮವಾಗಿ ಬಿಡುಗಡೆಯಾಗುವ…

RSS ಶತಮಾನೋತ್ಸವ ನಾಣ್ಯಗಳು, ಅಂಚೆಚೀಟಿಗಳು ಆನ್‌ಲೈನ್‌ನಲ್ಲಿ ಲಭ್ಯ

ನವದೆಹಲಿ: ಕೋಲ್ಕತ್ತಾ ಟಂಕಸಾಲೆ ಹೊರಡಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS ) 100 ನೇ ವಾರ್ಷಿಕೋತ್ಸವವನ್ನು ಗುರುತಿಸಲು ‘ಸ್ಮರಣಾರ್ಥ ನಾಣ್ಯ’ಗಳನ್ನು ಬಿಡುಗಡೆ ಮಾಡಲಾಗಿದೆ. ಅಧಿಕೃತ ವೆಬ್‌ಸೈಟ್ https://indiagovtmint.in/hi/product-category/kolkata-mint/ ಮೂಲಕ ಆನ್‌ಲೈನ್‌ನಲ್ಲಿ ಇವುಗಳನ್ನು ಖರೀದಿಸಬಹುದು. ರಾಷ್ಟ್ರೀಯ ಏಕತೆ ಮತ್ತು ಸೇವೆಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಪ್ರಮುಖ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾದ ಆರ್‌ಎಸ್‌ಎಸ್‌ನ 100ನೇ ವಾರ್ಷಿಕೋತ್ಸವವನ್ನು ಗುರುತಿಸಲು ಭಾರತ ಸರ್ಕಾರ ವಿಶೇಷ ‘ಸ್ಮರಣಾರ್ಥ ನಾಣ್ಯ’ ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದೆ. ಆರ್‌ಎಸ್‌ಎಸ್‌ನ ಶತಮಾನಗಳ ಸಮರ್ಪಣೆ ಮತ್ತು ಸಾಮಾಜಿಕ ಪ್ರಭಾವದ ಪ್ರಯಾಣದ ಮಹತ್ವವನ್ನು ಎತ್ತಿ ತೋರಿಸುವ ಪ್ರಯತ್ನ ಇದಾಗಿದೆ. ಆರ್‌ಎಸ್‌ಎಸ್‌ನ ಪರಂಪರೆಯನ್ನು ಗೌರವಿಸಲು ವಿನ್ಯಾಸಗೊಳಿಸಲಾದ ಈ ನಾಣ್ಯಗಳು ಉತ್ಸಾಹಿಗಳು ಮತ್ತು ಬೆಂಬಲಿಗರಿಗೆ ಅಮೂಲ್ಯವಾದ ಸಂಗ್ರಹಯೋಗ್ಯ ವಸ್ತುಗಳಾಗುವ ನಿರೀಕ್ಷೆಯಿದೆ. ನಾಣ್ಯಗಳ ಜೊತೆಗೆ ಬಿಡುಗಡೆಯಾದ ವಿಶೇಷ ಅಂಚೆಚೀಟಿಗಳನ್ನು ದೇಶಾದ್ಯಂತದ ಅಂಚೆಚೀಟಿ ಸಂಗ್ರಹಣಾ ಬ್ಯೂರೋಗಳಲ್ಲಿ ಪಡೆಯಬಹುದು, ಇದು ಅಂಚೆಚೀಟಿ ಸಂಗ್ರಹಿಸುವವರು ಮತ್ತು ಸಾರ್ವಜನಿಕರಿಗೆ ಈ ಐತಿಹಾಸಿಕ ಮೈಲಿಗಲ್ಲಿನ…

ಒಳನುಸುಳುವಿಕೆ ತಡೆಯಲು ‘3D ನೀತಿ’ ಪರಿಣಾಮಕಾರಿ ಅಸ್ತ್ರ; ಅಮಿತ್ ಶಾ

ನವದೆಹಲಿ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಪೌರತ್ವ ನೀಡುವುದು ಭಾರತದ ನಾಯಕರು ನೀಡಿದ ಐತಿಹಾಸಿಕ ಭರವಸೆಯನ್ನು ಈಡೇರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮೂಲಕ ಸಾಕಾರಗೊಂಡ ಬದ್ಧತೆಯಾಗಿದೆ ಎಂದವರು ಹೇಳಿದ್ದಾರೆ. ವಿರೋಧ ಪಕ್ಷಗಳು ಸಿಎಎ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಆರೋಪಿಸಿದ ಅಮಿತ್ ಶಾ, ಸ್ವಾತಂತ್ರ್ಯದ ನಂತರ ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವವರಿಗೆ ಆಶ್ರಯ ನೀಡುವ ಮೂಲಕ ದಶಕಗಳ ಆಡಳಿತ ವೈಫಲ್ಯಗಳನ್ನು ಇದು ಸರಿಪಡಿಸುತ್ತದೆ ಎಂದು ಪ್ರತಿಪಾದಿಸಿದರು. ಅಂತಹ ದಬ್ಬಾಳಿಕೆಗೆ ಒಳಗಾದ ಪ್ರತಿಯೊಬ್ಬ ಅಲ್ಪಸಂಖ್ಯಾತ ಕೂಡಾ ಭಾರತದಲ್ಲಿ ಆಶ್ರಯ ಪಡೆಯಲು ಸರಿಯಾದ ಹಕ್ಕನ್ನು ಹೊಂದಿದ್ದಾರೆ, ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಅಕ್ರಮವಾಗಿ ಪ್ರವೇಶಿಸುವವರು,…