ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿ, ಅರ್ಜಿದಾರರು ಈ ವಿಷಯವನ್ನು ಭಾರತ ಚುನಾವಣಾ ಆಯೋಗ (ಇಸಿಐ)ದ ಮುಂದೆ ಎತ್ತಿಕೊಳ್ಳುವಂತೆ ಸೂಚಿಸಿತು. ಅರ್ಜಿದಾರರ ಪರ ವಕೀಲರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದರು. ಆದರೆ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ಅಗತ್ಯವಿಲ್ಲ ಎಂದು ತೀರ್ಮಾನಿಸಿ, ಅರ್ಜಿದಾರರು ಕಾನೂನಿನಡಿ ಲಭ್ಯವಿರುವ ಮಾರ್ಗಗಳನ್ನು ಅನುಸರಿಸಬಹುದು ಎಂದು ತಿಳಿಸಿತು. ಈ ಪಿಐಎಲ್‌ನಲ್ಲಿ “ಒಬ್ಬ ವ್ಯಕ್ತಿ, ಒಂದು ಮತ” ಎಂಬ ಸಂವಿಧಾನಿಕ ತತ್ವವನ್ನು ಕಾಯ್ದುಕೊಳ್ಳಲು ತುರ್ತು ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಿದೆ ಎಂದು ವಾದಿಸಲಾಗಿತ್ತು. ಅರ್ಜಿಯ…
Day: October 13, 2025
ಮಾಜಿ ಪ್ರಧಾನಿ ದೇವೇಗೌಡರು ಚೇತರಿಕೆ; ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂಪೂರ್ಣ ಚೇತರಿಸಿಕೊಂಡು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಒಂದು ವಾರದಿಂದ ಅವರು ಅಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರ ಆರೋಗ್ಯದಲ್ಲಿ ಈಗ ಗಮನಾರ್ಹ ಸುಧಾರಣೆ ಕಂಡುಬಂದಿದೆ. ವೈದ್ಯರ ಸಲಹೆಯ ಮೇರೆಗೆ ಅವರಿಗೆ ಆಸ್ಪತ್ರೆಯಿಂದ ಬಿಡುಗಡೆ ನೀಡಲಾಗಿದ್ದು, ಅವರು ನೇರವಾಗಿ ತಮ್ಮ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ್ದಾರೆ. ವೈದ್ಯರ ಪ್ರಕಾರ ದೇವೇಗೌಡರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಮುಂದಿನ ಕೆಲವು ದಿನಗಳು ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.
ನೆರೆಬಾಧಿತ ರೈತರ ಹೇಳತೀರದ ಗೋಳು; ಇಲ್ಲಿ ಮರಿ ಖರ್ಗೆ ಅವರಿಗೆ RSS ನಿಷೇಧ ಮಾಡುವ ಗೀಳು!
ಬೆಂಗಳೂರು: ರಾಜ್ಯದಲ್ಲಿ RSS ನಿಷೇಧಿಸಲು ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದಿರುವ ಬೆಳವಣಿಗೆ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಹೇಳತೀರದ ಗೋಳು; ಇಲ್ಲಿ ಮರಿ ಖರ್ಗೆ ಅವರಿಗೆ RSS ನಿಷೇಧ ಮಾಡುವ ಗೀಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ, ಬಂದ್ ಮಾಡುತ್ತಿದ್ದಾರೆ ಎಂದು ಅಶೋಕ್ ಗಮನ ಸೆಳೆದಿದ್ದಾರೆ. ಆದರೆ ಇಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ ಎಸ್ಎಸ್ ಬಗ್ಗೆ ಸಿಎಂಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿರುವ ಅಶೋಕ್, ‘ಆರ್ ಎಸ್ಎಸ್ ನಿಷೇಧ ಮಾಡುವ ಗೀಳು ಬಿಡಿ.…
ಮೊದಲ ತ್ರೈಮಾಸಿಕದಲ್ಲಿ ದೇಶದ ಚಿಲ್ಲರೆ ಪಾವತಿಗಳಲ್ಲಿ 99.8% ಡಿಜಿಟಲ್ ವ್ಯವಹಾರಗಳು
ನವದೆಹಲಿ: ದೇಶದ ಚಿಲ್ಲರೆ ಪಾವತಿಗಳಲ್ಲಿ ಡಿಜಿಟಲ್ ವಹಿವಾಟುಗಳು ಹೊಸ ಮೈಲುಗಲ್ಲು ಮುಟ್ಟಿವೆ. 2026ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಒಟ್ಟು ಚಿಲ್ಲರೆ ಪಾವತಿಗಳಲ್ಲಿ ಡಿಜಿಟಲ್ ಪಾವತಿಗಳು 99.8 ಪ್ರತಿಶತದಷ್ಟು ಪಾಲು ಪಡೆದಿವೆ ಎಂದು ಕೇರ್‌ಎಡ್ಜ್ ಅನಾಲಿಟಿಕ್ಸ್ ಮತ್ತು ಅಡ್ವೈಸರಿ ಸಂಸ್ಥೆಯ ಹೊಸ ವರದಿ ತಿಳಿಸಿದೆ. ನೀತಿ ಉತ್ತೇಜನ, ಬಲವಾದ ತಾಂತ್ರಿಕ ಮೂಲಸೌಕರ್ಯ ಮತ್ತು ಫಿನ್‌ಟೆಕ್ ಕ್ಷೇತ್ರದ ನುಗ್ಗುವಿಕೆಗಳಿಂದ ಕಾಗದ ಆಧಾರಿತ ಸಾಧನಗಳಾದ ಚೆಕ್‌ಗಳ ಬಳಕೆ ಬಹುತೇಕ ನಿಂತುಹೋಗಿದೆ ಎಂದು ವರದಿ ಹೇಳಿದೆ. ಏಕೀಕೃತ ಪಾವತಿ ಇಂಟರ್ಫೇಸ್ (UPI), ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AePS), ತಕ್ಷಣದ ಪಾವತಿ ಸೇವೆ (IMPS) ಮುಂತಾದ ವೇದಿಕೆಗಳು ಈ ಬದಲಾವಣೆಗೆ ಪ್ರಮುಖ ಚಾಲಕರಾಗಿದ್ದು, 2026ರ ಮೊದಲ ತ್ರೈಮಾಸಿಕದ ಅಂಕಿಅಂಶಗಳ ಪ್ರಕಾರ ಪಾವತಿ ಮೌಲ್ಯದ 92.6 ಪ್ರತಿಶತ ಮತ್ತು ವಹಿವಾಟಿನ ಪ್ರಮಾಣದ 99.8 ಪ್ರತಿಶತವನ್ನು ಹೊಂದಿವೆ. ಕೇರ್‌ಎಡ್ಜ್ ವರದಿಯ ಪ್ರಕಾರ, “ಮಾರ್ಚ್ 2021ರಲ್ಲಿ…
