ನವದೆಹಲಿ: ಮಹಿಳೆಯರಲ್ಲಿ ಮುಂಚಿನ ಋತುಬಂಧ (Early Menopause) ಉಂಟಾದರೆ, ಅದು ಹೃದಯದ ಕಾರ್ಯಕ್ಷಮತೆ ಹಾಗೂ ಮೆದುಳಿನ ಅರಿವಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನವೊಂದು ಬೆಳಕುಚೆಲ್ಲಿದೆ. ಹಿಂದಿನ ಹಲವು ಅಧ್ಯಯನಗಳು ಮುಂಚಿನ ಋತುಬಂಧವು ಆಲ್ಝೈಮರ್ ಬುದ್ಧಿಮಾಂದ್ಯತೆ ಹಾಗೂ ಸ್ಮರಣಶಕ್ತಿ ಕುಗ್ಗುವಿಕೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದರೂ, ಹೃದಯದ ಕಾರ್ಯಕ್ಷಮತೆಯ ಇಳಿಕೆ ಈ ಪ್ರಕ್ರಿಯೆಯಲ್ಲಿ ಯಾವ ರೀತಿಯಲ್ಲಿ ಪಾತ್ರವಹಿಸುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ. ವೈಜ್ಞಾನಿಕರು ಹೇಳುವಂತೆ, ಹೃದಯದ ಕಾರ್ಯ ಕುಂದಿದಾಗ ಮೆದುಳಿಗೆ ತಕ್ಕಮಟ್ಟಿನ ಆಮ್ಲಜನಕ ಮತ್ತು ಪೋಷಕಾಂಶಗಳು ತಲುಪುವುದಿಲ್ಲ. ಇದರ ಪರಿಣಾಮವಾಗಿ ಮೆದುಳಿನ ಅಂಗಾಂಶ ಹಾನಿಗೊಳಗಾಗುತ್ತದೆ, ಮೌನ ಪಾರ್ಶ್ವವಾಯುಗಳು (Silent Strokes) ಸಂಭವಿಸಬಹುದು ಹಾಗೂ ಬುದ್ಧಿಮಾಂದ್ಯತೆ ಅಪಾಯ ಹೆಚ್ಚಾಗುತ್ತದೆ. ಇದು ಹೃದಯ ಮತ್ತು ಮೆದುಳಿನ ಆರೋಗ್ಯದ ಮಧ್ಯೆ ಇರುವ ಆಳವಾದ ಸಂಬಂಧವನ್ನು ತೋರಿಸುತ್ತದೆ. ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕಿ ಟ್ಯಾಲಿನ್ ಸ್ಪ್ಲಿಂಟರ್ ಹೇಳುವಂತೆ,…
Month: October 2025
ಸಿದ್ದರಾಮಯ್ಯ ಬದಲಾವಣೆ, ಜಾರಕಿಹೊಳಿಗೆ ನಾಯಕತ್ವ? ಯತೀಂದ್ರ ಹೇಳಿಕೆಯ ಅಚ್ಚರಿ
ಬೆಂಗಳೂರು: ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕ ಹಾಗೂ ಪ್ರಗತಿಪರ ಚಿಂತನೆ ಹೊಂದಿರುವ ಸತೀಶ್ ಜಾರಕಿಹೊಳಿ ಅವರು ನಾಯಕತ್ವ ವಹಿಸಬಹುದು ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸನ್ನಿಹಿತವೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಯತೀಂದ್ರರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ, ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯೇ ಇಲ್ಲ. ಹೈಕಮಾಂಡ್ ಇದನ್ನು ಸ್ಪಷ್ಟಪಡಿಸಿದೆ’ ಎಂದಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆಯ ಕುರಿತಂತೆ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂತ್ರಾಲಯ ಪ್ರವಾಸದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, “ಯತೀಂದ್ರ ಏನು ಹೇಳಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ” ಎಂದರು. “ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಪಕ್ಷದ…
2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ
ರಾಯಚೂರು: “2028ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಕಾರ್ಯಕರ್ತರು ಸಿದ್ಧತೆ ಪ್ರಾರಂಭಿಸಬೇಕು,” ಎಂದು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಪಂಚಮುಖಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ವ್ಯಕ್ತಿಗಳಿಗಿಂತ ಶ್ರೇಷ್ಠ ಎಂಬುದನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು ಎಂದು ಹೇಳಿದರು. “ಪಕ್ಷವೇ ನಮಗೆ ಅಸ್ತಿತ್ವ ನೀಡಿದೆ. ಪಕ್ಷದ ಆಶ್ರಯದಿಂದಲೇ ನಾನು ಉಪಮುಖ್ಯಮಂತ್ರಿಯಾಗಿದ್ದೇನೆ, ಬಸನಗೌಡ ದದ್ದಲ್ ಶಾಸಕರಾಗಿದ್ದಾರೆ, ಮತ್ತು ಎನ್.ಎಸ್. ಬೋಸರಾಜು ಸಚಿವರಾಗಿದ್ದಾರೆ,” ಎಂದರು. “ಪಕ್ಷದ ಕಾರ್ಯಕರ್ತರ ಸೇವೆ ಹಾಗೂ ನಿಷ್ಠೆಗೆ ಗೌರವ ನೀಡಲಾಗುತ್ತದೆ. ಯಾವುದೇ ಹುದ್ದೆಯನ್ನು ಅಲ್ಪ ಎಂದು ಭಾವಿಸಬೇಡಿ; ರಾಜಕೀಯದಲ್ಲಿ ಯಾರಾದರೂ ಯಾವುದೇ ಮಟ್ಟಕ್ಕೆ ಏರಬಹುದು,” ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. “ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಾವು ಐದು ಖಾತರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಅಣಕಿಸಿದರೂ, ನಮ್ಮ ಮೊದಲ ಸಚಿವ…
ದೇಶವನ್ನು ವಿಭಜಿಸುವ ಶಕ್ತಿಗಳೊಂದಿಗೆ ‘ಇಸ್ಲಾಂ ರಾಜಕೀಯ’ ಕೆಲಸ: ಯೋಗಿ ಎಚ್ಚರಿಕೆ
ಗೋರಖ್‌ಪುರ: ‘ಇಸ್ಲಾಂ ರಾಜಕೀಯ’ ಭಾರತದೆದುರು ನಿಂತಿರುವ ದೊಡ್ಡ ಬೆದರಿಕೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದು ದೇಶದ ಜನಸಂಖ್ಯಾ ಸಮತೋಲನವನ್ನು ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಗ್, ಮಹಾರಾಣಾ ಪ್ರತಾಪ್ ಹಾಗೂ ಮಹಾರಾಣಾ ಸಂಗ ಅವರು ರಾಜಕೀಯ ಇಸ್ಲಾಂ ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು. “ನಮ್ಮ ಪೂರ್ವಜರು ಈ ಬೆದರಿಕೆಗೆ ವಿರುದ್ಧವಾಗಿ ಶೌರ್ಯದಿಂದ ಹೋರಾಡಿದರು. ಆದರೆ ಇಂದಿನ ದಿನಗಳಲ್ಲಿ ಅದನ್ನು ಕುರಿತ ಚರ್ಚೆ ಕಾಣುವುದಿಲ್ಲ,” ಎಂದು ಯೋಗಿ ವಿಷಾದ ವ್ಯಕ್ತಪಡಿಸಿದರು. ಇತಿಹಾಸದಲ್ಲಿ ಬ್ರಿಟಿಷ್ ಹಾಗೂ ಫ್ರೆಂಚ್ ವಸಾಹತುಶಾಹಿಯನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ಆದರೆ ‘ರಾಜಕೀಯ ಇಸ್ಲಾಂ’ ಕುರಿತು ಅಲ್ಪ ಉಲ್ಲೇಖವಿದೆ ಎಂದು ಅವರು ಹೇಳಿದರು. ‘ಇಸ್ಲಾಂ ರಾಜಕೀಯ’ ಇಂದು ಸಹ ದೇಶವನ್ನು ವಿಭಜಿಸುವ…
2026ರಲ್ಲಿ ಆಪಲ್ ಸ್ಮಾರ್ಟ್ ಗ್ಲಾಸ್‌ಗಳು; ಮೂರನೇ ಕಣ್ಣಿನಂತೆ ಕಾರ್ಯನಿರ್ವಹಿಸಲಿವೆ!
ವಿನೂತನ ತಂತ್ರಜ್ಞಾನ ಪ್ರಪಂಚದ ದೈತ್ಯ ಸಂಸ್ಥೆ ಆಪಲ್ ಇಂಕ್ 2026ರಲ್ಲಿ ತನ್ನ ಹೊಸ ಸ್ಮಾರ್ಟ್ ಗ್ಲಾಸ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಒಳಗೊಂಡ ಈ ಗ್ಲಾಸ್‌ಗಳು ಬಳಕೆದಾರರಿಗೆ ‘ಮೂರನೇ ಕಣ್ಣು’ ರೀತಿಯಲ್ಲಿ ಕೆಲಸಮಾಡಲಿವೆ ಎನ್ನಲಾಗುತ್ತಿದೆ. ರೇ-ಬ್ಯಾನ್ ಮೆಟಾ ಗ್ಲಾಸ್‌ಗಳಿಗೆ ನೇರ ಪೈಪೋಟಿ ನೀಡಲಿರುವ ಆಪಲ್ ಗ್ಲಾಸ್‌ಗಳು ಈಗಾಗಲೇ ಟೆಕ್ ಪ್ರಪಂಚದಲ್ಲಿ ಕುತೂಹಲ ಮೂಡಿಸಿವೆ. ಕಂಪನಿಯು “ವಿಷನ್ ಪ್ರೊ” ಯೋಜನೆಯ ಕೆಲ ಕೆಲಸಗಳನ್ನು ಬಿಟ್ಟು ಈ ಸ್ಮಾರ್ಟ್ ಗ್ಲಾಸ್ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತಿದೆ ಎಂದು ಮ್ಯಾಕ್‌ರಮರ್ಸ್ ವರದಿ ತಿಳಿಸಿದೆ. ವರದಿಯ ಪ್ರಕಾರ, ಬಳಕೆದಾರರ ಆಸಕ್ತಿ ಗಮನಿಸಿ, ಆಪಲ್ ಹಲವಾರು ಮಾದರಿಗಳ ಚೌಕಟ್ಟುಗಳು ಮತ್ತು ವಿನ್ಯಾಸಗಳಲ್ಲಿ ಗ್ಲಾಸ್‌ಗಳನ್ನು ನೀಡಲು ಯೋಜಿಸಿದೆ. ಆದರೆ ಬ್ಯಾಟರಿ, ಕ್ಯಾಮೆರಾ ಮತ್ತು ಚಿಪ್‌ಗಳ ಅಳವಡಿಕೆ ಕುರಿತು ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆಪಲ್ ಸ್ಮಾರ್ಟ್ ಗ್ಲಾಸ್‌ಗಳು ಹೊಸತಾದ ಸಿರಿ ಆವೃತ್ತಿಯಿಂದ…
“ಕಾಂಗ್ರೆಸ್ ಸಿಎಂ ಬಗ್ಗೆ ಒಬ್ಬ ಕುಖ್ಯಾತರ ಡೈರಿ..”; ಪ್ರಿಯಾಂಕ್’ಗೆ ಚುಚ್ಚಿದ ಐಶ್ವರ್ಯ
ಬೆಂಗಳೂರು: ಆರೆಸ್ಸೆಸ್ ಬಿಜೆಪಿ ನಾಯಕರನ್ನು ಟೀಕಿಸುವ ಆತುರದಲ್ಲಿ ದಿವಂಗತ ಅನಂತ್ ಕುಮಾರ್ ಅವರ ಹಳೆಯ ವೀಡಿಯೋವನ್ನು ವೈರಲ್ ಮಾಡಿದ ಸಚಿವ ಪ್ರಿಯಾಂಕ್ ವಿರುದ್ಧ ಐಶ್ವರ್ಯ ಅನಂತಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ‘Priank Kharge, this is a new low for you too’ ಎನ್ನುತ್ತಾ ಕಟುವಾಗಿ ಟೀಕಿಸಿರುವ ಐಶ್ವರ್ಯ, ‘ಆರ್‌ಎಸ್‌ಎಸ್‌ಗೆ ಮಸಿ ಬಳಿಯುವ ನಿಮ್ಮ ವಿಫಲ ಪ್ರಯತ್ನದ ನಂತರ, ನೀವು ಈಗ ಕರ್ನಾಟಕಕ್ಕಾಗಿ ಅನಂತಕುಮಾರ್ ಜಿ ಅವರ ಕೆಲಸವನ್ನು ನಿಮ್ಮ ಸ್ವಂತ ಪಕ್ಷದ ನಾಯಕರು ಸಹ ಮೆಚ್ಚಿದ್ದಾರೆ. ಆದಷ್ಟೇ ನೀವು ಮರೆತಿದ್ದೀರಿ’ ಎಂದು ಚಿವುಟಿದ್ದಾರೆ. ‘ನೀವು ಮರೆತಿದ್ದರೆ, ಈ ವೀಡಿಯೊದಲ್ಲಿನ ಚರ್ಚೆಯು ನಿಮ್ಮ ಪಕ್ಷದ ಹೈಕಮಾಂಡ್‌ನ ಮೊದಲಕ್ಷರಗಳನ್ನು ಹೊಂದಿದ್ದ ಕಾಂಗ್ರೆಸ್ ಸಿಎಂ ಬಗ್ಗೆ ಒಬ್ಬ ಕುಖ್ಯಾತರ ಡೈರಿಯ ಬಗ್ಗೆ ಮತ್ತು ಅವರಿಗೆ ನೀಡಲಾದ ದೊಡ್ಡ ಪ್ರಮಾಣದ ಲಂಚದ ಬಗ್ಗೆ ಎಂಬುದನ್ನು ನಿಮಗೆ ನೆನಪಿಸುತ್ತೇನೆ ಎಂದು ಐಶ್ವರ್ಯ ಎದಿರೇಟು…
ದೀಪಾವಳಿ ಸಂದರ್ಭದಲ್ಲಿ ಗೆಳೆಯ ಮೋದಿಯನ್ನು ನೆನೆದ ಟ್ರಂಪ್
ವಾಷಿಂಗ್ಟನ್: ಅಮೆರಿಕಾದಲ್ಲೂ ದೀಪಾವಳಿ ಸಡಗರ ಆವರಿಸಿದೆ. ಅಂಮೆರಿಕಾದಲ್ಲಿರುವ ಭಾರತೀಯರು ತಮ್ಮ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಮೆರಿಕಾದ ಶಕ್ತಿಕೇಂದ್ರ ಶ್ವೇತಭವನ ಕೂಡಾ ವಿಶೇಷ ಸಂಭ್ರಮಕ್ಕೆ ಸಾಕ್ಷಿಯಾಯಿತು. ಅನಿವಾಸಿ ಭಾರತೀಯರೊಂದಿಗೆ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೀಪಾವಳಿ ಆಚರಿಸಿ ಗಮನಸೆಳೆದರು. Deeply honoured to join President Donald J. Trump @realDonaldTrump @POTUS at the White House today to celebrate Diwali. Wished him on behalf of Prime Minister @narendramodi a Happy Diwali and thanked him for this beautiful gesture. Warm Diwali greetings to all celebrating,… pic.twitter.com/G3jAvc0hpO — Amb Vinay Mohan Kwatra (@AmbVMKwatra) October 22, 2025 ದೀಪಾವಳಿ ಹಿನ್ನೆಲೆ ಅಮೆರಿಕಾದ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು…
ಮೈಸೂರು: ಕಾಲುವೆಗೆ ಈಜಲು ಹೋದ ಮಕ್ಕಳು ಜಲಸಮಾಧಿ
ಮೈಸೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಮೈಸೂರಿನಲ್ಲಿ ದಾರುಣ ಘಟನೆ ಸಂಭವಿಸಿದೆ. ಕಾಲುವೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಸಾಲಿಗ್ರಾಮ ಪಟ್ಟಣದ ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈ ಘಟನೆ ಸಂಭವಿಸಿದ್ದು, ಮೃತರು ಕೆ.ಆರ್. ಪೇಟೆಯ ನವೋದಯ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಭಾನುವಾರ ಮಧ್ಯಾಹ್ನ ಸ್ನಾನಕ್ಕಾಗಿ ಕಾಲುವೆಗೆ ತೆರಳಿದ ಮಕ್ಕಳು ಸಂಜೆಗೂ ಮನೆಗೆ ಮರಳದ ಕಾರಣ ಕುಟುಂಬದವರು ಹುಡುಕಾಟ ನಡೆಸಿದರು. ಹುಡುಕಾಟದ ವೇಳೆ ಕಾಲುವೆದಂಡೆಯಲ್ಲಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಪತ್ತೆಯಾಗಿದ್ದವು. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷ; ಹಮಾಸ್ ವಿರುದ್ಧ ಇಸ್ರೇಲ್ ಸೇಡು
ಗಾಜಾ: ಪಶ್ಚಿಮ ದಂಡೆಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ದು, ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದೆ. ರಫಾದಲ್ಲಿ ಇಬ್ಬರು ಇಸ್ರೇಲಿ ಸೈನಿಕರು ಹತ್ಯೆಯಾದ ನಂತರ, ಇಸ್ರೇಲ್ ಸೇನೆ ಹಮಾಸ್ ನೆಲೆಗಳ ಮೇಲೆ ತೀವ್ರ ವಾಯುದಾಳಿ ನಡೆಸಿದೆ. ಈ ದಾಳಿಗಳಲ್ಲಿ ಕನಿಷ್ಠ 45 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ವಾರಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಗೆ ಬಂದಿದ್ದರೂ, ರಫಾದ ಘಟನೆ ನಂತರ ಪರಿಸ್ಥಿತಿ ಮತ್ತೆ ಪ್ರಕ್ಷುಬ್ಧಗೊಂಡಿದೆ. ಭಾನುವಾರ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಗಾಜಾದಲ್ಲಿ ಸರಣಿ ವಾಯುದಾಳಿಗಳನ್ನು ನಡೆಸಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಸ್ಥಳೀಯ ಮೂಲಗಳ ಪ್ರಕಾರ, ಸಾವನ್ನಪ್ಪಿದವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವು ಪ್ಯಾಲೆಸ್ಟೀನಿಯರು ಇದ್ದಾರೆ. ಇಸ್ರೇಲಿ ಸೈನ್ಯವು ಹಮಾಸ್ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಡಜನ್ಗಟ್ಟಲೆ ದಾಳಿಗಳನ್ನು ನಡೆಸಿದೆಯೆಂದು ಹೇಳಿದೆ. ಆದರೆ, ಪ್ಯಾಲೆಸ್ಟೀನ್ ಮೂಲಗಳು ಈ ದಾಳಿಗಳು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡಿವೆ…
ರಾಜ್ಯ ಸರ್ಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ; ಸಿಎಂ ಸ್ಪಷ್ಟನೆ
ಮಂಗಳೂರು: ರಾಜ್ಯ ಸರ್ಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ. ಶಾಲಾ – ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ‘ಅಶೋಕ ಜನ – ಮನ 2025’ ಕಾರ್ಯಕ್ರಮ ಉದ್ಘಾಟಿಸಿದ ಸಿದ್ದರಾಮಯ್ಯ, ಆಶಿಕ್ ರೈ ಅವರ ಜನಪರ ಸೇವೆಯನ್ನು ಕೊಡಾಡಿದರು. ಈ ಸಂದರ್ಭದಲ್ಲಿ RSS ನಿಷೇಧ ಕುರಿತ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶಾಲಾ – ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದರು. ಆದೇಶದಲ್ಲಿ ಯಾವುದೇ ನಿರ್ದಿಷ್ಟ ಸಂಘ ಅಥವಾ ಸಂಸ್ಥೆ ಎಂದು ಇಲ್ಲ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ. ಅವರು…
