‘ಮತ ಚೋರಿ’ ಬಗ್ಗೆ ಶೀಘ್ರದಲ್ಲೇ ಸಾಕ್ಷ್ಯಗಳನ್ನು ಬಿಡುಗಡೆ; ರಾಹುಲ್ ಗಾಂಧಿ ಘೋಷಣೆ

ಭೋಪಾಲ್: “ಮತ ಚೋರಿ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ – ಇದು ಭಾರತ ಮಾತೆಯ ಮೇಲಿನ ದಾಳಿ,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಧ್ಯಪ್ರದೇಶದ ಪಚ್ಮರ್ಹಿಯಲ್ಲಿ ನಡೆದ ‘ಸಂಘಥಾನ್ ಶ್ರೀಜನ್ ಅಭಿಯಾನ’ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ವ್ಯಾಪಕವಾದ ಮತ ಕಳ್ಳತನ ಪ್ರಕರಣಗಳನ್ನು ಮುಂದಿಟ್ಟರು. ಇದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆತ್ಮದ ಮೇಲಿನ ಅವಮಾನವಾಗಿದೆ ಎಂದು ಅವರು ಕಿಡಿಕಾರಿದರು. “ಕೆಲವು ದಿನಗಳ ಹಿಂದೆ ಹರಿಯಾಣದ ಮಾದರಿಯನ್ನು ನಾನು ತೋರಿಸಿದ್ದೆ – ಅಲ್ಲಿ 25 ಲಕ್ಷ ಮತಗಳನ್ನು ಕದ್ದಿದ್ದಾರೆ, ಅಂದರೆ ಪ್ರತಿ ಎಂಟು ಮತಗಳಲ್ಲಿ ಒಂದನ್ನು. ಇದೇ ಅವರ ವ್ಯವಸ್ಥೆ,” ಎಂದು ರಾಹುಲ್ ಗಾಂಧಿ ಹೇಳಿದರು. “ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿಯೂ ಇದೇ ರೀತಿಯ ಅಕ್ರಮಗಳು ನಡೆದಿವೆ. ಮುಖ್ಯ ವಿಷಯವೇ ‘ಮತ ಚೋರಿ’. ನಮ್ಮ ಬಳಿ ಸಾಕ್ಷ್ಯಗಳಿವೆ. ಅವನ್ನು ಒಂದೊಂದಾಗಿ ಬಹಿರಂಗಪಡಿಸುತ್ತೇವೆ,” ಎಂದು…

RSS ನೋಂದಣಿಯಾಗಿಲ್ಲ, ಟ್ಯಾಕ್ಸ್ ಕಟ್ಟುತ್ತಿಲ್ಲ ಯಾಕೆ ಎಂದು ಸರಸಂಘಚಾಲಕ್ ಸ್ಪಷ್ಟನೆ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು, ಸಂಘದ ಕಾನೂನು ದೃಢೀಕರಣ ಹಾಗೂ ನೋಂದಣಿ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡುತ್ತಾ — “ನೋಂದಣಿ ಇಲ್ಲದೆ ಅನೇಕ ವಿಷಯಗಳು ಅಸ್ತಿತ್ವದಲ್ಲಿವೆ. ಹಿಂದೂ ಧರ್ಮವೂ ಸಹ ನೋಂದಾಯಿಸಲ್ಪಟ್ಟಿಲ್ಲ” ಎಂದು ಹೇಳಿದರು. ಭಾನುವಾರ ಬೆಂಗಳೂರಿನಲ್ಲಿ ನಡೆದ ‘100 ವರ್ಷಗಳ ಸಂಘ ಪ್ರಯಾಣ: ಹೊಸ ದಿಗಂತಗಳು’ ಕಾರ್ಯಕ್ರಮದ ಎರಡನೇ ದಿನದ ಪ್ರಶ್ನೋತ್ತರ ಸತ್ರದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.“ಈ ಪ್ರಶ್ನೆಗೆ ಹಲವಾರು ಬಾರಿ ಉತ್ತರಿಸಲಾಗಿದೆ. ಕೇಳುವವರು ಪುನಃ ಪುನಃ ಅದನ್ನೇ ಕೇಳುತ್ತಾರೆ. ನಾವು ಪ್ರತೀ ಬಾರಿ ಉತ್ತರಿಸುತ್ತಲೇ ಇದ್ದೇವೆ. ಇದು ಹೊಸ ಪ್ರಶ್ನೆಯೇ ಅಲ್ಲ” ಎಂದು ಭಾಗವತ್ ಹೇಳಿದರು, “ಆರ್‌ಎಸ್‌ಎಸ್ 1925ರಲ್ಲಿ ಪ್ರಾರಂಭವಾಯಿತು. ನಮ್ಮ ಸರಸಂಘಚಾಲಕರೇ ಹೋರಾಡುತ್ತಿದ್ದ ಆ ಸರ್ಕಾರದೊಡನೆ ನಾವು ನೋಂದಾಯಿಸಿಕೊಂಡಿರುತ್ತೇವೇ? ಸ್ವಾತಂತ್ರ್ಯಾನಂತರ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಲಿಲ್ಲ. ನೋಂದಣಿಯಾಗದ ಸಂಸ್ಥೆಗೂ ಕಾನೂನು ಮಾನ್ಯತೆ ಇದೆ. ನಮ್ಮನ್ನೂ ಅಂತಹ…

ಬಿಹಾರ ಚುನಾವಣೆಯ ಕ್ಲೈಮಾಕ್ಸ್: ನ.11ರಂದು ಎರಡನೇ ಹಂತದ ಮತದಾನ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ 2025 ನಿರ್ಣಾಯಕ ಹಂತಕ್ಕೆ ಕಾಲಿಟ್ಟಿದ್ದು, ಎರಡನೇ ಮತ್ತು ಅಂತಿಮ ಹಂತದ ಪ್ರಚಾರ ಭಾನುವಾರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ವಾರಗಳ ರಾಜಕೀಯ ಬಿಸಿಯಾಗಿರುವ ಬಳಿಕ, ಪಕ್ಷಗಳು ಈಗ ನವೆಂಬರ್ 11ರಂದು ನಡೆಯಲಿರುವ ಮತದಾನದತ್ತ ಗಮನ ಹರಿಸಿವೆ. ಈ ಹಂತದಲ್ಲಿ ರಾಜ್ಯದ 20 ಜಿಲ್ಲೆಗಳಾದ್ಯಂತ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಹಾರದ ಮುಂದಿನ ಸರ್ಕಾರವನ್ನು ತೀರ್ಮಾನಿಸುವ ಮಹತ್ವದ ಹಂತವೆಂದು ಪರಿಗಣಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಒಟ್ಟು 1,302 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ — ಇವರಲ್ಲಿ 1,165 ಮಂದಿ ಪುರುಷರು, 136 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗದ ಅಭ್ಯರ್ಥಿ ಇದ್ದಾರೆ. ಈ ಹಂತದಲ್ಲಿ ಸುಮಾರು 3.7 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ; ಇವರಲ್ಲಿ 1.95 ಕೋಟಿ ಪುರುಷರು ಮತ್ತು 1.74 ಕೋಟಿ ಮಹಿಳೆಯರು ಸೇರಿದ್ದಾರೆ. ಮೊದಲ ಹಂತದ ಮತದಾನ ನವೆಂಬರ್ 6ರಂದು…

‘ದಿ ಗರ್ಲ್‌ಫ್ರೆಂಡ್’ಗೆ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ; ಅನು ಎಮ್ಯಾನುಯೆಲ್

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ದುರ್ಗಾ ಪಾತ್ರದ ಮೂಲಕ ಗಮನಸೆಳೆದ ನಟಿ ಅನು ಎಮ್ಯಾನುಯೆಲ್, ಈ ಪಾತ್ರವು ತಮ್ಮ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ ಪಡೆದಿರುತ್ತದೆ ಎಂದು ಹೇಳಿದ್ದಾರೆ. ಚಿತ್ರದ ಬಿಡುಗಡೆ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡ ಅನು ಎಮ್ಯಾನುಯೆಲ್ ಬರೆದಿದ್ದಾರೆ – “‘ದಿ ಗರ್ಲ್‌ಫ್ರೆಂಡ್’ ಚಿತ್ರವು ನನ್ನ ಮನದಾಳದಲ್ಲಿ ಸದಾಕಾಲ ವಿಶೇಷ ಸ್ಥಾನ ಪಡೆಯಲಿದೆ. ದುರ್ಗಾ ಪಾತ್ರವು ಚಿಕ್ಕದಾದರೂ, ಅದು ನನಗೆ ಹಿಂದೆಂದೂ ಅನುಭವಿಸದ ತೃಪ್ತಿಯ ಭಾವನೆಯನ್ನು ನೀಡಿತು. ಅವಳಲ್ಲಿ ಶಾಂತ ಶಕ್ತಿ ಇತ್ತು, ಪದಗಳಿಗಿಂತ ಹೆಚ್ಚು ಮಾತನಾಡುವ ಸ್ಥಿರತೆ ಇತ್ತು. ಅವಳನ್ನು ಜೀವಂತಗೊಳಿಸುವಲ್ಲಿ, ನಾನು ನನ್ನ ಒಂದು ಭಾಗವನ್ನು ಕಂಡುಕೊಂಡೆ.” ನಿರ್ದೇಶಕ ರಾಹುಲ್ ರವೀಂದ್ರನ್ ಅವರತ್ತ ಕೃತಜ್ಞತೆ ವ್ಯಕ್ತಪಡಿಸಿದ ಅನು ಎಮ್ಯಾನುಯೆಲ್, “ದುರ್ಗಾ ಪಾತ್ರವನ್ನು ನನಗೆ ನಂಬಿಕೆ ಇಟ್ಟು ಒಪ್ಪಿಸಿದ್ದಕ್ಕಾಗಿ ಧನ್ಯವಾದಗಳು. ಮಹಿಳೆಯರನ್ನು ಇಷ್ಟು…

ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

ಮಿಲನ್ : ಪ್ರಸಿದ್ಧ ಮೋಟಾರ್‌ಸೈಕಲ್ ತಯಾರಕ ರಾಯಲ್ ಎನ್‌ಫೀಲ್ಡ್, ತನ್ನ ಹೊಸ ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ ಮಾದರಿ ಫ್ಲೈಯಿಂಗ್ ಫ್ಲೀ S6 ಅನ್ನು ಇಟಲಿಯ ಮಿಲನ್‌ನಲ್ಲಿ ನಡೆದ EICMA 2025 ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. ಕಂಪನಿಯ ‘ಸಿಟಿ-ಪ್ಲಸ್’ ಪ್ಲಾಟ್‌ಫಾರ್ಮ್ ಆಧಾರಿತ ಈ ನೂತನ ಮಾದರಿ, ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಿಕ್ ವಿಭಾಗದಲ್ಲಿ ಕಾಂಪ್ಯಾಕ್ಟ್, ಆದರೆ ಶಕ್ತಿಶಾಲಿ ಮೋಟಾರ್‌ಸೈಕಲ್ ಆಗಿ ಗುರುತಿಸಿಕೊಳ್ಳಲಿದೆ. VIDEO | Motorcycle maker Royal Enfield, part of Eicher Motors Group, will start the global commercial roll-out of its electric bikes under the Flying Flea brand from next year, a top company official said. Managing Director and Royal Enfield CEO B Govindarajan said: “We will be… pic.twitter.com/ffqNwnigm2 — Press Trust…

ತಂದೆತಾಯಿಗೆ ಬೇಡವಾದ ಹಸುಗೂಸು; ಬೀದಿಯಲ್ಲಿ ಬಿಸಾಡಿದ ಪಾಪಿಗಳು

ದೊಡ್ಡಬಳ್ಳಾಪುರ: ಜನ್ಮ ಪಡೆದ ಕೆಲವೇ ವಾರಗಳ ನವಜಾತ ಗಂಡು ಶಿಶುವನ್ನು ಮಾನವೀಯತೆ ಮರೆತ ಪಾಪಿಗಳು ಬೀದಿಯಲ್ಲೇ ಬಿಸಾಡಿ ಹೋದ ಹೃದಯ ಕಲುಕುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಲೇಔಟ್‌ ಬಳಿ ನಡೆದಿದೆ. ಮಗು ಅಳುವ ಶಬ್ದ ಕೇಳಿ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗು ಜೀವಂತವಾಗಿರುವುದನ್ನು ಕಂಡು ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಗು ತೀವ್ರ ಹಸಿವಿನಿಂದ ಅಳುತ್ತಿದ್ದುದರಿಂದ ಗ್ರಾಮದ ಆಂಜಿನಮ್ಮ ಕುಟುಂಬವು ಹಾಲುಣಿಸಿ ಮಾನವೀಯತೆ ಮೆರೆದಿದೆ. ನಂತರ ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದು ಮಗುವನ್ನು ವಶಕ್ಕೆ ಪಡೆದಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಮತ್ತೆ ಸಮಾಜದಲ್ಲಿ ಮಾನವೀಯತೆ ಹಾಗೂ ಮಕ್ಕಳ ರಕ್ಷಣೆಯ ಅಗತ್ಯತೆಯ ಬಗ್ಗೆ ಚಿಂತನೆ ಮೂಡಿಸಿದೆ.

ಕೃಷಿಕ ಸಮಾಜ ರೈತರ ಸಮಸ್ಯೆ ಬಿಂಬಿಸುವ ಸಂಪರ್ಕ ಕೊಂಡಿ: ಎನ್.ಚಲುವರಾಯಸ್ವಾಮಿ

ಬಳ್ಳಾರಿ: ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಹಯೋಗದಲ್ಲಿ ನಗರದ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಅವರು, ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ಇಲಾಖೆಗಳಿಗಿಂತಲೂ ಕೃಷಿ ಇಲಾಖೆಯು ವಿಶಿಷ್ಟವಾಗಿದೆ. ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಎಂಬುವವರು ಸ್ವತಂತ್ರ ಪೂರ್ವದಲ್ಲಿ ರಾಜ್ಯದ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷಿಕ ಸಮಾಜ ಸ್ಥಾಪಿಸುವಲ್ಲಿ ಪ್ರಮುಖ…