ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿಗೆ ವೈಟ್’ಫೀಲ್ಡ್ ಉಪವಿಭಾಗ ಪೊಲೀಸರು ಅಂಕುಶ ಹಾಕಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಕಳ್ಳರನ್ನು ಜೈಲಿಗಟ್ಟಿದ್ದಾರೆ. ಸುಮಾರು 20 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ಸಮೀಪದ ಗೋಪಾಲನ್ ಇಂಟರ್ ನ್ಯಾಷನ್ ಸ್ಕೂಲ್ ಬಳಿ ನಿಲ್ಲಿಸಲಾಗಿದ್ದ ಯಮಹ ಆರ್’ಎಕ್ಸ್ ಬೈಕ್ ಕಳೆದುಹೋಗಿರುವ ಬಗ್ಗೆ ನಾಗರಾಜು ಎಂಬವರು ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರೀನಾ ಸುವರ್ಣ ಅವರು ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ಜಿ.ಪ್ರವೀಣ್ ಬಾಬು, PSIಗಳಾದ ಮಹೇಶ್, ಪರಶುರಾಮ್ ಮತ್ತು ಸುನೀಲ್ ಕಡ್ಡಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಮುನ್ನುಡಿ ಬರೆದರು. ಕಳ್ಳರಿಗಾಗಿ ಖೇಡಾ ತೋಡಿದ ಈ ಪೊಲೀಸರು ರಾಮಮೂರ್ತಿನಗರ ನಿವಾಸಿಗಳಾದ ಮನು ಬಿನ್ ದ್ಯಾವೇಗೌಡ ಮತ್ತು ಸಚ್ಚಿನ್ ಬಿನ್ ಬಾಲರಾಜು ಎಂಬಿಬ್ಬರನ್ನು…
