ಬೆಂಗಳೂರು: ರಾಜಧಾನಿಯಲ್ಲಿ ನಡೆದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನಿಖೆಗೆ ರಚಿಸಲಾದ ವಿಶೇಷ ತಂಡಗಳು ದರೋಡೆ ಕೃತ್ಯಕ್ಕೆ ಸಂಬಂಧಿಸಿದ ಸುಳಿವುಗಳನ್ನು ಪತ್ತೆಹಚ್ಚಿ ಶಂಕಿತರನ್ನು ವಶಕ್ಕೆ ಪಡೆದಿವೆ. ನವೆಂಬರ್ 20ರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್‌ಸ್ಟೆಬಲ್‌ನ್ನು ಬೆಳ್ಳಂಬೆಳಗ್ಗೆ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯು ಕೇರಳ ಮೂಲದವನು ಎನ್ನಲಾಗಿದೆ. ಆತ ಇತ್ತೀಚೆಗೆ CMS ಇನ್‌ಫೋ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗೆ ರಾಜೀನಾಮೆ ನೀಡಿರುವ ಮಾಜಿ ಉದ್ಯೋಗಿ ಎಂಬುದು ತಿಳಿದು ಬಂದಿದೆ. ದರೋಡೆಗೆ ಗುರಿಯಾದ ವಾಹನ ಇದೇ ಕಂಪನಿಗೆ ಸೇರಿದ್ದೇ ಎಂಬ ಬಗ್ಗೆ ತನಿಖೆ ಬಿರುಸುಗೊಂಡಿದೆ. ಮೂಲಗಳ ಪ್ರಕಾರ, ಬಂಧಿತ ಇಬ್ಬರೂ ಕಳೆದ ಆರು ತಿಂಗಳುಗಳಿಂದ ಪರಸ್ಪರ ಸಂಪರ್ಕದಲ್ಲಿದ್ದು, ದರೋಡೆ ಯೋಜನೆಯನ್ನು ಸೂಕ್ಷ್ಮವಾಗಿ ರೂಪಿಸಿದ್ದರು. ಘಟನೆಯ ಸುಮಾರು…
