ಬೆಂಗಳೂರು: ನೀರಾವರಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳಲ್ಲಿ ನಡೆದಿದೆ ಎನ್ನಲಾದ ಗಂಭೀರ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಭೂಸ್ವಾಧೀನ ಪ್ರಕರಣಗಳ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕಳೆದ ಹಲವು ವರ್ಷಗಳಿಂದ ಬೇಜವಾಬ್ದಾರಿಯಾಗಿ ನಡೆಸಲಾದ ಕಾನೂನು ಕ್ರಮಗಳು, ನಿರ್ಲಕ್ಷ್ಯ ಮತ್ತು ಅನಿಶ್ಚಿತತೆಯಿಂದ ಸರ್ಕಾರಕ್ಕೆ ಸುಮಾರು ₹5 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟಾಗುವ ಆತಂಕವಿದೆ,” ಎಂದು ಎಚ್ಚರಿಸಿದರು. “ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು. ಪ್ರಕರಣಗಳನ್ನು ತಪ್ಪಾಗಿ ವಹಿಸಿದ ವಕೀಲರನ್ನು ಕೂಡ ತೆಗೆದುಹಾಕಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು. ಈ ಕುರಿತು ಈಗಾಗಲೇ ವಿಶೇಷ ಪರಿಶೀಲನಾ ತಂಡ ಕಾರ್ಯಾರಂಭ ಮಾಡಿಕೊಂಡಿದ್ದು, 10–15 ದಿನಗಳೊಳಗೆ ಪ್ರಾಥಮಿಕ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಅವಶ್ಯಕತೆ ಕಂಡುಬಂದಲ್ಲಿ ವಿಶೇಷ ತನಿಖಾ…
