ಆಶಾ–ಅಂಗನವಾಡಿ ನೌಕರರ ಬೇಡಿಕೆಗಳಿಗೆ ಕೇಂದ್ರದಿಂದ ಹಸಿರು ನಿಶಾನೆ

ನವದೆಹಲಿ: ಆರೋಗ್ಯ ಹಾಗೂ ಮಕ್ಕಳ ಪೋಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹಿ ನೌಕರರ ಬಹುಕಾಲದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸಚಿವರಾದ ಅನ್ನಪೂರ್ಣಾ ದೇವಿ ಮತ್ತು ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಮಹತ್ವದ ಮಾತುಕತೆ ನಡೆಸಿದರು. ಹೋರಾಟ ನಿರತ ನೌಕರರನ್ನು ನವದೆಹಲಿಗೆ ಕರೆಸಿಕೊಂಡ ಕುಮಾರಸ್ವಾಮಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಶಾಸ್ತ್ರಿ ಭವನ ಕಚೇರಿಗೆ ಕರೆದುಕೊಂಡು ಹೋಗಿ, ಸಚಿವೆ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿಸಿದರು. ಕರ್ನಾಟಕದ 12 ಮಂದಿ ನೌಕರರ ನಿಯೋಗ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮುಖ್ಯ ಬೇಡಿಕೆಗಳ ಚರ್ಚೆ: ಚರ್ಚೆಯಲ್ಲಿ ಎಫ್‌ಆರ್‌ಎಸ್ ನೀತಿ ಪರಿಷ್ಕರಣೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಚುನಾವಣಾ ಕರ್ತವ್ಯದಿಂದ ವಿನಾಯಿತಿ, ವಿಮಾ ಸೌಲಭ್ಯ, ವೇತನ ಹೆಚ್ಚಳ—ಇತ್ಯಾದಿ…

ಕರ್ನಾಟಕದಲ್ಲಿ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ; ಕೇಂದ್ರ ಸರ್ಕಾರದ ಗಮನಸೆಳೆದ ಕಾಂಗ್ರೆಸ್ ಸಂಸದೆ

ನವದೆಹಲಿ: ದಾವಣಗೆರೆ ಸೇರಿದಂತೆ ಕರ್ನಾಟಕದಲ್ಲಿ ಪ್ರತಿಷ್ಠಿತ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಸದೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಕೇಂದ್ರದ ಗಮನಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಮೊಬೈಲ್ ಸಂಪರ್ಕ ಸಮಸ್ಯೆ ಹಾಗೂ ಅದರಿಂದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಜನರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. I would like to raise a matter related to the installation of BSNL mobile tower in my constituency, Davanagere. Bridging the digital divide and ensuring last-mile connectivity are core pillars of the Digital India Mission. Yet, people in many villages in my Davanagere… pic.twitter.com/dwz20InyvR — Congress (@INCIndia) December 3, 2025

ಬೆಳಗಾವಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ಜಿಲ್ಲೆಯನ್ನು ಬೆಚ್ಚಿಬೀಳಿಸಿರುವ ಕ್ರೂರ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯನ್ನು ಕಬ್ಬಿನ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಣಿಕಂಠ ದಿನ್ನಿಮನಿ ಹಾಗೂ ಈರಣ್ಣ ಸಂಕಮ್ಮನವರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬನು ನೇರವಾಗಿ ದೌರ್ಜನ್ಯಕ್ಕೆ ಮುಂದಾಗಿದ್ದರೆ, ಇನ್ನೊಬ್ಬನು ಕಾವಲು ಕಾಯುವ ಮೂಲಕ ಅಪರಾಧಕ್ಕೆ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ, ಹಿಟ್ಟಿನ ಗಿರಣಿಯಿಂದ ಮನೆಗೆ ಹಿಂತಿರುಗುತ್ತಿದ್ದ ಏಳನೇ ತರಗತಿಯ ಬಾಲಕಿಯನ್ನು ಆರೋಪಿಗಳು ಮಧ್ಯದಲ್ಲಿ ತಡೆದು, ಕಬ್ಬಿನ ಹೊಲಕ್ಕೆ ಎಳೆದುಕೊಂಡು ಹೋಗಿ ಅಮಾನುಷ ಕೃತ್ಯ ಎಸಗಿದ್ದಾರೆ. ಬಾಲಕಿಯ ಮನೆಯಿಂದ ಕೇವಲ 300 ಮೀಟರ್ ದೂರದಲ್ಲೇ ಈ ಘಟನೆ ನಡೆದಿರುವುದು ಇನ್ನಷ್ಟು ಆತಂಕ ಹುಟ್ಟಿಸಿದೆ. ಕುಟುಂಬಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿರುವ ಕಾರಣದಿಂದ ದೂರು ತಡವಾಗಿ ದಾಖಲಾಗಿದೆ…

ಕದ್ದ, ಕಳೆದುಹೋದ 42 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳು ಬ್ಲಾಕ್ ಮಾಡಿದ ‘ಸಂಚಾರ್ ಸಾಥಿ’

ನವದೆಹಲಿ: ಈ ವರ್ಷದ ಜನವರಿ 17ರಂದು ಬಿಡುಗಡೆಗೊಂಡ ನಂತರದಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ 1.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದ್ದು, 42 ಲಕ್ಷಕ್ಕೂ ಹೆಚ್ಚು ಕದ್ದ ಅಥವಾ ಕಳೆದುಹೋದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು ಯಶಸ್ವಿಯಾಗಿದೆ ಎಂದು ಮಂಗಳವಾರ ಹೊರಬಿದ್ದ ಅಧಿಕೃತ ದತ್ತಾಂಶಗಳು ತಿಳಿಸಿವೆ. ಇಲ್ಲಿಯವರೆಗೆ 26 ಲಕ್ಷ ಕಳೆದುಹೋದ/ಕಳುವಾದ ಫೋನ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 7.23 ಲಕ್ಷ ಸಾಧನಗಳನ್ನು ಸಂಚಾರ್ ಸಾಥಿಯ ಮೂಲಕ ಹಿಂತಿರುಗಿಸಲಾಗಿದೆ. ಸಂಪೂರ್ಣವಾಗಿ ಸ್ವಯಂಪ್ರೇರಿತ ಮತ್ತು ಬಳಕೆದಾರರ ಒಪ್ಪಿಗೆಯಿಂದ ಮಾತ್ರ ಕಾರ್ಯನಿರ್ವಹಿಸುವ ಈ ವೇದಿಕೆ ಗೌಪ್ಯತೆ-ಪ್ರಥಮ ನೀತಿಯನ್ನು ಅನುಸರಿಸುತ್ತದೆ. ಅಪ್ಲಿಕೇಶನ್‌ ಸೇವೆಗಳನ್ನು ಬಳಕೆದಾರರು ನೋಂದಾಯಿಸಿದ ಬಳಿಕ ಮಾತ್ರ ಸಕ್ರಿಯಗೊಳ್ಳುತ್ತದೆ. ಯಾವುದೇ ಸಮಯದಲ್ಲಿಯೂ ಅದನ್ನು ಬಳಕೆದಾರರು ಸಕ್ರಿಯಗೊಳಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಬಹುದು. ಗೌಪ್ಯತೆ ಕದಲಾಗದಂತೆ ಭಾರತದೆಲ್ಲೆಡೆ ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ರಾಷ್ಟ್ರದ…

ದರ್ಶನ್ ಅಭಿನಯದ ‘ದಿ ಡೆವಿಲ್’ ಡಿಸೆಂಬರ್ 11ಕ್ಕೆ ಬಿಡುಗಡೆ

ಬೆಂಗಳೂರು: ಕನ್ನಡ ಚಿತ್ರದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರವು ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಸಂವೇದನಾಶೀಲ ಅಭಿಮಾನಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಹಾಗೂ ಅವರ ಸಂಗಾತಿ ಪವಿತ್ರಾ ಗೌಡ ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲೇ ಬಂಧನದಲ್ಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು, ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಚಿತ್ರದ ತಂಡ ಮಂಗಳವಾರ ನಗರದೊಳಗೆ ಪತ್ರಿಕಾಗೋಷ್ಠಿ ನಡೆಸಿತು. ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದ ಅವಧಿಯಲ್ಲಿ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು ಎಂದು ನಿರ್ದೇಶಕ ತಿಳಿಸಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ವೀರ್, “ಚಿತ್ರದ ಶೀರ್ಷಿಕೆಗೆ ಕಥೆಯೇ ಆಧಾರ. ದರ್ಶನ್ ಶೇ.100 ವೃತ್ತಿಪರರು. ಜೈಲಿನಿಂದ ಹೊರಬಂದು ಚಿತ್ರೀಕರಣಕ್ಕೆ ಬಂದಾಗಲೂ ಅವರ ಅಭಿನಯದಲ್ಲಿ ಯಾವುದೇ ಅಸಮಾನ್ಯತೆ ಕಾಣಿಸಲಿಲ್ಲ” ಎಂದರು. ‘ದರ್ಶನ್ ಬಿಡುಗಡೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವು ಹಲವು ಬಾರಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಆದರೆ, ದುರದೃಷ್ಟವಶಾತ್ ಅವರು ಇಂದು…