ಬೆಂಗಳೂರು ನಗರದ ಅಭಿವೃದ್ಧಿ ವಿರೋಧಿಗಳು ಹಾಗೂ ಸುರಂಗ ಮಾರ್ಗದ ಬಗ್ಗೆ ಸುಳ್ಳಿನ ಹೇಳಿಕೆಗಳನ್ನು ನೀಡಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಪಕ್ಷದ ನಾಯಕರ ಆಧಾರ ರಹಿತ ಹೇಳಿಕೆ ವಿರುದ್ಧ ಪತ್ರಿಕಾಗೋಷ್ಠಿಯ ಮೂಲಕ ಬಿಜೆಪಿಯ ಭ್ರಷ್ಟಾಚಾರಿಗಳ ಅವೈಜ್ಞಾನಿಕ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಬಳಿ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರರಾದ ಎಂ. ಲಕ್ಷ್ಮಣ್, ಕೆಪಿಸಿಸಿ ನಾಯಕರಾದ ಎಸ್.ಮನೋಹರ್, ಸುಧಾಕರ್, ಆನಂದ್, ಪುಟ್ಟರಾಜು, ಕುಶಾಲ್ ಹರುವೇಗೌಡ, ನವೀನ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರುನಗರ ಅಭಿವೃದ್ದಿ ಕೆಲಸಗಳಿಗೆ ವಿರೋಧಿಸುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿಸೂರ್ಯ ನಡೆಯನ್ನು ಖಂಡಿಸಿದರು. ಎಂ.ಲಕ್ಷ್ಮಣ್ ರವರು ಮಾತನಾಡಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಟನಲ್ ಮಾಡುವುದಕ್ಕೆ ಖಾಸಗಿ ಸಹಬಾಗಿತ್ವದಲ್ಲಿ ಕಾಮಗಾರಿ ನಡೆಯುತ್ತದೆ ಇದರಲ್ಲಿ ಏನು ಸಿಗುವುದಿಲ್ಲ ಎಂದು ಅಶೋಕ್, ತೇಜಸ್ವಿಸೂರ್ಯ…
Year: 2025
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವೈಭವದ ಕನ್ನಡ ರಾಜ್ಯೋತ್ಸವ ಸಂಭ್ರಮ
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಆನೇಕಲ್ ಬಳಿಯ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಕೇಂದ್ರ, ಭಾಷೆ ಮತ್ತು ಸಾಹಿತ್ಯ ವಿಭಾಗ, ಕನ್ನಡ ಸಂಘ ಹಾಗೂ ವಿದ್ಯಾರ್ಥಿ ಬೆಂಬಲ ಸೇವಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರಿಗಾಗಿ ಸಾಂಸ್ಕೃತಿಕ ವೇಷಭೂಷಣ, ಆಶುಭಾಷಣ, ಭಾಷಣ, ಪ್ರಬಂಧ, ಕವನ ರಚನೆ, ನೃತ್ಯ, ಗಾಯನ, ರಂಗೋಲಿ, ರಸಪ್ರಶ್ನೆ ಹಾಗೂ ಕನ್ನಡೇತರರಿಗಾಗಿ ಕನ್ನಡ ಸಂಭಾಷಣಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ಹಮ್ಮಿಕೊಳ್ಳಲಾಯಿತು. ನವೆಂಬರ್ 3ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವವಿದ್ಯಾಲಯದ ಆಲ್ ಫ್ರೆಸ್ಕೋ ಸಭಾಂಗಣದಲ್ಲಿ ವಿಶೇಷ ಸಮಾರಂಭ ಗಮನಸೆಳೆಯಿತು. ವಿಶ್ವವಿದ್ಯಾಲಯದ ಸಂಸ್ಥಾಪಕ ಸದಸ್ಯೆ ಶೈಲಾ ಜಿ. ಚೆಬ್ಬಿ ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡ ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅಲ್ಲದೇ…
ಕಾರ್ತಿಕ ಸೋಮವಾರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಚಿವೆ ಶೋಭಾ ವಿಶೇಷ ಪೂಜೆ
ದೊಡ್ಡಬಳ್ಳಾಪುರ ಸಮೀಪದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾರ್ತಿಕ ಸೋಮವಾರದಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶ್ರೀ ಕೃಷ್ಣದೇವರಾಯ ಮಹಾರಾಜರು ಹಂಪೆ ಅವರು ಭೇಟಿ ನೀಡಿ ಆಗಮಿಸಿದ್ದು ವಿಶೇಷ ಪೂಜೆ ಸಲ್ಲಿಸಿದರು. ಕಾರ್ತಿಕ ಸೋಮವಾರದಂದು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೇ ವೇಳೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ವೇಗುಳಕ್ಕೆ ಭೇಟಿ ನೀಡಿ ಕೈಂಕರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಸಕರು ಧೀರಜ್ ಮುನಿರಾಜು ಕೂಡಾ ಉಪಸ್ಥಿತರಿದ್ದರು. ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತರು ಪಿ ದಿನೇಶ್, ಮುಜರಾಯಿ ತಹಶೀಲ್ದಾರ್ ಜಿ.ಜೆ ಹೇಮಾವತಿ , ಪ್ರಧಾನ ಅರ್ಚಕ ಶ್ರೀನಿಧಿ ಶರ್ಮ ಸಹಿತ ದೇವಾಲಯದ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.
ಈ ದೇಶದ ಬಹುಸಂಖ್ಯಾತರು RSS ನ್ನು ಆಪ್ಪಿಕೊಂಡಿಲ್ಲ; ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕೆಲವು ಹಿಂದಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧ ಚರ್ಚೆಗೆ ಮುನ್ನುಡಿ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದೀಗ RSS ನಾಯಕರಿಗೆ ಒದಗಿಸುವ ಭದ್ರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ. ಆರೆಸ್ಸೆಸ್ NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ.ಆರ್ಎಸ್ಎಸ್ NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ? ಒಂದು NGO ಮುಖ್ಯಸ್ಥರಿಗೆ ಅತಿ ಭದ್ರತೆಯ ಲಿಐಸನ್ ಪ್ರೊಟೊಕಾಲ್ ಸೆಕ್ಯೂರಿಟಿ… pic.twitter.com/aUJvaiDYjo — Priyank Kharge / ಪ್ರಿಯಾಂಕ್…
‘ಗ್ರೇಟರ್ ಮೈಸೂರು’ ಯೋಜನೆ ಪರಿಪೂರ್ಣ ಅನುಷ್ಠಾನಕ್ಕೆ ಸಿಎಂ ಸೂಚನೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಗ್ರೇಟರ್ ಮೈಸೂರು ಆಗಬೇಕು. ಆದರೆ ನಗರದ ಈಗಿನ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಗ್ರೇಟರ್ ಮೈಸೂರು ಕುರಿತ ಪ್ರಥಮ ಸಭೆಯಲ್ಲಿ ಬೆಂಗಳೂರಿನ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದರು. ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸದೆ, ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಬೇಕಿದೆ ಎಂದ ಸಿಎಂ, ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು. ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ…
ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ
ಮುಂಬೈ: ನಟಿ ಆಲಿಯಾ ಭಟ್ ಮತ್ತು ಶಾರ್ವರಿ ವಾಘ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಆಲ್ಫಾ’ ಹೊಸ ಬಿಡುಗಡೆ ದಿನಾಂಕವನ್ನು ಪಡೆದುಕೊಂಡಿದೆ. ಮೂಲತಃ 2025ರ ಡಿಸೆಂಬರ್ 25ರಂದು ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರ 2026ರ ಏಪ್ರಿಲ್ 17ರಂದು ತೆರೆಕಾಣಲಿದೆ. ವಿಎಫ್‌ಎಕ್ಸ್ (VFX) ಕೆಲಸದ ವಿಳಂಬವೇ ಬಿಡುಗಡೆ ಮುಂದೂಡಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಯಶ್ ರಾಜ್ ಫಿಲ್ಮ್ಸ್ (YRF) ಸ್ಪಷ್ಟಪಡಿಸಿದೆ. ಚಿತ್ರದ ದೃಶ್ಯಮಟ್ಟವನ್ನು ಉನ್ನತ ಗುಣಮಟ್ಟದಲ್ಲಿ ತೋರಿಸಲು ತಂಡಕ್ಕೆ ಹೆಚ್ಚಿನ ಸಮಯ ಅಗತ್ಯವಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. “‘ಆಲ್ಫಾ’ ನಮ್ಮಿಗೆ ಅತ್ಯಂತ ವಿಶೇಷವಾದ ಚಿತ್ರ. ಅದನ್ನು ಅತ್ಯಂತ ಸಿನಿಮೀಯವಾಗಿ ಪ್ರೇಕ್ಷಕರ ಮುಂದೆ ತರಲು ಬಯಸುತ್ತೇವೆ. ವಿಎಫ್‌ಎಕ್ಸ್ ಕೆಲಸಕ್ಕೆ ನಿರೀಕ್ಷೆಗಿಂತ ಹೆಚ್ಚು ಸಮಯ ಬೇಕಾಗುತ್ತಿದೆ. ಚಿತ್ರವನ್ನು ನಾಟಕೀಯ ಹಾಗೂ ಅದ್ಭುತ ಅನುಭವವನ್ನಾಗಿಸಲು ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಆದ್ದರಿಂದ ಏಪ್ರಿಲ್ 17, 2026ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ” ಎಂದು YRF ಮುಖ್ಯಸ್ಥರು…
ಎಲ್ಲಾ ಸಮುದಾಯದವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳು: ಎನ್ ಚಲುವರಾಯಸ್ವಾಮಿ
ಗ್ಯಾರಂಟಿ ಯೋಜನೆ ಕೇವಲ ಬಡವರಿಗೆ ಹಾಗೂ ದಲಿತರಿಗೆ ಸಿಮಿತವಾದದ್ದಲ್ಲ, ರಾಜ್ಯದಲ್ಲಿನ ಎಲ್ಲಾ ಸಮುದಾಯದವರಿಗಾಗಿ ರೂಪಿತವಾಗಿರುವುದೇ ಪಂಚ ಗ್ಯಾರಂಟಿ ಯೋಜನೆಯಾಗಿದ್ದು. ಪ್ರತಿ ಸಮುದಾಯದವರಿಗೂ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆ ಕುರಿತು ಕಾರ್ಯಾಗಾರ ಹಾಗೂ ಪ್ರಗತಿ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರವು ಬಡವರ ಜೀವನ ಸುಧಾರಣೆಗಾಗಿ ಜಾರಿಗೆ ತಂದಿದ್ದು ಇದು ರಾಹುಲ್ ಗಾಂಧಿಯವರ ಕನಸು ಆಗಿದೆ. ಮತ್ತು ಸಿದ್ದರಾಮಯ್ಯರವರ ಬಡವರ ಮೇಲಿನ ಕಾಳಜಿಯಿಂದ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿರುವುದು ಎಂದು ಹೇಳಿದರು. ಪಂಚ ಗ್ಯಾರಂಟಿಯಿಂದ ರಾಜ್ಯವು ಇತರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಮಾತು ಸತ್ಯವಲ್ಲ. ಪಂಚ ಗ್ಯಾರಂಟಿ ಅನುಷ್ಠಾನವಾದ ನಂತರ ಸರ್ಕಾರ ಕೊರತೆ ಇಲ್ಲದ ರೀತಿಯಲ್ಲಿ…
ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ ಬಿಸಿಸಿಐಯಿಂದ ₹51 ಕೋಟಿ ಬಹುಮಾನ
ನವಿಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಈ ಸಾಧನೆ ಸಾಧಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರೀ ನಗದು ಬಹುಮಾನ ಘೋಷಿಸಿದೆ. ಟೀಮ್ ಇಂಡಿಯಾ ಪ್ರದರ್ಶನದಿಂದ ಸಂತೋಷಗೊಂಡ ಬಿಸಿಸಿಐ, ಒಟ್ಟು ₹51 ಕೋಟಿ ರೂಪಾಯಿಗಳನ್ನು ನಗದು ಬಹುಮಾನವಾಗಿ ನೀಡಲಿದೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಿಸಿದ್ದಾರೆ. ಸೈಕಿಯಾ ಅವರು, “ಈ ಐತಿಹಾಸಿಕ ಗೆಲುವು ದೇಶದ ಕ್ರಿಕೆಟ್ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ. ಟೀಮ್ ಇಂಡಿಯಾದ ಸಾಹಸ, ಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಅಭಿನಂದನೆ ಸಲ್ಲಿಸಲು ಬಿಸಿಸಿಐ ಈ ನಗದು ಬಹುಮಾನ ನೀಡುತ್ತಿದೆ,” ಎಂದು ತಿಳಿಸಿದ್ದಾರೆ. ಈ ಬಹುಮಾನ ಮೊತ್ತವನ್ನು ಟೀಮ್ ಇಂಡಿಯಾ ಆಟಗಾರರು, ಆಯ್ಕೆದಾರರು ಹಾಗೂ ಕೋಚ್ ಅಮೋಲ್…
ತಂತ್ರಜ್ಞಾನ ಮೂಲಕ ಅಕ್ರಮ ತಡೆಯಬೇಕು; ಪರೀಕ್ಷೆ ವೇಳೆ ಮೂಗುತಿ, ಕಿವಿಯೋಲೆ ಬಿಚ್ಚಿಸಿದ KEA ವಿರುದ್ಧ ಯತ್ನಾಳ್ ಆಕ್ರೋಶ
ಬೆಂಗಳೂರು: ಪರೀಕ್ಷೆಯಲ್ಲಿ ನಕಲು ತಡೆಯೋ ಭರದಲ್ಲಿ ಹೆಣ್ಣು ಮಕ್ಕಳ ಕಿವಿಯೋಲೆ, ಮೂಗುತಿಯನ್ನು ಬಿಚ್ಚಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮ ಅತಾರ್ಕಿಕ, ಅಮಾನವೀಯ ಎಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಧಿಕಾರಿಗಳ ಕ್ರಮವು ಹಿಂದೂ ವಿರೋಧಿ ನಿಲುವಾಗಿದೆ ಎಂದು ಆರೋಪಿಸಿದ್ದಾರೆ. ಮೂಗುತಿ ಹಾಗೂ ಕಿವಿಯೋಲೆ ಬಿಚ್ಚಿಸಿವುದರಿಂದ ನಕಲು ತಡೆಯಬಹುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿದಿದ್ದರೆ, ಅದು ಮೂರ್ಖತನದ ಪರಮಾವಾಧಿಯಷ್ಟೇ ಎಂದವರು ಹೇಳಿದ್ದಾರೆ. ತಂತ್ರಜ್ಞಾನ, ಸಿ.ಸಿ. ಕ್ಯಾಮೆರಾ ಗಳನ್ನೂ ಉಪಯೋಗಿಸಿ ಪರೀಕ್ಷೆಯಲ್ಲಿ ನಕಲು, ಅಕ್ರಮ ಆಗದಂತೆ ನೋಡಿಕೊಳ್ಳಬೇಕೇ ಹೊರತು ಈ ರೀತಿಯಾದ ಅವೈಜ್ಞಾನಿಕ ಕ್ರಮಗಳಿಂದ ಸಾಧ್ಯವಿಲ್ಲ. ಅಷ್ಟಕ್ಕೂ, ಕಿವಿಯೋಲೆ ಹಾಗೂ ಮೂಗುತಿಯಲ್ಲಿ ಏನನ್ನು ಅಡಗಿಸಿಕೊಳ್ಳಬಹುದು ಎಂಬುದನ್ನು ಪ್ರಾಧಿಕಾರ ಸ್ಪಷ್ಟೀಕರಿಸಬೇಕು ಎಂದಿದ್ದಾರೆ. ಈ ರೀತಿಯಾದ ಅವೈಜ್ಞಾನಿಕ, ಅತಾರ್ಕಿಕ ನಿರ್ಧಾರಗಳನ್ನು ಪರೀಕ್ಷಾ ಪ್ರಾಧಿಕಾರ ಕೈಗೊಂಡರೆ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಯತ್ನಾಳ್ ನೀಡಿದ್ದಾರೆ. ಪರೀಕ್ಷೆಯಲ್ಲಿ ನಕಲು ತಡೆಯೋ ಭರದಲ್ಲಿ ಹೆಣ್ಣು ಮಕ್ಕಳ ಕಿವಿಯೋಲೆ,…
EDಯಿಂದ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ₹3,000 ಕೋಟಿ ಆಸ್ತಿ ಮುಟ್ಟುಗೋಲು
ಮುಂಬೈ: ಸಾರ್ವಜನಿಕ ನಿಧಿಯ ಹಣ ವರ್ಗಾವಣೆ ಹಾಗೂ ಅಕ್ರಮ ವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ಹಲವು ಸಂಸ್ಥೆಗಳಿಗೆ ಸೇರಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ನಿವಾಸ, ನವದೆಹಲಿಯ ರಿಲಯನ್ಸ್ ಸೆಂಟರ್ ಆಸ್ತಿ, ಹಾಗೂ ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ (ಕಾಂಚಿಪುರಂ ಸೇರಿ) ಮತ್ತು ಪೂರ್ವ ಗೋದಾವರಿಯಲ್ಲಿನ ಆಸ್ತಿಗಳು ಇದರಡಿ ಸೇರಿವೆ. ಮುಟ್ಟುಗೋಲು ಹಾಕಿಕೊಳ್ಳಲಾದವುಗಳಲ್ಲಿ ಕಚೇರಿ ಆವರಣಗಳು, ವಸತಿ ಘಟಕಗಳು ಮತ್ತು ಭೂಮಿಯ ಭಾಗಗಳು ಸೇರಿವೆ ಎನ್ನಲಾಗಿದೆ. ಈ ಆಸ್ತಿಗಳ ಮೇಲೆ ಅಕ್ಟೋಬರ್ 31ರಂದು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 5(1) ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ. ತನಿಖೆ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್…
