ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ 2025 ನಿರ್ಣಾಯಕ ಹಂತಕ್ಕೆ ಕಾಲಿಟ್ಟಿದ್ದು, ಎರಡನೇ ಮತ್ತು ಅಂತಿಮ ಹಂತದ ಪ್ರಚಾರ ಭಾನುವಾರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ವಾರಗಳ ರಾಜಕೀಯ ಬಿಸಿಯಾಗಿರುವ ಬಳಿಕ, ಪಕ್ಷಗಳು ಈಗ ನವೆಂಬರ್ 11ರಂದು ನಡೆಯಲಿರುವ ಮತದಾನದತ್ತ ಗಮನ ಹರಿಸಿವೆ. ಈ ಹಂತದಲ್ಲಿ ರಾಜ್ಯದ 20 ಜಿಲ್ಲೆಗಳಾದ್ಯಂತ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಹಾರದ ಮುಂದಿನ ಸರ್ಕಾರವನ್ನು ತೀರ್ಮಾನಿಸುವ ಮಹತ್ವದ ಹಂತವೆಂದು ಪರಿಗಣಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಒಟ್ಟು 1,302 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ — ಇವರಲ್ಲಿ 1,165 ಮಂದಿ ಪುರುಷರು, 136 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗದ ಅಭ್ಯರ್ಥಿ ಇದ್ದಾರೆ. ಈ ಹಂತದಲ್ಲಿ ಸುಮಾರು 3.7 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ; ಇವರಲ್ಲಿ 1.95 ಕೋಟಿ ಪುರುಷರು ಮತ್ತು 1.74 ಕೋಟಿ ಮಹಿಳೆಯರು ಸೇರಿದ್ದಾರೆ. ಮೊದಲ ಹಂತದ ಮತದಾನ ನವೆಂಬರ್ 6ರಂದು…
Year: 2025
‘ದಿ ಗರ್ಲ್ಫ್ರೆಂಡ್’ಗೆ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ; ಅನು ಎಮ್ಯಾನುಯೆಲ್
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್ಫ್ರೆಂಡ್’ ಚಿತ್ರದಲ್ಲಿ ದುರ್ಗಾ ಪಾತ್ರದ ಮೂಲಕ ಗಮನಸೆಳೆದ ನಟಿ ಅನು ಎಮ್ಯಾನುಯೆಲ್, ಈ ಪಾತ್ರವು ತಮ್ಮ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ ಪಡೆದಿರುತ್ತದೆ ಎಂದು ಹೇಳಿದ್ದಾರೆ. ಚಿತ್ರದ ಬಿಡುಗಡೆ ನಂತರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡ ಅನು ಎಮ್ಯಾನುಯೆಲ್ ಬರೆದಿದ್ದಾರೆ – “‘ದಿ ಗರ್ಲ್ಫ್ರೆಂಡ್’ ಚಿತ್ರವು ನನ್ನ ಮನದಾಳದಲ್ಲಿ ಸದಾಕಾಲ ವಿಶೇಷ ಸ್ಥಾನ ಪಡೆಯಲಿದೆ. ದುರ್ಗಾ ಪಾತ್ರವು ಚಿಕ್ಕದಾದರೂ, ಅದು ನನಗೆ ಹಿಂದೆಂದೂ ಅನುಭವಿಸದ ತೃಪ್ತಿಯ ಭಾವನೆಯನ್ನು ನೀಡಿತು. ಅವಳಲ್ಲಿ ಶಾಂತ ಶಕ್ತಿ ಇತ್ತು, ಪದಗಳಿಗಿಂತ ಹೆಚ್ಚು ಮಾತನಾಡುವ ಸ್ಥಿರತೆ ಇತ್ತು. ಅವಳನ್ನು ಜೀವಂತಗೊಳಿಸುವಲ್ಲಿ, ನಾನು ನನ್ನ ಒಂದು ಭಾಗವನ್ನು ಕಂಡುಕೊಂಡೆ.” ನಿರ್ದೇಶಕ ರಾಹುಲ್ ರವೀಂದ್ರನ್ ಅವರತ್ತ ಕೃತಜ್ಞತೆ ವ್ಯಕ್ತಪಡಿಸಿದ ಅನು ಎಮ್ಯಾನುಯೆಲ್, “ದುರ್ಗಾ ಪಾತ್ರವನ್ನು ನನಗೆ ನಂಬಿಕೆ ಇಟ್ಟು ಒಪ್ಪಿಸಿದ್ದಕ್ಕಾಗಿ ಧನ್ಯವಾದಗಳು. ಮಹಿಳೆಯರನ್ನು ಇಷ್ಟು…
ರಾಯಲ್ ಎನ್ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ
ಮಿಲನ್ : ಪ್ರಸಿದ್ಧ ಮೋಟಾರ್ಸೈಕಲ್ ತಯಾರಕ ರಾಯಲ್ ಎನ್ಫೀಲ್ಡ್, ತನ್ನ ಹೊಸ ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ ಮಾದರಿ ಫ್ಲೈಯಿಂಗ್ ಫ್ಲೀ S6 ಅನ್ನು ಇಟಲಿಯ ಮಿಲನ್ನಲ್ಲಿ ನಡೆದ EICMA 2025 ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. ಕಂಪನಿಯ ‘ಸಿಟಿ-ಪ್ಲಸ್’ ಪ್ಲಾಟ್ಫಾರ್ಮ್ ಆಧಾರಿತ ಈ ನೂತನ ಮಾದರಿ, ರಾಯಲ್ ಎನ್ಫೀಲ್ಡ್ನ ಎಲೆಕ್ಟ್ರಿಕ್ ವಿಭಾಗದಲ್ಲಿ ಕಾಂಪ್ಯಾಕ್ಟ್, ಆದರೆ ಶಕ್ತಿಶಾಲಿ ಮೋಟಾರ್ಸೈಕಲ್ ಆಗಿ ಗುರುತಿಸಿಕೊಳ್ಳಲಿದೆ. VIDEO | Motorcycle maker Royal Enfield, part of Eicher Motors Group, will start the global commercial roll-out of its electric bikes under the Flying Flea brand from next year, a top company official said. Managing Director and Royal Enfield CEO B Govindarajan said: “We will be… pic.twitter.com/ffqNwnigm2 — Press Trust…
ತಂದೆತಾಯಿಗೆ ಬೇಡವಾದ ಹಸುಗೂಸು; ಬೀದಿಯಲ್ಲಿ ಬಿಸಾಡಿದ ಪಾಪಿಗಳು
ದೊಡ್ಡಬಳ್ಳಾಪುರ: ಜನ್ಮ ಪಡೆದ ಕೆಲವೇ ವಾರಗಳ ನವಜಾತ ಗಂಡು ಶಿಶುವನ್ನು ಮಾನವೀಯತೆ ಮರೆತ ಪಾಪಿಗಳು ಬೀದಿಯಲ್ಲೇ ಬಿಸಾಡಿ ಹೋದ ಹೃದಯ ಕಲುಕುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಲೇಔಟ್ ಬಳಿ ನಡೆದಿದೆ. ಮಗು ಅಳುವ ಶಬ್ದ ಕೇಳಿ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗು ಜೀವಂತವಾಗಿರುವುದನ್ನು ಕಂಡು ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಗು ತೀವ್ರ ಹಸಿವಿನಿಂದ ಅಳುತ್ತಿದ್ದುದರಿಂದ ಗ್ರಾಮದ ಆಂಜಿನಮ್ಮ ಕುಟುಂಬವು ಹಾಲುಣಿಸಿ ಮಾನವೀಯತೆ ಮೆರೆದಿದೆ. ನಂತರ ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದು ಮಗುವನ್ನು ವಶಕ್ಕೆ ಪಡೆದಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಮತ್ತೆ ಸಮಾಜದಲ್ಲಿ ಮಾನವೀಯತೆ ಹಾಗೂ ಮಕ್ಕಳ ರಕ್ಷಣೆಯ ಅಗತ್ಯತೆಯ ಬಗ್ಗೆ ಚಿಂತನೆ ಮೂಡಿಸಿದೆ.
ಕೃಷಿಕ ಸಮಾಜ ರೈತರ ಸಮಸ್ಯೆ ಬಿಂಬಿಸುವ ಸಂಪರ್ಕ ಕೊಂಡಿ: ಎನ್.ಚಲುವರಾಯಸ್ವಾಮಿ
ಬಳ್ಳಾರಿ: ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಹಯೋಗದಲ್ಲಿ ನಗರದ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಅವರು, ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ಇಲಾಖೆಗಳಿಗಿಂತಲೂ ಕೃಷಿ ಇಲಾಖೆಯು ವಿಶಿಷ್ಟವಾಗಿದೆ. ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಎಂಬುವವರು ಸ್ವತಂತ್ರ ಪೂರ್ವದಲ್ಲಿ ರಾಜ್ಯದ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷಿಕ ಸಮಾಜ ಸ್ಥಾಪಿಸುವಲ್ಲಿ ಪ್ರಮುಖ…
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ
ಬೆಂಗಳೂರು: ‘ನಮ್ಮ ಮತ- ನಮ್ಮ ಹಕ್ಕು’ ಘೋಷಣೆಯಡಿ, ಮತಗಳ್ಳತನ ವಿರುದ್ಧದ ರಾಹುಲ್ ಗಾಂಧಿಯವರ ಹೋರಾಟಕ್ಕೆ ಕೈ ಜೋಡಿಸಿರುವ ಪ್ರದೇಶ ಕಾಂಗ್ರೆಸ್, ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಯೂ ಆದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಡೆದ ವೋಟ್ ಚೋರಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ ಎಂದರು. ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು…
ರಸ್ತೆ ಗುಂಡಿ, ಕಸ ಅವಾಂತರ; ಸರ್ಕಾರಕ್ಕೆ ಮುಜುಗರ ತಂದ ಬಿಜೆಪಿ ಅಭಿಯಾನ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಗುಂಡಿ ಬಿದ್ದ ರಸ್ತೆಗಳು ಮತ್ತು ಕಸ ವಿಲೇವಾರಿಯಾಗದೇ ಇರುವುದು ಕಾಂಗ್ರೆಸ್ ಸರ್ಕಾರ ವೈಫಲ್ಯ ಖಂಡಿಸಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜನಜಾಗೃತಿ ಅಭಿಯಾನ ನಡೆಯಿತು. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್, ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಕಸ ರಾಶಿಗಳು ಬಿದ್ದಿರುವ ಸ್ಥಳಕ್ಕೆ ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಆರ್.ಅಶೋಕ್ ರವರು ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಗುಂಡಿಗಳ ಸರ್ಕಾರ, ಗುಂಡಿಗಳ ಕ್ಯಾಬಿನೇಟ್ ಆಗಿದೆ ಎಂದರು. ಎರಡುವರೆ ವರ್ಷಗಳಿಂದ ಯಾವುದೇ ಅಭವೃದ್ದಿ ಕೆಲಸವಾಗಿಲ್ಲ ಗ್ಯಾರೆಂಟಿ, ಗ್ಯಾರೆಂಟಿ ಎಂದು…
‘ನಮ್ಮ ಮತ- ನಮ್ಮ ಹಕ್ಕು’: ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ
ಬೆಂಗಳೂರು: ‘ನಮ್ಮ ಮತ- ನಮ್ಮ ಹಕ್ಕು’ ಘೋಷಣೆಯಡಿ, ಮತಗಳ್ಳತನ ವಿರುದ್ಧದ ರಾಹುಲ್ ಗಾಂಧಿಯವರ ಹೋರಾಟಕ್ಕೆ ಕೈ ಜೋಡಿಸಿರುವ ಪ್ರದೇಶ ಕಾಂಗ್ರೆಸ್, ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಯೂ ಆದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಡೆದ ವೋಟ್ ಚೋರಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ ಎಂದರು. ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು…
4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ವಾರಣಾಸಿ: ಬನಾರಸ್ ರೈಲು ನಿಲ್ದಾಣ ಶನಿವಾರ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 4 ಹೊಸ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಯಿತು. Delighted to flag off four Vande Bharat trains. These will enhance connectivity and provide greater comfort for citizens. https://t.co/kHl2ufYLoF — Narendra Modi (@narendramodi) November 8, 2025 ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ರೈಲುಗಳಿಗೆ ಚಾಲನೆ ನೀಡಿದರು. ಬನಾರಸ್-ಖಜುರಾಹೊ, ಲಕ್ನೋ-ಸಹಾರನ್ಪುರ, ಫಿರೋಜ್ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಈ ರೈಲುಗಳು ಕಾರ್ಯನಿರ್ವಹಿಸಲಿವೆ. ಈ ನಗರಗಳ ನಡುವೆ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಸುದೀರ್ಘ ಆಗ್ರಹಗಳಿತ್ತು. ಇದೀಗ ಈ ಅರೆ-ಹೈ-ಸ್ಪೀಡ್ ರೈಲುಗಳು ಪ್ರಮುಖ ನಿಲ್ದಾಣಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಲವು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಔದ್ಯೋಗಿಕ ಕ್ಷೇತ್ರಕ್ಕೂ ಅನುಕೂಲವಾಗಲಿದೆ ಎಂದು ನಂಬಲಾಗಿದೆ.
ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ರೂ ದರ ನಿಗದಿ; ಬಿಜೆಪಿ ಸ್ವಾಗತ
ಬೆಂಗಳೂರು: ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಈವರೆವಿಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ದೇಶದ ಬೆನ್ನೆಲುಬು ರೈತ, ‘ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ’ ಎಂಬ ಇತಿಹಾಸ ಮರುಕಳಿಸಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆದ ಕಬ್ಬು ಬೆಳೆಗಾರ ರೈತರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ರೂ ದರ ನಿಗದಿ ಪಡಿಸಿ ನಿರ್ಧಾರ ಕೈಗೊಂಡಿದೆ. ಹೋರಾಟನಿರತ ರೈತ ಬಂಧುಗಳು ನಿರ್ಧಾರವನ್ನು ಸ್ವಾಗತಿಸಿ ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ, ರೈತನಾಯಕ ಯಡಿಯೂರಪ್ಪ ಅವರ ಪುತ್ರನಾಗಿ…
