ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಅಂಗವಾಗಿ ಮಂಗಳವಾರ ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರೆದ ಕಲಾಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು. ಆಳ್ವಾಸ್ ಕಾಲೇಜಿನ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭೆಯನ್ನು ಅನಾವರಣಗೊಳಿಸಿದರು. ಪ್ರಾಥಮಿಕದಿಂದ ಕಾಲೇಜಿನ 40 ವಿದ್ಯಾರ್ಥಿಗಳ ತಂಡ, ವೇದಿಕೆಯಲ್ಲಿ ನಿರ್ಮಿಸಿದ 2 ಮಲ್ಲಕಂಬದಲ್ಲಿ ನಡೆಸಿದ ಕಸರತ್ತುಗಳು, ವೇದಿಕೆ ಎರಡು ಬದಿಯಲ್ಲಿ ಹಾಕಿದ್ದ ರೋಪ್‌ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಾಡಿದ ಸಾಹಸಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು. ವಿದ್ಯಾರ್ಥಿಗಳಿಂದ ಕಥಕ್ ಪಶ್ಚಿಮ ಬಂಗಾಲದ ಪುರುಲಿಯಾ ಸಿಂಹದ ಬೇಟೆ ನೃತ್ಯ, ಕ್ಲಾಸಿಕ್ ಹಾಗೂ ಮಾರ್ಷಲ್ ಆರ್ಟ್ಸ್ ಸಮ್ಮಿಲನಗೊಂಡಿರೊ ಮಣಿಪುರ ಸ್ಟಿಕ್ ಡ್ಯಾನ್ಸ್ಗಳು, ಗುಜರಾತಿನ ದಾಂಡಿಯಾ ನತ್ಯ, ನವರಂಗ್ ಕಥಕ್ ಪ್ರದರ್ಶನ, ಡೊಲ್ಲುಕುಣಿತ ತಡರಾತ್ರಿವರೆಗೂ ಮನಮೋಹಕವಾಗಿ ಮೂಡಿಬಂತು. ಈ ಸಂದರ್ಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರನ್ನು ಗೌರವಿಸಲಾಯಿತು.
Year: 2025
ರಾಜೀವ್ ಗಾಂಧಿ ವಿವಿಗೆ ಇದೆ 1500 ಕ್ಕೂ ಹೆಚ್ಚು ಅಂಗಸಂಸ್ಥೆಗಳು, ಕಾಲೇಜುಗಳು
ಬೆಂಗಳೂರು: ವೈದ್ಯಕೀಯ ಕಲಿಕೆ ಎಂದರೆ ಕೇವಲ ವೈದ್ಯರು, ನರ್ಸ್‌ಗಳು, ಔಷಧ ಶಾಸ್ತ್ರಜ್ಞರು ಅಥವಾ ಸಂಶೋಧಕರನ್ನು ತಯಾರಿಸುವುದಲ್ಲ. ಜ್ಞಾನದೊಂದಿಗೆ ಕರುಣೆ, ಮಾನವೀಯತೆ ಹಾಗೂ ವೃತ್ತಿಪರತೆಯನ್ನೂ ಹೊಂದಿರುವ ಹೊಸ ತಲೆಮಾರನ್ನು ರೂಪಿಸಬೇಕಾಗಿದೆ ವೈದ್ಯಕೀಯ ಶಿಕ್ಷಣ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಪ್ರತಿಪಾದಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ವೈದ್ಯಕೀಯ ಕ್ಷೇತ್ರದಲ್ಲಿರುವವರು ತಾಂತ್ರಿಕ ಕೌಶಲ್ಯದ ಜೊತೆಗೆ ಸಂವಹನ ಕೌಶಲ್ಯ ಹಾಗೂ ಮನವೀಯತೆಯನ್ನೂ ಬೆಳೆಸಿಕೊಳ್ಳಬೇಕು. ವೈದ್ಯರಾದವರು ರೋಗಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದೂ ಮುಖ್ಯ. ವೃತ್ತಿಯ ಜೊತೆಗೆ ಸೇವೆಗೂ ಅವಕಾಶವಿರುವ ಕ್ಷೇತ್ರ ಎಂದರೆ ವೈದ್ಯಕೀಯ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಶಿಕ್ಷಕರು ವೃತ್ತಿಯ ಜೊತೆಗೆ ಸೇವಾ ಮನೋಭಾವವನ್ನೂ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು. ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ…
NEET, JEE, CET ತರಬೇತಿ; ವೇದಾಂತ PU ಕಾಲೇಜು ಸ್ಕಾಲರ್ಶಿಪ್ ಪರೀಕ್ಷೆ, ಚಿಕ್ಕೋಡಿಯಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗಿ
ಮಂಗಳೂರು: ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಪ್ರವೇಶ ಸಂಬಂಧ ತರಬೇತಿಯಲ್ಲಿ ಯಶೋಗಾಥೆ ಬರೆದಿರುವ ಮಂಗಳೂರಿನ ‘ವೈವಿಧ್ಯ’ ಸಂಸ್ಥೆಯ ಸಹಭಾಗಿತ್ವದ ‘ವೇದಾಂತ ಪದವಿ ಪೂರ್ವ ಕಾಲೇಜು’ ಸ್ಕಾಲರ್ಶಿಪ್ ಸಂಬಂಧ ನಡೆಸುತ್ತಿರುವ ಪ್ರವೇಶ ಪರೀಕ್ಷೆ ಜನಪ್ರಿಯವಾಗುತ್ತಿದೆ. ಮಂಗಳೂರಿನ ನೀರುಮಾರ್ಗ ಸಮೀಪದ ಫರ್ಮಾಯಿ ಚರ್ಚ್ ಸಮೀಪ ಇರುವ ವೇದಾಂತ ಪದವಿ ಪೂರ್ವ ಕಾಲೇಜು’ NEET, JEE, CET ಸಹಿತ ಸ್ಪರ್ಧಾತ್ಮಕ ಪರೀಕ್ಷೆಯ ಶಿಕ್ಷಣ ನೀಡುತ್ತಿದೆ. ಹಾಗಾಗಿ ಪ್ರವೇಶಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಯಲ್ಲೇ, ವಿದ್ಯಾರ್ಥಿ ವೇತನ ಸಹಿತ ಉಚಿತ ಪ್ರವೇಶವನ್ನು ಕೂಡಾ ಶಿಕ್ಷಣ ಸಂಸ್ಥೆ ಕಲ್ಪಿಸುತ್ತದೆ. ಇದಕ್ಕಾಗಿ ರಾಜ್ಯದ ಹಲವೆಡೆ ಪರೀಕ್ಷೆ ನಡೆಸಲಾಗುತ್ತಿದೆ. ಭಾನುವಾರ (21 ಸೆಪ್ಟೆಂಬರ್, 2025) ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ‘ಉಚಿತ ವೇದಾಂತ ವಿದ್ಯಾರ್ಥಿವೇತನ ಪರೀಕ್ಷೆ’ಯಲ್ಲಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಚಿಕ್ಕೋಡಿಯ GSES English Medium School ನಲ್ಲಿ ನಡೆದ ಪರೀಕ್ಷೆಯಲ್ಲಿ ಬೆಳಗಾವಿ ಸುತ್ತಮುತ್ತಲ…
‘ಶಾಲೆಗಳ ಬಗ್ಗೆ ಗಮನಕೊಡದ ಶಿಕ್ಷಣ ಸಚಿವ ಮಧು ಬಂಗಾರಪ್ಪ’: BJP ರಾಜ್ಯಾಧ್ಯಕ್ಷ ಆರೋಪ
ಬೆಂಗಳೂರು: ಅನ್ನ ಭಾಗ್ಯ ‘ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ‘ಹಸಿವು ಮುಕ್ತ ಭಾರತ’ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಐ.ವೈ.ವಿಜಯೇಂದ್ರ ಹೇಳಿದ್ದಾರೆ. ಅಣ್ಣ ಭಾಗ್ಯ ಯೋಜನೆ ವಿಚಾರದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಜಯೇಂದ್ರ, ಕೇಂದ್ರದ ‘ಗರೀಬ್ ಕಲ್ಯಾಣ್’ ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿದ ಬಡವರ “ಸ್ವಾಭಿಮಾನದ ಭಾಗ್ಯ” ಎಂದಿದ್ದಾರೆ. ಸಚಿವ @Madhu_Bangarapp ನವರೇ ಅನ್ನ ಭಾಗ್ಯ ‘ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ, ಪ್ರಧಾನಿ ಶ್ರೀ @narendramodi ಜೀ ಅವರು ‘ಹಸಿವು ಮುಕ್ತ ಭಾರತ’ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲ ‘ಗರೀಬ್ ಕಲ್ಯಾಣ್’ ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿದ ಬಡವರ “ಸ್ವಾಭಿಮಾನದ ಭಾಗ್ಯ” ನಿಮ್ಮ ಕಲ್ಪನೆಯಲ್ಲಿ “ಅನ್ನಭಾಗ್ಯ ಜನರಿಗೆ ನೀಡುವ… pic.twitter.com/YKR9Jt9tQ8 — Vijayendra Yediyurappa (@BYVijayendra) September 23, 2025…
ಬಿಹಾರ: ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಪಾಟ್ನಾ: ಬಿಹಾರದಲ್ಲೂ ಅಹಿಂದಾ ನಾಯಕ ಸಿದ್ದರಾಮಯ್ಯ ಹವಾ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಭೇಟಿನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದ ಸನ್ನಿವೇಶ ಗಮನಸೆಳೆಯಿತು. ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಹರ್ಷೋದ್ಗಾರದಿಂದ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲೇ ನಾಯಕರು ಶಾಲು ಹೊದಿಸಿ ಸನ್ಮಾನಿಸಿದರು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ, ಪ್ರೀತಿ ತುಂಬಿದ ಸ್ವಾಗತ ಕಂಡು ಖುಷಿಯಾಯಿತು. ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು ಎದುರುಗೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಆ… pic.twitter.com/QpXYOQlXwS — Siddaramaiah (@siddaramaiah) September 23, 2025 ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು…
ಮಳೆ ಸಾಧ್ಯತೆ; ಸೆ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್
ಬೆಂಗಳೂರು : ರಾಜ್ಯ ಕರಾವಳಿಯಲ್ಲಿ ಈ ವಾರ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಿಜೆಪಿ ಹೋರಾಟಕ್ಕೆ ಸಂದ ಜಯ: ‘ಕ್ರೈಸ್ತ ಜಾತಿಯ ಜೊತೆಗೆ ಹಿಂದೂ ಜಾತಿ’ ವಿವಾದಕ್ಕೆ ತೆರೆ
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತ ಎಸ್‍ಸಿ ಜಾತಿಗಳನ್ನು ಜಾತಿ ಗಣತಿ ಪಟ್ಟಿಯಲ್ಲಿ ಮರೆಮಾಚಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕ್ರೈಸ್ತ ಜಾತಿಯ ಜೊತೆಗೆ ಹಿಂದೂ ಜಾತಿಯ ಹೆಸರುಗಳನ್ನು ನಮೂದಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಈ ಸಂಬಂಧ ಬಿಜೆಪಿ ನಾಯಕರು ರಾಜ್ಯಪಾಲರಿಗೂ ದೂರು ನೀಡಿತ್ತು. ಇದೀಗ ಈ ತಪ್ಪನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಿಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, ಇದು ತಮ್ಮ ಪಕ್ಷದ ಹೋರಾಟಕ್ಕೆ ಸಂದ ಜಯವಾಗಿದೆ ಎಂದಿದೆ. ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುವ ಈ ಪ್ರಯತ್ನದ ವಿರುದ್ಧ ಧ್ವನಿ ಎತ್ತಿದ ಎಲ್ಲಾ ಸಮಾಜಗಳ ಮಠಾಧೀಶರು, ಪ್ರಮುಖರು ಮತ್ತು ರಾಜಕೀಯ ನಾಯಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ತಡವಾಗಿಯಾದರೂ ಸಮಯೋಚಿತ ನಿರ್ಧಾರ ಕೈಗೊಂಡ ಆಯೋಗಕ್ಕೆ ಕೃತಜ್ಞತೆಗಳು ಎಂದಿದೆ. ಹಿಂದುಳಿದ ವರ್ಗಗಳ ಆಯೋಗವು…
ಸೆ 26 ರಿಂದ 5 ದಿನಗಳ ಕಾಲ ಕೆಆರ್ ಎಸ್ ನಲ್ಲಿ “ಕಾವೇರಿ ಆರತಿ
ಬೆಂಗಳೂರು: ಕನ್ನಡ ನಾಡಿನ ಜೀವನದಿ “ಕಾವೇರಿ ಆರತಿ” ಎಂಬ ಐದು ದಿನಗಳ ಭವ್ಯ ಕಾರ್ಯಕ್ರಮವು ಕೆಆರ್ ಎಸ್ ನಲ್ಲಿ ಸೆಪ್ಟೆಂಬರ್ 26 ರಿಂದ ಆಯೋಜನೆಯಾಗಿದೆ. ಶುಕ್ರವಾರ ಸಾಯಂಕಾಲ 5 ಗಂಟೆಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎನ್. ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಕೃಷಿ ಸಚಿವರು…
‘ಪುಸ್ತಕಗೂಡು’ ಅಭಿಯಾನ; ಪ್ರಾಯೋಗಿಕ ಪ್ರಯತ್ನ ಯಶಸ್ಸು
ಬೆಂಗಳೂರು: ರಾಜ್ಯದ ಗ್ರಾಮೀಣ ಜನರಲ್ಲಿ ಅಕ್ಷರದ ಪ್ರೀತಿ ಬೆಳೆಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಾರಿಗೆ ತಂದ ‘ಪುಸ್ತಕಗೂಡು’ ಅಭಿಯಾನವು ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಬಸ್ ನಿಲ್ದಾಣ, ಮಾರುಕಟ್ಟೆ ಮುಂತಾದ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಪುಸ್ತಕಗಳನ್ನು ಶೇಖರಿಸಿ ಇಡುವುದರಿಂದ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಓದುವ ತವಕ ಹೆಚ್ಚುತ್ತದೆ. ಇದೀಗ ಕಲಬುರಗಿ ಜಿಲ್ಲೆ, ಚಿತ್ತಾಪೂರ ತಾಲ್ಲೂಕಿನ ದಿಗ್ಗಾಂವ ಗ್ರಾಮ ಪಂಚಾಯತಿಯ ಬಸ್ ನಿಲ್ದಾಣದಲ್ಲಿ ಸುಂದರ ಮತ್ತು ಸುಸಜ್ಜಿತ ‘ಪುಸ್ತಕ ಗೂಡು’ ಸ್ಥಾಪನೆಯಾಗಿದೆ. ಈಗಾಗಲೇ ರಾಜ್ಯದ ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಗ್ರಾಮೀಣರ ಬೌದ್ಧಿಕ ವಿಕಸನಕ್ಕೆ ಅಗಾಧ ಕೊಡುಗೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ‘ಪುಸ್ತಕಗೂಡು’ ಯೋಜನೆ ಜನಸಾಮಾನ್ಯರಲ್ಲಿ ಓದಿನ ಅಭಿರುಚಿ ಬೆಳೆಸುತ್ತಿದೆ. ಯುವಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅಗತ್ಯವಾದ ಸೂಕ್ತ ಸವಲತ್ತುಗಳನ್ನು…
ಮಂಗಳೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೈಭವದ ಚಾಲನೆ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಮೈಸೂರು ವೈಭವದಂತೆಯೇ ನಾಡಿನ ಗಮನಸೆಳೆದಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಅಡ್ಡೂರು ದಸರಾ ನೆರವೇರುತ್ತಿದೆ. ಈ ಮಹಾವೈಭವಕ್ಕೆ ತಾಸೆ ಮತ್ತು ಡೋಲು ಬಡಿಯುವ ಮೂಲಕ ತುಳುನಾಡಿನ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಅಧ್ಯಕ್ಷ ಡಾ.ಎ.ವೆಂಕಟರಮಣ ಅಕ್ಕರಾಜು, ದಸರಾವು ಹಬ್ಬ ಮಾತ್ರವಲ್ಲ, ನಂಬಿಕೆ, ಸಂಸ್ಕೃತಿ ಹಾಗು ಒಗಟ್ಟಿನ ಪ್ರತೀಕ. ಕುದ್ರೋಳಿಯಲ್ಲಿ ನಡೆಯುತ್ತಿರು ಈ ಉತ್ಸವ ಮಂಗಳೂರನ್ನು ಮತ್ತಷ್ಟು ವಿಭಿನ್ನವಾಗಿಸಿದೆ ಎಂದರು. ಮಂಗಳೂರು ದಸರಾ ಮೈಸೂರ ದಸರಾದಷ್ಟೇ ಪ್ರಸಿದ್ಧಿ ಪಡೆದಿದೆ. ಭಾರತೀಯ ಧರ್ಮ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ಹಾಗೂ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್, ಯೂನಿಯನ್…
