‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮ ಭಾರತದಾದ್ಯಂತ ಜನರಿಗೆ ಲಾಭ: ಪ್ರಧಾನಿ ಮೋದಿ

ಭಾವನಗರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದರು. ದೇಶಾದ್ಯಂತ ಜನರಿಗೆ ಪ್ರಯೋಜನವಾಗುವಂತೆ 34,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿರುವುದು ವಿಶೇಷ. ಭಾವನಗರದ ಜವಾಹರ್ ಮೈದಾನದಲ್ಲಿ ನಡೆದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು, ಕಡಲ ವಲಯಕ್ಕೆ ಸಂಬಂಧಿಸಿದ ಅನೇಕ ಪರಿವರ್ತನಾತ್ಮಕ ಯೋಜನೆಗಳನ್ನು ಪ್ರಾರಂಭಿಸಿದರು. “ಇವು ಕಡಲ ವಲಯವಷ್ಟೇ ಅಲ್ಲ, ಭಾರತದ ಸ್ವಾವಲಂಬನೆಗೆ ದಾರಿತೋರಿಸುತ್ತವೆ,” ಎಂದು ಮೋದಿ ಹೇಳಿದರು. ಮುಖ್ಯ ಘಟ್ಟಗಳು 7,870 ಕೋಟಿ ರೂ. ಮೌಲ್ಯದ ಬಂದರು ಆಧುನೀಕರಣ ಯೋಜನೆಗಳಿಗೆ ಚಾಲನೆ. ಮುಂಬೈ ಇಂದಿರಾ ಡಾಕ್‌ನಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್ ಅಭಿವೃದ್ಧಿ. ಪಾರಾದೀಪ್ (ಒಡಿಶಾ) ನಲ್ಲಿ ಹೊಸ ಸರಕು ನಿಲ್ದಾಣ, ಟ್ಯೂನ ಟೆಕ್ರಾ (ಗುಜರಾತ್) ಮಲ್ಟಿ-ಕಾರ್ಗೋ ಟರ್ಮಿನಲ್ ನಿರ್ಮಾಣ.…

ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ; ಸಿದ್ದು ಸರ್ಕಾರದ ವಿರುದ್ಧ ಆಕ್ರೋಶ ಸ್ಫೋಟ

ಬೆಂಗಳೂರು: ರಾಜ್ಯದ ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮುಜರಾಯಿ ದೇವಸ್ಥಾನಗಳ ಕುರಿತಂತೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ. ಗಣೇಶ ಚತುರ್ಥಿಯನ್ನು ರಣರಂಗವಾಗಿಸಿದ ಕಾಂಗ್ರೆಸ್ ಸರ್ಕಾರ ಈಗ ನವರಾತ್ರಿ, ದೀಪಾವಳಿಯ ಸಂಭ್ರಮವನ್ನೂ ಹಾಳು ಮಾಡಲು ಮುಂದಾಗಿದೆ. ʼಎʼ ದರ್ಜೆಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಯ ದರವನ್ನು ಏರಿಸುವ ಮೂಲಕ ಹಿಂದೂ ಧರ್ಮೀಯರ ಮೇಲೆ ತನ್ನ ಅಸಹನೆಯನ್ನು ತೋರಿಸಿದೆ ಎಂದು ಬಿಜೆಪಿ ದೂರಿದೆ. ಹಿಂದೂಗಳು ಸುಮ್ಮನಿದ್ದಾರೆ, ಏನು ಮಾಡಿದರೂ ನಡೆಯುತ್ತದೆ ಎಂದು ಸಿದ್ದರಾಮಯ್ಯ ಸರ್ಕಾರ ಅಹಂಭಾವ ಪ್ರದರ್ಶಿಸುತ್ತಿದೆ. ಕಟೀಲು ದೇವಸ್ಥಾನವೊಂದರಲ್ಲೇ ಅತಿಹೆಚ್ಚು ಜನರು ಭಕ್ತಿಯಿಂದ ಸಮರ್ಪಿಸುವ ಹೂವಿನ ಪೂಜೆಯ ದರವನ್ನು ಬರೋಬ್ಬರಿ 184% ಹೆಚ್ಚಳ ಮಾಡಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಆಶ್ಲೇಷ ಪೂಜೆ, ನಾಗಪ್ರತಿಷ್ಠೆ ಸೇವೆಗಳ ಸೇವಾ ದರವನ್ನೂ ಹೆಚ್ಚಿಸಿರುವುದು ಸರ್ಕಾರದ ಹಿಂದೂ…

ಬೆಂಗಳೂರಿನಲ್ಲಿ ನವೆಂಬರ್‌ 4 ರಿಂದ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆ

ಬೆಂಗಳೂರು: ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ಮುಂದಿನ ನವೆಂಬರ್‌ನಲ್ಲಿ ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಆಯೋಜಿಸುತ್ತಿದೆ. ಕೌಶಲ್ಯತೆ, ನಾವೀನ್ಯತೆ ಮತ್ತು ವಿಶೇಷ ಸೌಲಭ್ಯಗಳ ತಾಣವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್‌. ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಹಲವಾರು ಮಾಹಿತಿ ನೀಡಿದರು. ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ನವೆಂಬರ್ 4 ರಿಂದ 6 ರವರೆಗೆ ಈ ಶೃಂಗಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇಂಥ ಮಹತ್ವಾಕಾಂಕ್ಷೆಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಈ ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. “ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಯುವ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು, ಗ್ರಾಮೀಣ ಸಮುದಾಯಗಳು ಮತ್ತು ಅಂಗವಿಕಲರಿಗೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗುವುದು. ಕೌಶಲ್ಯದ ಮೂಲಕ…

ಅಮೆರಿಕಾದಿಂದ ವೀಸಾ ಕತ್ತರಿ; ಭಾರತೀಯ ಉದ್ಯೋಗಿಗಳಿಗೆ ಹೊರೆ

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಅಮೆರಿಕಾ ಹೊಸ ತಂತ್ರ ಆರಂಭಿಸಿದೆ. ಸುಂಕ ಅಸ್ತ್ರ ಬಳಸಿದ ನಂತರ, ಈಗ ವೀಸಾ ವಿಚಾರದಲ್ಲೂ ಕಿರಿಕ್ ಮಾಡಲು ಮುಂದಾಗಿದೆ. ಇರಾನ್‌ನ ಚಬಹಾರ್ ಬಂದರು ಯೋಜನೆಗೆ ನೀಡಿದ್ದ ‘ನಿರ್ಬಂಧ ವಿನಾಯಿತಿ’ ರದ್ದುಗೊಳಿಸುವ ಮೂಲಕ ಭಾರತಕ್ಕೆ ಅಡ್ಡಿಪಡಿಸಿರುವ ಅಮೆರಿಕಾ, ಇದೀಗ ಉದ್ಯೋಗ ವಲಸೆ ವೀಸಾಗಳನ್ನೇ ದುಬಾರಿಯಾಗಿಸುವ ಯೋಜನೆ ಹಾಕಿಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ 100,000 ಡಾಲರ್ ವೀಸಾ ಶುಲ್ಕ ವಿಧಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ತಜ್ಞ ವಿದೇಶಿ ಉದ್ಯೋಗಿಗಳಿಗೆ ಇದು ಭಾರೀ ಹೊರೆ ಎನಿಸಲಿದೆ. ಕಾಂಗ್ರೆಸ್‌ನ ವ್ಯಾಪಕ ಟೀಕೆಯ ನಡುವೆಯೂ, ಅಮೆರಿಕಾ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ “ಗೋಲ್ಡ್ ಕಾರ್ಡ್” ವೀಸಾ ಯೋಜನೆಯನ್ನೂ ಪ್ರಕಟಿಸಲಾಗಿದೆ. ಕಾನೂನಾಗಿ ಜಾರಿಯಾದರೆ, ಉದ್ಯೋಗ ವೀಸಾ ಬೆಲೆ ಗಗನಕ್ಕೇರುವುದಲ್ಲದೆ, ಭಾರತೀಯರ ಉದ್ಯೋಗದ ಕನಸುಗಳಿಗೆ ದೊಡ್ಡ ಅಡೆತಡೆ ಉಂಟಾಗಲಿದೆ.

ಅಮೆರಿಕಾದಲ್ಲಿ ಪೊಲೀಸ್ ಗುಂಡಿಗೆ ತೆಲಂಗಾಣದ ಟೆಕ್ಕಿ ಬಲಿ: ಜನಾಂಗೀಯ ದ್ವೇಷದ ಶಂಕೆ

ಹೈದರಾಬಾದ್: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆದಲ್ಲಿ ತೆಲಂಗಾಣದ ಮೂಲದ ಯುವ ಐಟಿ ತಜ್ಞನೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕುಟುಂಬದವರು ಇದನ್ನು ಜನಾಂಗೀಯ ತಾರತಮ್ಯದ ಕಣ್ಣಿನಿಂದ ನೋಡುತ್ತಿದ್ದು, ಮೃತದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯದ ಸಹಾಯವನ್ನು ಕೋರಿದ್ದಾರೆ. ಮಹಬೂಬ್‌ನಗರದ ನಿವಾಸಿ ಮೊಹಮ್ಮದ್ ನಿಜಾಮುದ್ದೀನ್ (32) ಸಾಂಟಾ ಕ್ಲಾರಾದಲ್ಲಿನ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ 3ರಂದು ರೂಮ್‌ಮೇಟ್ ಜಗಳದಲ್ಲಿ ಚಾಕುವಿನಿಂದ ಇರಿತ ಮಾಡಿದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಡು ಹಾರಿಸಿದ್ದಾರೆ ಎಂದು ಹೇಳಿಕೆ ನೀಡಲಾಗಿದೆ. ನಿಜಾಮುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಅವರು ಮೃತಪಟ್ಟರು. ರೂಮ್‌ಮೇಟ್ ಚಿಕಿತ್ಸೆ ಪಡೆಯುತ್ತಿದ್ದಾರೆ. “ಇದು ಪೊಲೀಸ್ ಗುಂಡಿನ ದಾಳಿ ಪ್ರಕರಣವಾಗಿದ್ದು, ಸಾಂಟಾ ಕ್ಲಾರಾ ಕೌಂಟಿ ಜಿಲ್ಲಾ ವಕೀಲರ ಕಚೇರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ. ತನಿಖೆ ಇನ್ನೂ ಮುಂದುವರಿದಿದ್ದು, ಶೀಘ್ರದಲ್ಲೇ ನವೀಕರಣ ನೀಡಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ,…

ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ; ಸರ್ಕಾರದ ನಡೆಗೆ CSS ಆಕ್ಷೇಪ

ಬೆಂಗಳೂರು: ಜಾತಿ ಸಂಘರ್ಷದ ಕಿಚ್ಚುಹಚ್ಚಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರೈಸ್ತ ಸಮುದಾಯ ಆಕ್ರೋಶ ಹೊರಹಾಕಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈ ಸಂಬಂಧದ ನಿರ್ಧಾರವನ್ನು ಕೈಬಿಡಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ (CSS) ಒತ್ತಾಯಿಸಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಿರುವ ಕ್ರೈಸ್ತಧರ್ಮದ ಹಾಗೂ ಜನರ ಹಿತಾಸಕ್ತಿ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಅವರು, ರಾಜ್ಯ ಸರ್ಕಾರದ ನಡೆ ವಿರೋಧಿಸಿ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಮುಖ್ಯ ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರಿಗೆ ಪತ್ರ ಬರೆ ಬೆಳವಣಿಗೆ ಗಮನಸೆಳೆದಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವ ಬಗ್ಗೆ ಭರವಸೆ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯವನ್ನು ‘ಸರ್ವ ಜನಾಂಗಗಳ ಶಾಂತಿಯ ತೋಟ’ವನ್ನಾಗಿ…

ಚಮೋಲಿ ಮೇಘಸ್ಫೋಟ: ಅವಶೇಷಗಳಿಂದ ಹಲವರ ರಕ್ಷಣೆ

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಬ್ಲಾಕ್‌ನಲ್ಲಿ ಭಾರೀ ಮಳೆ, ಭೂಕುಸಿತ ಹಾಗೂ ಮೇಘಸ್ಫೋಟದಿಂದ ಉಂಟಾದ ಅವಘಡದಲ್ಲಿ ಇಬ್ಬರನ್ನು ಪವಾಡಸದೃಶವಾಗಿ ಜೀವಂತವಾಗಿ ರಕ್ಷಿಸಲಾಗಿದೆ. ಗುರುವಾರ ರಾತ್ರಿ ಸಂಭವಿಸಿದ ಈ ಘಟನೆ ಕಳೆದ 48 ಗಂಟೆಗಳಿಂದ ಜಿಲ್ಲೆಯ ಹಲವೆಡೆ ಮಳೆ-ಪ್ರವಾಹ ತೀವ್ರ ಹಾನಿ ಉಂಟುಮಾಡುತ್ತಿರುವ ಸಂದರ್ಭದಲ್ಲಿ ನಡೆದಿದೆ. ಸುಮಾರು 16 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಹಾಗೂ ಮಹಿಳೆಯೊಬ್ಬರನ್ನು ಸ್ಥಳೀಯರ ಸಹಕಾರದೊಂದಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕುಂಟಾರಿ ಲಗಾಫಲಿ, ಸೆಂಟಿ ಲಗಾಫಲಿ, ಧುರ್ಮಾ ಮತ್ತು ಫಾಲಿ ಲಗಾಫಲಿ ಹಳ್ಳಿಗಳಲ್ಲಿ 30 ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದ್ದು, ಅನೇಕರ ಜೀವಗಳು ಅಪಾಯಕ್ಕೆ ಗುರಿಯಾಗಿವೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, 14 ಜನರು ಅವಶೇಷಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 20…

ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ; ಹೆಚ್ಡಿಕೆ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಎಂದವರು ಪ್ರಶ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮ ‘X’ನಲ್ಲಿ ಬೆಂಗಳೂರು ನಗರದ ಪರಿಸ್ಥಿತಿ ಬಗ್ಗೆ ತಮ್ಮದೇ ಶಾಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ…

ಮೋಹನ್ ಲಾಲ್ ನಟನೆಯ ‘ವೃಷಭ’: ತಂದೆ-ಮಗನ ಕಮಾಲ್

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ನಂದ ಕಿಶೋರ್ ನಿರ್ದೇಶನದ ಈ ದ್ವಿಭಾಷಾ ಮಹಾಕಾವ್ಯವು ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಸುತ್ತ ಕಥೆ ಹೆಣೆದುಕೊಂಡಿದೆ. ಗುರುವಾರ ಬಿಡುಗಡೆಯಾದ ಭವ್ಯ ಟೀಸರ್‌ನಲ್ಲಿ ಮೋಹನ್ ಲಾಲ್ ಅವರನ್ನು ಪುರಾತನ ರಾಜನಾಗಿ ಹಾಗೂ ವರ್ತಮಾನದಲ್ಲಿ ತಂದೆಯಾಗಿ ತೋರಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜನ ಪಾತ್ರದಲ್ಲಿ ಮಿಂಚುತ್ತಿರುವ ಮೋಹನ್ ಲಾಲ್ ಅವರ ಗಂಭೀರ ತೋರ್ಪಡಿಕೆ ಅಭಿಮಾನಿಗಳನ್ನು ಆಕರ್ಷಿಸಿದೆ. ಮೋಹನ್ ಲಾಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಹಂಚಿಕೊಂಡು, “ಕಾಯುವಿಕೆ ಇಲ್ಲಿಗೆ ಕೊನೆಗೊಳ್ಳುತ್ತಿದೆ. ನನ್ನ ಹೃದಯಕ್ಕೆ ಹತ್ತಿರವಾದ ‘ವೃಷಭ’ ಜಗತ್ತಿಗೆ ಸ್ವಾಗತ. ಈ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ” ಎಂದು ಬರೆದಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ಯುವ ನಟ ಸಮರ್ಜಿತ್ ಲಂಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಛಾಯಾಗ್ರಾಹಕ…

ಅಳಿಸಲಾದ ಪ್ರತಿಯೊಂದು ಮತವು ಕದ್ದ ಧ್ವನಿಯಾಗಿದೆ; ಮತಗಳ್ಳತನ ಆರೋಪ ಬಗ್ಗೆ ರಾಹುಲ್ ಹೇಳಿಕೆ

ನವದೆಹಲಿ: ಮತಗಳ್ಳತನ ಬಗ್ಗೆ ಸರಣಿ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನೂ ಯಾವ ರೀತಿ ತೆಗೆದುಹಾಕಲಾಗಿದೆ ಎಂಬ ಬಗ್ಗೆ ವಿವರಿಸಿರುವ ವೈಖರಿ ಗಮನಸೆಳೆದಿದೆ. In just 14 minutes, 12 voters were deleted under the name of Suryakant.One of them was Babita Chaudhary, her voice stolen without her knowledge. Suryakant himself didn’t even know his login was being used. Then who was behind it? Who had access? Who is running this organised… pic.twitter.com/XFjrAhsWku — Karnataka Congress (@INCKarnataka) September 18, 2025 ಕೇವಲ 14 ನಿಮಿಷಗಳಲ್ಲಿ, ಸೂರ್ಯಕಾಂತ್ ಹೆಸರಿನಲ್ಲಿ 12 ಮತದಾರರನ್ನು ಅಳಿಸಲಾಗಿದೆ ಎಂದು ರಾಹುಲ್ ಗಾಂಧಿ ಬೊಟ್ಟು ಮಾಡಿದ್ದಾರೆ. ಒಬ್ಬರು…