ಮಂಡ್ಯ ಜಿಲ್ಲೆಯಲ್ಲಿ ಕೋಮು ಗಲಭೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಸಚಿವರ ಸೂಚನೆ

ಮಂಡ್ಯ: ಕೋಮು ಗಲಭೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಅಧಿಕಾರಿಗಳು ಜಿಲ್ಲೆಯಲ್ಲಿ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಮದ್ದೂರು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಧವಾರ ಮದ್ದೂರು ತಾಲ್ಲೂಕಿನಲ್ಲಿ ನಡೆಯಲಿರುವ ಸಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದರು. ಪೊಲೀಸ್ ಇಲಾಖೆ ವತಿಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲ್ಲೂಕಿನಲ್ಲಿ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತ ಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು. ಹಿಂದೂ, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು, ಕೆಲವು ಕಿಡಿಗೇಡಿಗಳು ನಡೆಸುವ…

ನೇಪಾಳ ಹಿಂಸಾಚಾರ; ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನ

ಕಠ್ಮಂಡು: ನೇಪಾಳದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನವಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೇಲಿನ ನಿಷೇಧ ಖಂಡಿಸಿ ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಪ್ರತಿಭಟನೆ ಹಿಂಸಾರೂಪ ತಳೆದಿದೆ. ಪ್ರತಿಭಟನೆಗೆ ಬೆಚ್ಚಿದ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಈ ನಡುವೆ ನೇಪಾಳದ ಪ್ರಧಾನಿಯ ಬಂಗಲೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಈ ವೇಳೆ, ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಸಜೀವ ದಹನವಾಗಿದ್ದಾರೆ. ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ; ಪ್ರಧಾನಿ ನಿವಾಸಕ್ಕೆ ಬೆಂಕಿ

ಕಠ್ಮಂಡು: ನೇಪಾಳದಲ್ಲಿ ಸರ್ಕಾರದ ವಿರುದ್ಧ ಜನರು ಬಂಡಾಯ ಎದ್ದಿದ್ದಾರೆ. ಸಂಘರ್ಷ ತಾರಕಕ್ಕೇರಿರುವಂತೆಯೇ ಪ್ರಧಾನಿ ಕೆಪಿ ಶರ್ಮಾ ಒಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಚೀನಾ ದೇಶದ ಪರ ಒಲವು ಹೊಂದಿದ್ದಾರೆ ಎನ್ನಲಾದ ಪ್ರಧಾನಿ ಕೆಪಿ ಶರ್ಮಾ ಒಲಿ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಅವರು ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಸಹಿತ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ಮುಂದಾದರು. ಇದನ್ನು ಖಂಡಿಸಿ ನೇಪಾಳದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದೆ. ನೇಪಾಳದ ವಿದ್ಯಾರ್ಥಿಗಳು ಮತ್ತು ಯುವಕರ ನೇತೃತ್ವದಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ದಿನದಂದು ಹಿಂಸಾರೂಪ ಪಡೆಯಿತು. ಪ್ರತಿಭಟನಾಕಾರರು ಬಾಲ್ಕೋಟ್ ನಲ್ಲಿರುವ ಪ್ರಧಾನಿ ಕೆಪಿ ಒಲಿ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. नेपाल में सरकार के खिलाफ भारी विरोध…

ಆಪರೇಷನ್ ಸಿಂಧೂರ್‌ ನಂತರ: 15 ವರ್ಷಗಳ ರಕ್ಷಣಾ ಮಾರ್ಗಸೂಚಿ ಅನಾವರಣ

ನವದೆಹಲಿ: ಆಪರೇಷನ್ ಸಿಂಧೂರ್‌ ಯಶಸ್ವೀ ಕಾರ್ಯಾಚರಣೆಯ ನಾಲ್ಕು ತಿಂಗಳ ನಂತರ, ಮೋದಿ ಸರ್ಕಾರವು ಭಾರತೀಯ ಸಶಸ್ತ್ರ ಪಡೆಗಳ ಶಕ್ತಿಯನ್ನು ಅಭಿವೃದ್ಧಿಪಡಿಸಲು 15 ವರ್ಷದ ಉದ್ದೇಶಿತ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ. ಈ ಅವಧಿಯಲ್ಲಿ ದೇಶದ ಸೇನೆ ಶತಕೋಟಿ ಡಾಲರ್‌ ಹೂಡಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಪರಿವರ್ತನೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಸೇನೆ ಸೋವಿಯತ್ ಯುಗದ T-72 ಟ್ಯಾಂಕ್‌ ಫ್ಲೀಟ್‌ ಬದಲಿಸಲು ಸುಮಾರು 1,800 ಮುಂದಿನ ತಲೆಮಾರಿಯ ಟ್ಯಾಂಕ್‌ಗಳನ್ನು ಪಡೆಯಲಿದೆ. ಜೊತೆಗೆ 400 ಪರ್ವತ ಯುದ್ಧ ಲಘು ಟ್ಯಾಂಕ್‌ಗಳು, 50,000 ಟ್ಯಾಂಕ್-ವಿರೋಧಿ ಮಾರ್ಗದರ್ಶಿತ ಕ್ಷಿಪಣಿಗಳು ಮತ್ತು 700ಕ್ಕೂ ಹೆಚ್ಚು ರೋಬೋಟಿಕ್ ಕೌಂಟರ್-IED ವ್ಯವಸ್ಥೆಗಳನ್ನೂ ಸೇರಿಸಲಾಗಿದೆ. ನೌಕಾಪಡೆಗೆ ಹೊಸ ವಿಮಾನವಾಹಕ ನೌಕೆ, 10 ಮುಂದಿನ ಪೀಳಿಗೆಯ ಯುದ್ಧನೌಕೆಗಳು, 7 ಸುಧಾರಿತ ಕಾರ್ವೆಟ್‌ಗಳು ಹಾಗೂ 4 ಲ್ಯಾಂಡಿಂಗ್ ಡಾಕ್ ಪ್ಲಾಟ್‌ಫಾರ್ಮ್‌ಗಳನ್ನು ಪಡೆಯಲಿದೆ. ವಾಯುಪಡೆಗೆ 75 ಎತ್ತರದ UAV ಉಪಗ್ರಹಗಳು, 150 ಸ್ಟೆಲ್ತ್…

RSS ಮೂರು ದಿನಗಳ ಸಮನ್ವಯ ಬೈಠಕ್; ಪ್ರಮುಖ ನಿರ್ಧಾರಗಳತ್ತ ಸಂಘ ಕಾರ್ಯಕರ್ತರ ಚಿತ್ತ

ಜೋಧ್‌ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ಅಂಗಸಂಸ್ಥೆಗಳ ಮೂರು ದಿನಗಳ ಅಖಿಲ ಭಾರತ ಸಮನ್ವಯ ಸಭೆ ಶುಕ್ರವಾರ ಜೋಧ್‌ಪುರದಲ್ಲಿ ಆರಂಭವಾಯಿತು. ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಂಘಟನಾ ಮಂತ್ರದ ಸಾಮೂಹಿಕ ಪಠಣದೊಂದಿಗೆ ಕಾರ್ಯಕಲಾಪಗಳು ಪ್ರಾರಂಭವಾದವು. ಮೂರು ದಿನಗಳ ಈ ಸಭೆಯಲ್ಲಿ 32 ಅಂಗಸಂಸ್ಥೆಗಳ ರಾಷ್ಟ್ರೀಯ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಆರು ಸಹಸರ್ಕಾರ್ಯವಾಹರು, ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್, ರಾಷ್ಟ್ರೀಯ ಸೇವಿಕಾ ಸಮಿತಿಯ ಶಾಂತಾ ಅಕ್ಕ, ಎಬಿವಿಪಿ ಅಧ್ಯಕ್ಷ ಡಾ. ರಾಜಶರಣ್ ಶಾಹಿ, ಸಕ್ಶಮ್ ಅಧ್ಯಕ್ಷ ಡಾ. ದಯಾಳ್ ಸಿಂಗ್ ಪವಾರ್, ವನವಾಸಿ ಕಲ್ಯಾಣ ಆಶ್ರಮದ ಸತ್ಯೇಂದ್ರ ಸಿಂಗ್ ಸೇರಿದಂತೆ ಹಲವರು ಹಾಜರಿದ್ದಾರೆ. ಬಿಜೆಪಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹಾಗೂ ಸಂಘಟನಾ…

‘ಮುಡಾ’ ವಿಷಯದಲ್ಲಿ, ಸಿದ್ದರಾಮಯ್ಯ ತಪ್ಪಿತಸ್ಥರು, ಪ್ರಮುಖ ವಿಷಯಗಳನ್ನು ಮುಚ್ಚಿಟ್ಟು ಕ್ಲೀನ್ ಚಿಟ್ ನೀಡಲಾಗಿದೆ: ಬಿಜೆಪಿ ಆರೋಪ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಏಕಸದಸ್ಯ ಆಯೋಗವು ಕ್ಲೀನ್ ಚಿಟ್ ನೀಡಿದ ಬೆಳವಣಿಗೆಯನ್ನು ಬಿಜೆಪಿ ಆಕ್ಷೇಪಿಸಿದೆ. ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದೆ. ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ಷಣೆ ಒದಗಿಸಲು ಆಯೋಗದ ವರದಿಯನ್ನು ತಿರುಚಲಾಗಿದೆ. ವಾಸ್ತವದಲ್ಲಿ ಅವರು ಶೇ. 100ರಷ್ಟು ತಪ್ಪಿತಸ್ಥರು” ಎಂದು ಆರೋಪಿಸಿದರು. “60 ಕೋಟಿ ರೂ. ಪಾವತಿಸಿದರೆ ನಿವೇಶನಗಳನ್ನು ಹಿಂತಿರುಗಿಸಲಾಗುತ್ತದೆ ಎಂದು ಸಿಎಂ ಸ್ವತಃ ಹೇಳಿದ್ದರು. ನಂತರ ಅವರು ಮಾತು ತಪ್ಪಿದರು. ಕ್ಲೀನ್ ಚಿಟ್‌ನಲ್ಲಿ ಹಲವು ಅಂಶಗಳನ್ನು ಮುಚ್ಚಿಡಲಾಗಿದೆ. ಇದು ಭ್ರಷ್ಟಾಚಾರದ ಉದಾಹರಣೆ” ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಯ ನಿರ್ಧಾರವನ್ನು ಟೀಕಿಸಿದ ಅವರು, “ಇವಿಎಂ ಬಿಟ್ಟು ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವುದು ರಾಜ್ಯವನ್ನು…

ಸ್ಥಳೀಯ ಚುನಾವಣೆ: ಮತಪತ್ರ ಬಳಕೆಯ ನಿರ್ಧಾರಕ್ಕೆ ಬಿಜೆಪಿಯ ವಿರೋಧ ಏಕೆ? ಡಿಕೆಶಿ ಪ್ರಶ್ನೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲಿಗೆ ಮತಪತ್ರಗಳ ಮೂಲಕ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ನಿಲುವನ್ನು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರದ ನಿರ್ಧಾರ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಕಾನೂನಿನಲ್ಲಿ ಸ್ಪಷ್ಟವಾಗಿಯೇ — ಇವಿಎಂ ಅಥವಾ ಮತಪತ್ರ ಬಳಸಬಹುದು ಎಂದು ಹೇಳಿದೆ. ಆ ಕಾನೂನು ತಂದದ್ದು ಬಿಜೆಪಿ ಸರ್ಕಾರವೇ. ಹೀಗಿರುವಾಗ ಏಕೆ ಅಸಮಾಧಾನ? ಎಂದು ಪ್ರಶ್ನಿಸಿದರು. ರೈತ ಭೂಸ್ವಾಧೀನ ಪ್ರತಿಭಟನೆ, ತಮ್ಮ ವಿರುದ್ಧ ಹಾಗೂ ಸಹೋದ್ಯೋಗಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಹಿಂಪಡೆಯುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಅನೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ರಾಜಕೀಯ ಒತ್ತಡದಿಂದ ಬಿಜೆಪಿ ಸರ್ಕಾರವೇ ಹಲವಾರು ಪ್ರಕರಣಗಳನ್ನು ದಾಖಲಿಸಿತ್ತು. ಭಾಷೆ, ನೀರಿನ ಹಕ್ಕು, ರೈತರ…

ಸಿದ್ದು ಸರ್ಕಾರದಲ್ಲಿ ಕಮೀಷನ್ ತಲ್ಲಣ; ಭೋವಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ

ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆರೋಪದ ನಡುವೆಯೇ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರೆಂಬ ಸುದ್ದಿ ಕುತೂಹಲ ಕೆರಳಿಸಿದೆ. ಕಮಿಷನ್ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರಿಂದ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಸುಮಾರು ₹15 ಕೋಟಿ ವೆಚ್ಚದಲ್ಲಿ ಜಾರಿಗೊಂಡ ಭೂಒಡೆತನ ಯೋಜನೆಯಡಿ 60 ಎಕರೆ ಭೂಮಿ ಖರೀದಿ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ, ಶೇಕಡ 60ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿತ್ತು. ಈ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ರವಿಕುಮಾರ್ ಅವರು ಆರೋಪಗಳನ್ನು ತಳ್ಳಿಹಾಕಿದ್ದರು. ಆದಾಗ್ಯೂ ಪಕ್ಷಕ್ಕೆ ಮುಜುಗರ ಉಂಟಾಗದಂತೆ…

ಮೆಟ್ರೋ ಪ್ರಯಾಣ ದುಬಾರಿ: ತೇಜಸ್ವಿ ಸೂರ್ಯ ಆಕ್ಷೇಪ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಆಕ್ಷೇಪಿಸಿದ್ದಾರೆ. ನಗರದ ಮೆಟ್ರೋದಲ್ಲಿ ದಿನವೂ ಸರಾಸರಿ 10 ಲಕ್ಷ ಜನರು – ವಿದ್ಯಾರ್ಥಿಗಳು, ಸಾಮಾನ್ಯ ಉದ್ಯೋಗಿಗಳು, ಐಟಿ-ಬಿಟಿ ವಲಯದವರು – ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದರ ಏರಿಕೆಯಿಂದ ಸಾಮಾನ್ಯ ಬಳಕೆದಾರರಿಗೆ ಮೆಟ್ರೋ ದುಬಾರಿಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದರ ಏರಿಕೆಯಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಆಗಿದೆ. ಡೆಲ್ಲಿ ಮೆಟ್ರೋ ದರ ಏರಿಕೆ ಗರಿಷ್ಠ ₹4ಕ್ಕೆ ಮಿತವಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಕ್ಕೂ ಅತಿಯಾದ ಭಾರವಾಗಿದೆ” ಎಂದು ಅವರು ಹೋಲಿಕೆ ಮಾಡಿದ್ದಾರೆ. 25 ಕಿ.ಮೀ. ಗಿಂತ ಹೆಚ್ಚು ದೂರ ಕೆಲಸಕ್ಕೆ ಪ್ರಯಾಣಿಸುವವರು ಪ್ರತಿ ಸಾರಿ ₹90 ಪಾವತಿಸಬೇಕಾಗುತ್ತದೆ. ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ವೆಚ್ಚ ಸೇರಿ ಇದು ಸಾರ್ವಜನಿಕ ಸಾರಿಗೆಗೆ ನಿರುತ್ಸಾಹ ಉಂಟುಮಾಡಿ…

33 ಕ್ಯಾನ್ಸರ್, ಅಪರೂಪದ ಕಾಯಿಲೆ ಔಷಧಿಗಳಿಗೆ ಜಿಎಸ್‌ಟಿ ವಿನಾಯಿತಿ – ಜೀವ ರಕ್ಷಕ ಔಷಧಿಗಳ ಬೆಲೆ ಇಳಿಕೆ

ನವದೆಹಲಿ: ಜೀವ ರಕ್ಷಕ ಔಷಧಿಗಳನ್ನು ಸಾಮಾನ್ಯ ಜನತೆಗೆ ಇನ್ನಷ್ಟು ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, 33 ಕ್ಯಾನ್ಸರ್ ಹಾಗೂ ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಜೀವ ಉಳಿಸುವ ಔಷಧಿಗಳಿಗೆ ಶೂನ್ಯ ತೆರಿಗೆ ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಹಾಗೂ ಇತರ ಗಂಭೀರ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳು ಜಿಎಸ್‌ಟಿ ವಿನಾಯಿತಿಗೆ ಒಳಪಡಲಿವೆ. ಹಲವಾರು ಔಷಧಿಗಳು ಶೇಕಡಾ 12ರಿಂದ 5ಕ್ಕೆ ಇಳಿಯುತ್ತವೆ. ದೃಷ್ಟಿ ಸರಿಪಡಿಸುವ ಕನ್ನಡಕ, ಫ್ರೇಮ್‌ಗಳು ಶೇಕಡಾ 28ರಿಂದ 5ಕ್ಕೆ ಇಳಿಯುತ್ತವೆ. ಆರೋಗ್ಯ ಸೇವೆಗೂ ರಿಲೀಫ್ ವೈಯಕ್ತಿಕ ಆರೋಗ್ಯ ಹಾಗೂ ಜೀವ ವಿಮೆ ಪ್ರೀಮಿಯಂಗಳ ಮೇಲಿನ ಜಿಎಸ್‌ಟಿ (18%) ಶೂನ್ಯಕ್ಕೆ ಇಳಿಕೆ. ವೈದ್ಯಕೀಯ ಆಮ್ಲಜನಕ, ರೋಗನಿರ್ಣಯ ಕಿಟ್‌ಗಳು,…