ಹಗಲು ದರೋಡೆ ಪ್ರಕರಣ ಬೇಧಿಸಲು ಪ್ರಯತ್ನ; ಹೆಜ್ಜೆಗುರುತು ಬೆನ್ನತ್ತಿದ ಬೆಂಗಳೂರು ಪೊಲೀಸ್

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಅತಿ ದೊಡ್ಡ ದರೋಡೆ ರಾಜ್ಯ ಪೊಲೀಸ್ ವ್ಯವಸ್ಥೆಗೆ ಸವಾಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿದ ದುಷ್ಕರ್ಮಿಗಳ ಗುಂಪೊಂದು ಜಯನಗರದಲ್ಲಿ 7 ಕೋಟಿ ರೂಪಾಯಿ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ. ಜೆ.ಪಿ.ನಗರದ ಬ್ಯಾಂಕ್‌ ಶಾಖೆಯಿಂದ ಎಟಿಎಂಗಳಿಗೆ ನಗದು ಸಾಗಿಸುತ್ತಿದ್ದ ವ್ಯಾನನ್ನು ಜಯನಗರ ಅಶೋಕ ಪಿಲ್ಲರ್ ಬಳಿ ತಡೆದು ದಾಖಲೆ ಪರಿಶೀಲನೆ ನೆಪದಲ್ಲಿ ಜಾಲಾಡಿದ್ದಾರೆ ಎನ್ನಲಾಗಿದೆ. ಭಾರತ ಸರ್ಕಾರದ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಸಿಬ್ಬಂದಿಯನ್ನು ಬೆದರಿಸಿ, ನಗದು ತುಂಬಿದ ಚೀಲಗಳೊಂದಿಗೆ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಇಳಿಸಿ, ಸುಮಾರು 7 ಕೋಟಿ ರೂ.ಗಳಷ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಕ್ಷಣ ಕ್ರಮ ಕೈಗೊಳ್ಳುವಂತೆ ಡಿಜಿ-ಐಜಿಪಿ ಸಲೀಂ ಅವರಿಗೆ ಸೂಚಿಸಿದ್ದಾರೆ. ಘಟನೆಯ ನಂತರಸರಣಿ ಸಭೆಗಳನ್ನು ನಡೆಸಿ,…

ಮಂಡ್ಯ ಕೃಷಿ ವಿಶ್ವವಿದ್ಯಾಲಯ ಕ್ಕೆ ಯು.ಜಿ.ಸಿ ಮಾನ್ಯತೆ

ಬೆಂಗಳೂರು: ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಇದೀಗ ಮತ್ತೊಂದು ಹಿರಿಮೆ ದೊರೆತಿದೆ.. ಮಂಡ್ಯ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರ ಕಾಳಜಿ ಹಾಗು ಶ್ರಮದ ಹಿನ್ನಲೆ ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಯು.ಜಿ.ಸಿ ಮಾನ್ಯತೆ ದೊರಕಿರುವುದು ಮತ್ತೋಂದು ಹಿರಿಮೆಗೆ ಸಾಕ್ಷಿಯಾಗಿದೆ. ಯು.ಜಿ.ಸಿ‌ ಅಧಿನಿಯಮದ ಪ್ರಕಾರ, ರಾಷ್ಟ್ರದಲ್ಲಿ ಯು.ಜಿ.ಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಮಂಡ್ಯವನ್ನು ಸಹ ಅಧಿಕೃತವಾಗಿ ಸೇರಿಸಿ ದಿನಾಂಕ 18:11:2025 ರಂದು ಯು.ಜಿ.ಸಿ ಯು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಂತೆ ಇನ್ನೂ ಮುಂದೆ ವಿಶ್ವವಿದ್ಯಾಲಯ ನೀಡಲಿರುವ ಕೃಷಿ ಆಧಾರಿತ ಪದವಿಗಳಿಗೆ ಯು.ಜಿ.ಸಿ ಮಾನ್ಯತೆ ನೀಡಿದಂತಾಗುತ್ತದೆ. ಕೃಷಿ ವಿ.ವಿ ಮಂಡ್ಯವು ತನ್ನ ಎಲ್ಲಾ ಶೈಕ್ಷಣಿಕ, ಅಭಿವೃದ್ಧಿ, ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಯು.ಜಿ.ಸಿಯ ಹಾಗೂ ICAR ನಿಯಮವಳಿ ಅನ್ವಯ ಹಾಗೂ ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ತನ್ನ ಕಾರ್ಯವನ್ನು ನಿಭಾಯಿಸುವಂತಾಗುವುದು. ಮಂಡ್ಯ ಕೃಷಿ ವಿಶ್ವವಿದ್ಯಾಲಯ…

ಉಪಮುಖ್ಯಮಂತ್ರಿಯಾದ ದಿನವೇ KPCC ಅಧ್ಯಕ್ಷ ಸ್ಥಾನ ತೊರೆಯಲು ನಿರ್ಧರಿಸಿದ್ದ ಡಿ.ಕೆ.ಶಿವಕುಮಾರ್

ಬೆಂಗಳೂರು: “ಇಂದಿರಾ ಗಾಂಧಿ ಅವರು ದೇಶದ ಮಹಿಳಾ ಶಕ್ತಿಯ ಚಿಹ್ನೆ. ದೇಶ ಪ್ರೇಮ, ದೃಢ ನಿಶ್ಚಯ, ಧೈರ್ಯದ ಪ್ರತೀಕವಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿದರು. “ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಇಂದು ಬೆಳಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿರಾ ಗಾಂಧಿ ಅವರ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅವರು ನನನ್ನು ಕರೆದು ಅವರ ಸಮಾಧಿ ಸುತ್ತಮುತ್ತಲ ಜಾಗ ಅಭಿವೃದ್ಧಿ ಪಡಿಸಲು ಸೂಚಿಸಿದ್ದರು. ಜೊತೆಗೆ ಪೆರಂಬೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸಮಾಧಿಗೆ ಗ್ರಾನೈಟ್ ಹಾಕುವ ಭಾಗ್ಯ ನನಗೆ ಸಿಕ್ಕಿದೆ. ನಾನು ಹಾಗೂ ನನ್ನ ಸಹೋದರ ನಮ್ಮದೇ ಕ್ವಾರೆಯಿಂದ ಗ್ರಾನೈಟ್…

‘ಮೇಕೆದಾಟು ಯೋಜನೆಗೆ ಹೊಸ ಡಿಪಿಆರ್: ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಕ್ರಮ’

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ಆದೇಶದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯೂಎಂಎ) ಹೊಸ ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ತಿಳಿಸಿದ್ದಾರೆ. ಪಾಟಿಯಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ ಆದೇಶದ ನಂತರ ಯೋಜನೆಯನ್ನು ಮುಂದುವರಿಸುವ ವಿಧಾನವನ್ನು ಇಂದು ಚರ್ಚಿಸಿದ್ದೇವೆ. ಮುಳುಗಡೆಯಾಗುವ ಅರಣ್ಯ ಪ್ರದೇಶದ ಸಮಗ್ರ ವಿವರಗಳನ್ನು ಒಳಗೊಂಡ ಹೊಸ ಡಿಪಿಆರ್ ಅನಿವಾರ್ಯವಾಗಿದೆ. ಹಾರೋಬೆಲೆಯಲ್ಲಿ ಯೋಜನಾ ಕಚೇರಿಯನ್ನು ಈಗಾಗಲೇ ಆರಂಭಿಸಿದ್ದೇವೆ. ರಾಮನಗರದಲ್ಲಿ ಮುಖ್ಯ ಎಂಜಿನಿಯರ್ ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳನ್ನು ತೆರೆಯಲಾಗುತ್ತಿದ್ದು, ಅಗತ್ಯ ಸಿಬ್ಬಂದಿಯನ್ನೂ ನಿಯೋಜಿಸುತ್ತೇವೆ” ಎಂದರು. ಹಿಂದಿನ ಡಿಪಿಆರ್ ಅನ್ನು ಸಿಡಬ್ಲ್ಯೂಎಂಎ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಹೊಸ ವರದಿ ಕಡ್ಡಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಕಾನೂನಿನ…

10ನೇ ಬಾರಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ನಾಳೆ ಪ್ರಮಾಣ ವಚನ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ಜೆಡಿಯು ಶಾಸಕಾಂಗ ಪಕ್ಷ ಹೊಸ ನಾಯಕತ್ವವನ್ನು ಆಯ್ಕೆ ಮಾಡಿದೆ. ಬುಧವಾರ ಪಾಟ್ನಾದಲ್ಲಿ ನಡೆದ ಜೆಡಿಯು ಶಾಸಕಾಂಗ ಸಭೆಯಲ್ಲಿ, ಪಕ್ಷದ ರಾಷ್ಟ್ರಾಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಏಕಮತದಿಂದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಗುರುವಾರ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಅವರು 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಪ್ರಮಾಣ ವಚನಕ್ಕೂ ಮುನ್ನ ಶಾಸಕಾಂಗ ನಾಯಕನಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಎನ್‌ಡಿಎ ಸಭೆಗೂ ಮುಂಚೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಂತರ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಚಿವ ಶ್ರಾವಣ್ ಕುಮಾರ್ ಮಾಹಿತಿ ನೀಡಿದರು.

KSRTCಗೆ ಪ್ರಸಕ್ತ ವರ್ಷ ಹೊಸದಾಗಿ 2000 ಬಸ್ಸುಗಳನ್ನು ಸೇರ್ಪಡೆ

ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಇದೇ ವೇಳೆ, ಚಿಕ್ಕಮಗಳೂರು ಬಸ್ ನಿಲ್ದಾಣದ ಶಂಕುಸ್ಥಾಪನಾ ಸಿಬ್ಬಂದಿಗಳ ನೂತನ ವಸತಿ ಗೃಹವನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಬಸ್ ನಿಲ್ದಾಣ ಆಗಬೇಕೆನ್ನುವುದು ಬಹಳ ಹಿಂದಿನಿಂದಲೂ ಬೇಡಿಕೆಯಿತ್ತು. 2025ರಲ್ಲಿ ರೂ.19.87 ಕೋಟಿ ವೆಚ್ಚದಲ್ಲಿ ಒಂದು ಎಕರೆ 20 ಗುಂಟೆ ನಿವೇಶನದಲ್ಲಿ ಆಧುನಿಕ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಚಿಕ್ಕಮಗಳೂರು ಸಾರಿಗೆ ವಿಭಾಗಕ್ಕೆ ಸೇರಿರುವ ಪ್ರಮುಖ ಸ್ಥಳಗಳಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ 01 ಎಕರೆ 7.5 ಗುಂಟೆ ವಿಸ್ತೀರ್ಣದಲ್ಲಿ 1958 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಬಸ್…

‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

ಬೆಂಗಳೂರು: ಅಭಿಮಾನಿ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬುಧವಾರ ಹೆಚ್ಚುವರಿ ಕಂಬಳಿಗಾಗಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸುದ್ದಿಯ ಕೇಂದ್ರದರು. ಚಳಿಯಿಂದಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು. CCH-57 ನ್ಯಾಯಾಲಯದಲ್ಲಿ ಹಾಜರಾದ ದರ್ಶನ್, “ಚಳಿಯಿಂದ ನಿದ್ರೆ ಆಗುತ್ತಿಲ್ಲ. ಜೈಲು ಅಧಿಕಾರಿಗಳು ಕಂಬಳಿ ಕೊಡುವುದಿಲ್ಲ, ಮನೆಯವರು ಕಳಿಸಿದ ಕಂಬಳಿಯನ್ನೂ ಅನುಮತಿಸಿಲ್ಲ” ಎಂದು ದೂರಿದರು. ನ್ಯಾಯಾಧೀಶರು ಈ ಹೇಳಿಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಪದೇಪದೇ ಸೂಚನೆಗಳ ಹೊರತಾಗಿಯೂ ಜೈಲು ಅಧಿಕಾರಿಗಳು ಕಂಬಳಿಯನ್ನು ನಿರಾಕರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಶೀತ ವಾತಾವರಣದಲ್ಲಿರುವ ಕೈದಿಗೆ ಕಂಬಳಿ ನೀಡದಿರುವುದು ಹೇಗೆ ನ್ಯಾಯಸಮ್ಮತ ಎಂದು ಗರಂ ಆದ ನ್ಯಾಯಾಧೀಶರು, ತಕ್ಷಣವೇ ಕಂಬಳಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಪ್ರಕರಣದ ಮತ್ತೊಬ್ಬ ಆರೋಪಿ ನಾಗರಾಜ್ ಕೂಡ “ಜೈಲಿನಲ್ಲಿ ಚಳಿ ಜಾಸ್ತಿ, ಆದರೆ ಕಂಬಳಿ ಕೊಡುತ್ತಿಲ್ಲ”…

ಬೈಕ್ ಕಳ್ಳರ ಹಾವಳಿಗೆ ಬ್ರೇಕ್; ಖದೀಮರನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿಗೆ ವೈಟ್’ಫೀಲ್ಡ್ ಉಪವಿಭಾಗ ಪೊಲೀಸರು ಅಂಕುಶ ಹಾಕಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಕಳ್ಳರನ್ನು ಜೈಲಿಗಟ್ಟಿದ್ದಾರೆ. ಸುಮಾರು 20 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ಸಮೀಪದ ಗೋಪಾಲನ್ ಇಂಟರ್ ನ್ಯಾಷನ್ ಸ್ಕೂಲ್ ಬಳಿ ನಿಲ್ಲಿಸಲಾಗಿದ್ದ ಯಮಹ ಆರ್’ಎಕ್ಸ್ ಬೈಕ್ ಕಳೆದುಹೋಗಿರುವ ಬಗ್ಗೆ ನಾಗರಾಜು ಎಂಬವರು ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರೀನಾ ಸುವರ್ಣ ಅವರು ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ‌ ಜಿ.ಪ್ರವೀಣ್ ಬಾಬು, PSIಗಳಾದ ಮಹೇಶ್, ಪರಶುರಾಮ್ ಮತ್ತು ಸುನೀಲ್ ಕಡ್ಡಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಮುನ್ನುಡಿ ಬರೆದರು. ಕಳ್ಳರಿಗಾಗಿ ಖೇಡಾ ತೋಡಿದ ಈ ಪೊಲೀಸರು ರಾಮಮೂರ್ತಿನಗರ ನಿವಾಸಿಗಳಾದ ಮನು ಬಿನ್ ದ್ಯಾವೇಗೌಡ ಮತ್ತು ಸಚ್ಚಿನ್ ಬಿನ್ ಬಾಲರಾಜು ಎಂಬಿಬ್ಬರನ್ನು…

ಕೆಎಸ್‌ಸಿಎ ಚುನಾವಣೆ ಮುಂದೂಡಿಕೆಗೆ ವೆಂಕಟೇಶ್ ಪ್ರಸಾದ್ ಆಕ್ಷೇಪ

ಬೆಂಗಳೂರು: ನವೆಂಬರ್‌ 30ಕ್ಕೆ ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯನ್ನು ಮುಂದೂಡಿರುವುದಕ್ಕೆ ಸಂಸ್ಥೆಯ ಮಾಜಿ ವೇಗಗೋಲಂದಾಜು ವೆಂಕಟೇಶ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಿರುವುದು ಸರಿಯಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಸಾದ್, “ಈ ನಿರ್ಧಾರ ನಮಗೆ ಸಂಪೂರ್ಣ ಆಘಾತಕರ. ಕೆಎಸ್‌ಸಿಎನಲ್ಲಿ ರಾಜಕೀಯಕ್ಕಲ್ಲ, ಕ್ರಿಕೆಟ್‌ಗೆ ಆದ್ಯತೆ ಸಿಗಬೇಕು. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಬಂದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉನ್ನತ ಮಟ್ಟದ ಕ್ರಿಕೆಟ್‌ಗೆ ಪುನರ್ಜೀವನ ನೀಡುವುದು, ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್‌ ಮರಳಿ ಬರಲು ಸೂಕ್ತ ವಾತಾವರಣ ಸೃಷ್ಟಿಸುವುದು ನಮ್ಮ ಏಕೈಕ ಗುರಿ,” ಎಂದು ಹೇಳಿದ್ದಾರೆ. ಚುನಾವಣೆಯು ನಿಗದಿಪಡಿಸಿದ ದಿನಾಂಕದಲ್ಲಿ ನಡೆಯಲೇಬೇಕು. ಕೆಎಸ್‌ಸಿಎ ಈಗ ನಿರ್ಣಾಯಕ ಹಂತದಲ್ಲಿದೆ. ಬದಲಾವಣೆಯ ಅಗತ್ಯ ತೀವ್ರವಾಗಿದೆ. ಈಗಾಗಲೇ ನಡೆಯುತ್ತಿರುವ ಋತುವಿನಲ್ಲಿ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಸಮಿತಿಯು ತನ್ನ ದೃಷ್ಟಿಕೋನವನ್ನು ಜಾರಿಗೆ ತರಲು ಚುನಾವಣೆ ಅತ್ಯಗತ್ಯ. ಚುನಾವಣಾ ಆಯೋಗದೊಂದಿಗೆ…

ಸಿಎಂ ಮೊದಲು ನೆರೆ ಪರಿಹಾರ ಕೊಡಬೇಕಿತ್ತು- ಸಿ.ಟಿ.ರವಿ

ಬೆಂಗಳೂರು: ರಾಜ್ಯ ಸರಕಾರವು ಮೊದಲು ನೆರೆ ಪರಿಹಾರ ನೀಡಿ ಬಳಿಕ ಕೇಂದ್ರದಿಂದ ಪರಿಹಾರ ಕೇಳಬೇಕಿತ್ತು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿಯವರದು ಮತ್ತು ಮುಖ್ಯಮಂತ್ರಿಗಳದು ಸಾಂವಿಧಾನಿಕ ಹುದ್ದೆಗಳು. ಅವರ ಪರಸ್ಪರ ಭೇಟಿ, ಮಾತುಕತೆಯನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗದು; ನೋಡಬಾರದು ಎಂದು ಪ್ರಶ್ನೆಗೆ ಉತ್ತರಿಸಿದರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನೆರೆ ಪರಿಹಾರವಾಗಿ ರಾಜ್ಯದ ಬೊಕ್ಕಸದಿಂದ ಹಣ ನೀಡಿ ಬಳಿಕ ಕೇಂದ್ರದಿಂದ ಕೇಳುವ ವಾಡಿಕೆಯನ್ನು ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಮಾಡಿದ್ದಾರೆ. ಬೇರೆ ಬೇರೆ ಮುಖ್ಯಮಂತ್ರಿಗಳೂ ಇದನ್ನೇ ಮಾಡಿದ್ದರು. ಕೇಂದ್ರ ಎನ್‍ಡಿಆರ್‍ಎಫ್ ನಿಯಮದಡಿ ಸಮೀಕ್ಷೆ ಮಾಡಿ ಕೊಡಬೇಕಾದುದನ್ನು ಕೊಟ್ಟೇ ಕೊಡುತ್ತದೆ. ಅದಕ್ಕೂ ಮೊದಲು ರಾಜ್ಯದ ಬೊಕ್ಕಸದಿಂದ ಬಿಡುಗಡೆ ಮಾಡುವುದು ಎಲ್ಲ ಮುಖ್ಯಮಂತ್ರಿಗಳು, ಸರಕಾರಗಳು ಪಾಲಿಸಿಕೊಂಡು ಬಂದ ಪದ್ಧತಿ. ಅದನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು ಎಂದು…