ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರಾದ 2026-28ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿರವರು ಆಯ್ಕೆಯಾಗಿದ್ದಾರೆ. ಮುಖ್ಯ ಚುನಾವಣೆ ಅಧಿಕಾರಿಗಳು ಸಂಜೀವ್ ಸಹಾಯಕ ಚುನಾವಣೆ ಅಧಿಕಾರಿ ಶ್ರೀನಿವಾಸ್ ರವರು ಪ್ರಮಾಣಪತ್ರ ನೀಡಿದರು. ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ. ನಂದಿಯಾಳ್ ಎಸ್ ಜೆ. ಬಾಮ ಗಿರೀಶ್. ಆರ್ ಎಸ್ ಗೌಡ್ರು. ರಮೇಶ್ ಯಾದವ್ ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಂ.ಜಿ.ರಾಮಮೂರ್ತಿರವರು ಮಾತನಾಡಿ ಕನ್ನಡ ಚಲನಚಿತ್ರ ಮೇರುನಟ ಡಾ||ರಾಜ್ ಕುಮಾರ್ ರವರು ನಿರ್ಮಾಪಕರನ್ನ ಅನ್ನದಾತರು ಎಂದು ಕರೆಯುತ್ತಿದ್ದಾರೆ. ನಿರ್ಮಾಪಕ ಉಳಿದರೆ ಕನ್ನಡ ಚಿತ್ರರಂಗ ಉಳಿಯುತ್ತದೆ. ನಿರ್ಮಾಪಕ ಹಾಕಿದ ಹಣ ವಾಪಸ್ಸು ಬರಬೇಕು. ಕೆಲವು ನಿರ್ಮಾಪಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ ಅವರನ್ನ ಗುರುತಿಸಿ ನಿರ್ಮಾಪಕರ ಸಂಘದಿಂದ ಆರ್ಥಿಕವಾಗಿ ಸಹಾಯ ಮಾಡಬೇಕು ಎಂಬ ಉದ್ದೇಶವಿದೆ ಎಂದರು. ಕನ್ನಡ ಚಲನಚಿತ್ರ ಅನ್ಯ ಭಾಷೆಗಳ ನಡುವೆ ಪೈಪೋಟಿ ಇದೆ, ಕನ್ನಡ ಚಿತ್ರಗಳಿಗೆ ಜನರು ಚಿತ್ರಮಂದಿರಕ್ಕೆ ಬಂದು ನೋಡಿ, ನಿರ್ಮಾಪಕ, ನಿರ್ದೇಶಕ ಮತ್ತು…
Day: January 12, 2026
PRCI ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾಗಿ ವಿನಯ ಕುಮಾರ್, ಉಪಾಧ್ಯಕ್ಷರಾಗಿ ಡಾ. ಟಿ.ಎಸ್.ಲತಾ ಪದಗ್ರಹಣ
ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿದೆ. ಬೆಂಗಳೂರು ಜೆ.ಪಿ.ನಗರ ಸಾಂಸ್ಕೃತಿಕ ಸಂಘದಲ್ಲಿ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಸಮಾರಂಭದಲ್ಲಿ ಡಾ. ದೇವಾನಂದ ಗೋಪಾಲ್ (ಡಿಆರ್‌ಡಿಒ ಮಾಜಿ ವಿಜ್ಞಾನಿ) ಮುಖ್ಯ ಅತಿಥಿಯಾಗಿ, ಎಂ.ಬಿ. ಜಯರಾಮ್ (ಚೇರ್ಮನ್ ಎಮೆರಿಟಸ್ ಮತ್ತು ಮುಖ್ಯ ಮಾರ್ಗದರ್ಶಕರು) ಹಾಗೂ ಶ್ರೀಮತಿ ಗೀತಾ ಶಂಕರ್ (ರಾಷ್ಟ್ರೀಯ ಅಧ್ಯಕ್ಷರು) ಭಾಗವಹಿಸಿದ್ದರು. ಅಧ್ಯಕ್ಷರಾಗಿ ಡಾ. ಟಿ. ವಿನಯ ಕುಮಾರ್ ಅವರು ಆಡಳಿತ ಮಂಡಳಿಯ (ಗವರ್ನಿಂಗ್ ಕೌನ್ಸಿಲ್) ಹಾಗೂ ಮಂಡಳಿಯ ಉಪಾಧ್ಯಕ್ಷರಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಅವರು ಆಡಳಿತ ಪದಗ್ರಹಣ ಮಾಡಿದರು. ಚಿನ್ಮಯೀ ಪ್ರವೀಣ್ ಅವರು ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಿದರು ಆಡಳಿತ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ಡಾ. ಬಿ.ಕೆ. ರವಿ (ಉಪಕುಲಪತಿ, ಉತ್ತರ ಬೆಂಗಳೂರು ವಿಶ್ವವಿದ್ಯಾಲಯ), ರವೀಂದ್ರನ್, ಸಿ.ಜೆ. ಸಿಂಗ್, ಆರ್.ಎನ್. ಮಹಾಪಾತ್ರ…
ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ ; ಡಿಕೆಶಿ
ಬೆಂಗಳೂರು: ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮ್ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಉದ್ಯಮಿ ಒಕ್ಕಲಿಗ ಎಕ್ಸ್‌ಪೋ- 2026” ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ‘ಭೂಮಿ ಮಕ್ಕಳಾಗಿರುವ ನೀವು ಸಮಾಜಕ್ಕೆ ಒಳ್ಳೆಯ ಸೇವೆ ಮಾಡುತ್ತಿದ್ದೀರಿ. ಹೊಸ ಉದ್ಯಮಿಗಳಾಗಿ ನೀವು ತಯಾರಾಗುತ್ತಿದ್ದೀರಿ. ತುಂಬಾ ಜನರು ಉದ್ಯಮದಲ್ಲಿ ಯಶಸ್ವಿಯಾಗಿದ್ದಾರೆ. ರಾಜಕಾರಣ ಬಿಟ್ಟು ಬಹಳ ಜನ ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು. ಎಲ್ಲಿ ಶ್ರಮವಿದೆಯೋ… ಅಲ್ಲಿ ಫಲವಿದೆ. ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ದೇವರು ಕೊಟ್ಟ ಅವಕಾಶದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಉದ್ಯಮದಲ್ಲಿ ಎಲ್ಲರೂ ನಂಬಿಕೆ ಉಳಿಸಿಕೊಳ್ಳಬೇಕು. ನಂಬಿಕೆ ಉಳಿಸಿಕೊಂಡಾಗ ನಿಮಗೆ ಕ್ಲೈಂಟ್ಸ್ ಬರುತ್ತಾರೆ. ಶಾಲೆ ನಡೆಸ್ತಿದ್ದೀರೋ, ಕಟ್ಟಡ ಕಟ್ಟುತ್ತಿದ್ದೀರೋ, ಎಲೆಕ್ಟ್ರಿಕ್ ಕೆಲಸ ಮಾಡ್ತಿದ್ದೀರೋ, ಯಾವುದೇ ಉದ್ಯಮ ಮಾಡಿದರೂ ನಿಮ್ಮ ಮೇಲೆ ಕ್ಲೈಂಟ್ಸ್‌ಗೆ ನಂಬಿಕೆ ಇರಬೇಕು ಎಂದರು. ಉದ್ಯಮಿಗಳು ನೀವು ಸರ್ಕಾರಕ್ಕೂ…
