ಹಾಸನ: ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆ ಪೊಳಲಿಯ ಸಹಕಾರ ಸಂಘದ ಅಧಿಕಾರಿಗಳು ಬಲವಂತದ ಸಾಲ ವಸೂಲಾತಿಗೆ ಯತ್ನಿಸಿ ವೃದ್ದೆಗೆ ಕಿರುಕುಳ ನೀಡಿದ್ದ ಬಗ್ಗೆ FIR ದಾಖಲಾಗಲಿತ್ತು. ಆ ಘಟನೆ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲೂ ಖಾಸಗಿ ಖಾಸಗಿ ಫೈನಾನ್ಸ್ಗಳ ಹಾವಳಿ ವರದಿಯಾಗಿದೆ. ಖಾಸಗಿ ಫೈನಾನ್ಸ್ ಕಡೆಯವರು ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಿದ್ದಿರುವ ಘಟನೆ ಹಾಸನ ಜಿಲ್ಲೆ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ ಎಂಬ ವರದಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲ ತೀರಿಸಿಲ್ಲ ಎಂಬಕರಣ ನೀಡಿ ಖಾಸಗಿ ಫೈನಾನ್ಸ್ ಕಡೆಯವರೆನ್ನಲಾದ ಗುಂಪು ಅರಕಲಗೂಡು ತಾಲೂಕಿನ ಕೊರಟಕೆರೆಯ ವೃದ್ಧ ದಂಪತಿಗಳಾದ ಸಣ್ಣಯ್ಯ (80) ಮತ್ತು ಜಯಮ್ಮ (75) ಎಂಬವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಖಾಸಗಿ ಫೈನಾನ್ಸ್ ಬಳಿ 2 ಲಕ್ಷ ರೂ. ಸಾಲವನ್ನು ವೃದ್ಧ ದಂಪತಿ ಪಡೆದಿದ್ದರು ಎನ್ನಲಾಗಿದೆ. ಕಾನೂನು ಕ್ರಮ…
